ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಫೋಟೋಗಳಿಗೂ ಹಾಗೂ ಅವುಗಳೊಂದಿಗೆ ಹಂಚಿಕೊಳ್ಳಲಾಗುವ ಸಾಕಷ್ಟು ವಿಚಾರಗಳಿಗೂ ಸಂಬಂಧವೇ ಇರುವುದಿಲ್ಲ. ಅಂತಹದ್ದೇ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕಳೆದ 6 ವರ್ಷಗಳಿಂದ ವ್ಯಾಪಕವಾಗಿ ಹರಿದಾಡುತ್ತಿದೆ.
ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ “ಚಿರತೆಗಳು ಒಂದು ತಾಯಿ ಜಿಂಕೆ ಮತ್ತು ಎರಡು ಮರಿಗಳನ್ನ ಬೆನ್ನಟ್ಟಿದ್ದವು, ತಾಯಿ ಜಿಂಕೆ ಆ ಚಿರತೆಗಿಂತ ವೇಗವಾಗಿತ್ತು. ಆದರೆ ಅದರ ಮಕ್ಕಳು ಅಷ್ಟು ವೇಗವಾಗಿರಲಿಲ್ಲ. ಆದ್ದರಿಂದ ಆ ತಾಯಿ ಜಿಂಕೆ ತನ್ನ ಎರಡು ಮಕ್ಕಳು ತಪ್ಪಿಸಲು ತನ್ನನ್ನು ತಾನೇ ಆ ಚಿರತೆಗಳಿಗೆ ಅರ್ಪಿಸಿಕೊಂಡಿತು. ಮತ್ತು ತನ್ನ ಮರಿ ಜಿಂಕೆಗಳು ತಪ್ಪಿಸಿಕೊಳ್ಳುವುದನ್ನು ನೋಡುತ್ತಾ ಸಾವನ್ನಪ್ಪಿತ್ತು” ಎಂಬ ಕತೆಯೊಂದಿಗೆ ಪೋಸ್ಟ್ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಸತ್ಯ : ಇದೊಂದು ಕಪೋಲ ಕಲ್ಪಿತ ಕತೆಯಾಗಿದೆ. ಈ ಫೋಟೋವನ್ನು ತೆಗೆದಿರುವ ಛಾಯಾಗ್ರಾಹಕಿಯ ಹೆಸರು ಅಲಿಸನ್ ಬುಟ್ಟಿಗೀಗ್. ಇವರು 2013ರ ಸೆಪ್ಟಂಬರ್ನಲ್ಲಿ ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ಈ ಚಿತ್ರವನ್ನು ಕ್ಲಿಕ್ ಮಾಡಿದ್ದರು. 2017 ಫೆಬ್ರವರಿ 13 ರಂದು ಪ್ರತಿಕ್ರಿಯೆ ನೀಡಿದ್ದ ಅಲಿಸನ್ ಬುಟ್ಟಿಗೀಗ್ ತಾಯಿ ಚಿರತೆಯೊಂದು ತನ್ನ ಮರಿ ಚಿರತೆಗಳಿಗೆ ಜಿಂಕೆಗಳನ್ನು ಭೇಟೆಯಾಡುವುದು ಹೇಗೆ ಎಂದು ಕಲಿಸುತ್ತಿತ್ತು.
ಕೊನೆಯಲ್ಲಿ ತನ್ನ ಮರಿಗಳಿಗೆ ಆ ಜಿಂಕೆಯನ್ನು ಭೇಟೆಯಾಡಿ ತನ್ನ ಮರಿ ಜಿಂಕೆಗಳಿಗೆ ಊಟವನ್ನು ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಆ ಜಿಂಕೆ ಆ ಚಿರತೆಗಳ ಕೈಗೆ ಸಿಲುಕಿದಾಗ ಆಘಾತಕೊಳ್ಳಪಟ್ಟು ಯಾವುದೇ ಚಲನ-ವಲನಗಳನ್ನು ತೋರದೆ ಇದ್ದಿತ್ತು ಆ ವೇಳೆಯಲ್ಲಿ ಈ ಫೋಟೋ ತೆಗೆಯಲಾಗಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ಛಾಯಾಗ್ರಾಹಕಿಯ ಅಲಿಸನ್ ಬುಟ್ಟಿಗೀಗ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಸುಳ್ಳು ಸುದ್ದಿಯನ್ನು ಹಬ್ಬಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಆಕೆ ತಾನು ಚೆನ್ನಾಗಿದ್ದೀನಿ ಎಂದು ಸ್ಪಷ್ಟನೆ ನೀಡಿದ್ದರು. ಹಾಗಾಗಿ ಫೋಟೋ ಜೊತೆ ಹಂಚಿಕೊಳ್ಳಲಾಗುತ್ತಿರುವ ಕತೆ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂಬುದೇ ನಿಜವಾಗಿದೆ.
ಇದನ್ನೂ ಓದಿ : Fact Check: ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್ ಮೋದಿ ಘೋಷಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.