Team Kannada fact check

ಮೋದಿಯವರನ್ನು ನೇಪಾಳದ ಸಂಸದರು ಟೀಕಿಸಿದ್ದಾರೆ ಎಂಬುದು ಸುಳ್ಳು

ನೇಪಾಳದ ಸಂಸದರೊಬ್ಬರು ತಮ್ಮ ಸಂಸತ್ತಿನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರ್ಥಿಕ ನೀತಿ, ವಿದೇಶಿ ಪ್ರವಾಸ ಮತ್ತು ನಿರುದ್ಯೋಗದ ಸಮಸ್ಯೆಗಳ ಕುರಿತು ಟೀಕಿಸಿದ್ದಾರೆ ಎಂಬ ವಿಡಿಯೋವೊಂದು ಟ್ವಿಟರ್(X), ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾನಗಲಲ್ಲಿ ಎಲ್ಲಡೆ ವೈರಲ್ ಆಗುತ್ತಿದೆ.    ಫ್ಯಾಕ್ಟ್‌ಚೆಕ್: ಈ ವಿಡಿಯೋ ನೇಪಾಳದ್ದಲ್ಲ. ಬದಲಿಗೆ ಹಿಮಾಚಲ ಪ್ರದೇಶದ ಕಿನ್ನೌರ್ ಶಾಸಕ ಜಗತ್ ಸಿಂಗ್ ನೇಗಿಯವರು ಮಾರ್ಚ್ 15, 2021ರಲ್ಲಿ ನಡೆದ ತಮ್ಮ ರಾಜ್ಯದ ಬಜೆಟ್ ಮಂಡನೆಯ ಕಲಾಪದಲ್ಲಿ ಮಂಡಿಸಿದ ಭಾಷಣವಾಗಿದೆ. ಇದನ್ನು ಮಾರ್ಚ್ 21, 2021ರಲ್ಲಿ…

Read More

ಮೋದಿಯವರು ಕುಂಬಾರ ಮತ್ತು ಚಮ್ಮಾರ ಎಂದು ಒಬ್ಬನೇ ಕುಶಲ ಕರ್ಮಿಯನ್ನು ಭೇಟಿಯಾಗಿದ್ದಾರೆ ಎಂಬುದು ಸುಳ್ಳು

ಪ್ರಧಾನಿ ನರೇಂದ್ರ ಮೋದಿಯವರು ಫೋಟಶೂಟ್‌ಗೋಸ್ಕರ ಕುಂಬಾರ ಕೆಲಸ ಮಾಡುವ ಮತ್ತು ಚಮ್ಮಾರಿಕೆ ಕೆಲಸ ಮಾಡುವವರು ಎಂದು ಒಬ್ಬನೇ ವ್ಯಕ್ತಿಯನ್ನು ಎರಡು ಜಾಗಗಳಲ್ಲಿ ಭೇಟಿ ಮಾಡಿದ್ದಾರೆ. ಕೇವಲ ಫೋಟೊಗಾಗಿ ಇಷ್ಟೆಲ್ಲ ನಾಟಕವಾಡುತ್ತಾರೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್ ಚೆಕ್ ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ, ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 17ರಂದು ತಮ್ಮ ಜನ್ಮದಿನದ ಪ್ರಯುಕ್ತ ದ್ವಾರೆಕೆಯಲ್ಲಿ “ಯಶೋಭೂಮಿ ಸಮಾವೇಶ” ವನ್ನು ಉದ್ಘಾಟಿಸಿ, ಕುಶಲಕರ್ಮಿ ಕಲಾವಿದರ ಅಭಿವೃದ್ಧಿಗಾಗಿ “ಪಿಎಂ ವಿಶ್ವಕರ್ಮ ಯೋಜನೆ”ಯನ್ನು ಘೋಷಿಸಿದರು….

Read More
ಇಸ್ಲಾಂ

2030ಕ್ಕೆ ಭಾರತ ಇಸ್ಲಾಂ ದೇಶವಾಗುತ್ತದೆ ಎಂಬುದು ಸಂಪೂರ್ಣ ಸುಳ್ಳು: ಇಲ್ಲಿದೆ ಪೂರ್ಣ ವಿವರ

“2030ಕ್ಕೆ ಭಾರತ ಇಸ್ಲಾಂ ದೇಶವಾಗುವುದನ್ನು ಯಾರೂ ತಪ್ಪಿಸಲಾಗದೆ..!” ಎಂಬ ಶೀರ್ಷಿಕೆಯುಳ್ಳ, ಶ್ರೀಪಮ ಎಂಬುವವರು ಬರೆದ ಪತ್ರಿಕಾ ವರದಿಯಂತೆ ಕಾಣುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಿಂದುಗಳೇ.. ದುಡ್ಡು ಮಾಡುತ್ತೀರಿ, ನಿದ್ದೆ ಮಾಡುತ್ತೀರಿ.. ಎಂಬ ವ್ಯಂಗ್ಯದಿಂದ ಶುರುವಾಗುವ ಬರಹದಲ್ಲಿ, “ದಿ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಡೆಮೋಗ್ರಫಿಕ್ ರಿಸರ್ಚ್” ಎಂಬ ಅಮೇರಿಕಾದ ಒಂದು ಸಂಸ್ಥೆ, ಭಾರತದ ಭವಿಷ್ಯ ಏನಾಗಬಹುದು? ಎಂಬುದನ್ನು ಅತ್ಯಂತ ವೈಜ್ಞಾನಿಕವಾಗಿ ತೋರಿಸಿಕೊಟ್ಟಿದೆ. ಈ ಸಂಸ್ಥೆ ಭಾರತವು 2041ರಲ್ಲಿ ಸಂಪೂರ್ಣವಾಗಿ ಇಸ್ಲಾಂ ದೇಶವಾಗುತ್ತದೆ, ಎಂಬುದನ್ನು ಸಾರುತ್ತದೆ. ಈ ಸಂಸ್ಥೆ…

Read More

ಕಾವೇರಿ ಕೇವಲ ಕರ್ನಾಟದ ಸ್ವತ್ತಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಲ್ಲ: ಇದು ತಿರುಚಿದ ಫೋಟೊ

ಕಾವೇರಿ ಕರ್ನಾಟಕಕ್ಕಿಂತ ತಮಿಳುನಾಡಿನಲ್ಲೇ ಹೆಚ್ಚು ಹರಿಯುವುದರಿಂದ ತಮಿಳುನಾಡಿಗೆ ಕಾವೇರಿ ಮೇಲೆ ಹೆಚ್ಚಿನ ಹಕ್ಕಿದೆ. ಕಾವೇರಿ ಕೇವಲ ಕರ್ನಾಟದ ಸ್ವತ್ತಲ್ಲ ಎಂದು ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: KRS ನಿಂದ ಒಂದು ಹನಿ ನೀರು ಬಿಡುವುದಿಲ್ಲ, ತಮಿಳುನಾಡಿನ ಮನವಿಯನ್ನು CWRC ತಿರಸ್ಕರಿಸಿರುವುದರಿಂದ ಸಂತಸವಾಗಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿದ ಮಾತನಾಡಿದ ಅವರು, ‘2,000 ಕ್ಯೂಸೆಕ್ಸ್ ನೀರು ಸಾಮಾನ್ಯವಾಗಿ ಹರಿದು ಹೋಗುತ್ತಿರುತ್ತದೆ. 1,000 ಕ್ಯೂಸೆಕ್ಸ್…

