Team Kannada fact check

Fact Check : ಬುಲ್ಡೋಜರ್‌ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದ ವೀಡಿಯೊ ತೆಲಂಗಾಣದ್ದಲ್ಲ ಸೌದಿ ಅರೇಬಿಯಾದ್ದು

ಪ್ರವಾಹ ಪೀಡಿತ ತೆಲಂಗಾಣದ ಖಮ್ಮಂನಲ್ಲಿ ರಕ್ಷಣಾ ಕಾರ್ಯಾಚರಣೆಯ ಪವಾಡವಾಗಿದೆ ಎಂದು ಸೌದಿ ಅರೇಬಿಯಾದ ವೀಡಿಯೊವನ್ನು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.                   ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಕಳೆದ ವಾರದಿಂದ ನಿರಂತರ ಮಳೆಯಿಂದಾಗಿ ತೀವ್ರ ಪ್ರವಾಹಕ್ಕೆ ತತ್ತರಿಸಿವೆ. ಭಾರತೀಯ ಹವಮಾನ ಇಲಾಖೆ (ಐಎಂಡಿ) ಯ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಮಳೆಯಾಗಿದೆ. ನೂರಾರು ಗ್ರಾಮಗಳು ಮುಳುಗಡೆಯಾಗಿದ್ದು, 35ಕ್ಕೂ ಹೆಚ್ಚು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ತೆಲಂಗಾಣದ ಖಮ್ಮಂ…

Read More
ರತನ್‌ ಟಾಟಾ

Fact Check : ರತನ್‌ ಟಾಟಾ ಭಾರತೀಯ ಸೇನೆಗೆ 2500 ಗುಂಡು ನಿರೋಧಕ ವಾಹನಗಳ ಖರೀದಿಗೆ ದೇಣಿಗೆ ನೀಡಿದ್ದಾರೆಂಬುದು ಸುಳ್ಳು

ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ನೀಡಿದ ದೇಣಿಗೆಯಿಂದ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ 2500 ಗುಂಡು ನಿರೋಧಕ ವಾಹನಗಳನ್ನು ಖರೀದಿಸಿದೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌: ವೈರಲ್‌ ಆದ ಪೋಸ್ಟ್‌ರ್‌ಗೆ ಸಂಬಂಧಿಸಿದ ಕೀವರ್ಡ್‌ನ್ನು ಹಾಕಿ ಹುಡುಕಿದಾಗ, ಈ ಪೋಸ್ಟ್‌ರ್‌ ಕುರಿತು ಯಾವುದೇ  ವಿಶ್ವಾಸಾರ್ಹ ವರದಿಗಳು ಪ್ರಕಟವಾಗಿಲ್ಲ. ಇದರ ಹೊರತಾಗಿಯೂ ರತನ್ ಟಾಟಾ ಅಥವಾ ಟಾಟಾ ಗ್ರೂಪ್‌ನವರು ದೇಣಿಗೆಯನ್ನು ನೀಡಿದ್ದರೆ, ಅದು ಖಂಡಿತವಾಗಿಯೂ ಗಮನಾರ್ಹವಾದ ವಿಷಯವಾಗಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿತ್ತು. ಹೆಚ್ಚುವರಿಯಾಗಿ, …

Read More
ಬಾಲಿವುಡ್‌

Fact check: ಬಾಲಿವುಡ್‌ ಸಿನೆಮಾ ನಿರ್ದೇಶಕ ಅನುಭವ್‌ ಸಿನ್ಹಾ ಭಯೋತ್ಪಾದನೆ ಕುರಿತು ಹೇಳಿಕೆ ನೀಡಿಲ್ಲ

ಬಾಲಿವುಡ್‌ ಸಿನೆಮಾ ನಿರ್ದೇಶಕ   ಅನುಭವ್‌ ಸಿನ್ಹಾರವರು , ನಟಿ ತಾಪ್ಸೀ ಪನ್ನು ಮತ್ತು ನಟ ರಜತ್ ಕಪೂರ್ ರೊಂದಿಗೆ  ನಡೆಸಿದ ಪತ್ರಿಕಾಗೋಷ್ಠಿಯಲ್ಲಿ “ಹಿಂದೂಗಳು ಭಯೋತ್ಪಾದನೆಯನ್ನು ಪ್ರಾಂಭಿಸಿದ್ದಾರೆ” ಎಂದು ಹೇಳಿದ್ದಾರೆ ಎಂಬ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌: ಈ ವೀಡಿಯೊದ ಕೆಲವು ಪೋಟೊಗಳನ್ನು ಕೀಫ್ರೇಮ್‌ಗಳಲ್ಲಿ ರಿವರ್ಸ್‌ ಇಮೇಜ್‌ ಬಳಸಿಕೊಂಡು ಹುಡುಕಿದಾಗ ಈ ವೀಡಿಯೊ 9 ಜುಲೈ 2018 ರಂದು YouTube ನಲ್ಲಿ ಹಂಚಿಕೊಳ್ಳಲಾಗಿರುವುದು ಕಂಡುಬಂದಿದೆ. ಈ ವೀಡಿಯೊದಲ್ಲಿ ಅನುಭವ್‌ ಸಿನ್ಹಾ, ” ಭಯೋತ್ಪಾದನೆ ಪ್ರಾರಂಭವಾಗಲು…

Read More
ಬಾಂಗ್ಲಾದೇಶ

Fact Check : ಬಾಂಗ್ಲಾದೇಶದಲ್ಲಿ ಪ್ರವಾಹಕ್ಕೆ ಒಳಗಾದ ದೇವಾಲಯವೆಂದು ಭಾರತದ ದೇವಾಲಯದ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ

ಭಾರತದ ದೇವಾಲಯದ ಚಿತ್ರವನ್ನು, ಬಾಂಗ್ಲಾದೇಶದ ಪ್ರವಾಹದಲ್ಲಿ ಸಿಲುಕಿಕೊಂಡಿರುವ ದೇವಾಲಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ” ಭಾರತ ದೇಶವು ತನ್ನ ಎಲ್ಲಾ ಆಣೆಕಟ್ಟೆಗಳನ್ನು ತೆರೆದಾಗ ಪ್ರವಾಹ ಉಂಟಾಗಿ ಬಾಂಗ್ಲಾದೇಶದಲ್ಲಿನ ದೇವಾಲಯವು ನೀರಿನಲ್ಲಿ ಮುಳುಗುತ್ತಿದೆ” ಎಂದು ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ಸಂಭವಿಸಿದ ಪ್ರವಾಹಕ್ಕೆ ಭಾರತವನ್ನು ಆರೋಪಿಸಿ ಅನೇಕ ಸುಳ್ಳುಗಳು ಇತ್ತೀಚೆಗೆ ಕಂಡುಬರುತ್ತಿವೆ. ಫ್ಯಾಕ್ಟ್‌ ಚೆಕ್‌ : ಗೂಗಲ್‌ ರಿವರ್ಸ್‌ ಇಮೇಜ್‌ನ್ನು ಬಳಸಿಕೊಂಡು ಈ ಚಿತ್ರವನ್ನು ಹುಡುಕಿದಾಗ ಇದು 2019ರದ್ದಾಗಿದೆ. ಭಾರತದಲ್ಲಿ ಸಂಭವಿಸಿದ ಪ್ರವಾಹದಲ್ಲಿ  ಕಂಡು ಬಂದ ಚಿತ್ರವಾಗಿದೆ. ಇದು…

Read More

Fact Check : ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕಾಗಿ ಹಿಂದೂಗಳು ವ್ಯಕ್ತಿಯನ್ನು ಥಳಿಸಿದ್ದಾರೆ ಎಂಬುದು ಸುಳ್ಳು

ವ್ಯಕ್ತಿಯೊಬ್ಬ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾನೆಂದು ಹಿಂದೂಗಳು ಅವನನ್ನು ದೊಣ್ಣೆ ಮತ್ತು ಲಾಠಿಗಳಿಂದ ನಿರಂತರವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌: ಈ ವೈರಲ್‌ ಆದ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್‌ ಇಮೇಜ್‌ನ್ನು ಹುಡುಕಿದಾಗ, ಇದು 4 ಜುಲೈ 2022 ರಂದು X ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದು ತೆಲಂಗಾಣದ ಸಂಗಾರೆಡ್ಡಿಯಲ್ಲಿರುವ 26 ವರ್ಷದ ಬೀಗರಿ ನರೇಶ್‌ ಎಂಬ ವ್ಯಕ್ತಿಯ ಮೇಲೆ ನಡೆದ ದೈಹಿಕ ಹಲ್ಲೆಯನ್ನು ತೋರಿಸುತ್ತದೆ. ಬೀಗರಿ ನರೇಶ್‌ ಎಂಬ ವ್ಯಕ್ತಿಯ…

Read More
ಬಾಂಗ್ಲಾದೇಶ

Fact Check : ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಪಶ್ಚಿಮ ಬಂಗಾಳದ ಮುಸ್ಲಿಮರು ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು

ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ದಾಳಿಯನ್ನು ಕೋಲ್ಕತ್ತಾದ ಪಾರ್ಕ್ ಸರ್ಕಸ್‌ನಲ್ಲಿ ಇಸ್ಲಾಮಿಕ್‌ ಧರ್ಮದವರು ಆಚರಿಸುತ್ತಿದ್ದಾರೆ ಎಂಬ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌:  ಈ ವೀಡಿಯೊ ಜೂನ್‌2023ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಜಮಾತೆ ಇಸ್ಲಾಮಿ ಹಿಂದ್‌ ಢಾಕಾ ಮೆಟ್ರೋಪಾಲಿಟನ್ ಪೋಲಿಸ್ (DMP) ಪಡೆಯಿಂದ ಅನುಮತಿಯನ್ನು ಪಡೆದುಕೊಂಡು ಪ್ರತಿಭಟನೆಯನ್ನು ನಡೆಸಿತ್ತು. ಪ್ರತಿಭಟನೆಯಲ್ಲಿ ಜಮಾತೆ ಇಸ್ಲಾಮಿ ಹಿಂದ್‌ ಪಕ್ಷದ ನಾಯಕರಾದ ಶಫೀಕುರ್ರೆಹಮಾನ್‌ ಸೇರಿದಂತೆ, ಪಕ್ಷದ ಬಂಧಿತ ಸದಸ್ಯರನ್ನು ಬಿಡುಗಡೆಗೊಳಿಸಬೇಕು. ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು…

Read More
ಬಾಂಗ್ಲಾದೇಶ

Fact Check: ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕಿಯನ್ನು ಅವಮಾನಿಸಿದ್ದಾರೆ ಎಂಬ ವೀಡಿಯೊ ಸುಳ್ಳು

ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕಿಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. “ಬಾಂಗ್ಲಾದೇಶದಲ್ಲಿ  ಹಿಂದೂ ಶಿಕ್ಷಕರಿಗೆ ರಾಜೀನಾಮೆಯನ್ನು ಕೊಡಿಸಿ ಸಾರ್ವಜನಿಕವಾಗಿ ಅವಮಾನ ಮಾಡುತ್ತಿದ್ದಾರೆ” ಎಂದು ಈ ವೀಡಿಯೊವನ್ನು ಎಕ್ಸ್‌ (ಟ್ವಿಟರ್‌) ನ ಬಳಕೆದಾರರಾದ ಸುನಂದಾ ರಾಯ್ ಮತ್ತು ಅಜಯ್ ಚೌಹಾಣ್ ರವರು ತಮ್ಮ ಪುಟಗಳಲ್ಲಿ ಹಂಚಿಕೊಂಡಿದ್ದಾರೆ. ಫ್ಯಾಕ್ಟ್‌ ಚೆಕ್‌: ಬಾಂಗ್ಲಾದೇಶದ ಪತ್ರಕರ್ತರಾದ  ಶೋಹನೂರ್ ರಹಮಾನ್‌,  ರವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ವೀಡಿಯೋದಲ್ಲಿರುವ ಮಹಿಳೆ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದಿದ್ದಳು ಎಂದು ತಿಳಿಸಿದ್ದಾರೆ. ಇದಲ್ಲದೆ, ವೇಶ್ಯಾವಾಟಿಕೆ ಮತ್ತು ಮಹಿಳಾ…

Read More
ಡೊನಾಲ್ಡ್‌ ಟ್ರಂಪ್‌

Fact Check : ‘ನಾನು ಹಿಂದೂಗಳ ದೊಡ್ಡ ಅಭಿಮಾನಿ’ ಎಂಬ ಡೊನಾಲ್ಡ್ ಟ್ರಂಪ್ ಅವರ ಹಳೆಯ ವೀಡಿಯೊವನ್ನು 2024 ಯುಎಸ್ ಚುನಾವಣೆಗೆ ಮುಂಚಿತವಾಗಿ ಹಂಚಿಕೊಳ್ಳಲಾಗುತ್ತಿದೆ.

“ನಾನು ಹಿಂದೂಗಳ ದೊಡ್ಡ ಅಭಿಮಾನಿ ಮತ್ತು ಭಾರತ ದೇಶದ ದೊಡ್ಡ ಅಭಿಮಾನಿ” ಎಂದು ಅಮೇರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು 2024ರ ಯುಎಸ್ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯಲ್ಲಿ ಹೇಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೀಡೀಯೊದ ಕುರಿತು ನಾವು ಕೀಫ್ರೇಮ್‌ಗಳ ರಿವರ್ಸ್‌ ಇಮೇಜ್‌ನ ಹುಡುಕಾಟವನ್ನು ನಡೆಸಿದೆವು. ಈ ವೀಡೀಯೋವನ್ನು ಅಕ್ಟೋಬರ್‌ 16, 2016 ರಂದು  ಫೇಸ್‌ಬುಕ್‌ನಲ್ಲಿ  ANI ಪೋಸ್ಟ್‌ರ್‌ನಲ್ಲಿ  ಹಂಚಿಕೊಳ್ಳಲಾಗಿದೆ. ಯುಎಸ್‌ 2016ರ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ರವರು ರಿಪಬ್ಲಿಕನ್‌ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾಗ “ನಾನು ಹಿಂದೂಗಳ ಮತ್ತು ಭಾರತ…

Read More

Fact Check| ಉತ್ತರಾಖಂಡದಲ್ಲಿ ಮುಸ್ಲಿಮರ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂಬ ಸುದ್ದಿ ಸುಳ್ಳು

ಉತ್ತರಾಖಂಡದಲ್ಲಿ 2000 ಇಸವಿಯಲ್ಲಿ ಶೇಕಡಾ 1.5ರಷ್ಟಿದ್ದ ಮುಸ್ಲಿಮರ ಜನಸಂಖ್ಯೆಯು 2024ರ ಹೊತ್ತಿಗೆ ಶೇಕಡಾ 16ರಷ್ಟು ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು  ಹಂಚಿಕೊಳ್ಳಲಾಗುತ್ತಿದೆ. “ಎಚ್ಚರಿಕೆಯ ಕರೆಗಂಟೆ” ಎಂದು ಮುಸ್ಲಿಮರನ್ನು ಗುರಿಯಾಗಿಸಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. Muslim Population in Uttarakhand Year 2000 : 1.5% Year 2024 : 16% You are not only blind but a traitor too if you are unable to…

Read More

Fact Check| ನಟಿ ದೀಪಿಕಾ ಪಡುಕೋಣೆ ಏಳು ತಿಂಗಳಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ ಎಂಬುದು ಸುಳ್ಳು

ಬಾಲಿವುಡ್ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ, ನಟಿ ದೀಪಿಕಾ ಮಗುವನ್ನು ಹಿಡಿದುಕೊಂಡಿರುವ ಹಲವು ಚಿತ್ರಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ಗರ್ಭಿಣಿಯಾಗಿ ಏಳು ತಿಂಗಳಲ್ಲೇ ಹೆರಿಗೆಯಾಗಿದೆ ಎಂದು ಪೋಸ್ಟ್‌ ಹಂಚಿಕೊಳ್ಳಲಾಗುತ್ತಿದೆ‌. “ಶುಭಸುದ್ದಿ ಬಾಲಿವುಡ್ ನಟಿ ದೀಪಿಕಾ ಏಳು ತಿಂಗಳ ಬಳಿಕ ಮೊದಲ ಬಾತಿ ಮಗುವಿಗೆ ಜನ್ಮ ‌ನೀಡಿದ್ದಾರೆ”. ಎಂದು ಹೇಳಿ ಕೆಲವು ಫೋಟೋಗಳನ್ನು ಲಗತ್ತಿಸಿ ಹಂಚಿಕೊಳ್ಳಲಾಗಿದೆ.   ಫ್ಯಾಕ್ಟ್‌ಚೆಕ್: ನ್ಯೂಸ್‌ಮೊಬೈಲ್ ಎಂಬ ಸುದ್ದಿಸಂಸ್ಥೆಯು ಈ ಫೋಟೊಗಳ ಸತ್ಯಾಸತ್ಯತೆಯ ಬಗ್ಗೆ…

Read More