Fact Check : ನೇಪಾಳದ ಕೋಸಿ ಆಣೆಕಟ್ಟಿನ ಎಲ್ಲಾ ಬ್ಯಾರೇಜ್‌ಗಳನ್ನು ತೆರೆಯಲಾಗಿದೆ ಎಂದು ದ.ಅಮೇರಿಕಾದ ವೀಡಿಯೊ ಹಂಚಿಕೆ

ನೇಪಾಳದ ಕೋಸಿ ಅಣೆಕಟ್ಟಿನ ಎಲ್ಲಾ ಬ್ಯಾರೇಜ್‌ಗಳನ್ನು ತೆರೆಯಲಾಗಿದೆ ಎಂಬ ದೃಶ್ಯಗಳ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ನೇಪಾಳದ ಕೋಸಿ ಅಣೆಕಟ್ಟಿನ 56 ಬ್ಯಾರೇಜ್‌ಗಳು ತೆರೆದಿವೆ. ಬಿಹಾರದ ಜನರು ಪ್ರವಾಹದ ವಿರುದ್ಧ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಅನೇಕ ಬಳಕೆದಾರರು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಫೇಸ್‌ಬುಕ್‌ನ ಕೆಲವು ಬಳಕೆದಾರರು “ನೇಪಾಲ್ ಬೈರಾಜ್ ಕಾ 56 ಫಟಕ್ ಖೋಲ್ ದಿಯಾ ಗಯಾ ಹೈ ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2019ರ ಮೇ 10ರಂದು ಫೇಸ್‌ಬುಕ್‌ನ  ಪೋಸ್ಟ್‌ನಲ್ಲಿ ದಕ್ಷಿಣ ಅಮೇರಿಕಾದ ಪರಾಗ್ವೆ ಮತ್ತು ಅರ್ಜೆಂಟೀನಾ ನಡುವೆ ಹರಿಯುವ ಪರಾನಾ ನದಿಯ ಮೇಲೆ ನಿರ್ಮಿಸಲಾದ ಯಾಸಿರೆಟಾ ಅಣೆಕಟ್ಟಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಮೇ 2019 ರ ಪೋಸ್ಟ್‌ರ್‌ನ ಪ್ರಕಾರ, ಪರಾನಾ ನದಿಯು ಸೆಕೆಂಡಿಗೆ 15,200 ಕ್ಯೂಬಿಕ್ ಮೀಟರ್ ವೇಗದಲ್ಲಿ ಹರಿಯುತ್ತಿದ್ದ ಕಾರಣ ಆ ಸಮಯದಲ್ಲಿ ಯಾಸಿರೆಟಾ ಅಣೆಕಟ್ಟಿನ ಗೇಟ್‌ಗಳನ್ನು ಮುಚ್ಚಲಾಗಿತ್ತು. ನದಿಯು ಸೆಕೆಂಡಿಗೆ 24,000 ಕ್ಯೂಬಿಕ್ ಮೀಟರ್‌ಗಳಷ್ಟು ಹರಿವಿನ ವೇಗವನ್ನು ಮೀರಿದಾಗ ಮಾತ್ರ ಅಣೆಕಟ್ಟಿನ ಗೇಟ್‌ಗಳನ್ನು ತೆರೆಯಲಾಗಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖವಾಗಿದೆ.

ಈ ವೈರಲ್‌ ವೀಡಿಯೊ ಕುರಿತು ಮತ್ತಷ್ಟು ಹುಡುಕಿದಾಗ, ಯಸಿರೆಟಾ ಅಣೆಕಟ್ಟನ್ನು ನಿರ್ವಹಿಸುವ ಕಂಪನಿಯಾದ ಎಂಟಿಡಾಡ್ ಬೈನಾಶಿನಲ್ ಯಾಸಿರೆಟಾದ ಅಧಿಕೃತ ಫೇಸ್‌ಬುಕ್ ಪುಟದಲ್ಲಿ 2019ರ ಮೇ 11ರಂದು  ಮತ್ತೊಂದು ಫೇಸ್‌ಬುಕ್ ಪೋಸ್ಟ್‌ರ್‌ ದೊರೆತಿದೆ. ಆ ಸಮಯದಲ್ಲಿ ರೆಕಾರ್ಡ್ ಮಾಡಲಾದ ಅಣೆಕಟ್ಟಿನ ಹೊಸ ವೀಡಿಯೊವನ್ನು ಸಹ ಸೇರಿಸಿ, ಗೇಟ್‌ಗಳನ್ನು ಮುಚ್ಚಲಾಗಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖವಾಗಿದೆ. 

ಒಟ್ಟಾರೆಯಾಗಿ ಹೇಳುವುದಾದರೆ, ನೇಪಾಳದ ಕೋಸಿ ಆಣೆಕಟ್ಟಿನ ಎಲ್ಲಾ 56 ಬ್ಯಾರೇಜ್‌ಗಳನ್ನು  ತೆರೆಯಲಾಗಿದೆ ಎಂಬ ವೀಡಿಯೊ ಸುಳ್ಳು ಮಾಹಿತಿಗಳಿಂದ ಕೂಡಿದೆ. ಹಾಗಾಗಿ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನು ಓದಿ :

Fact Check : ಹಿಜ್ಬುಲ್ಲಾ ಮುಖ್ಯಸ್ಥನನ್ನು ಕೊಂದ ನಂತರ ಇಸ್ರೇಲ್‌ ಸೈನಿಕರು ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *