Fact Check : ಜಮೀನಿನಲ್ಲಿರುವ ಸನ್ನಿ ಡಿಯೋಲ್,ಎಂಎಸ್ ಧೋನಿಯ ಫೋಟೊ ಎಡಿಟೆಡ್‌ ಆಗಿದೆ

ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಸೆಲ್ಫಿ ಚಿತ್ರದಲ್ಲಿ ಭಾರತೀಯ ಕ್ರಿಕೆಟ್‌ನ ಮಾಜಿ ನಾಯಕರಾದ ಎಂಎಸ್ ಧೋನಿ ಅವರು ಜಮೀನಿನಲ್ಲಿ ಸನ್ನಿ ಡಿಯೋಲ್‌ ಅವರ ಹಿಂದೆ ನಿಂತಿದ್ದಾರೆ. ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್:‌

ಈ ವೈರಲ್‌ ಪೋಸ್ಟರಿನ ಚಿತ್ರವನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, ಚೆನ್ನೈ ಸೂಪರ್ ಕಿಂಗ್ಸ್‌ ಎಂಬ ಅಧಿಕೃತ ಎಕ್ಸ್ ಖಾತೆ ಲಭಿಸಿದೆ. ಅದರಲ್ಲಿ ಹಂಚಿಕೊಳ್ಳಲಾದ ಪೋಸ್ಟರ್‌ ವೈರಲ್‌ ಚಿತ್ರವನ್ನು ಹೋಲುತ್ತದೆ. ಮೂಲ ಚಿತ್ರದಲ್ಲಿ, ಕ್ರಿಕೆಟಿಗ ರವೀಂದ್ರ ಜಡೇಜಾರವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ, ಅವರ ಹಿಂದೆ ಎಂಎಸ್‌ಧೋನಿ ಕಾಣಿಸುತ್ತಿದ್ದಾರೆ. ಆದ್ದರಿಂದ ಸೆಲ್ಫಿ ತೆಗೆದುಕೊಂಡವರು ಸನ್ನಿ ಡಿಯೋಲ್ ಅಲ್ಲ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.

ಈ ಕುರಿತು ಮತ್ತಷ್ಟು ಹುಡುಕಿದಾಗ, ರವೀಂದ್ರ ಜಡೇಜಾ ಎಂಬ ಅಧಿಕೃತ Instagram ಖಾತೆಯಲ್ಲಿ ಮೂಲ ಫೋಟೋವನ್ನು 2024ರ ಆಗಸ್ಟ್ 25ರಂದು ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಂಚಿಕೊಂಡಿರುವ ಚಿತ್ರವನ್ನು ಎಡಿಟ್ ಮಾಡಲಾಗಿದ್ದು, ಮೂಲ ಚಿತ್ರದಲ್ಲಿ ಜಡೇಜಾ ಮಾತ್ರ ತನ್ನ ಜಮೀನಿನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಚಿತ್ರದಲ್ಲಿ ಬೇರೆ ಯಾರೂ ಕಂಡುಬಂದಿಲ್ಲ.

ಚಿತ್ರವನ್ನು ಕ್ರಾಪ್ ಮಾಡಿ ಮತ್ತೊಮ್ಮೆ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2022ರ ಮಾರ್ಚ್‌ನಲ್ಲಿ ಎಮ್‌ಎಸ್‌ಧೋನಿಯ ಮೂಲ ಫೋಟೊವನ್ನು ಜಮೀನಿನಲ್ಲಿ ತೆಗೆಯಲಾಗಿದೆ ಎಂದು  ಇಂಡಿಯಾ ಟುಡೆ ವರದಿಯಲ್ಲಿ ಉಲ್ಲೇಖವಾಗಿದೆ.

ಈ ವೈರಲ್ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿ, ಫೋಟೋ ಎಡಿಟಿಂಗ್ ಸಾಫ್ಟ್‌ವೇರ್ ಬಳಸಿಕೊಂಡು ಹುಡುಕಿದಾಗ, ಈ ವೈರಲ್‌ ಫೋಟೊವನ್ನು, ವಿವಿಧ ಮೂಲಗಳಿಂದ ಕೂಡಿಸಿ ಎಡಿಟ್‌ ಮಾಡಲಾಗಿದೆ ಎಂದು ನಿಖರವಾಗಿ ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸನ್ನಿ ಡಿಯೋಲ್ ಮತ್ತು ಎಂಎಸ್ ಧೋನಿ ಒಳಗೊಂಡ ವೈರಲ್ ಚಿತ್ರವು ಎಡಿಟೆಡ್‌ ಚಿತ್ರವಾಗಿದೆ. ರವೀಂದ್ರ ಜಡೇಜಾ ಅವರ ಇನ್‌ಸ್ಟಾಗ್ರಾಮ್‌ನ ಮೂಲ ಚಿತ್ರದಲ್ಲಿರುವ ಎಂಎಸ್ ಧೋನಿಯ ಚಿತ್ರವನ್ನು ತಪ್ಪುದಾರಿಗೆಳೆಯುವಂತೆ ಪೋಸ್ಟ್‌ಗಳನ್ನು ತಯಾರಿಸಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ಚಿತ್ರಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ :

Fact Check : ಬಾಂಗ್ಲಾದೇಶದ ವೃದ್ಧ ಹುಡುಗಿಯೊಂದಿಗೆ ತಪ್ಪಾಗಿ ವರ್ತಿಸಿದ್ದಾನೆ ಎಂದು ನಾಟಕೀಯ ವೀಡಿಯೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *