Team Kannada fact check

ಗಾಂಧೀಜಿಯವರೊಂದಿಗೆ ರಾಹುಲ್‌ ಗಾಂಧಿ ಮಾತನಾಡಿದ್ದೇನೆಂದು ಸಮರ್ಥಿಸಿಕೊಂಡಿದ್ದಾರೆ ಎಂಬುವುದು ಸುಳ್ಳು

ರಾಹುಲ್‌ ಗಾಂಧಿಯವರು ತಾವು ಮಹಾತ್ಮ ಗಾಂಧೀಜಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಂಬ ವಿಡಿಯೋವೊಂದು ವೈರಲ್‌ ಆಗಿದ್ದು, ಇದೀಗ ಆ ವಿಡಿಯೋ ಸುಳ್ಳು ಮತ್ತು ಬೇರೆ ವಿಡಿಯೋವೊಂದರ ಎಡಿಟೆಡ್‌ ವಿಡಿಯೋ ಎಂದು ತಿಳಿದ ತಕ್ಷಣ ಅವುಗಳನ್ನ ಸಾಮಾಜಿಕ ಜಾಲತಾಣದಿಂದ ತೆಗೆಯಲಾಗಿದೆ.   ಸುಳ್ಳು ; ರಾಹುಲ್‌ ಗಾಂಧಿ ಅವರು ತಾವು ಮಹಾತ್ಮ ಗಾಂಧೀಜಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ ಮತ್ತು ಮಹಾತ್ಮ ಗಾಂಧಿ ಅವರೊಂದಿಗೆ ಸಣ್ಣ ಭಿನ್ನಾಭಿಪ್ರಾಯ ಹೊಂದಿದ್ದೆ, ಕೊನೆಗೆ ಗಾಂಧೀಜಿ ಅವರ ನಿಲುವು ಸರಿ ಇದೆ ಎಂದೆನೆಸಿತು…

Read More
ಸಾಲ

ಮೋದಿ ಪ್ರಧಾನಿಯಾದ ನಂತರ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದಿಲ್ಲ ಎಂಬುದು ಸುಳ್ಳು

70 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಮೋದಿಯವರು ಪ್ರಧಾನಿಯಾದ ನಂತರ ಮೂರು ವರ್ಷಗಳಲ್ಲಿ ಭಾರತ ವಿಶ್ವಬ್ಯಾಂಕ್‌ನಿಂದ ಸಾಲ ಪಡೆದಿಲ್ಲ ಲೆಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದೇ ರೀತಿಯಾಗಿ ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಎಲ್ಲಾ ಸಾಲವನ್ನು ತೀರಿಸಿಬಿಟ್ಟಿದ್ದಾರೆ. ಈ ರೀತಿ ಸಾಲ ತೀರಿಸಿರುವ 35 ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಮತ್ತೊಂದು ಪೇಪರ್ ಕಟಿಂಗ್ ಒಳಗೊಂಡಿರುವ ಪೋಸ್ಟರ್ ಸಹ ವೈರಲ್ ಮಾಡಲಾಗುತ್ತಿದೆ. ಫ್ಯಾಕ್ಟ್ ಚೆಕ್ ಈ ಕುರಿತು ಪರಿಶೀಲಿಸುವಂತೆ ಕನ್ನಡ ಫ್ಯಾಕ್ಟ್ ಚೆಕ್ ತಂಡಕ್ಕೆ ಮನವಿಗಳು…

Read More

1950ರ ನಂತರ ಬ್ರಿಟೀಷರು ತಮ್ಮ ಕಡತಗಳಲ್ಲಿ ಇಂಡಿಯಾ ಎಂಬ ಹೆಸರು ಬಳಕೆ ಮಾಡಿದ್ದರು ಎಂಬುವುದು ಸುಳ್ಳು

