ಇಸ್ರೇಲ್-ಲೆಬನಾನ್ ನಡುವೆ ಸಂಘರ್ಷ ಮತ್ತೆ ಮುಂದುವರಿದಿದೆ. ಇಸ್ರೇಲ್ ಇರಾನ್ ಮೇಲೆ ದಾಳಿಯನ್ನು ನಡೆಸಲು ಸಿದ್ಧತೆಯನ್ನು ನಡೆಸುತ್ತಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಮಿಲಿಟರಿ ವಾಹನಗಳ ಬೆಂಗಾವಲು ಪಡೆ – ಶಸ್ತ್ರಸಜ್ಜಿತ ಕಾರುಗಳು, ಟ್ರಕ್ಗಳು ಮತ್ತು ಟ್ಯಾಂಕ್ಗಳು ಅಂಕುಡೊಂಕಾದ ರಸ್ತೆಗಳ ಮೂಲಕ ಸಾಗುತ್ತಿವೆ. ಇಸ್ರೇಲ್ನ ಧ್ವಜಗಳು ರಸ್ತೆಬದಿಗಳ ಸ್ಥಳದಲ್ಲಿ ಕಂಡುಬಂದಿದ್ದು, “ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಲು ಸಿದ್ಧವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು, ಮೊದಲು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂಬ ಅನುಮಾನ ಉಂಟಾಯಿತು. ಈ ಕುರಿತು ಅಂತರ್ಜಾಲದಲ್ಲಿ ಹುಡುಕಿದಾಗ “ಡೈಯರ್ ಗೇಮಿಂಗ್” ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋವೊಂದು ದೊರೆಯಿತು. ಇದು ವಾಟರ್ಮಾರ್ಕ್ನಿಂದ ಕೂಡಿದ ವಿಡಿಯೋವಾಗಿದೆ. ಆದ್ದರಿಂದ ಈ ವಿಡಿಯೋ ಕುರಿತು ಮತ್ತಷ್ಟು ಹುಡುಕಿದಾಗ, ಇದು ಇರಾಕ್ನ ಅಬ್ರಿಲ್ನಲ್ಲಿ ನಡೆದ ವಿಡಿಯೋ ಗೇಮ್ ಆಟದ ವಿಡಿಯೋ ಆಗಿದ್ದು, ಈ ಆಟವನ್ನು ಓಮರ್ ಅಬ್ದುಲ್ಲಾ ಮೊಹಿಯುದ್ದೀನ್ ಎಂಬಾತ ರಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಆಟದ ವೈರಲ್ ವಿಡಿಯೋವನ್ನು ಸೆಪ್ಟೆಂಬರ್ 9 ರಂದು ಹಂಚಿಕೊಳ್ಳಲಾಗಿದೆ. ಆದರೆ, ಈ ವಿಡಿಯೋವನ್ನುಯಾವ ವಿಡಿಯೋ ಗೇಮ್ನಿಂದ ಹಂಚಿಕೊಳ್ಳಲಾಗಿದೆ ಎಂಬ ಮಾಹಿತಿ ದೊರೆತಿಲ್ಲ.
ನಮಗೆ ದೊರೆತಂತಹ ಎಲ್ಲ ಸುಳಿವುಗಳನ್ನು ಆಧಾರವಾಗಿಟ್ಟುಕೊಂಡು, ಇಸ್ರೇಲ್ ಎಂಬ ಕೀವರ್ಡ್ ಬಳಸಿ Googleನಲ್ಲಿ ಹುಡುಕಿದಾಗ ಇಸ್ರೇಲ್ಗೆ ಸಂಬಂಧಿಸಿದ ಸೈನಿಕ ಪಡೆಯ ಕುರಿತು ಹಲವಾರು ಆಟಗಳ ವಿಡಿಯೋಗಳು ದೊರೆತಿವೆ. “ಗೇಮ್ ಲವರ್ಜ್” ಎಂಬ ಹೆಸರಿನ YouTube ಚಾನಲ್, ಅಗಸ್ಟ್ 2 ರಂದು ವೈರಲ್ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ವೈರಲ್ ವಿಡಿಯೋದ ದೃಶ್ಯಗಳು ಕಂಡುಬಂದಿವೆ. ಇಸ್ರೇಲ್ನ ಸೇನಾ ಟ್ಯಾಂಕ್ ಬೆಂಗಾವಲು ಪಡೆಯ ಮೇಲೆ ಇರಾನಿನ ಫೈಟರ್ ಜೆಟ್ಗಳು, ಟ್ಯಾಂಕ್ಗಳು ಮತ್ತು ಹೆಲಿಕಾಪ್ಟರ್ಗಳು ದಾಳಿಯನ್ನು ನಡೆಸಿವೆ. “ಇರಾನ್ ಇಸ್ರೇಲ್ ಯುದ್ಧ – GTA 5” ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆದು ಹಂಚಿಕೊಳ್ಳಲಾಗಿತ್ತು.
ಈ ವಿಡಿಯೋದ ಮಾಹಿತಿಯ ಪ್ರಕಾರ, ಈ ಯೂಟ್ಯೂಬ್ ಖಾತೆಯು ಅದ್ನಾನ್ ಮಜೀದ್ ಅವರಿಗೆ ಸೇರಿದ್ದು, ಅವರು ತಮ್ಮ ಸ್ಥಳವನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಹೇಳಿದ್ದಾರೆ. “ಈ ಚಾನಲ್ನಲ್ಲಿ ನೀವು GTAV(Grand Theft Auto V) ಯ ವಿಡಿಯೋ ಗೇಮ್ ಕುರಿತು ಎಲ್ಲವನ್ನೂ ಕಲಿಯಬಹುದು. ನಾನು GTAVವಿಡಿಯೋಗೇಮ್ನ್ನು ಮಾತ್ರ ಪ್ಲೇ ಮಾಡುತ್ತೇನೆ ಮತ್ತು ನಿಮ್ಮೊಂದಿಗೆ GTAV ವಿಡಿಯೋ ಗೇಮ್ಗಳನ್ನು ಮಾತ್ರ ಹಂಚಿಕೊಳ್ಳುತ್ತೇನೆ.” ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಈ ಚಾನೆಲ್ ಹಲವಾರು GTAV ವಿಡಿಯೋ ಗೇಮ್ಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಒಂದು ವಿಡಿಯೋವನ್ನು “ಇರಾನ್ ಇಸ್ರೇಲ್ ಮಿಲಿಟರಿ ಬೆಂಗಾವಲು ದಾಳಿ| ಇಸ್ರೇಲ್ ಗಾಜಾಕ್ಕೆ ಟ್ಯಾಂಕ್ಗಳನ್ನು ಕಳುಹಿಸುತ್ತದೆ – GTAV5” ಎಂದು ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
GTAV ವಿಡಿಯೋ ಗೇಮ್ 2013 ರ ಮುಕ್ತ-ಪ್ರಪಂಚದ ಸಾಹಸ-ಸಾಹಸ ಆಟವಾಗಿದೆ. ಆಟಗಾರರಿಗಾಗಿ ವಿವಿಧ ಆಟಗಳನ್ನು ವರ್ಷಗಳುದ್ದಕ್ಕೂ ಏರ್ಪಡಿಸಲಾಗುತ್ತದೆ. FiveM ಮತ್ತು 5MODS ನಂತಹ ಮಾಡ್ ಸೇವೆಗಳನ್ನು ಆಟಗಾರರು ಹೆಚ್ಚಾಗಿ ಉಪಯೋಗಿಸಿಕೊಳ್ಳುತ್ತಾರೆ. ಈ ಹಿಂದೆ ಆಟದ ವಿಡಿಯೋಗಳನ್ನು ಯುದ್ಧದ ಗೇಮ್ಗಳಂತೆ ನಕಲು ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2013ರ GTAV ವಿಡಿಯೋ ಗೇಮ್ಗಳನ್ನು, ಇಸ್ರೇಲ್ ಇರಾನಿನ ಮೇಲೆ ದಾಳಿ ನಡೆಸಲು ಸಿದ್ದವಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :
Fact Check: ಕೆನರಾ ಬ್ಯಾಂಕ್ ಮುಂದೆ ಸೇರಿ ಕೆನಡಾ ವಿರುದ್ಧ ಬಿಜೆಪಿ ಪ್ರತಿಭಟಿಸಿದೆ ಎಂದು ಎಡಿಟೆಡ್ ಪೋಟೊ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.