Fact Check : ಹಿಜ್ಬುಲ್ಲಾ ಮುಖ್ಯಸ್ಥನನ್ನು ಕೊಂದ ನಂತರ ಇಸ್ರೇಲ್‌ ಸೈನಿಕರು ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು

ಇಸ್ರೇಲ್‌ನ ಧ್ವಜವನ್ನು ಧರಿಸಿರುವ ವ್ಯಕ್ತಿಯೊಬ್ಬನು ಬುಲ್ಡೋಜರ್ ಮೇಲೆ ಕುಳಿತು ಮೈಕ್ರೊಫೋನ್ ಹಿಡಿದಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊದಲ್ಲಿ  ಸೇನಾ ಸಮವಸ್ತ್ರವನ್ನು ಧರಿಸಿರುವ ಅನೇಕ ಜನರು ಬುಲ್ಡೋಜರ್‌ನ ಸುತ್ತಲೂ ಸಂತೋಷದಿಂದ ನೃತ್ಯವನ್ನು ಮಾಡಿದ್ದಾರೆ. ಸೆಪ್ಟೆಂಬರ್ 27 ರಂದು ಹಿಜ್ಬುಲ್ಲಾ ಮುಖ್ಯಸ್ಥ ನಸ್ರುಲ್ಲಾನನ್ನು ಕೊಂದ ನಂತರ ಇಸ್ರೇಲ್ ಸೇನೆಯ ನೃತ್ಯವನ್ನು ಮಾಡಿದ್ದಾರೆ ಎಂದು ವೀಡಿಯೊವನ್ನು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.

ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರಿಗೆ 72 ಕನ್ಯೆಯರನ್ನು ಕಳುಹಿಸಿದ ನಂತರ ಇಸ್ರೇಲ್ ಸಂತೋಷದಿಂದ ನೃತ್ಯ ಮಾಡುತ್ತಿದೆ ಎಂದು ಪೋಸ್ಟರ್‌ನ ಶೀರ್ಷಿಕೆಯಲ್ಲಿ ಬರೆದು ಕೆಲವು ಫೇಸ್‌ಬುಕ್ ಬಳಕೆದಾರರು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್:

ಈ ವೈರಲ್‌ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2023ರ ನವೆಂಬರ್ 10ರಂದುX ಪೋಸ್ಟ್‌ನಲ್ಲಿ ಅದೇ ವೀಡಿಯೊ ಲಭಿಸಿದೆ. ಈ ವೀಡಿಯೊ ಹಿಜ್ಬುಲ್ಲಾ ಮುಖ್ಯಸ್ಥರ ಸಾವಿಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಹೀಬ್ರೂ ವಿವರಣೆಯ ಪ್ರಕಾರ, ಅವಿಹು ಪಿನಾಸೊವ್ ಎಂಬ ವ್ಯಕ್ತಿ ಇಸ್ರೇಲ್‌ನ ಪಾಪ್ ತಾರೆ. ಅವರ ಹೆಸರನ್ನು ಇಸ್ರೇಲ್‌ ಮಿಲಿಟರಿಯೊಂದಿಗೆ ಕೂಡಿಸಿಕೊಂಡು ಮತ್ತಷ್ಟು ಹುಡುಕಿದಾಗ, ಈವೆಂಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡಿರುವ ದಿ ಯಹೂದಿ ಕ್ರಾನಿಕಲ್‌ನ ವರದಿ ದೊರೆತಿದೆ.

ವರದಿಯ ಪ್ರಕಾರ, ಸೈನ್ಯದ ಸ್ಥೈರ್ಯವನ್ನು ಹೆಚ್ಚಿಸಲು ಉತ್ತರದ ಇಸ್ರೇಲ್‌ನಲ್ಲಿ ನಿಯೋಜಿಸಿದ ಘಟಕಕ್ಕೆ ಅವಿಹು ಪಿನಾಸೊವ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಸೇನಾ ನಿಯಮಾವಳಿಗಳನ್ನು ಉಲ್ಲಂಘಿಸಿ ಸೈನಿಕರು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದ್ದರಿಂದ ಈ ಘಟನೆ ವಿವಾದಕ್ಕೆ ಕಾರಣವಾಗಿತ್ತು.

ವೈರಲ್ ವೀಡಿಯೊ ಹಲವಾರು ಸೈನಿಕರ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸಲಾಗಿತ್ತು, ಅವರಲ್ಲಿ ಕೆಲವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ದಿ ಟೆಲಿಗ್ರಾಫ್‌ನ YouTube ಚಾನಲ್‌ನಲ್ಲಿ ವೈರಲ್ ಕ್ಲಿಪ್ ಅನ್ನು ಒಳಗೊಂಡಿರುವ ವೀಡಿಯೊ ವರದಿಯು ದೊರೆತಿದೆ. 2023ರ ನವೆಂಬರ್ 17ರಂದು ಅಪ್‌ಲೋಡ್ ಮಾಡಲಾದ ವರದಿಯು ಪಿನಾಸೊವ್ ಅವರ ಭೇಟಿಯ ಸಮಯದಲ್ಲಿ ಅನುಚಿತ ವರ್ತನೆಗಾಗಿ ಹಲವಾರು ಸೇನಾ ಮೀಸಲುದಾರರನ್ನು ಅಮಾನತುಗೊಳಿಸಲಾಗಿದೆ ಎಂದು ದೃಢಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೇನಾ ನಿಯಮಾವಳಿಗಳನ್ನು ಉಲ್ಲಂಘಿಸಿ ಸೈನಿಕರು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದ ವೀಡಿಯೊವನ್ನು, ಹಿಜ್ಬುಲ್ಲಾ ಮುಖ್ಯಸ್ಥನನ್ನು ಕೊಂದ ನಂತರ ಇಸ್ರೇಲ್‌ ಸೈನಿಕರು ಸಂಭ್ರಮಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ವೀಡಿಯೊಗಳ ಸತ್ಯಾಂಶಗಳನ್ನು ತಿಳಿದುಕೊಳ್ಳಿ.


ಇದನ್ನು ಓದಿ :

Fact Check : ಇತ್ತೀಚೆಗೆ ಟೆಲ್‌ಅವಿವ್‌ನ ಬಸ್‌ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು 2022ರ ವೀಡಿಯೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *