Fact Check : ಹೃದಯ ಶಸ್ತ್ರಚಿಕಿತ್ಸೆಗೆ ಬಳಸುವ ಮೆಗಾವಾಕ್ ಉಪಕರಣವನ್ನು ಭಾರತೀಯ ವೈದ್ಯರು ಅಭಿವೃದ್ಧಿ ಪಡಿಸಿದ್ದಾರೆ ಎಂಬುದು ಸುಳ್ಳು

ಹೃದಯದ ಅಪಧಮನಿಗಳಲ್ಲಿ ಹೆಪ್ಪುಟ್ಟುವ ರಕ್ತವನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವ ಮೂಲಕ ಹೃದಯ ಶಸ್ತ್ರಚಿಕಿತ್ಸೆಗಳನ್ನು ಸರಳಗೊಳಿಸುವ ಮೆಗಾವಾಕ್ ಮೆಕ್ಯಾನಿಕಲ್ ಥ್ರಂಬೆಕ್ಟಮಿ ಸಿಸ್ಟಮ್ ಎಂಬ ಉಪಕರಣವನ್ನು ನಮ್ಮ ಭಾರತೀಯ ವೈದ್ಯರು ಅಭಿವೃದ್ಧಿ ಪಡಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು‌ ಹಂಚಿಕೊಳ್ಳಲಾಗುತ್ತಿದೆ. ಈ ಸುಧಾರಿತ ಸಾಧನವು ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯಕವಾಗುತ್ತದೆ ಮತ್ತು ಇದರ ಬೆಲೆ ಕೇವಲ ರೂ.5,000(USD 75) ಎಂಬ ಉಲ್ಲೇಖದೊಂದಿಗೆ ಶೇರ್ ಮಾಡಲಾಗುತ್ತಿದೆ.

ಫ್ಯಾಕ್ಟ್ ಚೆಕ್:

ಮೆಗಾವಾಕ್ ಮೆಕ್ಯಾನಿಕಲ್ ಥ್ರಂಬೆಕ್ಟಮಿ ಸಿಸ್ಟಮ್ ಅನ್ನು ಭಾರತೀಯ ವೈದ್ಯರು ಕಂಡುಹಿಡಿದಿಲ್ಲ. ಇದನ್ನು 2013 ರಲ್ಲಿ ಅಮೇರಿಕಾದ ವೈದ್ಯರಾದ ಡಾ. ರಿಚರ್ಡ್ ಫುಲ್ಟನ್ ಅಭಿವೃದ್ಧಿಪಡಿಸಿದ್ದಾರೆ. ವಿಕಿರಣಶಾಸ್ತ್ರಜ್ಞ ಮತ್ತು ನಾಳೀಯ ಅಭಿವೃದ್ಧಿ ನಿಗಮದ ಸಂಸ್ಥಾಪಕರಾದ ಡಾ. ಫುಲ್ಟನ್ ಅವರು 60 ಪೇಟೆಂಟ್‌ಗಳನ್ನು ಹೊಂದಿದ್ದಾರೆ ಮತ್ತು 30 ವರ್ಷಗಳ ಕಾಲ ಕೊಲೊರಾಡೋದ ಸೇಂಟ್ ಮೇರಿ ಆಸ್ಪತ್ರೆಯಲ್ಲಿ ವಿಕಿರಣಶಾಸ್ತ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅಪಧಮನಿಯ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ಮೆಗಾವಾಕ್‌ನ್ನು ಮೊದಲ ಬಾರಿಗೆ ಯಶಸ್ವಿಯಾಗಿ 2016ರಲ್ಲಿ ಬಳಕೆ ಮಾಡಲಾಗಿದೆ.

ಡಾ. ರಿಚರ್ಡ್ ಫುಲ್ಟನ್ ಅವರು 2013ರಲ್ಲಿ ಮೆಗಾವಾಕ್ ಮೆಕ್ಯಾನಿಕಲ್ ಥ್ರಂಬೆಕ್ಟಮಿ ಸಿಸ್ಟಮ್ ಅನ್ನು ಕಂಡುಹಿಡಿದಿದ್ದಾರೆ ಎಂದು Google ಸರ್ಚ್ ಎಂಜಿನ್ ಬಹಿರಂಗಪಡಿಸಿದೆ. ಅಪಧಮನಿಗಳಿಂದ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕುವಂತಹ ಮೆಗಾವಾಕ್ ಸೇರಿದಂತೆ, 60ಕ್ಕೂ ಹೆಚ್ಚು ವೈದ್ಯಕೀಯ ಉಪಕರಣಗಳ ಹಕ್ಕುಸ್ವಾಮ್ಯವನ್ನು ಡಾ. ರಿಚರ್ಡ್ ಪುಲ್ಟನ್ ಹೊಂದಿದ್ದಾರೆ.

ಏಪ್ರಿಲ್ 2018ರಲ್ಲಿ ಡಾ ಫುಲ್ಟನ್ ಅವರ ಸಂದರ್ಶನವೊಂದರ ತುಣುಕು ಲಭ್ಯವಾಗಿದ್ದು, ಇದರಲ್ಲಿ ಮೆಗಾವಾಕ್ ಅನ್ನು ಅಪಧಮನಿಯ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ಯಶಸ್ವಿಯಾಗಿ ಬಳಸಿದ ಮೊದಲ ಪ್ರಕರಣವು 2016 ರಲ್ಲಿ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ” ಈ ಉಪಕರಣ ಕೆಲಸ ಮಾಡಿತು. ಇದರಂದಾಗಿ ಓರ್ವ ಮಹಿಳೆಯ ಜೀವ ಉಳಿಯಿತು! ಇದು ಚಿರಸ್ಮರಣೀಯ ” ಎಂದು ಅವರು ಸಂದರ್ಶಕರಿಗೆ ಹೇಳಿದ್ದಾರೆ.

capturevascular.comನಲ್ಲಿ MegaVac ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ವೀಡಿಯೊವನ್ನು ಹೊಂದಿರುವ ಲೇಖನವೊಂದು ಲಭ್ಯವಾಗಿದೆ. ಇದನ್ನು ಅಧದಾರವಾಗಿರಿಸಿಕೊಂಡು ಹುಡುಕಾಟ ನಡೆಸಿದಾಗ, 2017ರ ಮೇ 19ರಂದು ಅಪ್‌ಲೋಡ್ ಮಾಡಲಾದ ಕ್ಯಾಪ್ಚರ್ ವಸ್ಕುಲರ್ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ರೀತಿಯ ವೀಡಿಯೋ ಲಭಿಸಿದೆ. ಇದು MegaVac ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ.

ಹೆಚ್ಚುವರಿಯಾಗಿ, ಗ್ಲೋಬಲ್ ಯೂನಿಕ್ ಡಿವೈಸ್ ಐಡೆಂಟಿಫಿಕೇಶನ್ ಡೇಟಾಬೇಸ್ (GUDID) ನಲ್ಲಿ Megavac ಮೆಕ್ಯಾನಿಕಲ್ ಥ್ರಂಬೆಕ್ಟಮಿ ಸಿಸ್ಟಮ್‌ನ ಸಂಶೋಧಕರನ್ನು ಹುಡುಕಿದಾಗ ಇದನ್ನು CAPTURE VASCULAR, INC ಆವಿಷ್ಕರಿಸಿದೆ ಎಂಬುದನ್ನು ಬಹಿರಂಗವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೆಗಾವಾಕ್ ಅನ್ನು ಅಮೆರಿಕದ ರೇಡಿಯಾಲಜಿಸ್ಟ್ ಡಾ. ರಿಚರ್ಡ್ ಫುಲ್ಟನ್ ಅವರು 2013ರಲ್ಲಿ ಅಭಿವೃದ್ಧಿಪಡಿಸಿದ್ದಾರೆ ಮತ್ತು ಇದು ಭಾರತೀಯ ವೈದ್ಯರಿಂದ ಇತ್ತೀಚಿನ ಆವಿಷ್ಕಾರಿಸಿದ ಉಪಕರಣವಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.


ಇದನ್ನು ಓದಿದ್ದೀರಾ? :  Fact Check: ಭಾರತದ್ದು ಎಂದು ಪೆರು ರೈಲಿನ ವಿಡಿಯೋ ಹಂಚಿಕೊಂಡ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *