“ಈ ವಿಡಿಯೋ ನೋಡಿ, ಬಾಲಕಿಯೊಬ್ಬಳು ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಹೋಗುತ್ತಿರುತ್ತಾಳೆ. ಆಕೆಯ ಹಿಂಬದಿಯಿಂದ ಬಂದ ಬೈಕ್ ಸವಾರನೊಬ್ಬ ಬಾಲಕಿಯನ್ನು ಮುಂದಕ್ಕೆ ತೆರಳದಂತೆ ತನ್ನ ಬೈಕಿನಲ್ಲೇ ಅಡ್ಡ ಹಾಕಿ ಕಿರುಕುಳ ನೀಡಿದ್ದಾನೆ. ಈತನನ್ನು ಜನ ಸಾಮಾನ್ಯರು ತಡೆದು ವಿಚಾರಿಸಿದಾಗ ನನ್ನ ತಂದೆ ಅಧ್ಯಕ್ಷರು, ನಾನು ಯಾವ ಹುಡುಗಿಯನ್ನು ಬೇಕಾದರೂ ಕೀಟಲೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಇದು ಇಂದಿನ ದೆಹಲಿಯ ದುಸ್ಥಿತಿ” ಎಂದು ವಿಡಿಯೋವೊಂದನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ.
चोरी और ऊपर से सीना ज़ोरी, इसे ही कहते हैं। बता रहा है बाप “अध्यक्ष” है। मतलब इसे लाइसेंस दे दिया गया है सरेआम छेड़छाड़ का। इसकी हिम्मत और जुर्रत दोनों ही क़ाबिले तारीफ़ हैं। वीडियो दिल्ली की किसी कॉलोनी का मालूम देता है। pic.twitter.com/j61nvC4VeZ
— SANJAY TRIPATHI (@sanjayjourno) October 4, 2024
ವೈರಲ್ ವಿಡಿಯೋ ನೋಡಿದ ಹಲವು ಮಂದಿ ಇದು ನಿಜವಾದ ಘಟನೆ ಎಂದು ಭಾವಿಸಿ ವಿವಿಧ ರೀತಿಯಾದ ಟಿಪ್ಪಣಿಗಳನ್ನು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಸಾಕಷ್ಟು ಮಂದಿಗೆ ದೆಹಲಿಯಲ್ಲಿ ಹಗಲಿನ ವೇಳೆಯಲ್ಲಿ ಕೂಡ ಹೆಣ್ಣು ಮಕ್ಕಳು ಸ್ವತಂತ್ರವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ಮೂಡುತ್ತಿದೆ. ಇನ್ನೂ ಕೆಲವರು ಈ ವೈರಲ್ ವಿಡಿಯೋ ನಿಜವೋ ಸುಳ್ಳೋ ಎಂಬುದನ್ನು ಪರಿಶೀಲನೆ ನಡೆಸದೆ ರಾಜಕೀವಾಗಿ ಕೂಡ ಈ ವಿಡಿಯೋವನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಅಭಿಪ್ರಾಯಗಳೊಂದಿಗೆ ಹಂಚಿಕೆಯಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
चोरी और ऊपर से सीना ज़ोरी, सायद इसे ही कहते हैं।
यह बाईक सवार लड़का गली में लड़की को छेड़ रहा था। और खुद बता रहा बाप “अध्यक्ष” है।
क्या ऐसे लोगों को लाइसेंस दिया गया हैं सरेआम छेड़छाड़ी करें,
#Viralvideo #Delhi बताया जा रहा। इसकी हिम्मत और जुर्रत विडियो में दरिद्रता देखिए🤬 pic.twitter.com/mHh0bOBEK2
— Advocate Omprakash Jaiswal Offic (@Advocateopoffic) October 4, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 4 ಜೂನ್ 2024ರಂದು Aman Beniwal ಎಂಬ ಯುಟ್ಯೂಬ್ ಚಾನಲ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದು ಕಂಡು ಬಂದಿದೆ. ಈ ವಿಡಿಯೋವಿನ 7 ಸೆಕೆಂಡ್ ಮಾರ್ಕ್ನಲ್ಲಿ ಕ್ಷಣಾರ್ಧದಲ್ಲಿ ಹಾದು ಹೋಗುವ ಸೂಚನಾ ಫಲಕವನ್ನು ನೀಡಲಾಗಿದ್ದು, ಅದರಲ್ಲಿ “ವೀಡಿಯೊದಲ್ಲಿ ಮಾಡಿದ ವಿಷಯವನ್ನು ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಪರಿಗಣಿಸಬೇಕು” ಎಂಬುದು ಉಲ್ಲೇಖವಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
ಇನ್ನು ಈ ಯುಟ್ಯುಬ್ ಚಾನಲ್ ಅನ್ನು ಅಮನ್ ಬೇನಿವಾಲ್ ಎಂಬುವವರು ನಡೆಸುತ್ತಿದ್ದು, ಇದರಲ್ಲಿ ವೈರಲ್ ವಿಡಿಯೋದಂತೆಯೇ ಹಲವು ನಾಟಕೀಯ ವಿಡಿಯೋಗಳು ಕಂಡು ಬಂದಿವೆ. ಇದರಲ್ಲಿ ಹಲವು ವಿಡಿಯೋಗಳು ಜಾಗೃತಿ ಮೂಡಿಸುವ ಉದ್ದೇಶದಿಂದ ರಚನೆ ಮಾಡಿದ್ದರೆ, ಇನ್ನೂ ಕೆಲವು ವಿಡಿಯೋಗಳನ್ನು ಮನೋರಂಜನೆಯ ಉದ್ದೇಶಗಳಿಗಾಗಿ ಮಾಡಿರುವುದು ಕಂಡು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ದೆಹಲಿಯಲ್ಲಿ ಯುವಕನೊಬ್ಬ ಬಾಲಕಿಯನ್ನು ಬೈಕಿನಲ್ಲಿ ಅಡ್ಡಗಟ್ಟಿದ್ದಾನೆ ಎಂಬುದು ಸುಳ್ಳು. ಇದೊಂದು ನಾಟಕೀಯ ವಿಡಿಯೋವಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲಿಸಿ, ಸುಳ್ಳು ಎಂದು ಕಂಡು ಬಂದರೆ ಅಂತಹ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ರಣದೀಪ್ ಸಿಂಗ್ ಸುರ್ಜೇವಾಲಾ ಬ್ರಾಹ್ಮಣರನ್ನು ಕೊಲ್ಲುವ ಬಗ್ಗೆ ಮಾತನಾಡಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.