ಹತ್ರಾಸ್

Fact Check: ಹತ್ರಾಸ್‌ನ ಕಾಲ್ತುಳಿತಕ್ಕೆ ಸಂಬಂಧಿಸಿದ ವೀಡಿಯೋ ಎಂದು ಭೋಲೆ ಬಾಬಾನ ರಾಜಸ್ತಾನದ ಕಾರ್ಯಕ್ರಮದ ವೀಡಿಯೋ ಹಂಚಿಕೆ

ಹತ್ರಾಸ್‌ನ ಧಾರ್ಮಿಕ ಸಭೆಯಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 121 ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಫುಲ್ರಾಯ್ ಗ್ರಾಮದಲ್ಲಿ ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಅಲಿಯಾಸ್ ನಾರಾಯಣ್ ಸಕರ್ ಹರಿ “ಸತ್ಸಂಗ” ಎಂಬ ಧಾರ್ಮಿಕ ಸಮಾವೇಶವನ್ನು ನಡೆಸಿದ್ದರು. ಈ ದುರಂತ ಸುದ್ದಿ ಹೊರಬಂದ ತಕ್ಷಣ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹತ್ರಾಸ್ ಕಾಲ್ತುಳಿತದ ಕಾರ್ಯಕ್ರಮದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಸುದ್ದಿ ಸಂಸ್ಥೆ ಟೈಮ್ಸ್ ನೌ ಈ ವಿಡಿಯೋವನ್ನು ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು, “ಕಾಲ್ತುಳಿತಕ್ಕೆ ಕೆಲವೇ ಕ್ಷಣಗಳ ಮೊದಲು, ಕ್ಯಾಮೆರಾದಲ್ಲಿ…

Read More
ಹಿಂದು

Fact Check: ರಾಜಸ್ತಾನದಲ್ಲಿ ಜಮೀನು ವ್ಯಾಜ್ಯದ ಗಲಾಟೆಯನ್ನು ಹಿಂದು ಮನೆಗೆ ಕಲ್ಲು ತೂರಾಟ ಎಂದು ತಪ್ಪಾಗಿ ಹಂಚಿಕೆ

ಇತ್ತೀಚೆಗೆ ಜನರಲ್ಲಿ ಮುಸ್ಲಿಂ ಸಮುದಾಯದ ಕುರಿತು ದ್ವೇಷ ಬಿತ್ತುವ ಸಲುವಾಗಿ ಅನೇಕ ಪ್ರಯತ್ನಗಳನ್ನು ನಮ್ಮ ದೇಶದಲ್ಲಿ ನಡೆಸಲಾಗುತ್ತಿದೆ. ಎಲ್ಲಿಯೇ ಜಗಳಗಳು, ಕೊಲೆ, ಹಲ್ಲೆಗಳು ನಡೆದರೂ ಅದಕ್ಕೆ ಧರ್ಮದ ಬಣ್ಣ ಹಚ್ಚುವುದು, ಆರೋಪಿ ಮುಸ್ಲಿಂ ಆಗಿದ್ದರೆ ಅದನ್ನು ದೊಡ್ಡ ಸಂಗತಿ ಮಾಡಿ ರಾಜಕೀಯವಾಗಿ ಬದಲಾಯಿಸಲು ಹುನ್ನಾರಗಳು ನಡೆಯುತ್ತಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಕುರಿತು ಇತರೆ ಜನರಲ್ಲಿ ಭಯ ಹುಟ್ಟಿಸಿ ನಾವು ನಿಮ್ಮ ರಕ್ಷಿಸುತ್ತೇವೆ ಎಂಬ ಸುಳ್ಳು ಭರವಸೆಗಳ ನೀಡಿ ಮತ ಪಡೆಯಲಷ್ಟೇ ಇಂತಹ ದ್ವೇಷದ ರಾಜಕಾರಣವನ್ನು ಹುಟ್ಟು…

Read More

Fact Check | ರಾಮಮಂದಿರದಲ್ಲಿ ದೇಣಿಗೆಯ ಮಹಾಪೂರ ಎಂದು ರಾಜಸ್ತಾನದ ವಿಡಿಯೋ ಹಂಚಿಕೆ!

“ಈ ವಿಡಿಯೋ ನೋಡಿ ಇದು ಅಯೋಧ್ಯೆಯಲ್ಲಿ ಮೊದಲ ದಿನ ಹರಿದು ಬಂದ ದೇಣಿಗೆ. ದೇವಾಲಯದ ಹುಂಡಿಗಳಲ್ಲಿ ಕಂತೆ ಕಂತೆ ನೋಟುಗಳನ್ನು ಭಕ್ತರು ನೀಡಿದ್ದಾರೆ. ಈ ವಿಡಿಯೋ ಅದಕ್ಕೆ ಸಾಕ್ಷಿ..” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಹಲವು ಸುಳ್ಳು ಸುದ್ದಿಗಳು ರಾಮ ಮಂದಿರ ಉದ್ಘಾಟನೆಯ ನಂತರ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಹಲವು ಮಂದಿ ಅಯೋಧ್ಯೆಗೆ ಸಂಬಂಧ ಪಡದ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಕೂಡ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ನಿಜವೆಂದು ನಂಬಿದ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು…

Read More

Fact Check | ಖಲಿಸ್ತಾನ ಪರ ಚಳುವಳಿಯನ್ನು ರಾಜಸ್ತಾನದ ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ ಬೆಂಬಲಿಸಿಲ್ಲ

“ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಖಲಿಸ್ತಾನ್ ಚಳವಳಿಯನ್ನು ಬೆಂಬಲಿಸಿದ್ದರೆ ಮತ್ತು ಪ್ರತಿಭಟನೆಯೊಂದರಲ್ಲಿ ಮಾತನಾಡಿದ್ದಾರೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಕಾಂಗ್ರೆಸ್‌ ಖಲಿಸ್ತಾನಿಗಳಿಗೆ ಬೆಂಬಲ ಕೊಡುತ್ತಿದೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ ಮತ್ತೊಂದು ವಿಡಿಯೋ ಕೂಡ ವೈರಲ್‌ ಆಗಿದ್ದು ಅದರಲ್ಲಿ ರಾಜಸ್ತಾನದ ಮಾಜಿ  ಸಿಎಂ ಅಶೋಕ್‌ ಗೆಹ್ಲೋಟ್‌ ಅವರು, “ಮೋಹನ್ ಭಾಗವತ್ ಮತ್ತು ನರೇಂದ್ರ ಮೋದಿ ಅವರು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಬಹುದಾದಾಗ, ನಾನು ಖಲಿಸ್ತಾನ್ ಬಗ್ಗೆ ಏಕೆ ಮಾತನಾಡಬಾರದು..” ಎಂದು…

Read More

ರೈತನ ಕಾಲಿನಿಂದ ಒದ್ದ ಕಾಂಗ್ರೆಸ್ ಶಾಸಕನ ವಿಡಿಯೋ ರಾಜಸ್ತಾನದ್ದು, ಕರ್ನಾಟಕದ್ದಲ್ಲ

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ವ್ಯಾಪಕವಾಗಿ ಸುಳ್ಳು ಸುದ್ದಿಗಳನ್ನ ಹೆಚ್ಚು ಹೆಚ್ಚು ಹಬ್ಬಿಸಲಾಗುತ್ತಿದೆ.. ಇದೀಗ ಇಂತಹದ್ದೇ ಸುಳ್ಳು ಸುದ್ದಿಯೊಂದು ರಾಜ್ಯ ರಾಜಕಾರಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಸದ್ದು ಮಾಡುತ್ತಿದೆ ಆ ಸುಳ್ಳು ಸುದ್ದಿಯಲ್ಲಿ “ಬಡ ರೈತನನ್ನು ಕಾಲಲ್ಲಿ ಒದ್ದ ಕಾಂಗ್ರೆಸ್‌ ಶಾಸಕ, ಕಾಂಗ್ರೆಸ್‌ಗೆ ಓಟು ಹಾಕಿ ಮೋಸ ಹೋದ ಜನ, ಇನ್ನಾದರು ಎಚ್ಚೆತ್ತುಕೊಳ್ಳದಿದ್ದರೇ ರಾಜ್ಯಕ್ಕೆ ಅಪಾಯ” ಎಂಬ ರೀತಿಯ ಹಲವು ತಲೆ ಬರಹಗಳೊಂದಿಗೆ ಒಂದೇ ವಿಡಿಯೋವನ್ನ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ನೋಡಿದ ಸಾಕಷ್ಟು ಮಂದಿ  ಇದು…

Read More

ಇದು ರಾಜಸ್ತಾನದ ಹಿಂದೂ- ಮುಸ್ಲಿಂ ಸೌಹಾರ್ದತೆಯ ‘ಅಖಂಡ ಜ್ಯೋತಿ’ ಎನ್ನುವ ಸಂಪ್ರದಾಯ

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಈಗ ದೇವಸ್ಥಾನದಲ್ಲಿ ನಮಾಜ್ ಮಾಡಿಸುತ್ತಿದೆ, ಅದೂ ಕೂಡ ಪೋಲೀಸರನ್ನು ನಿಯೋಜಿಸಿ, ನಾವೆಲ್ಲರೂ ಇದನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ, ಅದಕ್ಕಾಗಿಯೇ ಈ ವೀಡಿಯೋವನ್ನು ಸಾಧ್ಯವಾದಷ್ಟು ಶೇರ್ ಮಾಡಿ, ಇದರಿಂದ ಕಾಂಗ್ರೆಸ್ ಅಥವಾ ಇತರ ವಿರೋಧ ಪಕ್ಷಗಳಿಗೆ ಮತ ಹಾಕುವ ಜಾತ್ಯಾತೀತ ಹಿಂದೂಗಳು ಕಣ್ಣು ತೆರೆಯಬಹುದು ಎಂಬ ವೀಡಿಯೋ ಒಂದು ವೈರಲ್ ಆಗುತ್ತಿದೆ. ಸತ್ಯವೇನೆಂದರೆ ರಾಜಸ್ತಾನದ ಜೈಪುರದಲ್ಲಿ ಲಕ್ಷ್ಮಿ ನಾರಾಯಣ ದೇವಸ್ಥಾನದ ಸಮುಚ್ಚಾಯದಲ್ಲೇ ಸೈಯದ್ ಚಾಂಡಿ ವಾಲೆ ದೇಗುಲವಿದೆ ಇಲ್ಲಿ‘ಅಖಂಡ ಜ್ಯೋತಿ’ ಎನ್ನುವ ಸಂಪ್ರದಾಯವಿದೆ. ಇದನ್ನು 40–50…

Read More

Fact Check | ರಾಹುಲ್‌ ಗಾಂಧಿ ವಿರುದ್ಧ ಮತ್ತೊಮ್ಮೆ ಸುಳ್ಳು ಸುದ್ದಿ ಸೃಷ್ಟಿಸಿದ ಮಹೇಶ್‌ ವಿಕ್ರಮ್‌ ಹೆಗಡೆ

“ಮೋದಿಜಿ ಎಂದಿಗೂ ಮುಸ್ಲಿಂ ಸಮುದಾಯವನ್ನು ಮುಗಿಸುವುದಾಗಿ ಹೇಳಿಲ್ಲ. ಆದರೂ ಅವರು ಮೋದಿಗೆ ಮತ ಹಾಕಿಲ್ಲ. ಸನಾತನ ಧರ್ಮವನ್ನು ಅಂತ್ಯಗೊಳಿಸುವುದಾಗಿ ರಾಹುಲ್ ಗಾಂಧಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ. ಆದರೂ ಮೂರ್ಖ ಹಿಂದೂಗಳು ರಾಹುಲ್ ಗಾಂಧಿಗೆ ಮತ ಹಾಕಿದರು ಎಂತಹ ವಿಪರ್ಯಾಸ!” ಎಂದು ಟಿವಿ ವಿಕ್ರಮ ಹಾಗೂ ಪೋಸ್ಟ್‌ ಕಾರ್ಡ್‌ ಸಂಸ್ಥಾಪಕ ಮಹೇಶ್‌ ವಿಕ್ರಮ ಹೆಗಡೆ ತನ್ನ ಎಕ್ಸ್‌ ಖಾತೆಯಲ್ಲಿ ಸುಳ್ಳು ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು ಹಲವರು ರಿಪೋಸ್ಟ್‌ ಕೂಡ ಮಾಡಿದ್ದಾರೆ. Modi ji…

