Fact Check | ಪವನ್ ಕಲ್ಯಾಣ್ ವಿರುದ್ಧದ ಪ್ರತಿಭಟನೆಯ ಈ ವಿಡಿಯೋ ಹಳೆಯದು

ಸಾಮಾಜಿಕ ಜಾಲತಾಣದಲ್ಲಿ “ತಿರುಮಲ ತಿರುಪತಿ ದೇವಸ್ಥಾನದ ಲಡ್ಡುಗಳ ವಿವಾದಕ್ಕೆ ಸಂಬಂಧಿಸಿದಂತೆ  ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಅವರ ಬ್ಯಾನರ್ ಅನ್ನು ಹಿಡಿದು ಅದಕ್ಕೆ ಚಪ್ಪಲಿಯಲ್ಲಿ ಹೊಡೆದು ಜನ ಪ್ರತಿಭಟಿಸಿದ್ದಾರೆ. ಇದು ಡಿಸಿಎಂ ಪವನ್‌ ಕಲ್ಯಾಣ್‌ಗೆ ಒಂದು ಪಾಠವಾಗಬೇಕಿದೆ. ದೇವರ ವಿಚಾರದಲ್ಲಿ ರಾಜಕಾರಣ ಮಾಡುವ ಇಂತಹ ರಾಜಕಾರಣಿಗಳಿಗೆ ಮುಂದೆ ಜನ ಇದೇ ರೀತಿ ಮಾಡಲಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋ ನೋಡಿದ ಹಲವು ಮಂದಿ ನಟ ಹಾಗೂ ಆಂಧ್ರದ ಡಿಸಿಎಂ ಪವನ್‌ ಕಲ್ಯಾಣ್‌ ವಿರುದ್ಧ ಆಕ್ರೋಶವನ್ನು ವ್ಯಕಪಡಿಸಿದರೆ ಇನ್ನೂ ಕೆಲವರು ಪವನ್‌ ಕಲ್ಯಾಣ್‌ಗೆ ಬೆಂಬಲವನ್ನು ಸೂಚಿಸಿ ಈ ಪ್ರತಿಭಟನೆಯ ವಿರುದ್ಧ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಹೀಗಾಗಿ ವೈರಲ್‌ ವಿಡಿಯೋ ಎರಡು ರೀತಿಯ ಆಯಾಮದಲ್ಲಿ ಅಭಿಪ್ರಾಯ ವ್ಯಕ್ತವಾಗುವಂತೆ ಮಾಡಿದೆ. ಇನ್ನೂ ಕೆಲವರು ಪವನ್‌ ಕಲ್ಯಾಣ್‌ ವಿರುದ್ಧ ಈ ರೀತಿಯ ಪ್ರತಿಭಟನೆ ಆಂಧ್ರದಲ್ಲಿ ನಡೆದೇ ಇಲ್ಲ ಎಂದು ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ರೀತಿಯ ಅಭಿಪ್ರಾಯಗಳೊಂದಿಗೆ ಹಂಚಿಕೆಯಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ 10 ಜುಲೈ 2023ರಂದು ವೈಎಸ್‌ ಜಗನ್‌ ಟ್ರೆಂಡ್ಸ್‌ ಎಂಬ ಎಕ್ಸ್‌ ಖಾತೆಯಿಂದ ಹಂಚಿಕೊಳ್ಳಲಾದ ಪೋಸ್ಟ್‌ವೊಂದು ಕಂಡು ಬಂದಿದ್ದು, ಇದರಲ್ಲಿನ ವಿಡಿಯೋಗೂ ವೈರಲ್‌ ವಿಡಿಯೋಗೂ ಹೊಲಿಕೆ ಇರುವುದು ಕಂಡು ಬಂದಿದೆ. ಹಾಗಾಗಿ ವೈರಲ್‌ ವಿಡಿಯೋ 1 ವರ್ಷ ಹಳೆಯದು ಎಂಬುದು ನಮಗೆ ಸ್ಪಷ್ಟವಾಗಿ ತಿಳಿದು ಬಂದಿದೆ.

ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಲು ನಮ್ಮ ತಂಡ ಮುಂದಾಯಿತು, ಇದಕ್ಕಾಗಿ ನಾವು ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 10 ಜುಲೈ 2023 ರಂದು Gulte.Com ಎಂಬ ಸುದ್ದಿ ತಾಣದಲ್ಲಿ ಪ್ರಕಟವಾದ ವರದಿಯೊಂದು ಕಂಡು ಬಂದಿದೆ. ಇದರ ಪ್ರಕಾರ ಅಂದು ರಾಜಕಾರಣಿ ಪವನ್ ಕಲ್ಯಾಣ್ ಅವರು ರಾಜ್ಯದಲ್ಲಿ ಮಾನವ ಕಳ್ಳಸಾಗಣೆ ವ್ಯಾಪಕವಾಗಿದೆ ಎಂದು ಆರೋಪಿಸಿದ್ದರು, ಜೊತೆಗೆ ವೈಸಿಪಿ ಸರ್ಕಾರ ತಂದಿರುವ ಸ್ವಯಂಸೇವಕ ವ್ಯವಸ್ಥೆಯೇ ಮಾನವ ಕಳ್ಳಸಾಗಣೆಗೆ ಪ್ರಮುಖ ಕಾರಣ ಎಂದು ಟೀಕಿಸಿದ್ದರು. ಇದು ಆಂದ್ರ ಪ್ರದೇಶದಲ್ಲಿ ಬಹುದೊಡ್ಡ ವಿವಾದವನ್ನು ಸೃಷ್ಟಿಸಿತ್ತು, ಹೀಗಾಗಿ ಪವನ್‌ ಕಲ್ಯಾಣ್‌ ರಾಜ್ಯದ ಸ್ವಯಂ ಸೇವಕರ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಆಂಧ್ರದಾದ್ಯಂತ ಪ್ರತಿಭಟನೆಯನ್ನು ನಡೆಸಲಾಯಿತು. ಆಗ ಹಲವು ಸ್ವಯಂ ಸೇವಕರು  ಪವನ್‌ ಕಲ್ಯಾಣ್‌ ಬ್ಯಾನರ್‌ ಹಿಡಿದು ಪ್ರತಿಭಟಿಸಿದ್ದರು. ಈಗ ಅದೇ ವಿಡಿಯೋವನ್ನು ಬಳಸಿಕೊಂಡು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಪವನ್‌ ಕಲ್ಯಾಣ್‌ ಅವರ ವಿರುದ್ಧ ಬ್ಯಾನರ್‌ ಹಿಡಿದು, ಅದಕ್ಕೆ ಚಪ್ಪಲಿಯಲ್ಲಿ ಹೊಡೆಯಲಾಗಿದೆ ಎಂಬುದು ಸುಳ್ಳಾಗಿದೆ. ವೈರಲ್‌ ವಿಡಿಯೋ ಒಂದು ವರ್ಷ ಹಳೆಯದಾಗಿದೆ. ಹಾಗಾಗಿ ಈ ಸುದ್ದಿ ನಿಮಗೆ ಕಂಡು ಬಂದರೆ ಅದನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ಲೆಬನಾನ್ ಜನರು ಇಸ್ರೇಲ್ ರಕ್ಷಣಾ ಪಡೆಯ ಸೈನಿಕರನ್ನು ಬೆಂಬಲಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *