Fact Check : ಮಹಾರಾಷ್ಟ್ರದ ಚುನಾವಣೆಗೂ ಮುನ್ನ ಶಿವಸೇನೆ ಪಕ್ಷದ ₹5 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು 2021ರ ವಿಡಿಯೋ ಹಂಚಿಕೆ

2024ರ ನವೆಂಬರ್ 20ಕ್ಕೆ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದ ಹಿನ್ನೆಲೆಯಲ್ಲಿ “ಮಹಾರಾಷ್ಟ್ರದ ಶಿವಸೇನೆ ಪಕ್ಷದ ಶಾಸಕರೊಬ್ಬರ ಸಹವರ್ತಿಯಿಂದ 5 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆಎಂದು ನೋಟುಗಳ ಸಂಗ್ರಹಣೆಯ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಏಕನಾಥ್ ಶಿಂಧೆ ಅವರ ಶಿವಸೇನೆಯ ಶಾಸಕರ ಸಹವರ್ತಿಯಿಂದ 5 ಕೋಟಿ ರೂಪಾಯಿಗಳನ್ನು  ವಶಪಡಿಸಿಕೊಳ್ಳಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಟ್ವಿಟರ್‌, ಫೇಸ್‌ಬುಕ್  ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಕೆಲವು ಬಳಕೆದಾರರು ಇದನ್ನು ನಿಜವೆಂದು ತಿಳಿದು ಹಂಚಿಕೊಳ್ಳುತ್ತಿದ್ದಾರೆ. ಈ ವೈರಲ್‌ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಸತ್ಯಾಂಶಗಳನ್ನು ತಿಳಿದುಕೊಳ್ಳೋಣ.

 

 

ಫ್ಯಾಕ್ಟ್‌ ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವೈರಲ್‌ ವಿಡಿಯೋ ಕುರಿತು ನಿಜವನ್ನು ತಿಳಿದುಕೊಳ್ಳಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಈ ವೈರಲ್‌ ವಿಡಿಯೋದ “5 ಕೋಟಿ” ಮತ್ತು “ಶಿವಸೇನೆ” ಎಂಬ ಕೀವರ್ಡ್‌ಗಳನ್ನು Googleನಲ್ಲಿ ಹುಡುಕಿದಾಗ, 2024ರ ಅಕ್ಟೋಬರ್ 23ರ ಟೈಮ್ಸ್ ಆಫ್ ಇಂಡಿಯಾ ಎಂಬ ವರದಿಯೊಂದು ಲಭಿಸಿದೆ. ಖೇಡ್-ಶಿವಪುರ ಟೋಲ್ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಪುಣೆಯ ಗ್ರಾಮಾಂತರ ಪೊಲೀಸರು ಸೋಮವಾರ ಸಂಜೆ ಕಾರೊಂದನ್ನು ವಶಕ್ಕೆ ತೆಗೆದುಕೊಂಡು, ಕಾರಿನಲ್ಲಿರುವ ₹ 5 ಕೋಟಿ ಮೌಲ್ಯದ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಶಿವಸೇನೆಯ (ಯುಬಿಟಿ) ನಾಯಕ ಸಂಜಯ್ ರಾವುತ್ ಮತ್ತು ಎನ್‌ಸಿಪಿ ಶಾಸಕ ರೋಹಿತ್ ಪಾಟೀಲ್ ಅವರು ಶಿವಸೇನೆಯ ಏಕನಾಥ್ ಶಿಂಧೆ ಬಣಕ್ಕೆ ಸೇರಿದ ಸಂಗೋಳ ಶಾಸಕ ಶಾಹಾಜಿ ಪಾಟೀಲ್‌ರಿಗೆ ಚುನಾವಣಾ ನಿಧಿ ಸ್ಥಾಪನೆಯ ಉದ್ದೇಶಕ್ಕಾಗಿ ಹಣವನ್ನು ಕೊಂಡೊಯ್ದಿದ್ದಾರೆ ಎಂದು ವರದಿಯಾಗಿದೆ.

 ಇಂತಹ ಆರೋಪಗಳನ್ನು ಕುರಿತು ಪಾಟೀಲ್‌ ಆರೋಪಿದ್ದಾರೆ. ಆದರೆ, ಈ ವಾಹನವು ನನ್ನ ಸಾವಿರಾರು “ಕಾರ್ಯಕರ್ತರಲ್ಲಿ” ಒಬ್ಬರಿಗೆ ಸೇರಿರಬಹುದು. ಕೆಲವು ವ್ಯವಹಾರಗಳನ್ನು ನನ್ನ ಕಾರ್ಯಕರ್ತರು ನಿರ್ವಹಿಸುತ್ತಾರೆ. ಆದರೆ  ಹಣವನ್ನು ಏಕೆ ಅಥವಾ ಎಲ್ಲಿಗೆ ಸಾಗಿಸಲಾಗುತ್ತಿದೆ ಎಂದು ನನಗೆ ತಿಳಿದಿಲ್ಲ ಎಂದು ಶಾಸಕ ಪಾಟೀಲ್‌ರು ಹೇಳಿದ್ದಾರೆ. 

2024ರ ಮಹಾರಾಷ್ಟ್ರ ಚುನಾವಣೆಗೆ ಮುಂಚಿತವಾಗಿ ಹಣವನ್ನು ವಶಕ್ಕೆ ಪಡೆಯಲಾಗಿದೆಯೇ? ಎಂದು ತಿಳಿಯೋಣ.

ಈ ವೈರಲ್‌ ವಿಡಿಯೋ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಗೂಗಲ್ ಲೆನ್ಸ್‌ನಲ್ಲಿ ವೈರಲ್ ಚಿತ್ರಗಳನ್ನು ಹಾಕಿ ಹುಡುಕಾಟ ನಡೆಸಿದಾಗ, 2024ರ ಅಕ್ಟೋಬರ್ 9 ರಂದು @haryana.zone ಅವರ Instagram ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟರ್‌ ಲಭಿಸಿದೆ. ಖೇಡ್-ಶಿವಪುರ ಟೋಲ್‌ನಲ್ಲಿ ಕಾರಿನಲ್ಲಿದ್ದ ₹ 5 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿಲಾಗಿತ್ತು ಎಂದು ಪೋಸ್ಟನ್ನು ಹಂಚಿಕೊಳ್ಳಲಾಗಿತ್ತು.

ಡಿಸೆಂಬರ್ 2023 ರ ಮತ್ತೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಸಹ ಅದೇ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

2021ರ ಜೂನ್ 10ರಂದು YouTubeನ  @ghanshyamponderarussian8596  ಖಾತೆಯಲ್ಲಿ ಅದೇ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ . ಈ ವಿಡಿಯೋವನ್ನು 2021ರಿಂದಲೂ ಪದೇ ಪದೇ ಹಂಚಿಕೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿಧಾನಸಭೆ ಚುನಾವಣೆಗೂ ಮುನ್ನ ಮಹಾರಾಷ್ಟ್ರದಲ್ಲಿ  ಪೋಲಿಸರು ಶಿವಸೇನೆ ಪಕ್ಷದ ₹ 5 ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದಕ್ಕಿಂತ ಮುಂಚಿತವಾಗಿ ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನು ಓದಿ :

Fact Check : ಇಸ್ರೇಲ್-ಹಮಾಸ್ ಯುದ್ಧದಲ್ಲಿ ನಾಯಿ ಪ್ರೇಮಿಯೊಬ್ಬ ಮೃತಪಟ್ಟಿದ್ದಾನೆ ಎಂದು 2020ರ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *