Fact Check | ಮೆಹಬೂಬಾ ಮುಫ್ತಿ ತನ್ನ ತಂದೆಯ ಕಿರಿಯ ಸಹೋದರನನ್ನು ವಿವಾಹವಾದರು ಎಂಬುದು ಸುಳ್ಳು

ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಜೆಕೆಪಿಡಿಪಿ) ನಾಯಕಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ತಮ್ಮ ತಂದೆಯ ಕಿರಿಯ ಸಹೋದರನನ್ನು  ವಿವಾಹವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಹಲವರು “ಇಸ್ಲಾಂ ಮತದಲ್ಲಿ ಈ ಪದ್ಧತಿ ಸರ್ವೇ ಸಾಮಾನ್ಯ. ಅಲ್ಲಿ ರಹಸ್ಯವಾಗಿ ಸಹೋದರ, ತಂದೆ ಹೀಗೆ ಸಂಬಂಧಗಳಿಗೆ ಬೆಲೆಯೇ ಇಲ್ಲದಂತೆ ಮದುವೆಯಾಗುತ್ತದೆ” ಎಂದು ಹಂಚಿಕೊಳ್ಳುತ್ತಿದ್ದಾರೆ.

ವೈರಲ್‌ ಪೋಸ್ಟ್‌ ನೋಡಿದ ಹಲವು ಮಂದಿ ಇದು ನಿಜವೆಂದು ಭಾವಿಸಿದ್ದಾರೆ ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅಪಹಾಸ್ಯ ಮಾಡಿ ಫೋಟೋಗಳನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಗೊಂದಲವನ್ನು ಮೂಡಿಸಿರುವುದರಿಂದ, ವಿವಿಧ ಆಯಾಮಗಳಲ್ಲಿ ಚರ್ಚೆಯನ್ನು ಕೂಡ ನಡೆಸಲಾಗುತ್ತಿದೆ. ಹೀಗೆ ಪರಿಶೀಲನೆ ನಡೆಸದೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ನೋಡೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದ್ದೇವೆ, ಈ ವೇಳೆ ನಮಗೆ ಮೆಹಬೂಬಾ ಮುಫ್ತಿ ಅವರ ವೈಯಕ್ತಿಕ ಜೀವನದ ಕುರಿತು ವಿವರಗಳನ್ನು ಒದಗಿಸುವ ‘ನ್ಯೂಸ್ 18 ಹಿಂದಿ‘ ಪ್ರಕಟಿಸಿದ ಲೇಖನ ನಮಗೆ ಕಂಡು ಬಂದಿದೆ. ಮೆಹಬೂಬಾ ಮುಫ್ತಿ ಜಾವೇದ್ ಇಕ್ಬಾಲ್ ಶಾ ಅವರನ್ನು 1984 ರಲ್ಲಿ ವಿವಾಹವಾದರು. ಜಾವೇದ್ ಇಕ್ಬಾಲ್ ಷಾ ಅವರ ತಂದೆಯ ಮೊದಲ ಸೋದರಸಂಬಂಧಿ. ನಂತರ, ಮೆಹಬೂಬಾ ಜಾವೇದ್ ಇಕ್ಬಾಲ್ ಶಾಗೆ ವಿಚ್ಛೇದನ ನೀಡಿದರು ಮತ್ತು ಪ್ರಸ್ತುತ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಎಂಬುದು ತಿಳಿದು ಬಂದಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಜಾವೇದ್ ಇಕ್ಬಾಲ್ ಷಾ ಅವರ ವೀಡಿಯೊವೊಂದು ಕಂಡು ಬಂದಿದೆ. ಅದರಲ್ಲಿ ಅವರು ಮೆಹಬೂಬಾ ಮುಫ್ತಿ ಅವರ ತಂದೆ ಮುಫ್ತಿ ಮುಹಮ್ಮದ್ ಸಯೀದ್ ಅವರೊಂದಿಗಿನ ಸಂಬಂಧವನ್ನು 2019 ರಲ್ಲಿ ‘ಇಂಡೋಯ್ ಅನಾಲಿಟಿಕ್ಸ್’ ಕಾನ್ಕ್ಲೇವ್‌ನಲ್ಲಿ ಮಾತನಾಡುವಾಗ ವಿವರಿಸಿದರು. ಇದರಲ್ಲಿ ಅವರು ತಾವು ಮೆಹಬೂಬಾ ಮುಫ್ತಿ ಸೋದರ ಮಾವ ಮತ್ತು ಮೆಹಬೂಬಾ ಮುಫ್ತಿ ತಮಗೆ ಮದುವೆಗೆ ಮೊದಲು ಸೊಸೆ ಎಂಬುದು ಸ್ಪಷ್ಟ ಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತನ್ನ ತಂದೆಯ ಸಹೋದರನನ್ನು ಮದುವೆಯಾಗಲಿಲ್ಲ. ಅವರು ತನ್ನ ತಂದೆಯ ಸೋದರ ಸಂಬಂಧಿ ಜಾವೇದ್ ಇಕ್ಬಾಲ್ ಷಾರನ್ನು ಮದುವೆಯಾಗಿದ್ದರು. ಸಂಬಂಧದಲ್ಲಿ, ಅವರು ತಮ್ಮ ವಿವಾಹದ ಮೊದಲು ಜಾವೇದ್ ಇಕ್ಬಾಲ್ ಶಾ ಅವರಿಗೆ ಸೋದರ ಸೊಸೆಯಾಗಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್‌ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ. ಈ ಪೋಸ್ಟ್‌ ಕಂಡು ಬಂದರೆ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ಮೊಬೈಲ್ ನೀಡಲಿಲ್ಲ ಎಂದು ಬಾಲಕನೊಬ್ಬ ಬ್ಯಾಟಿನಿಂದ ತನ್ನ ತಾಯಿಗೆ ಹೊಡೆದಿರುವ ವೀಡಿಯೋ ಜಾಗೃತಿಗಾಗಿ ಮಾಡಲಾಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *