Fact Check | ಹಸುಗಳು ಆಮ್ಲಜನಕವನ್ನು ಉಸಿರಾಡಿ ಆಮ್ಲಜನಕವನ್ನೇ ಹೊರಹಾಕುತ್ತವೆ ಎಂದು ಸುಳ್ಳು ಹೇಳಿದ ಬಿಜೆಪಿ ಸಚಿವೆ

ಉತ್ತರಾಖಂಡ ವಿಧಾನಸಭೆಯು ಹಸುವಿಗೆ ” ರಾಷ್ಟ್ರ ಮಾತ” (ರಾಷ್ಟ್ರದ ಮಾತೆ) ಸ್ಥಾನಮಾನವನ್ನು ಕೋರಿ ಬುಧವಾರ ನಿರ್ಣಯವನ್ನು ಅಂಗೀಕರಿಸಿದೆ. ಈ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸಲಾಗಿದ್ದು. ಇದನ್ನು ಉತ್ತರಾಖಂಡ ರಾಜ್ಯ ಪಶುಸಂಗೋಪನಾ ಸಚಿವೆ ರೇಖಾ ಆರ್ಯ ಅವರು ಮಂಡಿಸಿದ್ದಾರೆ. ಇನ್ನು ಇದಕ್ಕೆ ಪ್ರತಿಪಕ್ಷಗಳು ಬೆಂಬಲವನ್ನು ಘೋಷಿಸಿದ ನಂತರ ಅವಿರೋಧವಾಗಿ ಈ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ನಡುವೆ ರೇಖಾ ಆರ್ಯ ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಮಾತ್ರ ಹೊರ ಹಾಕುತ್ತವೆ ಎಂಬ ಹೇಳಿಕೆ ನೀಡಿದ್ದಾರೆ. ಇದು ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ 

ರೇಖಾ ಆರ್ಯ ಅವರ ಈ ಹೇಳಿಕೆಗೆ ಹಲವು ಮಂದಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ. ಇನ್ನು ಇದೇ ರೀತಿಯ ಹೇಳಿಕೆಗಳನ್ನು ಬಿಜೆಪಿಯ ಕೆಲ ನಾಯಕರು ಮತ್ತು ಕಾರ್ಯಕರ್ತರು ಈ ಹಿಂದೆ ನೀಡಿದ್ದರು, ಇದು ಹಸುಗಳ ಬಗೆಗಿನ ಸಾಮಾನ್ಯ ಜ್ಞಾನ ಹೊಂದಿರುವವರಿಗೆ ಕೂಡ ಅಚ್ಚರಿಯನ್ನು ಉಂಟು ಮಾಡಿದೆ. ಹಾಗಾಗಿ ಉತ್ತರಖಂಡ ರಾಜ್ಯ ಪಶುಸಂಗೋಪನಾ ಸಚಿವೆ ರೇಖಾ ಆರ್ಯ ಅವರು ಹೇಳಿದಂತೆ ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಮಾತ್ರ ಹೊರ ಹಾಕುತ್ತವೆಯೇ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. 

ಫ್ಯಾಕ್ಟ್‌ಚೆಕ್‌

ಜನ ಸಾಮಾನ್ಯರಲ್ಲಿ ವ್ಯಾಪಕವಾಗಿ ಚರ್ಚೆಯನ್ನು ಹುಟ್ಟು ಹಾಕಿರುವ ರೇಖಾ ಆರ್ಯ ಅವರ ಹೇಳಿಕೆಯ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ರೇಖಾ ಆರ್ಯಾ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈಜ್ಞಾನಿಕ ಮಾಹಿತಿಯನ್ನು ನೀಡುವ ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಪ್ರಕಾರ , “ಉಸಿರಾಟ ವ್ಯವಸ್ಥೆಯು ಜೀವಂತ ಜೀವಿಗಳಲ್ಲಿನ ವ್ಯವಸ್ಥೆಯಾಗಿದ್ದು ಅದು ಶಕ್ತಿಯ ಅವಶ್ಯಕತೆಗಳನ್ನು ಪೂರೈಸಲು ಆಮ್ಲಜನಕವನ್ನು ತೆಗೆದುಕೊಳ್ಳುತ್ತದೆ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕುತ್ತದೆ. ಜೀವಂತ ಜೀವಿಗಳಲ್ಲಿ ಇಂಗಾಲದ ಡೈಆಕ್ಸೈಡ್ ಜೊತೆಗೆ ಇಂಗಾಲವನ್ನು ಹೊಂದಿರುವ ಅಣುಗಳ ಆಕ್ಸಿಡೀಕರಣದ ಮೂಲಕ ಶಕ್ತಿಯು ವಿಮೋಚನೆಗೊಳ್ಳುತ್ತದೆ. .” ಎಂಬುದನ್ನು ಉಲ್ಲೇಖ ಮಾಡಿದೆ. 

ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಈ ಕುರಿತು MSD ತನ್ನ ಪಶುವೈದ್ಯಕೀಯ ಕೈಪಿಡಿಯಲ್ಲಿ ಪ್ರಾಣಿಗಳ ಉಸಿರಾಟ ಪ್ರಕ್ರಿಯೆಯ ಕುರಿತು ಮಾಹಿತಿಯನ್ನು ನೀಡಿದೆ. ಇದರಲ್ಲಿ ಕೂಡ ಎಲ್ಲಿಯೂ ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಹೊರಹಾಕುತ್ತವೆ ಎಂಬ ಅಂಶವೇ ಉಲ್ಲೇಖವಾಗಿಲ್ಲ. ಒಂದು ವೇಳೆ ಇದು ನಿಜವೇ ಆಗಿದ್ದರೆ ಆ ಕುರಿತು ಈ ವರದಿಯಲ್ಲಿ ಉಲ್ಲೇಖಿಸಬೇಕಿತ್ತು. ಇನ್ನು ವಿಕಿ ಪಿಡಿಯಾದಲ್ಲಿ ಕೂಡ ಈ ಬಗ್ಗೆ ಹುಡುಕಾಟವನ್ನು ನಡೆಸಿದಾಗ ಅಲ್ಲಿಯೂ ಕೂಡ ರೇಖಾ ಆರ್ಯ ಅವರ ಹೇಳಿಕೆಗೆ ಯಾವುದೇ ರೀತಿಯ ಪುರಾವೆಗಳು ಕಂಡು ಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರಾಖಂಡ ರಾಜ್ಯ ಪಶುಸಂಗೋಪನಾ ಸಚಿವೆ ರೇಖಾ ಆರ್ಯ ಅವರು ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಮಾತ್ರ ಹೊರ ಹಾಕುತ್ತವೆ ಎಂದು ಸುಳ್ಳು ಹೇಳಿದ್ದಾರೆ. ಇದು ಹಲವು ವರದಿಗಳು ಮತ್ತು ವೈಜ್ಞಾನಿಕ ಸಂಸ್ಥೆಗಳ ವರದಿಗಳಲ್ಲೂ ಸಾಬೀತಾಗಿದೆ. ಜಗತ್ತಿನಲ್ಲಿ ಯಾವ ಜೀವಿ  ಕೂಡ ಆಮ್ಲಜನಕವನ್ನು ಉಸಿರಾಡಿ ಅದನ್ನೇ ಹೊರ ಹಾಕುವುದಿಲ್ಲ. ಹಾಗಾಗಿ ರೇಖಾ ಆರ್ಯ ಅವರ ಹೇಳಿಕೆಯನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈಗೆ ವಿಚ್ಛೇದನ ನೀಡಿ ನಿಮ್ರತ್ ಕೌರ್ ಅವರನ್ನು ಮದುವೆ ಆಗಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *