Fact Check: 188 ವರ್ಷದ ವ್ಯಕ್ತಿ ಗುಹೆಯಲ್ಲಿ ಪತ್ತೆ ಎಂಬುದು ನಿಜವಲ್ಲ, ಇಲ್ಲಿದೆ ವಿವರ

ಸಿಯಾರಾಮ್ ಬಾಬ

ಇತ್ತೀಚೆಗೆ ಗುಹೆಯಲ್ಲಿ 188 ವರ್ಷದ ವೃದ್ಧರೊಬ್ಬರು ಪತ್ತೆಯಾಗಿದ್ದಾರೆ ಎಂಬ ವೀಡಿಯೋ ಒಂದು ಸಾಕಷ್ಟು ವೈರಲ್ ಆಗಿದ್ದು. ಈ ವೀಡಿಯೋದಲ್ಲಿ ಜನರು ವೃದ್ಧರಿಗೆ ನಡೆಯಲು ಸಹಾಯ ಮಾಡುವುದನ್ನು ನೋಡಬಹುದು.

ಎಕ್ಸ್‌(ಟ್ವಿಟರ್) ನಲ್ಲಿ ಈ ವಿಡಿಯೋ ತುಣುಕು ಸಾಕಷ್ಟು ವೈರಲ್ ಆಗಿದ್ದು “ಇವರು ಸಂತ ಸಿಯಾರಾಮ್ ಬಾಬಾ, ಹನುಮಾನ್ ಜಿಯ ಮಹಾನ್ ಭಕ್ತ. ಬಾಬಾ ಅವರ ವಯಸ್ಸು 121 ವರ್ಷಗಳು, ಈ ವಯಸ್ಸಿನಲ್ಲೂ ಬಾಬಾ ಕನ್ನಡಕವಿಲ್ಲದೆ 16-18 ಗಂಟೆಗಳ ಕಾಲ ನಿರಂತರವಾಗಿ ರಾಮಾಯಣವನ್ನು ಓದುತ್ತಾರೆ. ಮತ್ತು ತಮ್ಮದೇ ಆದ ಆಹಾರವನ್ನು ಸಹ ಬೇಯಿಸಿಕೊಳ್ಳುತ್ತಾರೆ. ಬಾಬಾ ಭಾರತದ ಮಧ್ಯಪ್ರದೇಶದ ನರ್ಮದಾ ನದಿಯ ದಡದಲ್ಲಿರುವ ತಮ್ಮ ಚಿಕ್ಕ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ. ಜೈ ಶ್ರೀ ರಾಮ್” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. 

ಕೆಲವರು ಬಾಬಾ ಸಿಯಾರಾಮ್ ಅವರ ವಯಸ್ಸು 121 ವರ್ಷಗಳು ಎಂದು ಹೇಳಿದರೆ ಇನ್ನೂ ಕೆಲವರು ಅವರ ವಯಸ್ಸು 188 ಎಂದು ಪ್ರತಿಪಾದಿಸುತ್ತಿದ್ದಾರೆ.

ಈ ವೀಡಿಯೊದಲ್ಲಿ ಮಧ್ಯಪ್ರದೇಶದಲ್ಲಿ ವಾಸಿಸುವ ಶ್ರೀರಾಮ್ ಬಾಬಾ ಅವರನ್ನು ತೋರಿಸಲಾಗಿದೆ ಮತ್ತು ಅವರ ವಯಸ್ಸಿಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಆರ್ಕೈವ್ ಅನ್ನು ಇಲ್ಲಿ ನೋಡಬಹುದು.

ಇದೇ ರೀತಿಯ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಫ್ಯಾಕ್ಟ್‌ ಚೆಕ್:

ವೈರಲ್ ವಿಡಿಯೊದಲ್ಲಿರುವ ವೃದ್ಧ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಭಾಟ್ಯಾನ್ ಆಶ್ರಮದಲ್ಲಿ ವಾಸಿಸುವ ಸಿಯಾರಾಮ್ ಬಾಬಾ ಎಂದು ತಿಳಿದು ಬಂದಿದೆ ಮತ್ತು ಅವರ ವಯಸ್ಸಿನ ಕುರಿತು ಯಾವುದೇ ಅಧಿಕೃತ ಮಾಹಿತಿಗಳಿಲ್ಲ.

ನಾವು ಅಂತರ್ಜಾಲದಲ್ಲಿ ವಿಡಿಯೊದ ಕೆಲವು ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ನಮಗೆ ಯೂಟ್ಯೂಬ್ ವಿಡಿಯೊ ಒಂದು ಲಭ್ಯವಾಗಿದೆ. ಇದನ್ನು ಅಕ್ಟೋಬರ್ 2 ರಂದು ಹಂಚಿಕೊಳ್ಳಲಾಗಿದ್ದು, ವೈರಲ್ ವಿಡಿಯೋದಲ್ಲಿ ಕಂಡುಬರುವ ವೃದ್ಧನಿಗೆ ಜನರು ಸಹಾಯ ಮಾಡುತ್ತಿರುವುದನ್ನು ಇದು ತೋರಿಸುತ್ತದೆ. ಶೀರ್ಷಿಕೆಯಲ್ಲಿ ಇದು ಮಧ್ಯಪ್ರದೇಶದ ಖಾರ್ಗೋನ್ ನಲ್ಲಿರುವ ಶ್ರೀರಾಮ ಬಾಬಾ ಅವರನ್ನು ತೋರಿಸುತ್ತದೆ ಎಂದು ಹೇಳಲಾಗಿದೆ.

ಈ ಸುಳಿವನ್ನು ತೆಗೆದುಕೊಂಡು, ನಾವು ಅಂತರ್ಜಾಲದಲ್ಲಿ ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಶ್ರೀರಾಮ ಬಾಬಾ ಬಗ್ಗೆ ಹಲವಾರು ಸುದ್ದಿ ವರದಿಗಳು ನಮಗೆ ಲಭ್ಯವಾಗಿವೆ. ಇದನ್ನು ಸ್ಕೂಪ್ ವೂಪ್ ಹಿಂದಿದೈನಿಕ್ ಭಾಸ್ಕರ್ ಮತ್ತು ನವಭಾರತ್ ಟೈಮ್ಸ್ ಹಂಚಿಕೊಂಡಿವೆ. ಎಲ್ಲಾ ವರದಿಗಳು ವೈರಲ್ ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿಯೊಂದಿಗೆ ಹೊಂದಿಕೆಯಾಗುವ ವಿವಿಧ ದೃಶ್ಯಗಳನ್ನು ಹೊಂದಿದ್ದವು.

ಈ ವೀಡಿಯೊದಲ್ಲಿ ಮಧ್ಯಪ್ರದೇಶದಲ್ಲಿ ವಾಸಿಸುವ ಶ್ರೀರಾಮ್ ಬಾಬಾ ಅವರನ್ನು ತೋರಿಸಲಾಗಿದೆ ಮತ್ತು ಅವರ ವಯಸ್ಸಿಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಸಿಯಾರಾಮ್ ಬಾಬಾ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಭಾಟ್ಯಾನ್ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ ಎಂದು ಈ ವರದಿಗಳು ತಿಳಿಸಿವೆ, ಆದಾಗ್ಯೂ, ಅವರ ನಿಜವಾದ ವಯಸ್ಸಿನ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಅವರ ವಯಸ್ಸಿನ ಬಗ್ಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಿನ್ನಾಭಿಪ್ರಾಯವಿದೆ, ಅವರ ವಯಸ್ಸು 100 ಕ್ಕಿಂತ ಹೆಚ್ಚು ಎಂದು ಜನ ತಿಳಿಸಿದ್ದಾರೆ ಎಂದು ವರದಿಗಳಲ್ಲಿ ತಿಳಿಸಲಾಗಿದೆ.

ಸಿಯಾರಾಮ್ ಬಾಬಾರ ಅನುಯಾಯಿಗಳಲ್ಲಿ ಒಬ್ಬರಾದ ಶುಭ್ ಬಿರ್ಲಾ ನಡೆಸುತ್ತಿರುವ ಅವರ ಇನ್ಸ್ಟಾಗ್ರಾಮ್ ಪುಟ ನಮಗೆ ಲಭ್ಯವಾಗಿದ್ದು. ನಾವು ಬಿರ್ಲಾ ಅವರೊಂದಿಗೆ ಮಾತನಾಡಿದಾಗ, ಅವರು ಸಿಯಾರಾಮ್ ಬಾಬಾ ಅವರ ಅಧಿಕೃತ ದಾಖಲೆಗಳ ಪ್ರಕಾರ, ಅವರಿಗೆ 94 ವರ್ಷ ವಯಸ್ಸಾಗಿದೆ ಎಂದು ದೃಢಪಡಿಸಿದರು. ಬಾಬಾ ಅವರ ವಯಸ್ಸಿನ ಬಗ್ಗೆ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹರಡಿದ್ದಾರೆ ಎಂದು ಅವರು ಹೇಳಿದರು.

ಅವರು ಸಣ್ಣ ಕೋಣೆಯೊಳಗೆ ವಾಸಿಸುವುದನ್ನು ಮತ್ತು ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುವುದನ್ನು ಕಾಣಬಹುದು. ಇದಲ್ಲದೆ, ಗುಹೆಯೊಳಗೆ 188 ವರ್ಷದ ವ್ಯಕ್ತಿ ಪತ್ತೆಯಾದ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಲಭ್ಯವಾಗಿಲ್ಲ.

ಆದ್ದರಿಂದ, 188 ವರ್ಷದ ಸಿಯಾರಾಮ್ ಬಾಬಾ ಅವರು ಗುಹೆಯಲ್ಲಿ ಪತ್ತೆಯಾಗಿದ್ದಾರೆ ಎಂಬ ವೈರಲ್ ಹೇಳಿಕೆ ಸುಳ್ಳು ಎಂಬುದು ಸ್ಪಷ್ಟವಾಗಿದೆ.


ಇದನ್ನು ಓದಿ: ಭವಿಶ್ ಅಗರ್ವಾಲ್- ಕುನಾಲ್ ಕಮ್ರಾ ನಡುವಿನ ವಿವಾದದ ಹಿನ್ನೆಲೆಯಲ್ಲಿ ಶೋರೂಮ್‌ಗೆ ಬೆಂಕಿ ಹಚ್ಚಲಾಗಿದೆ ಎಂಬ ವೀಡಿಯೊ ಹಳೆಯದು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *