ರಾಹುಲ್ ಗಾಂಧಿ

Fact Check: ಪಾಕಿಸ್ತಾನದ ಟಿವಿಯಲ್ಲಿ ರಾಹುಲ್ ಗಾಂಧಿಯನ್ನು ಪರಿಚಯಿಸುವ ವೀಡಿಯೊ ಎಂದು ಶಾಮ್‌ ಶರ್ಮ ಎಂಬ ಯೂಟೂಬರ್‌ನ ವೀಡಿಯೋ ವೈರಲ್‌

ಪಾಕಿಸ್ತಾನದ ಟಿವಿಯಲ್ಲಿ ರಾಹುಲ್ ಗಾಂಧಿಯನ್ನು ಪರಿಚಯಿಸುವ ವೀಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಗ್ರಾಫಿಕ್‌ನಿಂದ ಓದುವುದನ್ನು ಮತ್ತು ರಾಹುಲ್ ಗಾಂಧಿ ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನದ ಬಗ್ಗೆ ಗೇಲಿ ಮಾಡುವುದನ್ನು ಕಾಣಬಹುದು. ಈ ವೀಡಿಯೊದ ಆರ್ಕೈವ್ ಮಾಡಿದ ಆವೃತ್ತಿಯನ್ನು ನೀವು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಮೊದಲನೆಯದಾಗಿ, ವೈರಲ್ ವೀಡಿಯೊದಲ್ಲಿ ವ್ಯಕ್ತಿಗಳೊಂದಿಗೆ ಬರೆಯಲಾದ ಕೆಲವು ಹೆಸರುಗಳನ್ನು ನಾವು ಗಮನಿಸಿದ್ದೇವೆ, ಅಂದರೆ, ಭಾಷಣಕಾರರು / ಆತಿಥಿಯ ಹೆಸರುಗಳು ಮತ್ತು ಕಾರ್ಯಕ್ರಮದ ಹೆಸರು, ‘ದಿ ಶಾಮ್ ಶರ್ಮಾ ಶೋ’….

Read More
ಶ್ರೀಕೃಷ್ಣ ಕುಲಕರ್ಣಿ

Fact Check: ಗಾಂಧೀಜಿಯವರ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ರಾಹುಲ್ ಗಾಂಧಿಗೆ ಬರೆದ ಹಳೆಯ ಪತ್ರವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ

ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರಿಗೆ ಬರೆದ ಬಹಿರಂಗ ಪತ್ರ ಎಂಬ ಸಂದೇಶವೊಂದು ಹಲವಾರು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಪತ್ರದಲ್ಲಿ ಶ್ರೀಕೃಷ್ಣ ಕುಲಕರ್ಣಿಯವರು “ಮೋಹನ್ ದಾಸ್ ಕರಮಚಂದ್ ಗಾಂಧಿ ನನ್ನ ಮುತ್ತಜ್ಜ. ಅವರನ್ನು ಶ್ರೀ ನಾಥೂರಾಂ ಗೋಡ್ಸೆ ಕೊಂದರು. ಅನೇಕ ತನಿಖೆಗಳು ಮತ್ತು ಆಯೋಗಗಳು ಈ ಪ್ರಕರಣವನ್ನು ಸಂಶೋಧಿಸಿವೆ. ಗಾಂಧಿ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್‌ನ ಯಾರೂ ಸಿಲುಕಿಸಿಲ್ಲ. ಆರ್‌ಎಸ್‌ಎಸ್‌ ಮೇಲೆ ಹೊಣೆಯನ್ನೂ ಹೊರಿಸಿಲ್ಲ. ಶ್ರೀ ನಾಥೂರಾಂ ಗೋಡ್ಸೆಯನ್ನು…

Read More
ರಾಹುಲ್‌ಗಾಂಧಿ

Fact Check: ಅಮೆರಿಕದ ಜನತೆ ರಾಹುಲ್ ಗಾಂಧಿ ಭಾರತದವರೇ? ಅಥವಾ ಪಾಕಿಸ್ತಾನದವರೇ? ಎಂದು ಕೇಳಿದ್ದಾರೆ ಎಂಬುದು ಸುಳ್ಳು

ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇತ್ತೀಚೆಗೆ ಮೂರು ದಿನಗಳ ಕಾಲ ಅಮೇರಿಕಕ್ಕೆ ಭೇಟಿ ನೀಡಿದ್ದರು. ಈ ಬೆನ್ನಲ್ಲೇ ಗಾಂಧಿಯವರ ರಾಷ್ಟ್ರೀಯತೆಯನ್ನು ಪ್ರಶ್ನಿಸುವ ಅಮೇರಿಕ ಮೂಲದ ಇಂಗ್ಲಿಷ್ ಆವೃತ್ತಿಯ ಪತ್ರಿಕೆಯ ಲೇಖನದ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ರಾಹುಲ್ ಗಾಂಧಿ ಭಾರತದಿಂದ ಬಂದಿದ್ದಾರೋ ಅಥವಾ ಪಾಕಿಸ್ತಾನದಿಂದ ಬಂದಿದ್ದಾರೋ” ಎಂದು ಅಮೇರಿಕನ್ನರು ಕೇಳುತ್ತಿದ್ದಾರೆ. ಮತ್ತು ರಾಹುಲ್‌ ಗಾಂಧಿ ಭಾರತದ ಬಗ್ಗೆ ಮಾತನಾಡುವಾಗ ಭಾರತದ ಶತ್ರುಗಳ ಹಾಗೆ ವರ್ತಿಸುತ್ತಾರೆ. ಇದು ಭಾರತ ದೇಶಕ್ಕೆ ಎಂತಹ ಅವಮಾನ! ಎಂಬ ಶೀರ್ಷಿಕೆಯನ್ನು…

Read More

Fact Check: 2016 ರಲ್ಲಿ ರಾಹುಲ್ ಗಾಂಧಿ ಉತ್ತರ ಪ್ರದೇಶದ ದರ್ಗಾಕ್ಕೆ ಭೇಟಿ ನೀಡಿದ ಹಳೆಯ ವಿಡಿಯೋ ಮತ್ತೆ ವೈರಲ್

ರಾಹುಲ್ ಗಾಂಧಿ ಸೂಫಿ ದರ್ಗಾಕ್ಕೆ ಭೇಟಿ ನೀಡುವಾಗ ತಲೆಗೆ ಟೋಪಿ ಧರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ನೀವು ರಾಷ್ಟ್ರೀಯ ಹಿತಾಸಕ್ತಿಯನ್ನು ಬಿಟ್ಟು ನಿಮ್ಮ ಸ್ವಾರ್ಥವನ್ನು ಈಡೇರಿಸಿಕೊಳ್ಳಲು *ನೋಟಾ*ವನ್ನು ಹತ್ತಿಕ್ಕುತ್ತಿದ್ದೀರಿ ಮತ್ತು ಈ ತೋಳವನ್ನು ಬಲಪಡಿಸುತ್ತಿದ್ದೀರಿ.”ಪೋಸ್ಟ್‌ನ ಹಿಂದಿ ಪಠ್ಯ – ” तुम लोग राष्ट्रहित को छोड़ कर अपने स्वार्थ की पूर्ति के लिए *नोटा* दबा रहे हो और इस भेड़िये को मजबूत कर रहे हो।…

Read More
ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿಯವರು ಕೋಲ್ಕತ್ತಾ ಪ್ರಕರಣವನ್ನು “ಮುಖ್ಯವಲ್ಲ” ಎಂದು ಕರೆದಿದ್ದಾರೆ ಎಂದು ಎಡಿಟ್‌ ಮಾಡಿದ ವೀಡಿಯೋ ಹಂಚಿಕೆ

 ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೋಲ್ಕತಾದ ಆರ್‌.ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪ್ರತಿಭಟಿಸುತ್ತಿರುವ ವೈದ್ಯರಿಗೆ ಮುಷ್ಕರವನ್ನು ಕೊನೆಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ವೀಡಿಯೊದಲ್ಲಿ ಪ್ರತಿಕ್ರಿಯಿಸಿದ್ದಾರೆ. 13 ಸೆಕೆಂಡುಗಳ ಈ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಿರುವವರು ರಾಹುಲ್ ಗಾಂಧಿ ವರದಿಗಾರನಿಗೆ ತಮ್ಮ ಗಮನವನ್ನು ಬೇರೆಡೆಗೆ ಸೆಳೆಯಬೇಡಿ,…

Read More

Fact Check | ರಾಹುಲ್ ಗಾಂಧಿ ಮುಂದೆ ಉದ್ಧವ್ ಠಾಕ್ರೆ ನಮಸ್ಕರಿಸುತ್ತಿರುವ ಫೋಟೋ ಎಡಿಟ್ ಮಾಡಲಾಗಿದೆ

“ಈ ಫೋಟೋವನ್ನು ನೋಡಿ.. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಮುಂದೆ ನಮಸ್ಕರಿಸುತ್ತಿದ್ದಾರೆ. ಈ ಕುರ್ಚಿಯ ದುರಾಸೆ ಒಬ್ಬ ವ್ಯಕ್ತಿಯನ್ನು ಏನು ಬೇಕಾದರೂ ಮಾಡಿಸ ಬಲ್ಲದು. ಭಾರತೀಯರೇ ಇನ್ನಾದರೂ ಎಚ್ಚೆತ್ತುಕೊಳ್ಳಿ ಇಂಡಿಯಾ ಮೈತ್ರಿಕೂಟ ಖುರ್ಚಿಗಾಗಿ ಹೋರಾಡುತ್ತಿದೆ ಎಂಬುದನ್ನು ಮರೆಯದಿರಿ.” ಎಂದು ಫೋಟೋವೊಂದನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. https://twitter.com/kanganaranautin/status/1823577791507337676 ಈ ಫೋಟೋ ನೋಡಿದ ಹಲವು ಮಂದಿ ಉದ್ಧವ್ ಠಾಕ್ರೆ‌ ಅವರು ನಿಜಕ್ಕೂ ರಾಹುಲ್‌ ಗಾಂಧಿ ಅವರಿಗೆ ನಮಸ್ಕರಿಸಿದ್ದಾರೆ ಎಂದು…

Read More

Fact Check: ರಾಹುಲ್ ಗಾಂಧಿಯವರು ಲಂಡನ್ ಪ್ರವಾಸದಲ್ಲಿ ಬಾಂಗ್ಲಾದೇಶದ ತಾರಿಕ್ ರೆಹಮಾನ್ ಅವರನ್ನು ಭೇಟಿಯಾಗಿದ್ದಾರೆ ಎಂಬುದಕ್ಕೆ ಆಧಾರವಿಲ್ಲ

ಬಾಂಗ್ಲಾದೇಶದಲ್ಲಿ ಹಿಂಸಾಚಾರಗಳು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆದರೆ ಈ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅನೇಕರು ಪೋಟೋ ಮತ್ತು ವೀಡಿಯೋಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು, ಸುಳ್ಳು ಪ್ರತಿಪಾದನೆಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ಹಿಂದು ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಯನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗಿತ್ತು. ನಂತರ ಹೋಟೆಲ್‌ ಒಂದಕ್ಕೆ ಬೆಂಕಿ ಬಿದ್ದ ಹಳೆಯ ವೀಡಿಯೋವನ್ನು ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹಂಚಿಕೊಂಡಿದ್ದರು. ಜಿಹಾದಿಗಳು ಕುಟುಂಬದವರನ್ನೆಲ್ಲಾ ಹತ್ಯೆ ಮಾಡಿದ್ದಾರೆ ಎಂದು ಸಂಬಂಧವಿಲ್ಲದ ಘಟನೆಯನ್ನು…

Read More
ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿ ವೀಡಿಯೋವನ್ನು ಎಡಿಟ್‌ ಮಾಡಿ ಹಿಂದುಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 23 ಸೆಕೆಂಡುಗಳ ವೀಡಿಯೋ  ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ರಾಹುಲ್ ಗಾಂಧಿ ಹಿಂದಿಯಲ್ಲಿ ಹೀಗೆ ಹೇಳುತ್ತಾರೆ, “तो उनको यह भी सोचना चाहिए, जो भी वह कर रहे हैं कि किसी न किसी दिन बीजेपी की सरकार बदलेगी। और फिर कार्रवाई होगी। और ऐसी कार्रवाई होगी कि मैं गारंटी करता हूं यह फिर से…

Read More
ವಯನಾಡ್

ರಾಹುಲ್ ಗಾಂಧಿ ವಯನಾಡ್ ಭೇಟಿ ಮುಂದೂಡಿದ್ದು ಹವಾಮಾನ ಕಾರಣಗಳಿಂದ ಹೊರತು ಅನಿವಾರ್ಯ ಕಾರಣಗಳಿಂದಲ್ಲ

ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಸರಣಿ ಭೂ ಕುಸಿತಗಳ ಪರಿಣಾಮ ನೂರಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದರು. ಕೆಲವರು ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಇಡೀ ದೇಶವೇ ಈ ದುರ್ಘಟನೆಗೆ ಸಂತಾಪ ಸೂಚಿಸಿದೆ. ಸದ್ಯ ವಯನಾಡ್‌ನಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿಯವರು ಘಟನೆಗೆ ಸಂತಾಪ ವ್ಯಕ್ತಪಡಿಸಿ, ತನ್ನ ಸಹೋದರಿ ಪ್ರಿಯಾಂಕ ಗಾಂಧಿಯೊಂದಿಗೆ ಇಂದು ಬುಧವಾರ ವಯನಾಡ್‌ಗೆ ತೆರಳಿ ಸಂತ್ರಸ್ತರ ಅಳಲು ಕೇಳುವುದಾಗಿ ತಿಳಿಸಿದ್ದರು. ಆದರೆ ನಂತರ ತಮ್ಮ ಭೇಟಿಯನ್ನು…

Read More
ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿಯವರು ನಕಲಿ ಲೋಕೋ-ಪೈಲಟ್ ಗಳ ಜೊತೆಗೆ ಸಂವಾದ ನಡೆಸಿದ್ದಾರೆ ಎಂಬುದು ಸುಳ್ಳು

ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತವು ಕನಿಷ್ಠ 10 ಜನರನ್ನು ಬಲಿ ತೆಗೆದುಕೊಂಡ ವಾರಗಳ ನಂತರ ರಾಹುಲ್ ಗಾಂಧಿಯವರು ಜುಲೈ 7 ರಂದು  ಲೋಕೋ-ಪೈಲಟ್‌ಗಳೊಂದಿಗೆ ಸಂವಾದ ನಡೆಸಿದರು. ಆದರೆ ಈಗ ರಾಹುಲ್ ಗಾಂಧಿಯವರು ಪ್ರಚಾರ ಪಡೆಯಲು ನಕಲಿ ಲೋಕೋ ಪೈಲೆಟ್‌ಗಳನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ಬಿಜೆಪಿ ಬೆಂಬಲಿಗರು “ಲೋಕೋ ಪೈಲಟ್ ಗಳು ಎಂದು ಹೇಳಿ ರಾಹುಲ್ ಗಾಂಧಿ ಎಕ್ಸ್ ನಲ್ಲಿ ಹಾಕಿರುವ ಫೋಟೋ ಪರಿಶೀಲಿಸಿದಾಗ ಅದರಲ್ಲಿ ರೈಲ್ವೆ ನೌಕರರು ಮತ್ತು ಲೋಕೋ…

Read More