Fact Check: ನ್ಯೂಯಾರ್ಕ್‌ನ ಹಳೆಯ ವೀಡಿಯೊವನ್ನು ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯಿಂದ ಅಡಗಿರುವ ವ್ಯಕ್ತಿಯ ದೃಶ್ಯಗಳಾಗಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಇಸ್ರೇಲ್‌

ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳಿಂದ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಕ್ಷಿಪಣಿಗಳಿಂದ ತಪ್ಪಿಸಿಕೊಳ್ಳಲು ಇಸ್ರೇಲ್‌ನ ಟೆಲ್ ಅವೀವ್‌ನ ಸುರಂಗದಲ್ಲಿ ಅಡಗಿರುವ ವ್ಯಕ್ತಿಯ ವೀಡಿಯೊ (ಇಲ್ಲಿಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು “ಇಂದು ಟೆಲ್ ಅವೀವ್‌ನಿಂದ ಹೊರಬಂದ ಹೃದಯವಿದ್ರಾವಕ ಚಿತ್ರಗಳು ಯುವಕನೊಬ್ಬ ಇರಾನಿನ ಬಾಂಬ್‌ ದಾಳಿಯಿಂದ ಮರೆಯಾಗಬೇಕಾಯಿತು.” ಎಂಬ ಶಿರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್:

ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ವೈರಲ್ ವೀಡಿಯೋದ ಕೆಲವು ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಜನವರಿ 2024 ರಿಂದ ವೈರಲ್ ವೀಡಿಯೊ ಸುದ್ದಿ ವರದಿ (ಇಲ್ಲಿಇಲ್ಲಿ ಮತ್ತು ಇಲ್ಲಿ) ನಮಗೆ ಲಭ್ಯವಾಗಿದೆ. ವೈರಲ್ ವೀಡಿಯೊದಲ್ಲಿ ಕಂಡುಬರುವ ನಿಜವಾದ ಘಟನೆಯು ಇಸ್ರೇಲ್ ಮೇಲೆ ಇರಾನ್ ಇತ್ತೀಚೆಗೆ ನಡೆಸಿದ ಕ್ಷಿಪಣಿ ದಾಳಿಗೆ ಮುಂಚಿತವಾಗಿದೆ ನಡೆದಿದೆ. ವರದಿಗಳ ಪ್ರಕಾರ, ಈ ಘಟನೆ ನ್ಯೂಯಾರ್ಕ್‌ನಲ್ಲಿ ಸಂಭವಿಸಿದೆ ಮತ್ತು ಇಸ್ರೇಲ್ ಅಥವಾ ಇತ್ತೀಚಿನ ದಾಳಿಗಳೊಂದಿಗೆ ಯಾವುದೇ ಸಂಬಂಧವಿಲ್ಲ.

ಜನವರಿ 10, 2024 ರಂದು ದಿ ಟೆಲಿಗ್ರಾಫ್ ಪ್ರಕಟಿಸಿದ ವರದಿಯು ವೈರಲ್ ವೀಡಿಯೊದಂತೆಯೇ ಅದೇ ದೃಶ್ಯಗಳನ್ನು ಒಳಗೊಂಡಿದೆ ಆದರೆ ವಿರುದ್ಧವಾಗಿದೆ. ವೈರಲ್ ವೀಡಿಯೊದಲ್ಲಿ ಕಂಡುಬರುವಂತೆ ವ್ಯಕ್ತಿಯೊಬ್ಬ ಒಳಗೆ ಹೋಗುವ ಬದಲು ಸುರಂಗದಿಂದ ಹೊರಗೆ ತೆವಳುತ್ತಿರುವುದನ್ನು ಇದು ತೋರಿಸುತ್ತದೆ.

ಈ ಘಟನೆಯ ಬಗ್ಗೆ ಸುದ್ದಿ ವರದಿಗಳ ಪ್ರಕಾರ (ಇಲ್ಲಿ ಮತ್ತು ಇಲ್ಲಿ), ನ್ಯೂಯಾರ್ಕ್ ಪೊಲೀಸ್ ಇಲಾಖೆ ನ್ಯೂಯಾರ್ಕ್ನ ಬ್ರೂಕ್ಲಿನ್‌ನ ಕ್ರೌನ್ ಹೈಟ್ಸ್‌ನಲ್ಲಿರುವ ಸಿನಗಾಗ್ ಚಬಾದ್-ಲುಬಾವಿಚ್‌ನ ವಿಶ್ವ ಪ್ರಧಾನ ಕಚೇರಿಯ ಸ್ಥಳದ ಕೆಳಗೆ 60 ಅಡಿ ರಹಸ್ಯ ಸುರಂಗವನ್ನು ಪತ್ತೆ ಮಾಡಿದೆ. ಸುರಂಗವನ್ನು ಮುಚ್ಚಲು ಪೊಲೀಸರು ಅಲ್ಲಿಗೆ ಹೋದಾಗ ಇದು ಪೊಲೀಸರು ಮತ್ತು ಸುರಂಗದ ಬೆಂಬಲಿಗರ ನಡುವೆ ಘರ್ಷಣೆಗೆ ಕಾರಣವಾಯಿತು.

ವರದಿಗಳ ಪ್ರಕಾರ, ‘ಚಬಾದ್ ಲುಬಾವಿಚ್ ಮಾಧ್ಯಮ ನಿರ್ದೇಶಕ ಮೋಟ್ಟಿ ಸೆಲಿಗ್ಸನ್ ಮಂಗಳವಾರ ಟ್ವಿಟರ್‌ನಲ್ಲಿ ಹೇಳಿಕೆಯೊಂದನ್ನು ನೀಡಿ, ಸಿನಗಾಗ್ಗೆ ಹಾನಿಯು “ಉಗ್ರಗಾಮಿ ವಿದ್ಯಾರ್ಥಿಗಳಿಂದ” ಸಂಭವಿಸಿದೆ ಎಂದು ಹೇಳಿದ್ದಾರೆ. ಈ ಇಡೀ ಘಟನೆಯು ಅಂತಿಮವಾಗಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ 10 ಜನರನ್ನು ಬಂಧಿಸಲು ಮತ್ತು ಸಿನಗಾಗ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ಕಾರಣವಾಯಿತು.

ಒಟ್ಟಾರೆಯಾಗಿ ಹೇಳುವುದಾದರೆ, ಇರಾನಿನ ಕ್ಷಿಪಣಿ ದಾಳಿಯಿಂದ ತಪ್ಪಿಸಿಕೊಳ್ಳಲು ಇಸ್ರೇಲ್‌ನ ಟೆಲ್ ಅವೀವ್‌ನ ಸುರಂಗದಲ್ಲಿ ಅಡಗಿಕೊಳ್ಳಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ದೃಶ್ಯಗಳಾಗಿ ನ್ಯೂಯಾರ್ಕ್‌ನ ಹಳೆಯ ಸಂಬಂಧವಿಲ್ಲದ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: ಮೊಬೈಲ್ ನೀಡಲಿಲ್ಲ ಎಂದು ಬಾಲಕನೊಬ್ಬ ಬ್ಯಾಟಿನಿಂದ ತನ್ನ ತಾಯಿಗೆ ಹೊಡೆದಿರುವ ವೀಡಿಯೋ ಜಾಗೃತಿಗಾಗಿ ಮಾಡಲಾಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *