Fact Check: ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹ ಧ್ವಂಸಗೊಳಿಸಿರುವವನು ಮಾನಸಿಕ ಅಸ್ವಸ್ತ. ಇದಕ್ಕೆ ಯಾವುದೇ ಕೋಮು ಆಯಾಮವಿಲ್ಲ

ದುರ್ಗಾ ಮಾತೆ

ಕೆಲವು ದಿನಗಳ ಹಿಂದೆಯಷ್ಟೇ ದಸರ ಹಬ್ಬ ಮತ್ತು ದುರ್ಗಾ ಪೂಜೆ ಮುಗಿಸಿದೆ. ಆದರೆ ಈಗ ದುರ್ಗಾ ದೇವಿಯ ಮುರಿದ ವಿಗ್ರಹ ಮತ್ತು ಪೂಜೆಯ ಸಾಮಾನುಗಳು ದೇವಾಲಯದ ತುಂಬಾ ಹರಡಿಕೊಂಡಿರುವುದನ್ನು ತೋರಿಸುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋವನ್ನು ತೆಲಂಗಾಣದ ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಲಾಗುತ್ತಿದೆ.

ಈ ವಿಡಿಯೋವನ್ನು”ಅತಿರೇಕ: ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ಪಾಕಿಸ್ತಾನಿ ಹೈದರಾಬಾದ್ ಅಲ್ಲ, ಕಾಂಗ್ರೆಸ್ ಆಡಳಿತದ ಭಾರತೀಯ ಹೈದರಾಬಾದ್” ಎಂದು ಕೆಲವು ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ.

ಈ ಪೋಸ್ಟ್ ಅನ್ನು ಎಕ್ಸ್ ನಲ್ಲಿ ‘@MrSinha_’ ಎಂಬುವವರು ಹಂಚಿಕೊಂಡಿದ್ದಾರೆ – ಸಿನ್ಹಾ ಅವರು ಆಗ್ಗಾಗೆ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದಕ್ಕೆ ಕುಖ್ಯಾತಿ ಪಡೆದಿದ್ದಾರೆ.

ಘಟನೆಯಲ್ಲಿ ಯಾವುದೇ ಕೋಮು ಕೋನವಿಲ್ಲ ಎಂದು ಹೈದರಾಬಾದ್ ಕೇಂದ್ರ ವಲಯದ ಡಿಸಿಪಿ ಅಕ್ಷಾಂಶ್ ಯಾದವ್ ಸುದ್ದಿಗಾರರಿಗೆ ತಿಳಿಸಿದರು.

ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಈ ಲೇಖನವನ್ನು ಬರೆಯುವ ಸಮಯದಲ್ಲಿ ಅವರ ಪೋಸ್ಟ್ 6.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಇದೇ ರೀತಿಯ ಪ್ರತಿಪಾದನೆಗಳೊಂದಿಗೆ ವಿಡಿಯೋ ಹಂಚಿಕೊಂಡಿರುವ ಹೆಚ್ಚಿನ ಪೋಸ್ಟ್‌ಗಳ ಆರ್ಕೈವ್‌ಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್: 

ಈ ಘಟನೆಯ ಕುರಿತು ನಾವು ಹೆಚ್ಚಿನ ಮಾಹಿತಿ ತಿಳಿಯಲು ಅಂತರ್ಜಾಲದಲ್ಲಿ ಹುಡುಕಾಡಿದಾಗ, ಈ ಕೃತ್ಯದ ದುಷ್ಕರ್ಮಿಯನ್ನು ಕೃಷ್ಣಯ್ಯ ಗೌಡ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು “ಮಾನಸಿಕ ಅಸ್ವಸ್ಥ” ಹೊಂದಿರುವ “ಅಲೆಮಾರಿ” ಎಂದು ಉಲ್ಲೇಖಿಸಿದ್ದಾರೆ. ಆಹಾರ ಅಥವಾ ಸ್ವಲ್ಪ ಹಣವನ್ನು ಹುಡುಕುತ್ತಿದ್ದಾಗ ಅವನು ಈ ಕೃತ್ಯವನ್ನು ಮಾಡಿದ್ದಾನೆ ಎಂದು ವರದಿಯಾಗಿದೆ.

ಗೂಗಲ್ ಲೆನ್ಸ್ ಬಳಸಿ, ನಾವು ವೀಡಿಯೊದಲ್ಲಿನ ಕೆಲವು ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ತೆಲಂಗಾಣ ಟುಡೇ ವರದಿಯೊಂದು ನಮಗೆ ಲಭ್ಯವಾಗಿದೆ, ಅದು ವೈರಲ್ ವೀಡಿಯೊದ ಹಲವಾರು ಸ್ಕ್ರೀನ್ಶಾಟ್‌ಗಳನ್ನು ಹೊಂದಿತ್ತು.

ಘಟನೆಯಲ್ಲಿ ಯಾವುದೇ ಕೋಮು ಕೋನವಿಲ್ಲ ಎಂದು ಹೈದರಾಬಾದ್ ಕೇಂದ್ರ ವಲಯದ ಡಿಸಿಪಿ ಅಕ್ಷಾಂಶ್ ಯಾದವ್ ಸುದ್ದಿಗಾರರಿಗೆ ತಿಳಿಸಿದರು.ಹೈದರಾಬಾದ್‌ನ ನಾಂಪಲ್ಲಿಯ ವಸ್ತುಪ್ರದರ್ಶನ ಮೈದಾನದ ಪೆಂಡಾಲ್‌ನಲ್ಲಿ (ತಾತ್ಕಾಲಿಕ ಪೆವಿಲಿಯನ್) ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ದುಷ್ಕರ್ಮಿಯನ್ನು ಹೈದರಾಬಾದ್ ಕೇಂದ್ರ ವಲಯ ಡಿಸಿಪಿ ಅಕ್ಷಾಂಶ್ ಯಾದವ್ ಗುರುತಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ಅಕ್ಷಾಂಶ್ ಯಾದವ್, ವಂಚಕನನ್ನು ನಾಗರ್ ಕರ್ನೂಲ್ ಜಿಲ್ಲೆಯ “ಅಲೆಮಾರಿ” ಕೃಷ್ಣಯ್ಯ ಗೌಡ್ ಎಂದು ಗುರುತಿಸಿದ್ದಾರೆ ಎಂದು ವರದಿ ತಿಳಿಸಿದೆ.

“ಆಹಾರವನ್ನು ಹುಡುಕುತ್ತಾ” ಸ್ಥಳಕ್ಕೆ ಹೋಗಿದ್ದೆ ಎಂದು ಗೌಡ್ ಒಪ್ಪಿಕೊಂಡಿದ್ದಾರೆ ಆದರೆ ಯಾರೂ ಸಿಗದಿದ್ದಾಗ, “ಅವರು ಕೋಪಗೊಂಡು ವಿಗ್ರಹವನ್ನು ಧ್ವಂಸಗೊಳಿಸಿದರು ಮತ್ತು ಪೆಂಡಾಲ್ ಅನ್ನು ಹಾನಿಗೊಳಿಸಿದರು” ಎಂದು ಡಿಸಿಪಿ ಯಾದವ್ ಹೇಳಿದರು.

ಇಂಡಿಯಾ ಟುಡೇಯ ಮತ್ತೊಂದು ವರದಿಯು ಆ ವ್ಯಕ್ತಿ “ಮಾನಸಿಕ ಅಸ್ವಸ್ಥ” ಎಂದು ಉಲ್ಲೇಖಿಸಿದೆ ಮತ್ತು ಗೌಡ್ ಆಹಾರವನ್ನು ಹುಡುಕುತ್ತಿದ್ದರು ಎಂದು ದೃಢಪಡಿಸಿದೆ. ಹಾಗೆಯೇ ಸಿಯಾಸತ್ ಡೈಲಿ ವರದಿಯಲ್ಲಿ ಈ ಘಟನೆಗೆ ಯಾವುದೇ ಕೋಮು ಆಯಾಮವನ್ನು ಡಿಸಿಪಿ ತಳ್ಳಿಹಾಕಿದ್ದಾರೆ.

ಮಾಧ್ಯಮ ಸಂಸ್ಥೆ ಎಎನ್ಐ ಎಕ್ಸ್ಪ್ರೆಸ್‌ ಪೋಸ್ಟ್‌ನ ಲ್ಲಿ ಡಿಸಿಪಿ ಯಾದವ್ ಅವರ ವೀಡಿಯೊ ಬೈಟ್‌ನಲ್ಲಿ ನಾವು ಇದೇ ಮಾಹಿತಿಯನ್ನು ಕಂಡುಕೊಂಡಿದ್ದೇವೆ, ಅಲ್ಲಿ ಗೌಡ್ ಮುಂಜಾನೆ 3 ಗಂಟೆ ಸುಮಾರಿಗೆ ಪೆಂಡಾಲ್‌ಗೆ ಪ್ರವೇಶಿಸಿದರು ಎಂದು ಅವರು ಹೇಳಿದರು.

ಆದ್ದರಿಂದ ಹೈದರಾಬಾದ್‌ನ ನಾಂಪಲ್ಲಿಯ ವಸ್ತುಪ್ರದರ್ಶನ ಮೈದಾನದಲ್ಲಿರುವ ದುರ್ಗಾ ವಿಗ್ರಹವನ್ನು ಕೃಷ್ಣಯ್ಯ ಗೌಡ್ ಎಂಬುವ ಆಹಾರವನ್ನು ಹುಡುಕುತ್ತಿದ್ದ “ಅಲೆಮಾರಿ” ನಾಶಪಡಿಸಿದ್ದಾರೆಯೇ ಹೊರತು ಇದಕ್ಕೆ ಯಾವುದೇ ಕೋಮು ಆಯಾಮವಿಲ್ಲ.


ಇದನ್ನು ಓದಿ: ಬಾಂಗ್ಲಾದೇಶದಲ್ಲಿ ಹಿಜಾಬ್‌ ಧರಿಸಿಲ್ಲ ಎಂದು ಮಹಿಳೆಯನ್ನು ಥಳಿಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *