Fact Check : ಲೆಬನಾನ್ ಪೇಜರ್ ಸ್ಫೋಟದ ನಂತರ ಹಸನ್ ನಸ್ರಲ್ಲಾ ಅತ್ತಿದ್ದಾರೆ ಎಂದು ಹಳೆಯ ವೀಡಿಯೊ ಹಂಚಿಕೆ

ಲೆಬನಾನ್‌ ಮುಖ್ಯಸ್ಥರಾದ ಹಸನ್ ನಸ್ರಲ್ಲಾ ಕಣ್ಣೀರು ಹಾಕಿದ್ದಾರೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  

“ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರಿಂದ ಅಮಾಯಕ ಇಸ್ರೇಲ್‌ ಹತ್ಯೆಯಾದಾಗ ಹಿಜ್ಬುಲ್ಲಾ ಭಯೋತ್ಪಾದಕ ಕಮಾಂಡರ್ ನಸ್ರಲ್ಲಾ ನಗುತ್ತಿದ್ದರು. ಇಂದು, ಪೇಜರ್ ಸ್ಫೋಟಗಳಿಂದ ತನ್ನ 100 ಕಮಾಂಡರ್‌ಗಳನ್ನು ಕಳೆದುಕೊಂಡ ನಂತರ ಹಸನ್ ನಸ್ರಲ್ಲಾ ಅಳುತ್ತಿದ್ದಾನೆ. ಅವರ ಪ್ರಾಣವೂ ಅಪಾಯದಲ್ಲಿದೆ ” ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ವೀಡಿಯೊದ “ಹಸನ್ ನಸ್ರಲ್ಲಾ” ಮತ್ತು “ಅಳುವುದು” ಎಂಬ ಹೆಸರುಗಳನ್ನು ಕೀವರ್ಡ್‌ಗಳನ್ನಾಗಿ ಬಳಸಿಕೊಂಡು ಹುಡುಕಿದಾಗ, 2022 ರ ಆಗಸ್ಟ್ 12ರಂದು ಅರೇಬಿಕ್‌ ಭಾಷೆಯ  نهجالحشد   ಯೂಟ್ಯೂಬ್‌ ವೀಡಿಯೊ ಲಭಿಸಿದೆ. ಈ ವೀಡಿಯೊ ವೈರಲ್‌ ವೀಡಿಯೋದ ತುಣುಕುಗಳನ್ನು ಒಳಗೊಂಡಿದೆ. “Mr. ಹಸನ್ ನಸ್ರಲ್ಲಾ ಹುಸೇನ್ # ಹಿಜರಿ ಶಕ  1444ರ ಮುಹರ್ರಂ ಆಚರಣೆಯಲ್ಲಿ ಅಳುತ್ತಿದ್ದಾರೆ ಎಂದು ಅರೇಬಿಕ್‌ ಭಾಷೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಲೆಬನಾನ್ ಪೇಜರ್ ಸ್ಫೋಟ ಹಳೆಯದಾಗಿದೆ ಎಂದು ಹಿಜ್ಬೊಲ್ಲಾ ಮುಖ್ಯಸ್ಥ ಅಳುತ್ತಿರುವುದನ್ನು ತೋರಿಸಲು ವೈರಲ್ ವಿಡಿಯೋ

2022 ರ ಆಗಸ್ಟ್ 12 ರಂದು @Muammel  ನಸ್ರಲ್ಲಾ ಅವರನ್ನು ಒಳಗೊಂಡ YouTube ವೀಡಿಯೊ ದೊರೆತಿದೆ. ಸುಮಾರು 3:09 ನಿಮಿಷಗಳ ವೀಡಿಯೊದಲ್ಲಿ, ಅದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಹಿಜ್ಬುಲ್ಲಾ ಮುಖ್ಯಸ್ಥರು ಕಣ್ಣೀರು ಹಾಕುತ್ತಿರುವ ದೃಶ್ಯವು ಕಂಡುಬಂದಿದೆ.

2022ರ ಅಗಸ್ಟ್‌ನಿಂದ ಅನೇಕ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಲೆಬನಾನ್‌ನಲ್ಲಿ ಇತ್ತೀಚಿನ ಪೇಜರ್ ಸ್ಫೋಟಗಳ ನಂತರ ಹಿಜ್ಬುಲ್ಲಾ ಮುಖ್ಯಸ್ಥರು ಅಳುತ್ತಿದ್ದಾರೆ ಎಂದು ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಅಶುರಾ ಕುರಿತು ಭಾಷಣ ಮಾಡುವಾಗ ನಸ್ರಲ್ಲಾ ಕಣ್ಣೀರು ಹಾಕಿದ್ದಾರೆ ಎಂಬ ವೀಡಿಯೊವನ್ನು 2022ರ ಆಗಸ್ಟ್ 11 ರಂದು ಪ್ರಕಟವಾದ ಲೆಬನಾನ್‌ನ ವರದಿಯಲ್ಲಿ ಉಲ್ಲೇಖವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಲೆಬನಾನ್‌ನಲ್ಲಿ ಪೇಜರ್ ಸ್ಫೋಟದ ನಂತರ ಹಿಜ್ಬುಲ್ಲಾ ಮುಖ್ಯಸ್ಥರು ಅಳುತ್ತಿದ್ದಾರೆ ಎಂದು ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ:


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *