Team Kannada fact check

ಪ್ರಧಾನಿ ಮೋದಿಯವರ ಧರ್ಮಪತ್ನಿ ಜಶೋದಾಬೆನ್‌ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ

ಪ್ರಧಾನಿ ನರೇಂದ್ರ ಮೋದಿಯವರ ವಿಚ್ಛೇದಿತ ಧರ್ಮಪತ್ನಿ ಜಶೋದಾಬೆನ್‌ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಮತ್ತು ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ವದೋದರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಅಜ್‌ತಕ್‌ ವರದಿಯ ಕೆಲವು ಸ್ಕ್ರೀನ್‌ಶಾಟ್‌ಗಳು ಟ್ಟಿಟರ್(‍X)ನಲ್ಲಿ ಹರಿದಾಡುತ್ತಿವೆ. ಕೆಲವರು “ಭಕ್ತರೆ, ಇದು ಕಾಂಗ್ರೆಸ್ಸಿನ ಶಕ್ತಿ, ನೀವು ಜಶೋದಾಬೆನ್‌ರವರನ್ನು  ಬೈಕಾಟ್ ಮಾಡಲು ಸಾಧ್ಯವೇ, ಧೈರ್ಯವಾಗಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ(ಹಿಂದಿಯಲ್ಲಿ ಮೂಲ ಪಠ್ಯ: अन्धभको देखो ये होती है , कांग्रेस की शक्ति, क्या जशोदाबेन को बायकॉर्ट करोगे…

Read More

ಹಮಾಸ್‌ ನವರು ಕೊಂದು, ಅರೆಬೆತ್ತಲೆ ಸ್ಥಿತಿಯಲ್ಲಿ ವಾಹನದಲ್ಲಿ ಒಯ್ದ ಮಹಿಳೆಯ ಚಿತ್ರ ಇದಲ್ಲ

“ಇಸ್ರೇಲ್ ನಮ್ಮ ದೇಶ‌ ಆಗಿಲ್ಲದಿರಬಹುದು! ಆದರೆ ಇಸ್ರೇಲ್ ಭಾರತದ ಬಗ್ಗೆ ಮತ್ತು ಭಾರತೀಯರ ಬಗ್ಗೆ ಸದಾ ಒಳಿತನ್ನೇ ಬಯಸುವ ಮಿತ್ರ ರಾಷ್ಟ್ರ. ಹಾಗಾಗಿ, ‌ಇಸ್ರೇಲ್‌ ಬಗ್ಗೆ ಸಮಸ್ತ ಭಾರತೀಯರಿಗೂ ಗೌರವ ಭಾವ.. ಇಸ್ರೇಲ್’ನ ಈ ಧೀರ ಸೈನಿಕೆಯನ್ನು ಸೆರೆ ಹಿಡಿದು, ಮನಸೋ ಇಚ್ಛೆ ಥಳಿಸಿದ ನಂತರ, ವಿವಸ್ತ್ರ ಮಾಡಿ ಅತ್ಯಾಚಾರ ಮಾಡಿ ಕೊಂದು ನಗರದೆಲ್ಲೆಡೆ ನಗ್ನ ಸ್ಥಿತಿಯಲ್ಲಿ ಮೆರವಣಿಗೆ ಮಾಡಲಾಗಿದೆಯಂತೆ. ಧೀರ ಸಹೋದರಿಗೆ ಭಾರತೀಯರ‌ ಪರವಾಗಿ ಗೌರವ ನಮನಗಳು” ಎಂದು ನಿಲುಮೆ ಫೇಸ್‌ಬುಕ್ ಗ್ರೂಪ್‌ನಲ್ಲಿ ದೀಕ್ಷಿತ್ ರವಿ…

Read More

ತಾಲಿಬಾನ್ ಮುಖ್ಯ ಕಾರ್ಯದರ್ಶಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಹೊಗಳಿದ್ದಾರೆ ಎಂಬುದು ಸುಳ್ಳು

ತಾಲಿಬಾನ್ ಮುಖ್ಯ ಕಾರ್ಯದರ್ಶಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಹೊಗಳಿದ್ದಾರೆ ಎಂದು ವೈರಲ್‌ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ ಇದೊಂದು ಶುದ್ಧ ಸುಳ್ಳು ಸುದ್ದಿಯಾಗಿದ್ದು. ಇದರ ಅಸಲಿತ್ತು ಏನು ಎಂಬುವುದು ಫ್ಯಾಕ್ಟ್‌ ಚೆಕ್‌ನಲ್ಲಿ ಬಹಿರಂಗವಾಗಿದೆ. ಹೌದು.. ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ತಾಲಿಬಾನ್‌ ಮುಖ್ಯ ಕಾರ್ಯದರ್ಶಿ ಹೊಗಳಿದ್ದಾರೆ ಎಂಬ ವಿಡಿಯೋ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಈ ವಿಡಿಯೋದ ತುಣುಕು 2019ರ ಮಾರ್ಚ್‌ 1ರಂದು ರೆಕಾರ್ಡ್‌ ಮಾಡಲಾಗಿದೆ. ಇದರಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಖಾಲಿದ್…

Read More
ಲುಲು

ಕೇರಳದ ಲುಲು ಮಾಲ್‌ನಲ್ಲಿ ಭಾರತಕ್ಕಿಂತ ಪಾಕಿಸ್ತಾನದ ದೊಡ್ಡ ಧ್ವಜ ಹಾಕಿದ್ದಾರೆ ಎಂಬುದು ಸುಳ್ಳು

2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಭಾರತ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಕೇರಳದ ಕೊಚ್ಚಿಯಲ್ಲಿರುವ ಲುಲು ಮಾಲ್‌ನಲ್ಲಿ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ 10 ರಾಷ್ಟ್ರಗಳ ಧ್ವಜಗಳನ್ನು ಪ್ರದರ್ಶನ ಮಾಡಲಾಗಿದೆ. ಆದರೆ ಭಾರತದ ಧ್ವಜಕ್ಕಿಂತ ಪಾಕಿಸ್ತಾನದ ದೊಡ್ಡ ಧ್ವಜವನ್ನು ಪ್ರದರ್ಶಿಸಿದ್ದು, ಆ ಮೂಲಕ ದೇಶದ ಧ್ವಜ ಸಂಹಿತೆಯನ್ನು ಉಲ್ಲಂಘಿಸಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ಕನ್ನಡದ ಏಷ್ಯಾನೆಟ್ ಸುವರ್ಣ ನ್ಯೂಸ್ ಸೇರಿದಂತೆ ಹಲವು ಮಾಧ್ಯಮಗಳು ಇದನ್ನೇ ವರದಿ ಮಾಡಿವೆ. it’s in kerala LuLu Mall How can other countries…

Read More

ಗುರುಕುಲ ಶಿಕ್ಷಕ ವಿದ್ಯಾರ್ಥಿಯನ್ನು ನೆಲಕ್ಕೆ ಬಡಿದು ಥಳಿಸುವ ಅಮಾನವೀಯ ಘಟನೆಯ ವಿಡಿಯೋ ಉತ್ತರ ಪ್ರದೇಶದ್ದು

RSS ಟ್ರೈನಿಂಗ್ ಕ್ಯಾಂಪ್‌ನಲ್ಲಿ ಮಕ್ಕಳಿಗೆ ಚಿತ್ರ ಹಿಂಸೆ ನೀಡುತ್ತಿರುವ ಭಯಾನಕ ದೃಶ್ಯ ಬಹಿರಂಗ, RSS ಉಗ್ರಗಾಮಿಗಳ ಸ್ಪೋಟಕ ಸುದ್ದಿ ಎಂಬ ವಿದ್ಯಾರ್ಥಿಯನ್ನು ಹಿಂಸಿಸುವ ಅಮಾನವೀಯ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. क्या हिंदू राष्ट्र के गुरुकूलों में ऐसे पढ़ाई करवाई जाती है? विडियो में तो कुछ ऐसा ही दिख रहा है। विडियो खैराबाद का बताया जा रहा है और विडियो में गुरु बना…

Read More

ಕೇರಳದಲ್ಲಿ ಪಾಕಿಸ್ತಾನ ಧ್ವಜಗಳೊಂದಿಗೆ ಮುಸ್ಲಿಮರು ಮೆರವಣಿಗೆ ನಡೆಸಿಲ್ಲ

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಬಿಯವರ ಹುಟ್ಟುಹಬ್ಬದ ಪ್ರಯುಕ್ತ ಪಾಕಿಸ್ತಾನದ ಧ್ವಜ ಮತ್ತು ಪಾಕಿಸ್ತಾನದ ಸಮವಸ್ತ್ರ ಧರಿಸಿ ಮೆರವಣಿಗೆ ನಡೆಸಲಾಗಿದೆ. ಇದು ಕಾಂಗ್ರೆಸ್ ಮತ್ತು ಸಿಪಿಎಂ ಬೆಂಬಲದೊಂದಿಗೆ ನಡೆದಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಕೇರಳದ ಕಾಸರಗೋಡಿನ ಕನ್ಹನ್ಗಡ್‌ನ ಬಲ್ಲಾ ಬೀಚ್‌ನಲ್ಲಿ 28 ಸೆಪ್ಟೆಂಬರ್ 2023ರಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಯುವಕರು ಮೆರವಣಿಗೆ ಮತ್ತು ಪರೇಡ್ ನಡೆಸಿದ್ದಾರೆ. ಈ ಕಾರ್ಯಕ್ರಮವನ್ನು ಸಮಸ್ತ ಕೇರಳ ಜೆಮ್-ಇಯಾತುಲ್ ಉಲ್ಮ ಇಸ್ಲಾಮಿಕ್ ಸಂಘಟನೆಯು ಆಯೋಜಿಸಿತ್ತು. ಅಲ್ಲಿ…

Read More
ಅಮರ್ತ್ಯ ಸೆನ್

ಅಮರ್ತ್ಯ ಸೆನ್ ನಿಧನದ ಸುದ್ದಿ ಫೇಕ್ ಎಂದ ಮಗಳು ನಂದನ ದೇವ್ ಸೆನ್

ನೊಬೆಲ್ ವಿಜೇತ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್ (89) ನಿಧನರಾಗಿದ್ದಾರೆ ಎಂದು ಹಲವಾರು ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿವೆ. ಪಿಟಿಐ ಸುದ್ದಿ ಸಂಸ್ಥೆಯಿಂದ ಬಂದ ಮಾಹಿತಿ ಆಧರಿಸಿ ಈ ಸುದ್ದಿ ಮಾಡಲಾಗಿದೆ. ಆದರೆ ಅಮರ್ತ್ಯ ಸೆನ್ ಆರೋಗ್ಯದಿಂದ ಇದ್ದಾರೆ. ಅದು ಸುಳ್ಳು ಸುದ್ದಿ ಎಂದು ಅವರ ಮಗಳು ನಂದನ ದೇವ್ ಸೆನ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಂದನ ದೇವ್ ಸೆನ್, “ಸ್ನೇಹಿತರೇ, ನಿಮ್ಮ ಕಾಳಜಿಗೆ ಧನ್ಯವಾದಗಳು. ಆದರೆ ಅದು ಸುಳ್ಳು ಸುದ್ದಿ. ನನ್ನ…

Read More
ಗೋಡ್ಸೆ

ಪಾಕಿಸ್ತಾನ – ಬಾಂಗ್ಲಾದೇಶ ಕಾರಿಡಾರ್‌ಗೆ ಒಪ್ಪಿದ್ದಕ್ಕಾಗಿ ಗಾಂಧಿಯನ್ನು ಗೋಡ್ಸೆ ಕೊಂದರು ಎಂಬುದು ಸುಳ್ಳು

ಇಸ್ರೇಲ್‌ನ ಗಾಜಾ ಪಟ್ಟಿಯ ದುಸ್ವಪ್ನವನ್ನು ನೀವು ವೀಕ್ಷಿಸುತ್ತಿದ್ದೀರಿ. ಅದೇ ಸ್ಟ್ರಿಪ್ ಅನ್ನು ಜಿನ್ನಾ ಪ್ರಸ್ತಾಪಿಸಿದರು. ಮೋಹನ ದಾಸ್ ಒಪ್ಪಿಕೊಂಡರು. ಗೋಡ್ಸೆ ನಿಮ್ಮನ್ನು ಯಾವುದರಿಂದ ರಕ್ಷಿಸಿದ್ದಾರೆ ಎಂಬುದನ್ನು ಈ ಚಿತ್ರವು ಸ್ಪಷ್ಟವಾಗಿ ತಿಳಿಸುತ್ತದೆ ಎಂಬ ಬರಹದೊಂದಿಗೆ ಪಶ್ಚಿಮ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನಕ್ಕೆ ಅಂದರೆ ಈಗಿನ ಬಾಂಗ್ಲಾದೇಶಕ್ಕೆ ಸಂಪರ್ಕ ಕಲ್ಪಿಸುವಂತಹ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆ ಮೂಲಕ ಜಿನ್ನಾ ಪ್ರಸ್ತಾಪಿಸಿದ ಪಾಕಿಸ್ತಾನ – ಬಾಂಗ್ಲಾದೇಶ ಕಾರಿಡಾರ್‌ಗೆ ಒಪ್ಪಿದ್ದಕ್ಕಾಗಿ ಗಾಂಧಿಯನ್ನು ಗೋಡ್ಸೆ ಕೊಂದರು ಎಂಬ ಕಥನವನ್ನು ತೇಲಿ ಬಿಡುವ ಮೂಲಕ…

Read More

ಹಳೆಯ ವಿಡಿಯೋಗಳನ್ನು ಇಸ್ರೇಲ್ ಮತ್ತು ಪ್ಯಾಲೆಸ್ತೈನ್‌ ಯುದ್ಧಕ್ಕೆ ಸಂಬಂಧಿಸಿದ್ದೆಂದು ಹಂಚಿಕೊಳ್ಳಲಾಗುತ್ತಿದೆ

ಗಾಜಾದಲ್ಲಿ ಹಮಾಸ್ ಫೈಟರ್‌ಗಳು ಇಸ್ರೇಲಿನ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾರೆ. ಮತ್ತು ಪ್ಯಾಲೆಸ್ತೇನ್ ಸ್ವಾತಂತ್ರ್ಯ ಹೋರಾಟಗಾರರು ಪ್ಯಾರಚುಟ್ ಮೂಲಕ ಇಸ್ರೇಲಿನ ಸೀಮೆಯ ಮೇಲೆ ಇಳಿದಿದ್ದಾರೆ ಎಂಬ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನು ಹಲವರು ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಯುದ್ಧಕ್ಕೆ ಸಂಬಂಧಿಸಿದ್ದೆಂದು ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಪ್ಯಾಲೆಸ್ತೇನಿನ ಹಮಾಸ್ ಮಿಲಿಟರಿ ತಂಡ ಮತ್ತು ಇಸ್ಲಾಮ್ ಜಿಹಾದಿಗಳು ಗಾಜಾನಗರ ಸೇರಿದಂತೆ ಇಸ್ರೇಲಿನ ಮೇಲೆ ದಾಳಿ ಆರಂಭಿಸಿವೆ. ಇಸ್ರೇಲ್ ಸಹ ಪ್ಯಾಲೆಸ್ತೇನಿನ ಮೇಲೆ ಯುದ್ಧ ಘೋಷಿಸಿದೆ. ಈ ಎರಡೂ ದೇಶದ ಯುದ್ಧಕ್ಕೆ ಸಂಬಂಧಿಸಿದಂತೆ…

Read More

2021 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ವೀಡಿಯೊವನ್ನು ಮಣಿಪುರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

“ಮಣಿಪುರದಲ್ಲಿ ಸಂಗಿಗಳ ಅಟ್ಟಹಾಸ. ಐದು ಜನ ಹಿಂದು ಯುವಕರು ಕ್ರಿಶ್ಚಿಯನ್ ಯುವತಿಯೊಬ್ಬಳನ್ನು ಅಪಹರಿಸಿ, ಆಕೆಯನ್ನು ವಿವಸ್ತ್ರಗೊಳಿಸಿ, ಸಾಮೂಹಿಕ ಅತ್ಯಾಚಾರ ನಡೆಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಮಣಿಪುರದ ಹಿಂದುಗಳೂ ಸಹ ಬೆಂಬಲಿಸುತ್ತಿದ್ದಾರೆ.” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದೆ.   ಆದರೆ ಇದು 2021ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿದ್ದು ಇದಕ್ಕೂ  ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದ್ದಲ್ಲ. ಫ್ಯಾಕ್ಟ್‌ಚೆಕ್: ಬೆಂಗಳೂರಿನ ರಾಮಮೂರ್ತಿನಗರದ ಹೊರಹೊಲಯದಲ್ಲಿ ಮೇ, 2021ರಲ್ಲಿ ಬಂಗ್ಲಾದೇಶದ ಯುವಕರು 22 ವರ್ಷದ ಯುವತಿಯನ್ನು…

Read More