Fact Check : ಇತ್ತೀಚೆಗೆ ಇಸ್ರೇಲ್‌ ಲೆಬನಾನ್ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದೆ ಎಂಬುದು ಸುಳ್ಳು

ಇಸ್ರೇಲ್‌ನ ಫೈಟರ್ ಜೆಟ್‌ಗಳು ಲೆಬನಾನ್‌ನ ಹಿಜ್ಬುಲ್ಲಾದ ಬೃಹತ್ ರಸ್ತೆ ಬದಿಯಲ್ಲಿ ಅಪಾದಿತವಾಗಿ ಸಂವಹನ ಸಾಧನಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಲಾಗಿದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಬ್ರೇಕಿಂಗ್: ಇಸ್ರೇಲ್‌ನ ಫೈಟರ್ ಜೆಟ್‌ಗಳು ಲೆಬನಾನ್‌ನಲ್ಲಿ ಹಿಜ್ಬೊಲ್ಲಾದ ಮೇಲೆ ವೈಮಾನಿಕ ದಾಳಿಯನ್ನುನಡೆಸಿದಾಗ ಕ್ಷಿಪಣಿಗಳು ಮತ್ತು ರೇಡಿಯೋಗಳು ಸ್ಫೋಟಗೊಂಡಿವೆ. ಲೆಬನಾನ್‌ನ ರಾಜಧಾನಿ ಬೈರುತ್‌ನ ಹಲವಾರು ಪ್ರದೇಶಗಳಲ್ಲಿ ಸ್ಥಾಪಿಸಲಾದ ಸೌರ ಶಕ್ತಿ ಸ್ಥಳಗಳು ಸ್ಫೋಟಗೊಂಡಿವೆ ಎಂಬ ವೀಡಿಯೋವನ್ನು ಬಳಕೆದಾರರು ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್‌ :

ವೈರಲ್ ವೀಡಿಯೊದ ಚಿತ್ರಗಳನ್ನು ರಿವರ್ಸ್ ಇಮೇಜ್‌ನ್ನು ಬಳಸಿಕೊಂಡು ಹುಡುಕಿದಾಗ,  ಫೆಬ್ರವರಿ 19 ರಂದು ಪ್ರಕಟವಾದ ಸುದ್ದಿ ವರದಿಯೊಂದು ಲಭಿಸಿದೆ.  ವರದಿಯಲ್ಲಿ ಲೆಬನಾನ್‌ನ ಕರಾವಳಿ ನಗರವಾದ ಸಿಡಾನ್‌ನ ಮೇಲೆ ಇಸ್ರೇಲ್‌ನ ವಾಯುಪಡೆಯು ಹಿಜ್ಬೊಲ್ಲಾ ಶಸ್ತ್ರಾಸ್ತ್ರಗಳ ಮೇಲೆ ಮುಷ್ಕರವನ್ನು ನಡೆಸಿದೆ ಎಂದು ಉಲ್ಲೇಖವಾಗಿದೆ. ಆದರೆ, ಇಸ್ರೇಲ್‌ ಲೆಬನಾನ್ ಮೇಲೆ ವೈಮಾನಿಕ ದಾಳಿಯನ್ನು ಮಾಡಿರುವ ಕುರಿತು ಯಾವುದೇ ವರದಿಗಳು ಲಭಿಸಿಲ್ಲ.

ಲೆಬನಾನ್ ಫ್ಯಾಕ್ಟ್ ಚೆಕ್ ಇಸ್ರೇಲ್

ಮತ್ತಷ್ಟು ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ,  ಫೆಬ್ರವರಿ 19 ರಂದು ಲೆಬನಾನಿನ ಟೆಲಿವಿಷನ್ ನ್ಯೂಸ್ ಚಾನೆಲ್, ಅಲ್ ಜದೀದ್ ಯೂಟ್ಯೂಬ್ ಚಾನೆಲ್‌ನ 20-ನಿಮಿಷಗಳ ವೀಡಿಯೊ ಕ್ಲಿಪ್‌ ಲಭಿಸಿದೆ. ಗಡಿಯ ಸುತ್ತಿನಲ್ಲಿ ವೈಮಾನಿಕ ದಾಳಿ ಮತ್ತು ಬಾಂಬ್ ದಾಳಿಯ ವೀಡಿಯೊಗಳನ್ನು ಜೋಡಿಸುವ ಮೂರು ನಿಮಿಷದ ವೈರಲ್ ಕ್ಲಿಪ್‌ನ್ನು ಅಳವಡಿಸಲಾಗಿದೆ..

ಯೂಟ್ಯೂಬ್ ವೀಡಿಯೊದ ಶೀರ್ಷಿಕೆ ಮತ್ತು ವಿವರಣೆಯು, ಈ ಆಪಾದಿತ ಇಸ್ರೇಲ್‌ನ ದಾಳಿಗಳು ಸಿಡಾನ್ ನಗರದ ಹೊರವಲಯದಲ್ಲಿ ಗಾಜಿಹ್ ಕಡೆಗೆ ನಡೆದಿವೆ ಎಂದು ಖಚಿತಪಡಿಸಿದೆ. ಮತ್ತೊಂದು ಅರೇಬಿಕ್ ಸುದ್ದಿ ವಾಹಿಯಾದ AL24news ತನ್ನ X ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ. ಇಸ್ರೇಲ್‌ನ ವಿಮಾನವು ಸಿಡಾನ್ ನಗರದ ಸಮೀಪವಿರುವ ಗಾಜಿಹ್ ಪಟ್ಟಣವನ್ನು ಗುರಿಯಾಗಿಸಿಕೊಂಡಿತ್ತು ಎಂದು ಖಾತೆಯಲ್ಲಿ ಉಲ್ಲೇಖವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಲೆಬನಾನ್‌ನ ಸಿಡಾನ್ ಸಿಟಿಯ ಮೇಲಾದ ಇಸ್ರೇಲ್‌ನ ವೈಮಾನಿಕ ದಾಳಿಯ ಹಳೆಯ ವೀಡಿಯೊವನ್ನು ಇತ್ತೀಚೆಗೆ ಲೆಬನಾನ್‌ನ ಸಂವಹನ ಸಾಧನಗಳು ಸ್ಫೋಟಗೊಂಡಿವೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ:

ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *