Fact Check : ಪ್ರವಾಹದಲ್ಲಿ ಮಕ್ಕಳೊಂದಿಗೆ ಸಿಲುಕಿರುವ ವೃದ್ಧ ಮಹಿಳೆಯ ದೃಶ್ಯವು AI ರಚಿತವಾದದ್ದು

ವೃದ್ಧ ಮಹಿಳೆ ಮಗುವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಇತರ ಮಕ್ಕಳೊಂದಿಗೆ ನೀರಿನಲ್ಲಿ ನಿಂತಿದ್ದಾಳೆ ಎಂದು ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ಏಕಾಏಕಿ ಪ್ರವಾಹದ ಪರಿಣಾಮ ಎಂದು ಅನೇಕ ಬಳಕೆದಾರರು ಹೇಳುತ್ತಿದ್ದಾರೆ.

“ಹೀರೋಗಳು ಎಲ್ಲಾ ನಾಯಕಿಯ ಫೋಟೋಗಳನ್ನು ಇಷ್ಟಪಡುತ್ತಾರೆ, ಇಂದು ತಾಯಿಯನ್ನು ಯಾರು ಇಷ್ಟಪಡುತ್ತಾರೆ, ಲೈಕ್‌ ಮತ್ತು ಕಾಮೆಂಟ್‌ಗಳನ್ನು ಯಾರು ಮಾಡುತ್ತಾರೆ ಎಂಬುದನ್ನು ನೋಡೋಣ. #ಫೋಟೋಗ್ರಫಿ ಚಿತ್ರದಲ್ಲಿ  ಪ್ರವಾಹದ ದುರಂತ” ಎಂದು ಕೆಲವು ಫೇಸ್‌ಬುಕ್ ಬಳಕೆದಾರರು ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ.


ಫ್ಯಾಕ್ಟ್‌ ಚೆಕ್‌ : 

ಈ ವೈರಲ್‌ ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವೃದ್ಧ ಮಹಿಳೆ ಮತ್ತು ಮಕ್ಕಳ ಕಣ್ಣುಗಳು ಸ್ಪಷ್ಟವಾಗಿ ಗೋಚರಿಸಿಲ್ಲ. ಮತ್ತು ಮಕ್ಕಳ ಕೈಗಳ ಆಕಾರ  ಅಸ್ವಾಭಾವಿಕವಾಗಿವೆ.

ಹೈವ್ ಮಾಡರೇಶನ್ ಮತ್ತು ಹಗ್ಗಿಂಗ್ ಫೇಸ್ ನಂತಹ AI (Artificial intelligence) ಇಮೇಜ್ ಡಿಟೆಕ್ಟರ್ ಟೂಲ್‌ಗಳ ಮೂಲಕ ದೃಶ್ಯವನ್ನು ಹುಡುಕಿದಾಗ, ವೈರಲ್‌ ಚಿತ್ರವನ್ನು ತಿರುಚಲಾಗಿದೆ ಎಂದು ನಿಖರವಾಗಿ ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್‌ ಚಿತ್ರವು ನಕಲಿ ಮತ್ತು ಡಿಜಿಟಲ್ ಬದಲಾವಣೆಯಿಂದ ಕೂಡಿದೆ. ಹಾಗಾಗಿ ಈ ಸುದ್ದಿ ಸುಳ್ಳು ಮಾಹಿತಿಗಳಿಂದ ಕೂಡಿದ್ದು, ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಸತ್ಯಾಂಶವನ್ನು ತಿಳಿದುಕೊಳ್ಳಿ.


ಇದನ್ನು ಓದಿ :


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *