Fact Check : 2024ರ ಯುಎಸ್‌ ಚುನಾವಣೆಗೂ ಮುಂಚೆ ಸ್ನೂಪ್ ಡಾಗ್ ಟ್ರಂಪ್‌ರನ್ನು ಟೀಕಿಸಿದ್ದಾರೆ ಎಂದು 2018ರ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

“ಅಮೇರಿಕದ ಮಾಜಿ ಅಧ್ಯಕ್ಷ ಮತ್ತು ಹಾಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರನ್ನು ರಾಪರ್ ಸ್ನೂಪ್ ಡಾಗ್ ಟೀಕಿಸಿ ಮಾತನಾಡಿದ್ದಾರೆ.  2024 ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಗೂ ಮುಂಚಿತವಾಗಿ ಈ ಘಟನೆ ನಡೆದಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

” ಬ್ರೇಕಿಂಗ್‌ ನ್ಯೂಸ್‌ : ಸ್ನೂಪ್ ಡಾಗ್ ಡೊನಾಲ್ಡ್ ಟ್ರಂಪ್‌ರನ್ನು ಟೀಕಿಸಿದ್ದಾರೆ”. ಅಮೇರಿಕದ ಎಷ್ಟು ಜನರು ಈ ವಿಡಿಯೋವನ್ನು ವೀಕ್ಷಿಸುತ್ತಾರೆ? ಎಂಬ ಶೀರ್ಷಿಕೆಯೊಂದಿಗೆ ವೈರಲ್‌ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಈ  ವಿಡಿಯೋವನ್ನು ಹಲವಾರು ಜನರು ಸತ್ಯವೆಂದು ಭಾವಿಸಿದ್ದಾರೆ. ಈ ಸುದ್ದಿಯ ಕುರಿತು ನಿಜವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

 

ಫ್ಯಾಕ್ಟ್‌ ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವೈರಲ್‌ ವಿಡಿಯೋ ಕುರಿತು ನಿಜವನ್ನು ತಿಳಿದುಕೊಳ್ಳಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಈ ವೈರಲ್‌ ವಿಡಿಯೋದ ಕೀಫ್ರೇಮ್‌ಗಳನ್ನು Google ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ,  2018ರ ಸೆಪ್ಟೆಂಬರ್ 25ರಂದು YouTube ನಲ್ಲಿ ಹಂಚಿಕೊಳ್ಳಲಾದ ಮೂಲ ವಿಡಿಯೋ ವರದಿಯೊಂದು ಕಂಡುಬಂದಿದೆ.

ಈ ಮೂಲ ವಿಡಿಯೋವನ್ನು ವೀಕ್ಷಿಸಿದಾಗ, ಸುಮಾರು 12:58 ನಿಮಿಷಗಳ ಅವಧಿಯಲ್ಲಿ ಸಂಭಾಷಣೆಯು ರಾಜಕೀಯ ವಾದಕ್ಕೆ ತಿರುಗುತ್ತದೆ. ಸ್ನೂಪ್ ಡಾಗ್‌ರವರು  ಡೊನಾಲ್ಡ್ ಟ್ರಂಪ್ ಮತ್ತು ಕಾನ್ಯೆವೆಸ್ಟ್ ಇಬ್ಬರಿಗೂ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರು, “ಟ್ರಂಪ್‌ರನ್ನು F** ಮತ್ತು F** ಯು” ಎಂದು ಅವಮಾನಿಸಿ, ಕಾನ್ಯೆಗೆ ಸವಾಲನ್ನು ಹಾಕಿದ್ದರು. ಮತ್ತು  ಕಾಮೆಂಟ್‌ಗಳ ಕುರಿತು ಚರ್ಚಿಸಲು ಬರಬೇಕೆಂಬ ಮನಸ್ಸಿದ್ದರೆ ನೀವು “ಬನ್ನಿ” ಎಂದು ಆಹ್ವಾನಿಸಿದ್ದರು ಎಂಬ ಮಾಹಿತಿಯನ್ನು ವಿಡಿಯೋದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಈ ಮೂಲ ವಿಡಿಯೋವನ್ನು ವೀಕ್ಷಿಸಿದ ನಂತರ ಈ ಘಟನೆ 2018ರಲ್ಲಿ ನಡೆದಿತ್ತು ಎಂದು ನಿಖರವಾಗಿ ತಿಳಿದುಬಂದಿದೆ. ಆದರೆ ಈ ವಿಡಿಯೋವನ್ನು 2024ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಗೂ ಮುಂಚಿತವಾಗಿ ಸ್ನೂಪ್ ಡಾಗ್ ಡೊನಾಲ್ಡ್ ಟ್ರಂಪ್‌ರನ್ನು ಟೀಕಿಸುತ್ತಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಈ ವೈರಲ್‌ ವಿಡಿಯೋವನ್ನು ಹಂಚಿಕೊಳ್ಳಬೇಡಿ.


ಇದನ್ನು ಓದಿದ್ದೀರಾ? 

Fact Check : ಯೆಮೆನ್‌ ಸನಾದ ವಾರ್ಷಿಕೋತ್ಸವ ಮೆರವಣಿಗೆಯ ವಿಡಿಯೋವನ್ನು, ಯತಿ ನರಸಿಂಹಾನಂದರ ವಿರುದ್ಧ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *