Fact Check : ಐಶ್ವರ್ಯ ರೈ, ಅಮಿತಾಬ್ ಬಚ್ಚನ್ ದಂಪತಿ ದುರ್ಗಾ ಪೂಜೆಗೆ ಆಗಮಿಸಿದ್ದರು ಎಂದು ನಕಲಿ ಫೋಟೋ ಹಂಚಿಕೆ

ಐಶ್ವರ್ಯಾ ರೈ ಅವರ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರೊಂದಿಗೆ ಐಶ್ವರ್ಯಾ ರೈ ಇರುವುದನ್ನು ಕಾಣಬಹುದು. ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಈ ಚಿತ್ರವನ್ನು ಮೂವರು ದುರ್ಗಾ ಪೂಜೆ ಮಾಡುವಾಗ ತೆಗೆಯಲಾಗಿದೆ ಎಂಬ ಉಲ್ಲೇಖದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್‌ :

ವಾಸ್ತವವಾಗಿ, ವೈರಲ್ ಆಗುತ್ತಿರುವ ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಮತ್ತು ಐಶ್ವರ್ಯಾ ಅವರ ಚಿತ್ರಗಳನ್ನು ಎಡಿಟ್ ಮಾಡಲಾಗಿದೆ. ಮೂಲ ಚಿತ್ರವು ಸೋನಂ ಕಪೂರ್ ಮತ್ತು ರಾಣಿ ಮುಖರ್ಜಿ ಅವರದ್ದು, ಅದನ್ನು ಎಡಿಟ್ ಮಾಡಲಾಗಿದ್ದು, ಜಯಾ ಬಚ್ಚನ್ ಮತ್ತು ಐಶ್ವರ್ಯಾ ಅವರ ಮುಖಗಳನ್ನು ಅದಕ್ಕೆ ಅಂಟಿಸಲಾಗಿದೆ. ಅಲ್ಲದೇ, ಈ ಫೋಟೋ ಒಂದು ವರ್ಷ ಹಳೆಯದು.

2024ರ ಅಕ್ಟೋಬರ್ 4ರಂದು ವೈರಲ್ ಚಿತ್ರವನ್ನು ಹಂಚಿಕೊಳ್ಳುವಾಗ, ಫೇಸ್‌ಬುಕ್ ಬಳಕೆದಾರರು ‘ಬಾಲಿವುಡ್ ಇಂಡೆಕ್ಸ್’ ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, “ಐಶ್ವರ್ಯ ರೈ, ಜಯಾ ಬಚ್ಚನ್ ಮತ್ತು ಅಮಿತಾಬ್ ದುರ್ಗಾ ಪೂಜೆಗೆ ಆಗಮಿಸಿದರು, ಜಯಾ ಬಚ್ಚನ್ ತನ್ನ ಸೊಸೆಯೊಂದಿಗೆ ಸಂತೋಷದಿಂದ ಕಾಣುತ್ತಿದ್ದರು… ಪೂರ್ಣ ಸುದ್ದಿ ಕಾಮೆಂಟ್ ಬಾಕ್ಸ್‌ನಲ್ಲಿದೆ… ” ಎಂದು ಪೋಸ್ಟ್‌ ಮಾಡಿರುವುದನ್ನು ಕಾಣಬಹುದು.

ವೈರಲ್ ಚಿತ್ರದ ಸತ್ಯಾಸತ್ಯತೆ ತಿಳಿಯಲು, ಗೂಗಲ್ ರಿವರ್ಸ್ ಇಮೇಜ್ ಮೂಲಕ ಫೋಟೋವನ್ನು ಹುಡುಕಿದಾಗ, ಟೈಮ್ಸ್ ನೌ ನ್ಯೂಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮೂಲ ಚಿತ್ರ ಲಭಿಸಿದೆ. ವರದಿಯನ್ನು 2023ರ ಅಕ್ಟೋಬರ್ 25ರಂದು ಪ್ರಕಟಿಸಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ನಿಜವಾದ ಚಿತ್ರ ಸೋನಂ ಕಪೂರ್ ಮತ್ತು ರಾಣಿ ಮುಖರ್ಜಿಯವರದ್ದು.

ಇದೇ ವೇಳೇ, ದೈನಿಕ್ ಜಾಗರಣ್ ಅವರ ವೆಬ್‌ಸೈಟ್‌ನಲ್ಲಿ ಇದೇ ರೀತಿಯ ಚಿತ್ರ ಲಭಿಸಿದ್ದು,2023 ಅಕ್ಟೋಬರ್ 23 ರಂದು ಪ್ರಕಟವಾದ ಸುದ್ದಿಯಲ್ಲಿ, ವೈರಲ್ ಚಿತ್ರದಲ್ಲಿ ರಾಣಿ ಮುಖರ್ಜಿ ಮತ್ತು ಸೋನಮ್ ಕಪೂರ್ ಇರುವುದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಮತ್ತು ಐಶ್ವರ್ಯಾ ಅವರ ಚಿತ್ರಗಳು ಎಂದು ಹಂಚಿಕೊಳ್ಳುತ್ತಿರುವ ಚಿತ್ರಗಳು ನಕಲಿಯಾಗಿದ್ದು, ವಾಸ್ತವವಾಗಿ ಮೂವರ ವೈರಲ್ ಚಿತ್ರಗಳನ್ನು ಎಡಿಟ್ ಮಾಡಿರುವುದು ದೃಢವಾಗಿದೆ. ಮೂಲ ಚಿತ್ರವು ಸೋನಂ ಕಪೂರ್ ಮತ್ತು ರಾಣಿ ಮುಖರ್ಜಿ ಅವರದ್ದು, ಅದನ್ನು ಎಡಿಟ್ ಮಾಡಿ ಜಯಾ ಬಚ್ಚನ್, ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಮುಖಗಳನ್ನು ಇದಕ್ಕೆ ಸೇರಿಸಲಾಗಿದೆ.


ಇದನ್ನು ಓದಿದ್ದೀರಾ?   Fact Check : ಪಾಕಿಸ್ತಾನದಲ್ಲಿ ಝಾಕಿರ್ ನಾಯಕ್‌ರಿಗೆ ಉಡುಗೊರೆಯಾಗಿ ಇಮ್ರಾನ್ ಖಾನ್ ಫೋಟೋ ಫ್ರೇಮ್ ನೀಡಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *