Fact Check | ಲೆಬನಾನ್ ಮೇಲಿನ ದಾಳಿಯ ವೀಡಿಯೊವನ್ನು ಇಸ್ರೇಲ್‌ ಪ್ರಧಾನಿ ನಿವಾಸದ ಮೇಲಿನ ದಾಳಿ ಎಂದು ಹಂಚಿಕೆ

“ಇತ್ತೀಚೆಗೆ ಇಸ್ರೇಲ್ ಮತ್ತು ಲೆಬನಾನ್ ಹಾಗೂ ಹಿಜ್‌ಬುಲ್ಲಾ ಸಂಘಟನೆಯ ನಾಯಕರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ, ಈಗ ಹಿಜ್‌ಬುಲ್ಲಾ ಡ್ರೋನ್ ಮುಖಾಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿವಾಸದ ಮೇಲೆ ದಾಳಿಯನ್ನು ನಡೆಸಿದೆ. ಆ ಮೂಲಕ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಇಸ್ರೇಲ್ ಪ್ರಧಾನಿಯ ನಿವಾಸ ಆತಂಕದಲ್ಲಿ ಕುಳಿತಿದೆ.” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇನ್ನು ಇತ್ತೀಚಿಗೆ ಇಸ್ರೇಲ್ ಹಾಗೂ ಹಮಾಸ್, ಲೆಬನಾನ್‌, ಇರಾನ್, ಹಿಜ್‌ಬುಲ್ಲಾ ನಡುವಿನ ಸಂಘರ್ಷದ ಬಗೆಗಿನ ಮಾಹಿತಿಯಲ್ಲಿ, ಹಿಜ್‌ಬುಲ್ಲಾ ಸಂಘಟನೆ ಡ್ರೋನ್ ಮುಖಾಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಸುದ್ದಿ ನಿಜವಾಗಿದೆ. ಹೀಗಾಗಿ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ಹಲವರು ಫೇಸ್‌ಬುಕ್‌, ಎಕ್ಸ್ (ಹಿಂದಿನ ಟ್ವಿಟರ್‌), ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವಿಡಿಯೋ ನಿಜಕ್ಕೂ ಇಸ್ರೇಲ್ ಪ್ರಧಾನಿ ನಿವಾಸಕ್ಕೆ ಸಂಬಂಧಿಸಿದೆಯೇ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಪ್ಯಾಕ್ಟ್‌ಚೆಕ್‌ ತಂಡ ಮುಂದಾಯ್ತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕಿ ಪ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 17 ಅಕ್ಟೋಬರ್ 2014ರಂದು ಇವನ್ ಗ್ಯಾಂಗಲೋವ್‌ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋವೊಂದು ಕಂಡುಬಂದಿದ್ದು, ಅದರಲ್ಲಿ “ದಕ್ಷಿಣ ಲೆಬನಾನ್‌ನಲ್ಲಿರುವ ಬೃಹತ್ ಹಿಜ್‌ಬುಲ್ಲಾ ಪ್ರಧಾನ ಕಚೇರಿಯನ್ನು ಸ್ಪೋಟಿಸಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಲಾಗಿರುವುದು ಕಂಡುಬಂದಿದೆ. ಅಲ್ಲಿಗೆ ಈ ವಿಡಿಯೋ ಹಿಜ್‌ಬುಲ್ಲಾ ಪ್ರಧಾನ ಕಚೇರಿಗೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗಿದೆ.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನನಡೆಸಲಾಯಿತು. 18 ಅಕ್ಟೋಬರ್ 2024 ರಂದು ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ವರದಿಯೊಂದು ಕಂಡುಬಂದಿದೆ. ಈ ವರದಿಯ ಪ್ರಕಾರ ಇಸ್ರೇಲಿ ಮಿಲಿಟರಿಯು ದಕ್ಷಿಣ ಮ್ಹೈಬಿಬ್‌ ಗ್ರಾಮದ ಹೆಚ್ಚಿನ ಭಾಗವನ್ನು ನಾಶಪಡಿಸಿದೆ .ಇದರಲ್ಲಿ ಹಿಜ್‌ಬುಲ್ಲಾದ ಪ್ರಧಾನ ಕಚೇರಿಗೆ ಹಾನಿ ಉಂಟಾಗಿದೆ ಎಂಬ ಅಂಶವನ್ನು ಕೂಡ ಉಲ್ಲೇಖಿಸಿರುವುದು ಕಂಡು ಬಂದಿದೆ.

ಈ ವರದಿಯ ಹೊರತಾಗಿಯೂ 17 ಅಕ್ಟೋಬರ್ 2024 ರಂದು ಮಿಡಲ್ ಈಸ್ಟ್ ಐ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋವೊಂದು ಕಂಡು ಬಂದಿದೆ. ಇದರಲ್ಲಿ ಇಸ್ರೇಲ್ ಸೈನ್ಯವು ದಕ್ಷಿಣ ಲೇಬನಾನ್‌ನ ಮ್ಹೈಬಿಬ್‌ ಗ್ರಾಮವನ್ನು ಸ್ಪೋಟಿಸಿತು ಎಂಬ ಶೀರ್ಷಿಕೆಯನ್ನು ನೀಡಿದ್ದು, ಘಟನೆಯ ದೃಶ್ಯಗಳು ಕೂಡ ಇದರಲ್ಲಿ ಕಂಡುಬಂದಿದೆ. ಇದು ವೈರಲ್ ವಿಡಿಯೋಗೆ ಸಾಕಷ್ಟು ಹೋಲಿಕೆ ಇರುವುದರಿಂದ, ಈ ವಿಡಿಯೋದಿಂದ ವೈರಲ್ ವಿಡಿಯೋವನ್ನು ಸೃಷ್ಟಿಸಿ ಸುಳ್ಳು ಹರಡಲಾಗಿದೆ ಎಂಬುದು ಕೂಡ ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಲೆಬನಾನ್‌ನ ಹಳ್ಳಿಯೊಂದರಲ್ಲಿರುವ ಹಿಜ್‌ಬುಲ್ಲಾ ಪ್ರಧಾನ ಕಚೇರಿಯ ಮೇಲೆ ಇಸ್ರೇಲಿ ಸೇನೆ ನಡೆಸಿದ ದಾಳಿಯ ವಿಡಿಯೋವನ್ನು ಬಳಸಿಕೊಂಡು, ಇಸ್ರೇಲ್ ಪ್ರಧಾನಿ ನೇತಾನ್ಯಾಹೂ ಅವರ ನಿವಾಸದ ಮೇಲೆ ಹಿಜ್ಬುಲ್ಲಾ ದಾಳಿ ನಡೆಸಿದೆ ಎಂದು ಸುಳ್ಳು ನಿರೂಪಣೆಯೊಂದಿಗೆ ಮೂಲ ವಿಡಿಯೋವನ್ನು ಎಡಿಟ್‌ ಮಾಡಿ ಪೋಸ್ಟ್ ಮಾಡಲಾಗುತ್ತಿದೆ. ಈ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ


ಇದನ್ನೂ ಓದಿ : Fact Check : ಮಹಾರಾಷ್ಟ್ರದ ಚುನಾವಣೆಗೂ ಮುನ್ನ ಶಿವಸೇನೆ ಪಕ್ಷದ ₹5 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು 2021ರ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *