Fact Check: ‘ರಾಹುಲ್ ಗಾಂಧಿ ರಾಜೀವ್ ಗಾಂಧಿ ಅವರ ಮಗನಲ್ಲ’ ಎಂದು ನಕಲಿ ಪತ್ರಿಕಾ ವರದಿಯನ್ನು ಹಂಚಿಕೊಳ್ಳಲಾಗುತ್ತಿದೆ

ರಾಹುಲ್ ಗಾಂಧಿ

ರಾಹುಲ್ ಗಾಂಧಿ ರಾಜೀವ್ ಗಾಂಧಿ ಅವರ ಪುತ್ರನಲ್ಲ ಎಂದು ಅಮೆರಿಕದ ಡಿಎನ್ ಎ ತಜ್ಞರೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಪತ್ರಿಕಾ ವರದಿಯ ಪೋಟೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 

“ಅಮೆರಿಕ ಮೂಲದ ಡಿಎನ್ಎ ತಜ್ಞ ಡಾ.ಮಾರ್ಟಿನ್ ಸಿಜೋ ಪತ್ರಿಕಾಗೋಷ್ಠಿಯಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ, ಡಾ.ಮಾರ್ಟಿನ್ ಅವರು ತಮ್ಮ ಬಳಿ ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಡಿಎನ್ಎ ಇದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ರಾಜೀವ್ ಗಾಂಧಿಯವರ ಮಗನಲ್ಲ ಎಂಬುದನ್ನು ಸಾಬೀತುಪಡಿಸುವ ಎಲ್ಲಾ ಪುರಾವೆಗಳನ್ನು ನೀಡಲು ನಾನು ಸಿದ್ಧನಿದ್ದೇನೆ ಎಂದು ಮಾರ್ಟಿನ್ ಹೇಳಿದರು. ಡಾ.ಮಾರ್ಟಿನ್ ಅವರ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಪಕ್ಷವು ಸದ್ಯಕ್ಕೆ ಮೌನವಹಿಸಿದೆ. ಈ ವಿಷಯದ ಬಗ್ಗೆ ಯಾವುದೇ ಕಾಂಗ್ರೆಸ್ ನಾಯಕರು ಏನನ್ನೂ ಮಾತನಾಡಲು ಸಿದ್ಧರಿಲ್ಲ” ಎಂದು ಬರೆಯಲಾಗಿದೆ.

ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.
ಅನೇಕರು ಈ ಪತ್ರಿಕಾ ವರದಿಯನ್ನು ಹಂಚಿಕೊಂಡಿದ್ದು ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್

‘ರಾಹುಲ್ ಗಾಂಧಿ ರಾಜೀವ್ ಗಾಂಧಿಯವರ ಮಗನಲ್ಲ’ ಎಂಬ ಸುದ್ದಿಗಾಗಿ ಅಂತರ್ಜಾಲದಲ್ಲಿ ಹುಡುಕಿದಾಗ, ಈ ಕುರಿತು ಮಾಧ್ಯಮಗಳಲ್ಲಿ ಯಾವುದೇ ಮಾಹಿತಿ ವರದಿಯಾಗಿಲ್ಲ. ಡಾ.ಮಾರ್ಟಿನ್ ಸಿಜೊ ಪತ್ರಿಕಾಗೋಷ್ಠಿ ನಡೆಸಿ ರಾಹುಲ್ ಗಾಂಧಿ ರಾಜೀವ್ ಗಾಂಧಿ ಅವರ ಪುತ್ರನಲ್ಲ ಎಂದು ಬಹಿರಂಗಪಡಿಸಿದ್ದಾರೆ ಎಂದು ವೈರಲ್‌ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅಂತಹ ಯಾವುದೇ ಪತ್ರಿಕಾಗೋಷ್ಠಿ ನಡೆದ ಕುರಿತು ವಿವರಗಳಿಲ್ಲ. ಅಲ್ಲದೆ, ಅಮೆರಿಕದ ಡಿಎನ್ಎ ತಜ್ಞ ಡಾ.ಮಾರ್ಟಿನ್ ಸಿಜೊ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ. ಆದ್ದರಿಂದ, ವೈರಲ್ ಆಗುತ್ತಿರುವ ಪತ್ರಿಕಾ ವರದಿ ನಕಲಿಯಾಗಿದೆ.

ರಾಹುಲ್ ಗಾಂಧಿಯಂತಹ ಪ್ರಮುಖ ನಾಯಕನ ವಂಶಾವಳಿಯ ಬಗ್ಗೆ ಯಾವುದೇ ಪ್ರಶ್ನೆಗಳು ಎದ್ದಿದ್ದರೆ, ಅದನ್ನು ಖಂಡಿತವಾಗಿಯೂ ಎಲ್ಲಾ ಪ್ರಮುಖ ಸುದ್ದಿ ಸಂಸ್ಥೆಗಳು ವರದಿ ಮಾಡುತ್ತಿದ್ದವು. ಪತ್ರಿಕೆಯ ತುಣುಕಿನಲ್ಲಿ ಕೆಲವು ಸ್ಪಷ್ಟವಾದ ವಿರಾಮ ಚಿಹ್ನೆಗಳು ಮತ್ತು ವ್ಯಾಕರಣ ದೋಷಗಳನ್ನು ನಮ್ಮ ತಂಡ ಗಮನಿಸಿದೆ. ವರದಿಯನ್ನು ನಿಜವಾದ ಮಾಧ್ಯಮ ಸಂಸ್ಥೆ ಪ್ರಕಟಿಸಿದ್ದರೆ, ಪ್ರತಿಯಲ್ಲಿ ಇಂತಹ ದೋಷಗಳು ಇರುತ್ತಿರಲಿಲ್ಲ. ಅದನ್ನು ಕೆಳಗೆ ಹೈಲೈಟ್ ಮಾಡಲಾಗಿದೆ:

ಈ ವರ್ಷದ ಆರಂಭದಲ್ಲಿ, ‘ಮೋದಿ ಅಸಾರಾಮ್ ಬಾಪು ಅವರ ಮಗ’ ಎಂದು ಹೇಳಿಕೊಂಡು ಇದೇ ರೀತಿಯ ಸುಳ್ಳು ಪತ್ರಿಕಾ ವರದಿಯನ್ನು ಸಹ ಹರಿಬಿಡಲಾಗಿತ್ತು, ಆದೇ ಮಾದರಿಯಲ್ಲಿ ಈಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರಾಜೀವ್ ಗಾಂಧಿಯ ಮಗನಲ್ಲ ಎಂಬ ನಕಲಿ ಪತ್ರಿಕಾ ವರದಿಯನ್ನು ತಯಾರಿಸಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: ಡಾ. ಬಿ.ಆರ್ ಅಂಬೇಡ್ಕರ್ ಅವರ “ಪಾಕಿಸ್ತಾನ ಅಥವಾ ಭಾರತದ ವಿಭಜನೆ” ಕೃತಿಯ ಕುರಿತು ಸುಳ್ಳು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *