Fact Check: ವಿಮಾನ ನಿಲ್ದಾಣದಲ್ಲಿ ಮನಮೋಹನ್‌ ಸಿಂಗ್‌ ಪುತ್ರಿ ಅಮೃತ್ ಸಿಂಗ್‌ರನ್ನು ರಾಹುಲ್‌ ಗಾಂಧಿ ಭೇಟಿಯಾಗಿಲ್ಲ

ರಾಹುಲ್ ಗಾಂಧಿಯವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪುತ್ರಿ ಅಮೃತ್ ಸಿಂಗ್ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಂಡುಬಂದಿದ್ದಾರೆ ಎಂಬ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಫೋಟೋದಲ್ಲಿ, ವಿಮಾನ ನಿಲ್ದಾಣದ ಹೊರಗೆ ಕಂಡುಬರುವ  ಹಲವು ವ್ಯಕ್ತಿಗಳು ತಮ್ಮ ಬ್ಯಾಗ್‌ಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಬೆನ್ನಿನ ಮೇಲೆ ಬ್ಯಾಗನ್ನು ಹಾಕಿಕೊಂಡಿರುವ ವ್ಯಕ್ತಿಯೊಬ್ಬ ಕ್ಯಾಮೆರಾಗೆ ಹಿಂದಿನಿಂದ ಕಾಣಿಸಿಕೊಂಡಿದ್ದಾನೆ. ಮತ್ತು ಮಹಿಳೆ ತನ್ನ ಬ್ಯಾಗ್‌ಗಳನ್ನು ಹಿಡಿದುಕೊಂಡು ಪಕ್ಕಕ್ಕೆ ನೋಡುತ್ತಿದ್ದಾಳೆ, ರಾಹುಲ್ ಗಾಂಧಿ ಆ ಮಹಿಳೆಯ ಮುಂದೆ ನಿಂತಿದ್ದಾರೆ.

ಪೋಸ್ಟ್‌ರ್‌ನಲ್ಲಿ ಮನಮೋಹನ್ ಸಿಂಗ್ ಅವರ ಪುತ್ರಿ ಅಮೃತ್ ಸಿಂಗ್ ಅವರು ಜಾರ್ಜ್‌ ಸೆರೋಸ್‌ಗೆ ಬೆಂಬಲಿತವಾಗಿರುವ ಓಪನ್ ಸೊಸೈಟಿ ಜಸ್ಟೀಸ್ ಇನಿಶಿಯೇಟಿವ್‌ನಲ್ಲಿ ಕೆಲಸವನ್ನು ಮಾಡುತ್ತಿದ್ದಾಗ ರಾಹುಲ್ ಗಾಂಧಿ ಅವರೊಂದಿಗೆ ಇರುವ ಪೋಟೊ ಎಂದು  X ನ ಬಳಕೆದಾರ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಎಂಬಾತ ಹಂಚಿಕೊಂಡಿದ್ದಾನೆ.

ಫ್ಯಾಕ್ಟ್‌ ಚೆಕ್‌ :

ಈ ಪ್ರತಿಪಾದನೆಯನ್ನು ಕಾಂಗ್ರೆಸ್‌ ಪಕ್ಷದ ಸೋಷಿಯಲ್ ಮೀಡಿಯಾ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರಿನಾಟೇಯವರು ತಳ್ಳಿಹಾಕಿದ್ದಾರೆ. ಫೋಟೋದಲ್ಲಿರುವ ಮಹಿಳೆ ಅಮೂಲ್ಯ ಗೋಪಾಲಕೃಷ್ಣನ್ ಎಂದು ಹೇಳುವ ಮೂಲಕ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ರಾಹುಲ್ ಗಾಂಧಿಯವರು ಬಾಲ್ಯದ ಗೆಳೆಯ ಅಮಿತಾಬ್ ದುಬೆಯವರ ಪತ್ನಿ ಅಮೂಲ್ಯ ಗೋಪಾಲಕೃಷ್ಣನ್ ಆಗಿದ್ದಾರೆ. ಅಮಿತಾಬ್ ದುಬೆ ಕುಟುಂಬ ಮತ್ತು ರಾಹುಲ್‌ ಗಾಂಧಿ ಅವರು ವಿಮಾನ ನಿಲ್ದಾಣದಲ್ಲಿ ಭೇಟಿಯಾದಾಗ ತೆಗೆದ ಪೋಟೊ ಇದು ಎಂದು ಅವರು ಹೇಳಿದ್ದಾರೆ.

ಗಾಂಧಿ

ಈ ವೈರಲ್‌ ಪೋಟೊದಲ್ಲಿನ ಮಹಿಳೆ ಅಮೂಲ್ಯ ಗೋಪಾಲಕೃಷ್ಣನ್. ಅವರ ಹೆಸರನ್ನು ಕೀವರ್ಡ್‌ ಬಳಸಿಕೊಂಡು ಹುಡುಕಿದಾಗ ಅವರು ಬರೆದ ಹಲವಾರು ಸುದ್ದಿಗಳು ದಿ ಇಂಡಿಯನ್ ಎಕ್ಸ್‌ಪ್ರೆಸ್, ಟೈಮ್ಸ್ ಆಫ್ ಇಂಡಿಯಾ ಮತ್ತು ದಿ ಎಕನಾಮಿಕ್ ಟೈಮ್ಸ್‌ನಲ್ಲಿ ವರದಿಯಾಗಿರುವುದು ತಿಳಿದುಬಂದಿದೆ. ಇದು 2023ರಲ್ಲಿ ತೆಗೆದ ಪೋಟೊವೆಂದು ಕನ್ನಡ ಫ್ಯಾಕ್ಟ್‌ ಚೆಕ್‌ ತಂಡವು ಕಂಡುಕೊಂಡಿದೆ. ಅಮೂಲ್ಯ ಗೋಪಾಲಕೃಷ್ಣನ್‌ರವರು  ವೃತ್ತಿಯಲ್ಲಿ ಪತ್ರಕರ್ತರಾಗಿದ್ದಾರೆ. ಅವರು 2011 ರಲ್ಲಿ ಅಮಿತಾಬ್‌ ದುಬೆಯವರನ್ನು ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. 2011 ರ ಜನವರಿಯಲ್ಲಿ ರಾಹುಲ್ ಗಾಂಧಿ ಅವರ ಮದುವೆಗೆ ಬಂದಾಗ TOI  ವರದಿಯನ್ನು ಪ್ರಕಟಿಸಿದೆ. ಅಮಿತಾಬ್ ದುಬೆ ಅವರು ರಾಹುಲ್ ಗಾಂಧಿಯವರ ಬಾಲ್ಯದ ಸ್ನೇಹಿತ ಮತ್ತು ಕಾಂಗ್ರೇಸ್‌ ಪಕ್ಷದ ಸಂವಹನ ವಿಭಾಗದ ಮತ್ತು 2024 ರ ಕಾಂಗ್ರೇಸ್‌ ಪಕ್ಷದ ಪ್ರಣಾಳಿಕೆ ಸಮಿತಿಯ ಸದಸ್ಯರಾಗಿದ್ದರು. ದುಬೆ ಅವರು ಸುದೀರ್ಘ ಕಾಲದ ಗಾಂಧಿ ಕುಟುಂಬದ ಸಹವರ್ತಿ ಮತ್ತು ರಾಜೀವ್ ಗಾಂಧಿ ಫೌಂಡೇಶನ್‌ ಟ್ರಸ್ಟ್‌ ಮಂಡಳಿಯ ಸದಸ್ಯರಾದ ಸುಮನ್ ದುಬೆ ಅವರ ಪುತ್ರರಾಗಿದ್ದಾರೆ.

ಒಟ್ಟಾರೆ ಹೇಳುವುದಾದರೆ ರಾಹುಲ್ ಗಾಂಧಿ ವಿಮಾನ ನಿಲ್ದಾನದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪುತ್ರಿ ಅಮೃತ್ ಸಿಂಗ್ ಅವರನ್ನು ಭೇಟಿಯಾಗಿಲ್ಲ. ಅವರು ತಮ್ಮ ಗೆಳೆಯ ಅಮಿತಾಬ್ ದುಬೆ ಮತ್ತು ಅವರ ಪತ್ನಿ ಅಮೂಲ್ಯ ಗೋಪಾಲಕೃಷ್ಣನ್‌ರವರನ್ನು ಭೇಟಿಯಾಗಿದ್ದಾರೆ. ಆದರೆ ರಾಹುಲ್ ಗಾಂಧಿ ವಿರುದ್ಧ ತಪ್ಪು ಅಭಿಪ್ರಾಯ ಸೃಷ್ಟಿಸಲು ಸುಳ್ಳು ಹರಡಲಾಗಿದೆ.


ಇದನ್ನು ಓದಿದ್ದೀರಾ?


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

 

Leave a Reply

Your email address will not be published. Required fields are marked *