“ 256 ವರ್ಷಗಳಲ್ಲಿ ಯಾವುದೇ ಯುಎಸ್ ಅಧ್ಯಕ್ಷೀಯ ಅಭ್ಯರ್ಥಿಯು ಇದನ್ನು ಹೇಳಲು ಧೈರ್ಯವನ್ನು ಹೊಂದಿರಲಿಲ್ಲ… ಅಮೆರಿಕ ಚುನಾವಣೆಯಲ್ಲಿ ಗೆಲ್ಲಲು ಹಿಂದೂಗಳನ್ನು ನೆರವಾಗಿದ್ದಾರೆ ಎಂದು ಈ ಬಾರಿಯ ಅಮೆರಿಕ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ಡೋನಾಲ್ಡ್ ಟ್ರಂಪ್ ಹೇಳಿಕೆಯನ್ನು ನೀಡಿದ್ದಾರೆ. ಈಗ ಭಾರತದಲ್ಲಿನ ಜಾತ್ಯಾತೀತರು ಟ್ರಂಪ್ ಬಾಯಿಯಿಂದ ಈ ಮಾತನ್ನು ಪ್ರಧಾನಿ ಮೋದಿ ಅವರು ಹೇಳಿಸಿದ್ದಾರೆ” ಎಂದು ಪೋಸ್ಟ್ವೊಂದನ್ನು ಹಂಚಿಕೊಳ್ಳುತ್ತಿದ್ದಾರೆ.
As a Hindu, I am a Big Fan of Trump.. pic.twitter.com/rQv7qy6Im8
— srisathya (@sathyashrii) November 6, 2024
ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಡೊನಾಲ್ಡ್ ಟ್ರಂಪ್ ಹಿಂದೂಗಳ ಬಗ್ಗೆ ಮಾತನಾಡಿರುವುದು ಕಂಡು ಬಂದಿದೆ, ಈ ಕಾರಣದಿಂದಲೇ ಹಲವರು ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 16 ಅಕ್ಟೋಬರ್ 2016 ರಂದು ANI ಸುದ್ದಿ ಸಂಸ್ಥೆಯ ಅಧಿಕೃತ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಿದ ವೀಡಿಯೊ ಕ್ಲಿಪ್ ಅನ್ನು ನಾವು ಕಂಡುಕೊಂಡಿದ್ದೇವೆ , ಇದರಲ್ಲಿ ಟ್ರಂಪ್ ಹೇಳಿಕೆ ಕಂಡು ಬಂದಿದೆ.
ಅವರ ಭಾಷಣವನ್ನು ಹಲವು ಸುದ್ದಿ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಇಂಡಿಯನ್ ಎಕ್ಸ್ಪ್ರೆಸ್ ಕೂಡ 16 ಅಕ್ಟೋಬರ್ 2016 ರಂದು ಮಾಡಿದ್ದ ವರದಿಯ ಪ್ರಕಾರ , “ನ್ಯೂಜೆರ್ಸಿಯಲ್ಲಿ ಹಿಂದೂ ರಿಪಬ್ಲಿಕನ್ ಒಕ್ಕೂಟವು ಆಯೋಜಿಸಿದ್ದ ನಿಧಿಸಂಗ್ರಹ ಅಭಿಯಾನದಲ್ಲಿ ಡೊನಾಲ್ಡ್ ಟ್ರಂಪ್ ಮುಖ್ಯ ಅತಿಥಿಯಾಗಿದ್ದರು ಮತ್ತು ಇಲ್ಲಿ ಅವರು ಭಾರತ ಮತ್ತು ಹಿಂದೂ ಸಮುದಾಯವನ್ನು ಹೊಗಳಿದರು ಮತ್ತು ತಮ್ಮನ್ನು ತಾವು ಹಿಂದೂಗಳ “ದೊಡ್ಡ ಅಭಿಮಾನಿ” ಎಂದು ಬಣ್ಣಿಸಿದರು.” ಎಂಬ ಅಂಶವನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ಈ ಬಾರಿಯ ವಿಜಯೋತ್ಸವದ ಭಾಷಣದಲ್ಲಿ ಟ್ರಂಪ್ ಅವರು ಅಮೇರಿಕನ್ ಜನರಿಗೆ ಧನ್ಯವಾದ ಮತ್ತು ಅವರ ತಂಡದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಫ್ಲೋರಿಡಾದ ಪಾಮ್ ಬೀಚ್ ಕಂಟ್ರಿ ಕನ್ವೆನ್ಷನ್ ಸೆಂಟರ್ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, “ಅಮೆರಿಕ ನಮಗೆ ಅಭೂತಪೂರ್ವ ಮತ್ತು ಶಕ್ತಿಯುತ ಆದೇಶವನ್ನು ನೀಡಿದೆ” ಎಂದು ಹೇಳಿದರು.
ಇದರ ಜೊತೆಗೆ ಅವರ ಬೆಂಬಲಿಗರ ಬೇಡಿಕೆಯ ಮೇರೆಗೆ, ಅವರು ಎಲೋನ್ ಮಸ್ಕ್ ಅವರನ್ನು ಉದಯೋನ್ಮುಖ ತಾರೆ ಎಂದು ಬಣ್ಣಿಸಿದರು. ಆದರೆ, ಈ ಭಾಷಣದಲ್ಲಿ ಅವರು ಯಾವುದೇ ದೇಶದ ಬಗ್ಗೆ ಪ್ರಸ್ತಾಪಿಸಿಲ್ಲ. ಟ್ರಂಪ್ ಅವರ ಈ ಭಾಷಣವನ್ನು ಅಮೆರಿಕದ ಸುದ್ದಿ ವಾಹಿನಿ ಫಾಕ್ಸ್ ಬಿಸಿನೆಸ್ನ ಯೂಟ್ಯೂಬ್ ಚಾನೆಲ್ನಲ್ಲಿ ನೋಡಬಹುದು ಮತ್ತು ಕೇಳಬಹುದು.
ಇನ್ನು ಈ ವರದಿಗಳಲ್ಲಿನ ಮಾಹಿತಿಯ ಪ್ರಕಾರ ಟ್ರಂಪ್ ಅವರ ಈ ಭಾಷಣವು 2016 ರ ಯುಎಸ್ ಚುನಾವಣೆಯ ಸಮಯದಲ್ಲಿ ಆಗಿದೆ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿರುವ ನಂತರ ಭಾಷಣವೊಂದರಲ್ಲಿ ಹಿಂದೂಗಳನ್ನು ಉದ್ದೇಶಿಸಿ ಹಿಂದೂಗಳ ಬಗ್ಗೆ ಹೊಗಳಿ ಮಾತನಾಡಿರುವುದನ್ನು ಇನ್ನೂ ಹಲವು ವರದಿಗಳಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ : Fact Check | ಮಹಾರಾಷ್ಟ್ರ ಹೌಸಿಂಗ್ ಸೊಸೈಟಿಯಲ್ಲಿ ಪುರುಷರ ಗುಂಪು ಹಿಂದೂ ಪರ ಘೋಷಣೆ ಕೂಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.