Read More

Fact Check | ದೇಶದ ಸಂಪತ್ತಿನಲ್ಲಿ ಮುಸ್ಲಿಮರು ಮೊದಲ ಹಕ್ಕುದಾರರಾಗಿದ್ದಾರೆಂದು ಯೋಗಿ ಆದಿತ್ಯನಾಥ್ ಹೇಳಿಲ್ಲ

“ದೇಶದ ಸಂಪತ್ತಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಮೊದಲ ಆದ್ಯತೆ ನೀಡಲಾಗಿ ಮತ್ತು ಅವರೇ ಮೊದಲ ಹಕ್ಕುದಾರರಾಗಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಹೇಳಿದ್ದಾರೆ” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಬಹುತೇಕರು ಇದು ನಿಜವಿರಬಹುದು ಎಂದು ವ್ಯಾಪಕವಾಗಿ ಹಂಣಚಿಕೊಳ್ಳುತ್ತಿದ್ದಾರೆ. उत्तर प्रदेश की जनता ने योगी जी के सुर ही बदल डाले… Indian Muslims pic.twitter.com/LtwB483blo — 𝐍𝐚𝐮𝐬𝐡𝐚𝐝 (@NaushadVibe) June 10, 2024…

Read More

Fact Check | ರಾಜಸ್ಥಾನದಲ್ಲಿ ಮುಸ್ಲಿಮರಿಂದ ದಲಿತನ ಹತ್ಯೆ ಎಂಬುದು ಸುಳ್ಳು

ಇತ್ತೀಚೆಗೆ ರಾಜಸ್ತಾನದಲ್ಲಿನ ಲಿಕ್ಕರ್‌ ಮಾಫಿಯಾ ದಲಿತ ವ್ಯಕ್ತಿಯೊಬ್ಬ ಬೇರೊಂದು ಮದ್ಯದಂಗಡಿಯಿಂದ ಮದ್ಯ ಖರೀದಿಸಿದ್ದ ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ, ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ  ಸಾಕಷ್ಟು ಮಂದಿ “ರಾಜಸ್ತಾನದಲ್ಲಿ ಮುಸಲ್ಮಾನರು ದಲಿತ ವ್ಯಕ್ತಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ಈ ವಿಡಿಯೋವನ್ನು ಶೇರ್‌ ಮಾಡಿ.” ಎಂದು ಹಂಚಿಕೊಳ್ಳುತ್ತಿದ್ದಾರೆ. https://twitter.com/Modified_Hindu9/status/1797571851666980877 ಈ ವಿಡಿಯೋ ನೋಡಿದ ಸಾಕಷ್ಟು ಮಂದಿಗೆ ವಿಡಿಯೋದಲ್ಲಿನ ಕೊಲೆಗಡುಕರ ವಿಕೃತಿ ಎಂಥಹದ್ದು ಎಂಬುದು…

Read More
ಮಿರಾಯ

Factcheck: ಮಿರಾಯ ವಾದ್ರಾ ಒಟ್ಟು ಆಸ್ತಿ 376 ಮಿಲಿಯನ್ ಡಾಲರ್ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ

ರಾಜಕೀಯ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ಆದರೆ ಈಗ ಅವರ ಮಕ್ಕಳ ಮೇಲೂ ಸಹ ಅನಾಗತ್ಯವಾದ ಆರೋಪಗಳನ್ನು, ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. “ಮಿರಾಯ ವಾದ್ರಾ, ರಾಬರ್ಟ್ ವಾದ್ರಾ ಮತ್ತು ಪ್ರಿಯಾಂಕಾ ವಾದ್ರಾ ಅವರ ಪುತ್ರಿ, ಆಕೆಯ ನಿವ್ವಳ ಮೌಲ್ಯ 376 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 3,126 ಕೋಟಿ ರೂ. ತಂದೆ ರಾಬರ್ಟ್ ವಾದ್ರಾ ಅವರ ಸಂಪತ್ತು $2.1 ಬಿಲಿಯನ್ ಅಂದರೆ ಸರಿಸುಮಾರು 17,458 ಕೋಟಿ ರೂ. ಮಿರಾಯ ವಾದ್ರಾ ತನ್ನ…

Read More