Fact Check: ಸೌದಿ ಅರೇಬಿಯಾ ಸರ್ಕಾರವು ಭಗವದ್ಗೀತೆಯನ್ನು ‘ಅರೇಬಿಕ್’ ಭಾಷೆಯಲ್ಲಿ ಬಿಡುಗಡೆ ಮಾಡಿದೆ ಎಂಬುದು ಸುಳ್ಳು

ಭಗವದ್ಗೀತೆ

ಇತ್ತೀಚೆಗೆ ಕೆಲವು ಹಿಂದೂ ಸಂಘಟನೆಗಳು ಭಗವದ್ಗೀತೆಯನ್ನು ಸಾರ್ವಜನಿಕರಿಗೆ ಓದಿಸುವ ಮೂಲಕ ತಮ್ಮ ಸಿದ್ದಾಂತಕ್ಕೆ ಸೆಳೆಯಲು ಹೊಸ ಯೋಜನೆಗಳನ್ನು ಆರಂಭಿಸಿ, ಉಚಿತವಾಗಿ ಭಗವದ್ಗೀತೆ ಪುಸ್ತಕವನ್ನು ಹಂಚವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಈ ಸಂಘಟನೆಗಳ ಕಾರ್ಯಕರ್ತರು ಕೆಲವು ತಿಂಗಳುಗಳ ಹಿಂದೆ ರಾಮಾಯಣ ಮತ್ತು ಮಹಾಭಾರತವನ್ನು ಸೌದಿ ಅರೇಬಿಯಾದ ಶಾಲೆಗಳಲ್ಲಿ ಭೋಧಿಸಲಾಗುತ್ತಿದೆ ಎಂಬ ಸುಳ್ಳು ಪ್ರತಿಪಾದನೆಯನ್ನು ಮಾಡಿದ್ದವು.

ಈಗ, ಸೌದಿ ಅರೇಬಿಯಾ ಸರ್ಕಾರವು ಭಗವದ್ಗೀತೆಯನ್ನು ‘ಅರೇಬಿಕ್’ ಭಾಷೆಯಲ್ಲಿ ಬಿಡುಗಡೆ ಮಾಡಿದೆ ಎಂದು ಕೆಲವು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಇದೇ ಹೇಳಿಕೆಯೊಂದಿಗೆ ಮತ್ತು ಅರೇಬಿಕ್ ಪಠ್ಯದೊಂದಿಗೆ ಭಗವದ್ಗೀತೆಯ ಚಿತ್ರವನ್ನು ಹೊಂದಿರುವ ಫೇಸ್‌ಬುಕ್‌ ಪೋಸ್ಟ್ ಅನ್ನು ಸಹ ಈ ಹಿಂದೆ ಹಂಚಿಕೊಳ್ಳಲಾಗಿತ್ತು.

ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಫ್ಯಾಕ್ಟ್‌ ಚೆಕ್:

‘ಸೌದಿ ಸರ್ಕಾರ ಭಗವದ್ಗೀತೆ ಅರೇಬಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ’ ಎಂಬ ಕೀವರ್ಡ್‌ಗಳನ್ನು ಬಳಸಿ ನಾವು ಅಂತರ್ಜಾಲದಲ್ಲಿ ಹುಡುಕಿದಾಗ, ಹುಡುಕಾಟ ಫಲಿತಾಂಶಗಳಲ್ಲಿ ಯಾವುದೇ ಸಂಬಂಧಿತ ಮಾಹಿತಿಯು ಲಭ್ಯವಾಗಿಲ್ಲ. ಸೌದಿ ಅರೇಬಿಯಾ ಸರ್ಕಾರವು ಭಗವದ್ಗೀತೆಯ ಅರೇಬಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದರೆ, ಅದನ್ನು ಭಾರತದ ಎಲ್ಲಾ ಪ್ರಮುಖ ಪತ್ರಿಕೆಗಳು ಮತ್ತು ಚಾನೆಲ್ ಗಳು ವರದಿ ಮಾಡುತ್ತಿದ್ದವು. ಆದರೆ ಸೌದಿ ಅರೇಬಿಯಾ ಸರ್ಕಾರವು ಭಗವದ್ಗೀತೆಯ ಅರೇಬಿಕ್ ಆವೃತ್ತಿಯನ್ನು ತಮ್ಮ ದೇಶದಲ್ಲಿ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಸುದ್ದಿ ಸಂಸ್ಥೆ ವರದಿ ಮಾಡಿಲ್ಲ. ಆದ್ದರಿಂದ, ವೈರಲ್ ಪೋಸ್ಟ್‌ನಲ್ಲಿ ಮಾಡಿದ ಹೇಳಿಕೆ ಸುಳ್ಳಾಗಿದೆ.

ಈ ಕುರಿತು ಹುಡುಕುವ ಸಮಯದಲ್ಲಿ, ಅರೇಬಿಕ್ ಪಠ್ಯದೊಂದಿಗೆ ಭಗವದ್ಗೀತೆಯ ಚಿತ್ರವು ಇಸ್ಕಾನ್ ಭಕ್ತ ಎಚ್.ಜಿ.ರಾವಣಿ ಪ್ರಭು ಅನುವಾದಿಸಿದ್ದು ಎಂದು ಕಂಡುಬಂದಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಸೌದಿ ಅರೇಬಿಯಾ ಸರ್ಕಾರವು ಭಗವದ್ಗೀತೆಯನ್ನು ಅರೇಬಿಕ್ ಭಾಷೆಯಲ್ಲಿ ಬಿಡುಗಡೆ ಮಾಡಿಲ್ಲ. ಇಸ್ಕನ್‌ನ ಅನುಯಾಯಿಯಾದ ಎಚ್.ಜಿ.ರಾವಣಿ ಪ್ರಭು ಎಂಬುವವರು ಭಗವದ್ಗೀತೆ ಪುಸ್ತಕವನ್ನು ಅರೆಬಿಕ್ ಭಾಷೆಗೆ ಅನುವಾದಿಸಿದ್ದಾರೆ ಅಷ್ಟೇ.


ಇದನ್ನು ಓದಿ: ಬ್ಯಾಂಕಾಕ್ -ಕೋಲ್ಕತ್ತಾ ವಿಮಾನದಲ್ಲಿ ಮುಸ್ಲಿಂ ವ್ಯಕ್ತಿ ಹಿಂದೂವಿಗೆ ಥಳಿಸಿದ್ದಾನೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *