Fact Check | ಗುಜರಾತ್‌ನ ಪ್ರಗತಿಗೆ ಮತ ಹಾಕುವಂತೆ ಮಹಾರಾಷ್ಟ್ರದ ಬಿಜೆಪಿ ಮತದಾರರನ್ನು ಕೇಳುತ್ತಿದೆ ಎಂಬುದು ಸುಳ್ಳು

ಗುಜರಾತ್‌ನ ಪ್ರಗತಿಗಾಗಿ ಮಹಾರಾಷ್ಟ್ರದ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳು ಮತದಾರರ ಬಳಿ ತಮಗೆ ಮತ ಚಲಾಯಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ದೇಶದ ಇತಿಹಾಸದಲ್ಲೇ ಇದು ಮೊದಲು. ಮಹಾರಾಷ್ಟ್ರದ ಬಿಜೆಪಿಗರು ಪ್ರಧಾನಿ ಮೋದಿ ಅವರನ್ನು ಮೆಚ್ಚಿಸಲು, ತಮ್ಮ ರಾಜ್ಯವನ್ನೇ ಹರಾಜು ಹಾಕುತ್ತಿದ್ದಾರೆ. ಇದು ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳಲ್ಲೂ ಕೂಡ ಇದೇ ಹಣೆಬರಹ. ಹಾಗಾಗಿ ಮಹಾರಾಷ್ಟ್ರದ ಮತದಾರರೇ ಎಚ್ಚರದಿಂದ ಮತ ಚಲಾಯಿಸಿ” ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ನಿಜವೆಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಲವರು ಬಿಜೆಪಿ ಸರ್ಕಾರ ಈ ರೀತಿಯಾಗಿ ಹೇಳಲು ಸಾಧ್ಯವಿಲ್ಲ ಇದೊಂದು ಸುಳ್ಳು ಸುದ್ದಿ ಎಂದು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಪೋಸ್ಟ್‌ನಲ್ಲಿರುವ ಫೋಟೋವನ್ನು ಮೊದಲು ಸಂಪೂರ್ಣವಾಗಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ಗುಜರಾತ್‌ನ ಪ್ರಗತಿಗಾಗಿ ಮಹಾಯುತಿ ಮೈತ್ರಿಕೂಟಕ್ಕೆ ಮತ ನೀಡುವಂತೆ ಕೆಲ ಪದವನ್ನು ಫೋಟೋಗೆ ಸೇರಿಸಲಾಗಿದೆ ಮತ್ತು ವಾಕ್ಯದಲ್ಲಿನ ಉಳಿದ ಪಠ್ಯದಿಂದ ಎದ್ದು ಕಾಣುವಂತೆ ಸ್ಪಷ್ಟವಾಗಿ ತೋರಿಸಲಾಗಿದೆ. ಇದರಿಂದ ಈ ಫೋಟೋವನ್ನು ಡಿಜಿಟಲ್‌ ಆಗಿ ಎಡಿಟ್‌ ಮಾಡಿರುವುದು ಸ್ಪಷ್ಟವಾಗಿದೆ.

ಬಿಜೆಪಿಯ ಮಹಾರಾಷ್ಟ್ರದ ಪ್ರಸ್ತುತ ಪ್ರಚಾರದ ಘೋಷಣೆಯು “ಬಿಜೆಪಿ-ಮಹಾಯುತಿ ಇದ್ದರೆ, ನಂತರ ಮಹಾರಾಷ್ಟ್ರದ ಪ್ರಗತಿ ಇದೆ” ಎಂದು ನಾವು ಕಂಡುಕೊಂಡಿದ್ದೇವೆ. ಆದರೆ ಇಲ್ಲಿ ಮಹಾರಾಷ್ಟ್ರ ಎಂಬ ಪದವನ್ನು ತೆಗೆದುಹಾಕಿ ಗುಜರಾತ್‌ ಎಂದು ಸೇರಿಸಲಾಗಿದೆ. ಇನ್ನು ಒಂದು ವೇಳೆ ವೈರಲ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವುದು ನಿಜವಾಗಿದ್ದರೆ. ಇದು ಬಹುದೊಡ್ಡ ವಿವಾದವಾಗುತ್ತಿತ್ತು. ಹಾಗು ಹಲವು ಮಾಧ್ಯಮಗಳು ವರದಿಯನ್ನು ಮಾಡುತ್ತಿದ್ದವು. ಆದರೆ ಆ ರೀತಿಯ ಯಾವುದೇ ವರದಿಗಳು ಕಂಡು ಬಾರದ ಕಾರಣ ವೈರಲ್‌ ಫೋಟೋವನ್ನು ತಿರುಚಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಮಹಾರಾಷ್ಟ್ರದ ಬಿಜೆಪಿ ಗುಜರಾತ್‌ನ ಅಭಿವೃದ್ಧಿಗಾಗಿ ತಮಗೆ ಮತ ಹಾಕುವಂತೆ ಪ್ರಚಾರ ಮಾಡಿದ್ದಾರೆ ಎಂಬುದು ಸುಳ್ಳು. ವೈರಲ್‌ ಪೋಸ್ಟ್‌ ಸುಳ್ಳು ನಿರೂಪಣೆಯಿಂದ ಕೂಡಿದೆ. ಹಾಗಾಗಿ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲನೆ ನಡೆಸಿಕೊಳ್ಳಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ತಮಿಳುನಾಡಿನಲ್ಲಿ ಬ್ರಾಹ್ಮಣರು ಬೃಹತ್ ರ್‍ಯಾಲಿ ನಡೆಸಿದ್ದಾರೆ ಎಂದು 2012ರ ದೇವಸ್ಥಾನದ ಬ್ರಹ್ಮೋತ್ಸವದ ಪೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *