Fact Check | ರಾಮಮಂದಿರದಲ್ಲಿ ದೇಣಿಗೆಯ ಮಹಾಪೂರ ಎಂದು ರಾಜಸ್ತಾನದ ವಿಡಿಯೋ ಹಂಚಿಕೆ!

“ಈ ವಿಡಿಯೋ ನೋಡಿ ಇದು ಅಯೋಧ್ಯೆಯಲ್ಲಿ ಮೊದಲ ದಿನ ಹರಿದು ಬಂದ ದೇಣಿಗೆ. ದೇವಾಲಯದ ಹುಂಡಿಗಳಲ್ಲಿ ಕಂತೆ ಕಂತೆ ನೋಟುಗಳನ್ನು ಭಕ್ತರು ನೀಡಿದ್ದಾರೆ. ಈ ವಿಡಿಯೋ ಅದಕ್ಕೆ ಸಾಕ್ಷಿ..” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಹಲವು ಸುಳ್ಳು ಸುದ್ದಿಗಳು ರಾಮ ಮಂದಿರ ಉದ್ಘಾಟನೆಯ ನಂತರ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಹಲವು ಮಂದಿ ಅಯೋಧ್ಯೆಗೆ ಸಂಬಂಧ ಪಡದ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಕೂಡ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ನಿಜವೆಂದು ನಂಬಿದ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು…

Read More

Fact Check | ರಾಮಮಂದಿರಕ್ಕೆ ಮೌಲನಾ ಬಾಂ*ಬ್ ಹಾಕ್ತಾರ?: ನೈಜ ವಿಷಯ ತಿರುಚಿ ಸುದ್ದಿ ಪ್ರಸಾರ ಮಾಡುತ್ತಿರುವ ಟಿವಿ ವಿಕ್ರಮ

ಟಿವಿ ವಿಕ್ರಮ ಚಾನಲ್‌ನ ನಿರೂಪಕಿ ಸೌಮ್ಯರವರು ರಾಮಮಂದಿರ ಉದ್ಘಾಟನೆ ಮೌಲಾನ ಹೇಳಿಕೆ.. ಬಾಂ*ಬ್ ಹಾಕ್ತಾರಾ..? ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಪ್ರಸಾರ ಮಾಡಿದ್ದಾರೆ. ಈ ವಿಡಿಯೋದಲ್ಲಿ “ದೇಶಾದ್ಯಂತೆ ಜ. 22 ರಿಂದ 25 ರವರೆಗೆ ಮುಸಲ್ಮಾನರು ರೈಲು, ಬಸ್‌ಗಳಲ್ಲಿ ಓಡಾಡಬೇಡಿ, ಮನೆಯಲ್ಲಿಯೇ ಇರಿ ಎಂದು AIUDF ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.” “ಇದರ ಅರ್ಥ ಏನು? ಗೋದ್ರಾ ಮಾದರಿ ರೈಲಿನಲ್ಲಿ ಬಾಂಬ್‌ ಇಡೋದಕ್ಕೆ ಪ್ಲಾನ್‌ ಮಾಡಿದ್ದಾರಾ? ಅಜ್ಮಲ್‌ ಕಸಬ್‌ ರೀತಿ ಸಿಕ್ಕ ಸಿಕ್ಕ ಹಿಂದೂಗಳನ್ನು ಗುಂಡಿಟ್ಟು ಕೊಲ್ಲಲು ಪ್ಲಾನ್‌…

Read More

Fact Check | ಅಯೋಧ್ಯೆಯ ರಾಮಮಂದಿರಕ್ಕಾಗಿ BHEL ಸಂಸ್ಥೆ ಗಂಟೆಗಳನ್ನು ನಿರ್ಮಿಸಿಲ್ಲ

“ಈ ವಿಡಿಯೋ ನೋಡಿ ಇದು ಅಯೋಧ್ಯೆಯ ರಾಮ ಮಂದಿರಕ್ಕಾಗಿ ಭಾರತ್‌ ಹೇವಿ ಎಲೆಕ್ಟ್ರಿಕಲ್‌ ಲಿಮಿಟೆಡ್‌ ( BHEL ) ಸಂಸ್ಥೆ ನಿರ್ಮಿಸಿರುವ ಗಂಟೆಗಳು. ಈ 42 ಗಂಟೆಗಳನ್ನು ದೊಡ್ಡ ದೊಡ್ಡ ಟ್ರಕ್‌ಗಳಲ್ಲಿ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತಿದೆ. ” ಎಂಬ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್‌ ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಮೋಜೋ ಸುದ್ದಿ…

Read More

Fact Check | ಅಯೋಧ್ಯೆಯ ರಾಮಮಂದಿರದ ಅಧಿಕಾರಿಗಳು ದಲಿತ ಬಾಲಕನಿಗೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಅಯೋಧ್ಯೆಯಲ್ಲಿ ದಲಿತ ಬಾಲಕನ ಮೇಲೆ ರಾಮಮಂದಿರದ ಅಧಿಕಾರಿಗಳು ಹೇಗೆ ಹಲ್ಲೆ ನಡೆಸುತ್ತಿದ್ದಾರೆಂದು. ಇದು ನಿಜಕ್ಕೂ ಆಘಾತಕಾರಿ.” ಎಂದು ವ್ಯಕ್ತಿಯೊಬ್ಬ ಬಾಲಕನನ್ನು ಥಳಿಸುತ್ತಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಾನಾ ಬರಹಗಳೊಂದಿಗೆ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ ಈ ವಿಡಿಯೋದಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಇಬ್ಬರು ವ್ಯಕ್ತಿಗಳು ಸಮವಸ್ತ್ರ ಧರಿಸಿದ ಬಾಲಕನೊಬ್ಬನನ್ನು ರಸ್ತೆಯ ಮೇಲೆಯೇ ಮನಸ್ಸೋ ಇಚ್ಛೆ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಇದೇ ವಿಡಿಯೋದಲ್ಲಿ ಹಲವು ವಿದ್ಯಾರ್ಥಿಗಳಿರುವುದು,…

Read More

Fact Check | ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಕಪಿಲ್‌ ಸಿಬಲ್‌ ಹೇಳಿಲ್ಲ

“ಸುಪ್ರೀಂ ಕೋರ್ಟ್ ವಕೀಲ ಹಾಗೂ ಕಾಂಗ್ರೆಸ್‌ನ ಮಾಜಿ ನಾಯಕ ಕಪಿಲ್‌ ಸಿಬಲ್‌ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು” ಎಂಬ ಪೋಸ್ಟ್‌ವೊಂದನ್ನು ಕಪಿಲ್‌ ಸಿಬಲ್‌ ಹೆಸರಿನಲ್ಲಿ ಮಾಡಲಾದ ಟ್ವಿಟ್‌ವೊಂದರ ಸ್ಕ್ರೀನ್‌ ಶಾಟ್‌ನಲ್ಲಿ ವ್ಯಾಪವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ಸ್ಕ್ರೀನ್‌ ಶಾಟ್‌ ಅನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ನಿವೃತ್ತ ಮೇಜರ್ ಜನರಲ್ ಹರ್ಷಾ ಕಾಕರ್ ಅವರು ವಾಟ್ಸ್‌ಆಪ್‌ನಲ್ಲಿ ಬಂದಿದ್ದು ನನ್ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೇ ರಿ ಟ್ವೀಟ್‌ ಮಾಡಿರುವ ಸಾಕಷ್ಟು ಮಂದಿ ಕಾಂಗ್ರೆಸ್‌ನ…

Read More

Fact Check | ವೈರಲ್ ಅಶ್ಲೀಲ ಫೋಟೊಗಳು ಅಯೋಧ್ಯೆಯ ರಾಮಮಂದಿರದ ಅರ್ಚಕ ಮೋಹಿತ್‌ ಪಾಂಡೆಯವರದ್ದಲ್ಲ

ಸಾಮಾಜಿಕ ಜಾಲತಾಣದಲ್ಲಿ ಅಯೋಧ್ಯೆ ರಾಮಮಂದಿರ ಅರ್ಚಕರಾಗಿ ನೇಮಕಗೊಂಡಿರುವ ಮೋಹಿತ್ ಪಾಂಡೆ ಕುರಿತು ವಿಡಿಯೋ, ಫೋಟೋ ಹರಿಬಿಡಲಾಗಿದೆ. ಅರ್ಚಕ ಮೋಹಿತ್ ಪಾಂಡೆ ಮಹಿಳೆಯೊಬ್ಬರ ಜೊತೆ ಅಶ್ಲೀಲ ಭಂಗಿಯಲ್ಲಿದ್ದು, ಚುಂಬಿಸುತ್ತಿರುವ ವಿಡಿಯೋ ಮತ್ತು ಫೋಟೋ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿದ್ದಾರೆ.  ಈ ಫೋಟೋದಲ್ಲಿನ ಅಸಲಿ ವಿಚಾರ ಕುರಿತು ಪರಿಶೀಲನೆ ನಡೆಸದೆ ಹಲವಾರು ಮಂದಿ ಈ ಫೋಟೋವನ್ನು ಶೇರ್‌ ಮಾಡುವುದರ ಜೊತೆಗೆ ವಿವಿಧ ಆಡಳಿತರೂಢ ಬಿಜೆಪಿಯನ್ನೂ ಇಲ್ಲಿ ಟೀಕಿಸಲಾಗುತ್ತಿದೆ. ಹಾಗಾಗಿ ಈ ವಿಚಾರ ರಾಜಕೀಯವಾಗಿಯೂ ಕೂಡ ಸದ್ದು…

Read More
ರಾಹುಲ್ ಗಾಂಧಿ

ರಾಹುಲ್ ಗಾಂಧಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ್ದು ಬೆಲೆ ಏರಿಕೆ ವಿರುದ್ಧವೇ ಹೊರತು ರಾಮಮಂದಿರದ ವಿರುದ್ಧವಲ್ಲ

ರಾಮಮಂದಿರದ ಅಡಿಗಲ್ಲು ಇಟ್ಟಾಗ ಅದನ್ನು ವಿರೋಧಿಸಲು ಕೆಲವೊಂದಿಷ್ಟು ಸಂಸದರು ಕಪ್ಪು ಬಟ್ಟೆ ಹಾಕಿ ಸಂಸತ್ತಿಗೆ ಹೋಗಿದ್ದರು. ಯೋಚನೆ ಮಾಡಿ ಇವರಿಗೆ ಹಿಂದೂಗಳು ಬೇಡ ಅವರ ಓಟು ಮಾತ್ರ ಬೇಕು ಎಂಬ ಪ್ರತಿಪಾದನೆಯೊಂದಿಗೆ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸುತ್ತಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್ ಚೆಕ್ ಈ ಕುರಿತು ಹುಡುಕಿದಾಗ ಆಗಸ್ಟ್ 05, 2022ರಂದು ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ದೇಶಾದ್ಯಂತ…

Read More

ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ರಾಮಮಂದಿರದ ವಿರುದ್ಧ ವಾದಿಸಲು 24 ಜನ ವಕೀಲರನ್ನು ನೇಮಿಸಿರಲಿಲ್ಲ

24 ಜನ ವಕೀಲರನ್ನು ನೇಮಿಸಿ, ಪ್ರಭು ಶ್ರೀರಾಮಚಂದ್ರನ ಅಸ್ತಿತ್ವಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಅಫೆಡಿವಿಟ್ ಸಲ್ಲಿಸಿದ್ದ ಆಂಟೋನಿಯೋ ಮೈನೋ ಮತ್ತು ತಂಡದಿಂದ ಇಂದು ಅದೇ ಶ್ರೀರಾಮಚಂದ್ರನಿಗೆ ಪೂಜೆ. ಲೋಕಸಭಾ ಚುನಾವಣಾ ಗಿಮಿಕ್. ಎಂದು ಬರೆದ ವಿಡಿಯೋ ಒಂದು ಹಲವು ದಿನಗಳಿಂದ ಹರಿದಾಡುತ್ತಿದೆ. ಇಂತಹ ಪ್ರತಿಪಾದನೆಯ ಹಲವು ಪೋಸ್ಟರ್‌ಗಳು, ವಿಡಿಯೋಗಳು ಹೀಗಾಗಲೇ ಯೂಟೂಬ್ ಸೇರಿದಂತೆ, ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್: ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ ಜಾಗ ನಮಗೆ ಸೇರಬೇಕೆಂದು ನಿರ್ಮೋಹಿ ಅಖಾಡ,…

Read More

ಕಾಂಗ್ರೆಸ್ ರಾಮಮಂದಿರದ ವಿರುದ್ದ 24 ವಕೀಲರನ್ನು ನೇಮಿಸಿದೆ ಎಂಬುದು ಸುಳ್ಳು

“ಕಾಂಗ್ರೆಸ್ ಕಾರ್ಯಕರ್ತರು ಓಟು ಕೇಳಲು ಬಂದಾಗ ರಾಮಮಂದಿರದ ವಿರುದ್ಧ 24 ವಕೀಲರನ್ನು ನೇಮಿಸಿದ್ದು ಏಕೆ ಎಂದು ಪ್ರಶ್ನಿಸಿ” ಎಂದು ಬಾಲಿಹುಡ್‌ನ ಖ್ಯಾತ ನಟ ನಾನಾ ಪಾಟೇಕರ್ ಹೇಳಿದ್ದಾರೆ ಎನ್ನಲಾದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್ ಚೆಕ್: ಅಸಲಿ ವಿಷಯ ಏನೆಂದರೆ  ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ ಜಾಗ ನಮಗೆ ಸೇರಬೇಕೆಂದು ನಿರ್ಮೋಹಿ ಅಖಾಡ, ಸುನ್ನಿ ವಕ್ಫ್ ಮಂಡಳಿ ಮತ್ತು ರಾಮ್ ಲಲ್ಲಾ ವಾರಸುದಾರರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತೇ ವಿನಃ ಕಾಂಗ್ರೆಸ್ ಅಲ್ಲ. ವಾಸ್ತವದಲ್ಲಿ…

Read More

Fact Check | ಕುಮಾರಿ ಸೆಲ್ಜಾ ಅವರು ಹಿಂದೂ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂಬುದು ನಿಜವಲ್ಲ

“ಇದು ಸೆಲ್ಜಾ ಅವರ ಹೇಳಿಕೆ ಹಿಂದೂ ದೇವರಾದ ರಾಮನ ಮೇಲೆ ಕಾಂಗ್ರೇಸ್‌ನವರ ದ್ವೇಷ ಎಂತಹದ್ದು ಎಂಬುದು ಸಾಬೀತಾಗಿದೆ. ಕಾಂಗ್ರೆಸ್‌ನವರು ಯಾವಾಗಲೂ ಭಗವಾನ್ ಶ್ರೀ ರಾಮನನ್ನು ಅವಮಾನಿಸುತ್ತಾರೆ. ರಾಮನ ಬಗ್ಗೆ ಇಂತಹ ಹೇಳಿಕೆಗಳನ್ನು, ಇಂತಹ ಭಾಷೆಯನ್ನು ಬಳಸಿರುವುದು ಹಿಂದುಗಳ ನಂಬಿಕೆಗೆ ಅಪಮಾನ ಮಾತ್ರವಲ್ಲ, ಎಲ್ಲಾ ಶ್ರೀರಾಮನ ಭಕ್ತರಿಗೂ ಮಾಡಿದ ಅವಮಾನವಾಗಿದೆ.” ಎಂದು ಸೆಲ್ಜಾ ಅವರ ವಿಡಿಯೋವನ್ನು ಹಂಚಿಕೊಂಡಿರುವ ಹರಿಯಾಣ ಬಿಜೆಪಿ ಕಾಂಗ್ರೆಸ್ ವಿರುದ್ಧ ಆಕ್ರೋಶವನ್ನು ಹೊರಹಾಕಿದೆ. कांग्रेस ने हमेशा प्रभु श्रीराम जी का अपमान किया…

Read More