1950ರ ದಶಕದ ನಂತರ ಅಧಿಕೃತವಾಗಿ ಬ್ರಿಟೀಷರು ತಮ್ಮ ಕಡತಗಳ ಇಂಡಿಯಾ ಎಂಬ ಹೆಸರನ್ನ ಬಳಕೆ ಮಾಡಲು ಪ್ರಾರಂಭಿಸಿದ್ದಾರೆ ಎಂದು ಬಲಪಂಥೀಯ ಯೂಟ್ಯೂಬ್‌ ಚಾನಲ್‌ ಸಂವಾದದಲ್ಲಿ ಹೆಚ್‌.ಎನ್‌ ಚಂದ್ರಶೇಖರ್‌ ತಪ್ಪು ಮಾಹಿತಿಯನ್ನು ನೀಡಿದ್ದಾರೆ, ಸತ್ಯ; 18ನೇ ಶತಮಾನದಿಂದಲೂ ಬ್ರಿಟೀಷರು ಭಾರತವನ್ನು ಇಂಡಿಯಾ ಎಂದೇ ಸಂಬೋಧಿಸುತ್ತಿದ್ದರು. ಅವರು ಜಾಗತಿಕ ನಕ್ಷೆಯಲ್ಲೂ ಕೂಡ ಇಂಡಿಯಾ ಎಂಬ ಹೆಸರನ್ನೇ ಬಳಸುತ್ತಿದ್ದರು. ಭಾರತವನ್ನು ಈಸ್ಟ್‌ ಇಂಡಿಯಾ ಕಂಪನಿ ಎಂದೇ ಕರೆಯುತ್ತಿದ್ದರು., ಬ್ರಿಟೀಷರು ಭಾರತದಲ್ಲಿ ಆಳ್ವಿಕೆ ಮಾಡಲು ಪ್ರಾರಂಭಿಸಿದಾಗಿನಿಂದ ಅವರ ದಾಖಲೆಗಳಲ್ಲಿ ಅಧಿಕೃತವಾಗಿ ಇಂಡಿಯಾ ಎಂಬ…

Read More

ಸೌದಿ ಅರೇಬಿಯಾದ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಪಠ್ಯ ಬೋಧಿಸಲಾಗುತ್ತಿದೆ ಎಂಬುದು ಸುಳ್ಳು

ಸೌದಿ ಅರೇಬಿಯಾದ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಪಠ್ಯ ಬೋಧಿಸಲಾಗುತ್ತಿದೆ. ಆದರೆ ಭಾರತದಲ್ಲಿ ಇದರ ಬಗ್ಗೆ ಮಾತನಾಡಿದರೆ ಅವರು ಕೋಮುವಾದಿಗಳಾಗುತ್ತಾರೆ ಎಂದು ಫೇಕ್ ನ್ಯೂಸ್ ಹರಡಿ ಕುಖ್ಯಾತಿಯಾಗಿರುವ ಪೋಸ್ಟ್ ಕಾರ್ಡ್ ಕನ್ನಡ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ನಿಲುಮೆ ಎಂಬ ಬಲಪಂಥೀಯರ ಫೇಸ್ಬುಕ್ ಗ್ರೂಪ್ನಲ್ಲಿ ಸುವರ್ಣ ನ್ಯೂಸ್ ಲಿಂಕ್ ಅನ್ನು ಹಂಚಿಕೊಂಡು ಸೌದಿಯಲ್ಲಿ ರಾಮಾಯಣ ಮಹಾಭಾರತ ಬೋಧಿಸಲಾಗುತ್ತಿದೆ ಎಂದು ಪ್ರತಿಪಾದಿಸಿವೆ. ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಅರಬ್ ಯೋಗ ಫೌಂಡೇಷನ್ ಮುಖ್ಯಸ್ಥೆ ನೌಫ್ ಅಲ್ ಮರ್ವಾಯಿ ಎಂಬುವವರ ಟ್ವೀಟ್…

Read More

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್- ಮಹಿಳೆಗೆ ಬೆಂಕಿ ಹಚ್ಚಿದ್ದಾರೆ ಎಂಬುವುದು ಸುಳ್ಳು, ಈ ವಿಡಿಯೋ ಬಂಗಾಳದ್ದು

ಉತ್ತರ ಪ್ರದೇಶದಲ್ಲಿ ಲವ್‌ ಜಿಹಾದ್ ನಡೆಸಲಾಗಿದೆ, ಹಿಂದೂ ಹುಡುಗಿಗೆ ಬೆಂಕಿ ಹಚ್ಚಿ ಕೊಲೆಗೈದಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹಲವು ವಾಟ್ಸ್‌ಆಪ್‌ಗಳಲ್ಲಿ, ” ಉತ್ತರ ಪ್ರದೇಶದಲ್ಲಿ ಲವ್‌ ಜಿಹಾದ್‌ ಘಟನೆ, ಹಿಂದೂ ಹೆಣ್ಣು ಮಕ್ಕಳೇ ದಯವಿಟ್ಟು ನೋಡಿ, ನಮ್ಮ ಅಬ್ದುಲ್ಲ ಎಲ್ಲರಂತಲ್ಲ ಎನ್ನುವವರು ನೋಡಿ” ಎಂದು ಇಂಗ್ಲಿಷ್‌ ಮತ್ತು ಕನ್ನಡ ಮಿಶ್ರಿತ ಬರಹಗಳೊಂದಿಗೆ ವಾಟ್ಸಾಆಪ್‌ಗಳಲ್ಲಿ ಶೇರ್‌ ಮಾಡಲಾಗುತ್ತಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕನ್ನಡ ಫ್ಯಾಕ್ಟ್‌ ಚೆಕ್‌ ತಂಡದ…

Read More

ಸೋನಿ ಲೈವ್ ಇಂಡಿಯನ್ ಐಡಲ್ ಶೋನ 14 ನೇ ಆವೃತ್ತಿಯಲ್ಲಿ ಅಂಬೇಡ್ಕರ್ ಹಾಡು ಎಂಬುದು ಎಡಿಟೆಡ್ ವಿಡಿಯೋ

ಸೂರ್ಯಕಾಂತ್ ಎಂಬ ಗಾಯಕನೊಬ್ಬ ಸೋನಿ ಲೈವ್ ನಡೆಸುವ ಇಂಡಿಯನ್ ಐಡಲ್ ಶೋನ 14 ನೇ ಆವೃತ್ತಿಯಲ್ಲಿ ಅಂಬೇಡ್ಕರ್ ಹಾಡು ಹಾಡಿ ಎಲ್ಲರೂ ಅಳುವಂತೆ ಮಾಡಿದ್ದಾರೆ ಎಂಬ ವಿಡಿಯೋಗಳು ಯೂಟೂಬ್ ನಲ್ಲಿ ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್ : ಸೂರ್ಯಕಾಂತ್ ತಾನು ಸೋನಿ ನಡೆಸುವ ಪ್ರತಿಷ್ಠಿತ ಇಂಡಿಯನ್ ಐಡಲ್ ನಲ್ಲಿ ಹಾಡುತ್ತಿರುವಂತೆ ಹಂಚಿಕೊಂಡಿರುವ ವಿಡಿಯೋ ಎಟಿಟೆಡ್ ಆಗಿದೆ. RK ಸೂಪರ್ ಡ್ಯಾನ್ಸರ್ ಎಂಬ ಯೂಟೂಬ್ ಖಾತೆ ಹೊಂದಿರುವ ಸೂರ್ಯಕಾಂತ್ ಉತ್ತಮ ಡ್ಯಾನ್ಸರ್ ಮತ್ತು ಗಾಯಕರಾಗಿದ್ದಾರೆ. ಅವರು ತಮ್ಮ ಹಾಡುಗಳು ಹೆಚ್ಚು ಜನರಿಗೆ…

Read More

ರಾಹುಲ್‌ ಗಾಂಧಿ ಅರ್ಥವಿಲ್ಲದ ಭಾಷಣ ಮಾಡಿದ್ದಾರೆ ಎಂಬುವುದು ಸುಳ್ಳು..!

ಕಳೆದ ಕೆಲ ದಿನಗಳಿಂದ ರಾಹುಲ್‌ ಗಾಂಧಿಯವರು ಅರ್ಥವಿಲ್ಲ ಭಾಷಣ ಮಾಡುತ್ತಿದ್ದಾರೆ ಮತ್ತು ಅವರ ಮಾತುಗಳು ಯಾರಿಗೂ ಅರ್ಥವಾಗುತ್ತಿಲ್ಲ, ಯಾರಿಗಾದರೂ ಅರ್ಥವಾದರೆ ನಮಗೆ ತಿಳಿಸಿ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ, ಆದರೆ ಇದರ ಹಿಂದಿನ ಸತ್ಯ ಬೇರೆಯದ್ದೇ ಇದೆ. ಹೌದು.. ರಾಹುಲ್‌ ಗಾಂಧಿ  ಮಾತನಾಡಿದ್ದಾರೆ ಎಂಬ ವಿಡಿಯೋದಲ್ಲಿ ಅವರು “ನನ್ನ ತಂದೆ ಕೊಲ್ಲಲ್ಪಟ್ಟರು, ನಾನು ಆ ರೀತಿ ಮಾಡಿಲ್ಲ, ನಾನು ಆಸ್ಪತ್ರೆಯಲ್ಲಿದ್ದೆ, ನನಗೆ ಈ ರೀತಿ ಆಗಿದ್ದರೆ ನಾನು ಸಾಯಿಸುತ್ತಿದ್ದೆ ಎಂದು ಭಾವಿಸಿದ್ದೆ” ; ಎಂಬ…

Read More

ರಾಜಸ್ಥಾನ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುವಾಗ ಧರ್ಮದ ಆಧಾರದಲ್ಲಿ ತಾರತಮ್ಯವೆಸಗಿಲ್ಲ..!

ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಕೆಲ ದಿನಗಳು ಬಾಕಿ ಇವೆ. ಹೀಗಿರುವ ಅಲ್ಲಿನ ಆಡಳಿತ ಪಕ್ಷದ ವಿರುದ್ದ ಈಗ ಹಲವು ರೀತಿಯಾದ ಸುಳ್ಳು ಸುದ್ದಿಯನ್ನ ಹಬ್ಬಲು ಅಲ್ಲಿನ ಕೆಲ ಡಿಜಿಟಲ್‌ ಮಾಧ್ಯಮಗಳು ಪ್ರಾರಂಭ ಮಾಡಿವೆ ಎಂಬ ಆರೋಪ ಕೇಳಿ ಬಂದಿವೆ. ಇದಕ್ಕೆ ಪೂರಕ ಎಂಬಂತೆ ಇದೀಗ ರಾಜಸ್ಥಾನ ಸರ್ಕಾರದ ವಿರುದ್ಧ ದಿನಕ್ಕೆ ಒಂದರಂತೆ, ಒಂದೊಂದೇ ಸುಳ್ಳು ಸುದ್ದಿಗಳು ಹಬ್ಬೋದಕ್ಕೆ ಪ್ರಾರಂಭವಾಗಿವೆ. ಇದರಿಂದ ಅಲ್ಲಿನ ಸರ್ಕಾರ ಇಕ್ಕಟ್ಟಿಗ ಸಿಲುಕಿಕೊಂಡಿದೆ. ಈಗ ಇಂತಹದ್ದೇ ಒಂದು ಸುಳ್ಳು ಸುದ್ದಿ ಅಲ್ಲಿನ ಸರ್ಕಾರವನ್ನ…

Read More

ಬಿಜೆಪಿಗೆ ಮತ ನೀಡಿದ ತಪ್ಪಿಗೆ ಬೆರಳು ಕತ್ತರಿಸಿಕೊಂಡಿದ್ದಾರೆ ಎಂಬುದು ಸುಳ್ಳು

ಬಿಜೆಪಿಗೆ ಮತ ನೀಡಿದ್ದಕ್ಕಾಗಿ ಬೇಸರಗೊಂಡ ವ್ಯಕ್ತಿಯೊಬ್ಬ ತನ್ನ ಬೆರಳು ಕತ್ತರಿಸಿಕೊಂಡಿದ್ದಾನೆ ಎಂಬ ವಿಡಿಯೋ ಒಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: ಮಹಾರಾಷ್ಟ್ರದ ಧನಂಜಯ್ ನನವಾರೆ ಎಂಬ ವ್ಯಕ್ತಿಯೊಬ್ಬ ತನ್ನ ಅಣ್ಣ ಮತ್ತು ಅತ್ತಿಗೆ ಆತ್ಮಹತ್ಯೆಯಿಂದ ಸಾವನ್ನಪ್ಪಿಲ್ಲ. ಇದು ಕೊಲೆಯಾಗಿದೆ. ಹಾಗಾಗಿ ನ್ಯಾಯಯುತ ಪೋಲಿಸ್ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಯಾವುದೇ ತನಿಖೆ ನಡೆಸದ ಪೋಲಿಸರ ಮೇಲೆ ಸಿಟ್ಟಿಗೆದ್ದು ತನ್ನ ಬೆರಳು ಕತ್ತರಿಸಿದ್ದಾನೆ ಮತ್ತು ಪ್ರತೀವಾರ ತನ್ನ ದೇಹದ ಅಂಗಾಂಗಳನ್ನು ಕತ್ತರಿಸಿ ಮಹಾರಾಷ್ಟ್ರದ ಮುಖ್ಯಮಂತ್ರಿ…

Read More

ಸಾಲುಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ, ಸುಳ್ಳು ಸುದ್ದಿ ನಂಬಬೇಡಿ.

ವವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಸಾಲು ಮರದ ತಿಮ್ಮಕ್ಕ ಅವರ ಬಗ್ಗೆ ಕೆಲ ಕಿಡಿಗೇಡಿಗಳು ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂದು ಸುಳ್ಳು ಸುದ್ದಿಯನ್ನ ಹರಡುತ್ತಿದ್ದಾರೆ, ಆದರೆ ತಿಮ್ಮಕ್ಕ ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ.. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 5ರ ಇಂದು ಬೆಳಿಗ್ಗೆ ಅವರು ಆಸ್ಪತ್ರೆಯಲ್ಲಿ ತಿಂಡಿ ಸೇವಿಸುತ್ತಿರುವ ವಿಡಿಯೋವನ್ನು ಸಾಲು ಮರದ ತಿಮ್ಮಕ್ಕನವರ ದತ್ತು ಪುತ್ರ ಉಮೇಶ್ ವನಸಿರಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲಿ ಅವರು ಚೇತರಿಸಿಕೊಳ್ಳುತ್ತಿರುವುದನ್ನು ನೋಡಬಹುದು….

Read More