Read More

ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು

“ಸತ್ಯವನ್ನು ಎಷ್ಟು ಮುಚ್ಚಿಟ್ಟರೂ ಅದು ಹೊರಬರುತ್ತದೆ. ಇದು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ನಿಜವಾದ ಛಾಯಾಚಿತ್ರ, ಈ ನಕಲಿ ಗಾಂಧಿ ಕುಟುಂಬವು ವಾಸ್ತವವಾಗಿ ಮೊಹಮ್ಮದ್  ಘಾಜಿಯ ಕುಟುಂಬವಾಗಿದೆ. ಈ ಫೋಟೋವನ್ನು 10 ಜನರಿಗೆ ಕಳುಹಿಸಿ, ದೇಶವನ್ನು ಜಾಗೃತಗೊಳಿಸಿ ಮತ್ತು ಭಾರತವನ್ನು ಪಾಕಿಸ್ತಾನವಾಗಿ ಬದಲಾಗದಂತೆ ರಕ್ಷಿಸಿ.” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: ಈ ಚಿತ್ರಗಳು ರಾಜೀವ್ ಮತ್ತು ಸೋನಿಯಾರವರ ವಿವಾಹೋತ್ಸವ ಸಂದರ್ಭದಲ್ಲಿ ನಡೆದ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮದಾಗಿದೆ. ಇಂಡಿಯನ್ ಕಲ್ಚರ್ ಸಂಸ್ಥೆಯ ಅಧಿಕೃತ…

Read More

ಲವ್ ಜಿಹಾದ್ ಎಂಬುದು ಕಟ್ಟು ಕಥೆ: ಬೆಂಗಳೂರು ಪೊಲೀಸರ ವಿಚಾರಣೆಯಲ್ಲಿ ಬಹಿರಂಗ

”ನಾನು ಅಪಾಯದಲ್ಲಿದ್ದೇನೆ. ನನ್ನ ಮೇಲೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆದಿದೆ. ಅತ್ಯಾಚಾರವಾಗಿದೆ. ನಾನು ಲವ್‌ ಜಿಹಾದ್‌ಗೆ ಒಳಗಾಗಿದ್ದೇನೆ. ಹಾಗಾಗಿ, ಬೆಂಗಳೂರು ನಗರ ಪೊಲೀಸರು ದಯವಿಟ್ಟು ನನ್ನ ಸಹಾಯಕ್ಕೆ ಬನ್ನಿ” ಎಂದು 37 ವರ್ಷದ ಮಹಿಳೆಯೊಬ್ಬರು ಟ್ವೀಟ್‌ ಮೂಲಕ ಪೊಲೀಸರ ಸಹಾಯ ಕೇಳಿದ್ದರು. ಗುಪ್ತಾ ಭರತ್ ಎಂಬ ಟ್ವಿಟರ್‌ ಅಕೌಂಟ್‌ನಿಂದ ಸೆ. 7ರಂದು ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್‌ ಮಾಡಲಾಗಿತ್ತು. “ತುರ್ತಾಗಿ ನನಗೆ ಬೆಂಗಳೂರು…

Read More

ಪೆರಿಯಾರ್ ತನ್ನ ಅನುಯಾಯಿಯನ್ನು ಮದುವೆಯಾದರೆ ಹೊರತು ಮಗಳನ್ನಲ್ಲ

ಇತ್ತೀಚೆಗೆ ತಮಿಳುನಾಡಿನ ದ್ರಾವಿಡ ಚಳುವಳಿಯ ಹರಿಕಾರ ಮತ್ತು “ತಮಿಳು ಸ್ವಾಭಿಮಾನ ಚಳುವಳಿ”ಯ ನಾಯಕರಾದ ಇ.ವಿ. ರಾಮಸ್ವಾಮಿ ನಾಯ್ಕರ್ ಅಥವಾ ತಂತೈ ಪೆರಿಯಾರ್ ತಮ್ಮ ಸ್ವಂತ ಮಗಳನ್ನೇ ಮದುವೆಯಾಗಿದ್ದರು ಎಂಬ ಸುದ್ಧಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಉತ್ತರ ಭಾರತದಲ್ಲಿ ಈ ವದಂತಿ ಹೆಚ್ಚಾಗಿ ಹಬ್ಬುತ್ತಿದ್ದು, ಪೆರಿಯಾರ್ ರವರನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಜಸ್ಟೀಸ್ ಪಾರ್ಟಿಯ ಸ್ಥಾಪಕರಾದ ಕನಗಸಬಾಯಿ ಮುದಲಿಯಾರ್‌ರವರ ಮಗಳಾದ ಮಣಿಯಮ್ಮೈರವರನ್ನು ಪೆರಿಯಾರ್‌ರವರು ತಮ್ಮ 70 ವಯಸ್ಸಿನಲ್ಲಿ ಮದುವೆಯಾದರು. ಪೆರಿಯಾರ್‌ರವರ ಪ್ರಬಲ ಅನುಯಾಯಿಯಾಗಿ, ಆಪ್ತ ಸಹಾಯಕಿಯಾಗಿ ಕೆಲಸ ಮಾಡಿದ್ದ…

Read More

ನರೇಂದ್ರ ಮೋದಿ ಭಾರತದ ಮೊದಲ ಒಬಿಸಿ ಪ್ರಧಾನಿ ಎಂಬುದು ಸುಳ್ಳು

ಬಿಜೆಪಿಯು ಭಾರತಕ್ಕೆ ಮೊದಲ ಒಬಿಸಿ (ಇತರ ಹಿಂದುಳಿದ ವರ್ಗ) ಪ್ರಧಾನಿಯನ್ನು ನೀಡಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಪ್ರತಿಪಾದಿಸಿದ್ದಾರೆ. ಮಹಿಳೆಯರಿಗೆ 33% ಮೀಸಲಾತಿ ಒದಗಿಸುವ ಸಂವಿಧಾನದ 128ನೇ ತಿದ್ದುಪಡಿ ಕುರಿತು ರಾಜ್ಯಸಭೆಯಲ್ಲಿ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದಾರೆ. "भारत को पहला OBC प्रधानमंत्री भाजपा (NDA) ने दिया" ◆ संसद में भाजपा अध्यक्ष जेपी नड्डा का बयान@JPNadda | #OBC | #WomenReservationBill2023 pic.twitter.com/bMRRYcbs1q — News24…

Read More

ಕಾವೇರಿ ವಿವಾದದ ಕುರಿತು ಕ್ರಿಕೆಟಿಗ ಕೆ.ಎಲ್ ರಾಹುಲ್ ಟ್ವೀಟ್ ಮಾಡಿಲ್ಲ

“ಕಾವೇರಿ ಎಂದೂ ನಮ್ಮದು ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು ಇದು ನಮ್ಮ ದುರಂತ. ಕಾವೇರಿ ಇಡೀ ಕರ್ನಾಟಕದ ಆಸ್ತಿ. #ಕಾವೇರೀನಮ್ಮದು” ಎಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಟ್ವೀಟ್ ಮಾಡಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಈ ಟ್ವೀಟ್ ಫ್ಯಾನ್ ಅಕೌಂಟ್ ನಿಂದ ಮಾಡಲಾಗಿದ್ದು. ರಾಹುಲ್ ಅಭಿಮಾನಿಯೊಬ್ಬರು ಕೆ.ಎಲ್ ರಾಹುಲ್ ಹೆಸರು…

Read More

ಶೃಂಗೇರಿ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದಿಸಲು ನಿರಾಕರಿಸಿದ್ದಾರೆ ಎಂಬುದು ಸುಳ್ಳು.

ಶೃಂಗೇರಿ ಶಾರದ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತಿ ತೀರ್ಥರು ಹಿಂದು ವಿರೋಧಿಗಳಾದ ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದ್ದಾರೆ ಎಂಬ ಸುದ್ಧಿಯೊಂದು ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ, ಸಿದ್ದರಾಮಯ್ಯನವರು ಮತ್ತು ಸಂಸದ ವೇಣುಗೋಪಾಲ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಮಾರ್ಚ್, 2018ರಲ್ಲಿ ಶೃಂಗೇರಿ ಶಾರದ ಪೀಠಕ್ಕೆ ಭೇಟಿಕೊಟ್ಟು ಜಗದ್ಗುರು ಭಾರತಿ ತೀರ್ಥರನ್ನು ಭೇಟಿಯಾಗಿದ್ದರು. ಚರ್ಚೆಯ ನಂತರ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದಿಸಿದರು.ನಂತರ ರಾಹುಲ್ ಗಾಂಧಿಯವರಿಗೆ ಅವರ ತಂದೆ ರಾಜೀವ್ ಗಾಂಧಿಯವರ ಚಿತ್ರವನ್ನು…

Read More