Fact Check | ವೈರಲ್ ಆಗಿರುವ ಈ ಚಿತ್ರ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದಲ್ಲ

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಮಹಿಳೆ ಮತ್ತು ಮಗುವೊಂದು ಕಾಣಿಸಿಕೊಂಡಿದ್ದು, ಇದನ್ನು ಬಳಸಿಕೊಂಡು ಸಾಕಷ್ಟು ಮಂದಿ ಈ ವೈರಲ್ ಫೋಟೋ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ. ಬಹಳ ದಿನಗಳ ಪರಿಶ್ರಮದ ನಂತರ ಎಪಿಜೆ ಅಬ್ದುಲ್ ಕಲಾಂ ಅವರ ಈ ಫೋಟೋ ಲಭ್ಯವಾಗಿದೆ ಎಂದು ಹಲವರು ಬರೆದುಕೊಂಡಿದ್ದಾರೆ. ಹೀಗಾಗಿ ಈ ಫೋಟೋ ಸಾಕಷ್ಟು ವೈರಲ್‌ ಕೂಡ ಆಗಿದೆ

ಸಂಚಲನ ಮೂಡಿಸಿರುವ ಈ ಫೋಟೋ 80-90 ರ ದಶಕದಲ್ಲಿ ತೆಗೆದ ಚಿತ್ರವಾಗಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಮೊದಲ ಬಾರಿಗೆ ಈ ಚಿತ್ರವನ್ನು ನೋಡಿದ ಹಲವರು, ಇದು ನಿಜಕ್ಕೂ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದ ಫೋಟೋ ಎಂದು ನಂಬಿ, ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಫೋಟೋದಲ್ಲಿ ಕೆಲವೊಂದು ಪ್ರಶ್ನೆಗಳು ಮೂಡುತ್ತಿರುವುದರಿಂದ ವೈರಲ್ ಚಿತ್ರ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಹೀಗೆ ಗೊಂದಲ ಉಂಟುಮಾಡಿರುವ ವೈರಲ್ ಚಿತ್ರದ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋವನ್ನು ಪರಿಶೀಲನೆ ನಡೆಸಲು ಅದರ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಲಾಯಿತು. ಈ ವೇಳೆ ನಮಗೆ ಮರಿಯಾಲ ಶ್ರೀನಿವಾಸ್ ಎಂಬುವರ ಫೇಸ್‌ಬುಕ್‌ ಖಾತೆಯಲ್ಲಿ ವೈರಲ್ ಫೋಟೋವಿನ ಮೂಲ ಚಿತ್ರ ಕಂಡು ಬಂದಿದೆ. ಈ ಬಗ್ಗೆ ಅವರೇ ಸ್ಪಷ್ಟನೆಯನ್ನು ನೀಡಿದ್ದು, ಇದು ಅಬ್ದುಲ್‌ ಕಲಾಂ ಅವರದ್ದೋ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರದ್ದೋ ಫೊಟೋ ಅಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.

ಪೋಸ್ಟ್‌ ಅನ್ನು ಓದುಗರಿಗೆ ನೇರವಾಗಿ ಅರ್ಥವಾಗಬೇಕಾಗಿ ತೆಲುಗಿನಿಂದ ಕನ್ನಡಕ್ಕೆ ಗೂಗಲ್‌ ಮೂಲಕ ನೇರೆ ಟ್ರ್ಯಾನ್ಸ್‌ಲೇಟ್‌ ಮಾಡಲಾಗಿದೆ.
ಮೂಲ ಪೋಸ್ಟ್‌ ಅನ್ನು ಬದಲಾಯಿಸದೆ ಓದುಗರಿಗೆ ಅರ್ಥೈಸಲು ತೆಲುಗಿನಿಂದ ಕನ್ನಡಕ್ಕೆ ಗೂಗಲ್‌ ಮೂಲಕ ನೇರವಾಗಿ ಅನುವಾದಿಸಲಾಗಿದೆ

ಈ ಫೋಟೋ ಕುರಿತು 3 ಮೇ 2020 ರಂದು ಮಾಹಿತಿ ನೀಡಿರುವ ಅವರು, ಈ ಚಿತ್ರವು ಅವರ ಕುಟುಂಬಕ್ಕೆ ಸೇರಿದ್ದಾಗಿದ್ದಾಗಿದೆ ಎಂದು ತಿಳಿಸಿದ್ದಾರೆ.ಈ ಚಿತ್ರದಲ್ಲಿ ತನ್ನ ಸಹೋದರ ತನ್ನ ತಾಯಿಯೊಂದಿಗೆ ಕುಳಿತಿದ್ದಾರೆ, ಮತ್ತು ಅವರ ಸಹೋದರಿ ತಂದೆಯೊಂದಿಗೆ ಕುಳಿತಿದ್ದಾರೆ, ಮತ್ತು ಮರಿಯಾಲ ಶ್ರೀನಿವಾಸ್‌ ಸ್ವತಃ ಮಧ್ಯದಲ್ಲಿ ಕುಳಿತಿದ್ದಾರೆ ಎಂದು ಫೋಟೋವನ್ನು ಶೇರ್‌ ಮಾಡಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಮರಿಯಾಲ ಶ್ರೀನಿವಾಸ್ ಕುಟುಂಬ
                                                            ಮರಿಯಾಲ ಶ್ರೀನಿವಾಸ್ ಕುಟುಂಬ

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದ್ದು ಎಂಬುದು ಸುಳ್ಳು. ಈ ಚಿತ್ರ ಮರಿಯಾಲ ಶ್ರೀನಿವಾಸ್ ಅವರ ಕುಟುಂಬಕ್ಕೆ ಸೇರಿದ್ದಾಗಿದೆ. ಹಲವರು ಈ ಚಿತ್ರವನ್ನು ಬಳಸಿಕೊಂಡು ಸುಳ್ಳು ಮಾಹಿತಿಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಪೋಸ್ಟ್ ನಿಮಗೆ ಕಂಡು ಬಂದರೆ ಅವುಗಳನ್ನು ನಿರ್ಲಕ್ಷಿಸಿ ಹಾಗೂ ಹಂಚಿಕೊಳ್ಳಬೇಡಿ.. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check : ಫ್ಲಿಪ್‌ಕಾರ್ಟ್‌ನಲ್ಲಿ 99% ರಿಯಾಯತಿ ಎಂಬ ಹೆಸರಲ್ಲಿ ನಕಲಿ ವೆಬ್‌ಸೈಟ್‌ ಹಾವಳಿ, ಗ್ರಾಹಕರು ವಂಚನೆಗೊಳಗಾಗದಿರಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *