Fact Check | ಪಪ್ಪು ಯಾದವ್‌ ಲಾರೆನ್ಸ್‌ ಬಿಷ್ಣೋಯ್‌ಗೆ ವಿಧೇಯನಾಗಿದ್ದೇನೆ ಎಂದು ಹೇಳಿಲ್ಲ

ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನಿಂದ ಎನ್‌ಸಿಪಿ ನಾಯಕ ಬಾಬ ಸಿದ್ದಿಕ್ ಹತ್ಯೆಯ ನಂತರ, ಬಿಹಾರದ ಪೂರ್ನಿಯಾ ಸಂಸದ ಪಪ್ಪು ಯಾದವ್ ಅವರಿಗೆ  ಬಿಷ್ಣೋಯ್‌ ಗ್ಯಾಂಗ್‌ನಿಂದ ಆಗಾಗ ಬೆದರಿಕೆ ಕರೆಗಳು ಬರುತ್ತಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ ಸೇರಿದ ಹಾಗೆ ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲೂ ಪ್ರಕಟಗೊಂಡಿವೆ. ಈಗ ಈ ವಿಚಾರಕ್ಕೆ ಸಂಬಂಧಪಟ್ಟ ಮತ್ತೊಂದು ಸುದ್ದಿ ವೈರಲ್‌ ಆಗಿದ್ದು ಅದನ್ನು ನೋಡಿದ ಹಲವು ಬಿಷ್ಣೋಯ್‌ ಗ್ಯಾಂಗ್‌ ಜೊತೆ ಪಪ್ಪು ಯಾದವ್‌ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.

ಇದೀಗ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ಗೆ ಪಪ್ಪು ಯಾದವ್ ಅವರು ಹೆದರಿಕೊಂಡಿದ್ದಾರೆ. ಹೀಗಾಗಿ ಅವರು ತಾನು ಬಿಷ್ಣೋಯ್‌ಗೆ ವಿಧೆಯನ್ನಾಗಿದ್ದೇನೆ ಎಂದು ಪತ್ರಕರ್ತರೊಬ್ಬರಿಗೆ ಹೇಳಿದ್ದಾರೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಲವರು ಈ ವರದಿ ಡಿಬಿ ಲೈವ್ ಡಿಜಿಟಲ್ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗಿದೆ ಎಂದು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್ ಚೆಕ್ ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ಇದಕ್ಕೆ ಸಂಬಂಧ ಪಟ್ಟಂತ ನಮಗೆ ಯಾವುದೇ ಅಧಿಕೃತ ವರದಿಗಳು ಕಂಡುಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತು.

ಇದಾದ ಬಳಿಕ ಡಿಪಿ ಲೈವ್ ಅಧಿಕೃತ You Tube ಚಾನಲ್‌ನಲ್ಲಿ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದಾದರೂ ವರದಿ ಪ್ರಕಟವಾಗಿವೆಯೇ ಎಂಬುದನ್ನು ಪರಿಶೀಲನೆ ನಡೆಸಿದವು. ಆದರೆ ಎಲ್ಲೂ ಕೂಡ ವೈರಲ್ ಪೋಸ್ಟ್‌ಗೆ ಸಂಬಂಧಿಸಿದ ಸುದ್ದಿ ಕಂಡು ಬರಲಿಲ್ಲ. ಹೀಗಾಗಿ ವೈರಲ್ ಪೋಸ್ಟ್ ನಕಲಿ ಎಂಬುದು ಸ್ಪಷ್ಟವಾಗಿತ್ತು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಲು ಡಿವಿ ಲೈವ್‌ನ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಪರಿಶೀಲನೆ ನಡೆಸಿದವು.

 

ಇದರಲ್ಲಿ ಡಿಬಿ ಲೈವ್ ಸುದ್ದಿ ಸಂಸ್ಥೆ, ತಮ್ಮ ಎಲ್ಲಾ ನ್ಯೂಸ್ ಕಾರ್ಡಿನಲ್ಲಿ ಬಳಸುವ ಅಕ್ಷರಗಳ ಫಾಂಟ್ ಮತ್ತು ವೈರಲ್ ನ್ಯೂಸ್‌ನಲ್ಲಿರುವ ಫಾಂಟ್ ಬೇರೆ ಆಗಿರುವುದು ಪತ್ತೆಯಾಗಿದೆ. ಹೀಗಾಗಿ ವೈರಲ್ ನ್ಯೂಸ್ ಕಾರ್ಡ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ 7870 ಎಂಬ ಸಂಖ್ಯೆ ಕಂಡು ಬಂದಿದೆ. ಹೀಗಾಗಿ ಇದರ ಆಧಾರದ ಮೇಲೆ ಹುಡುಕಾಟವನ್ನು ನಡೆಸಿದಾಗ, ಈ ನ್ಯೂಸ್ ಕಾರ್ಡ್‌ನ ಮೂಲ ಸುದ್ದಿಯಲ್ಲಿ ಜಾರ್ಖಂಡ್‌ನ ದಲಿತರು ಮತ್ತು ಆದಿವಾಸಿಗಳು ರಾಹುಲ್ ಗಾಂಧಿ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂಬ ನ್ಯೂಸ್ ಕಾರ್ಡ್ ಪೋಸ್ಟ್ ಕಂಡುಬಂದಿದೆ. ಹೀಗಾಗಿ ವೈರಲ್ ಆಗುತ್ತಿರುವ ನ್ಯೂಸ್ ಕಾರ್ಡ್ ಎಡಿಟೆಡ್ ಆಗಿದೆ ಎಂಬುದು ನಮಗೆ ಸ್ಪಷ್ಟವಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವಂತೆ ಪಪ್ಪು ಯಾದವ್‌ ಅವರು ಲಾರೆನ್ಸ್‌ ಬಿಷ್ಣೋಯ್‌ಗೆ ವಿಧೇಯನಾಗಿರುತ್ತೇನೆ ಎಂದು ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ವರದಿಗಳು ರಾಷ್ಟ್ರ ರಾಜ್ಯ ಮತ್ತು ಸ್ಥಳೀಯ ಸುದ್ದಿ ಸಂಸ್ಥೆಗಳಲ್ಲಿ ಕಂಡುಬಂದಿಲ್ಲ. ಹೇಳಿಕೆ ನಿಜವಾಗಿದ್ದರೆ ಆ ಬಗ್ಗೆ ಎಲ್ಲ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿಯನ್ನು ಪ್ರಕಟಿಸಬೇಕು. ವೈರಲ್ ಆಗಿರುವ ನ್ಯೂಸ್ ಕಾರ್ಡ್‌ನಲ್ಲಿರುವ ಅಕ್ಷರ ಫಾಂಟ್‌ಗೂ ಡಿಬಿ ಲೈವ್ ಸುದ್ದಿ ಸಂಸ್ಥೆಯ ಅಕ್ಷರ ಪಾಂಟ್‌ಗೂ ಸಾಕಷ್ಟು ವ್ಯತ್ಯಾಸಗಳಿವೆ ಹಾಗಾಗಿ ವೈರಲ್ ಸುದ್ದಿ ಸುಳ್ಳು ನಿರೂಪಣೆಯಿಂದ ಕೂಡಿದೆ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ : Fact Check | ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್ ಪರವಾಗಿ ಮಾತನಾಡಿದ್ದು ನಿಜ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇ

Leave a Reply

Your email address will not be published. Required fields are marked *