“ಇದು ಅಮೆರಿಕದ ಪ್ರಖ್ಯಾತ ಕರ್ಟೂನ್ ಶೋ ದಿ ಸಿಂಪ್ಸನ್ಸ್. ಈ ಕಾರ್ಟೂನ್ ಭವಿಷ್ಯದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ಮೊದಲೇ ಊಹಿಸುತ್ತದೆ. ಹೀಗಾಗಿ ಸಾಕಷ್ಟು ಖ್ಯಾತಿಗಳಿಸಿರುವ ಈ ಕಾರ್ಟೂನ್ ಶೋ, ಈ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ಕುರಿತು ಈ ಹಿಂದೆಯೇ ಊಹಿಸಿತ್ತು.” ಎಂದು ಕಾರ್ಟೂನ್ ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಾಗುತ್ತಿದೆ. ಇದರಲ್ಲಿ ಟ್ರಂಪ್ ರೀತಿಯ ಪಾತ್ರವೊಂದು ಶವದ ಪೆಟ್ಟಿಗೆಯಲ್ಲಿರುವುದನ್ನು ಕೂಡ ಕಾಣಬಹುದಾಗಿದೆ.
The Simpsons were wrong about Donald Trump.
People are so misguided. Only Allah knows the future. pic.twitter.com/X1lO0k15e0
— Halal Nation ☪︎ (@HalalNation_) July 14, 2024
ವೈರಲ್ ಕಾರ್ಟೂನ್ ಚಿತ್ರ ಕೂಡ ಈ ಹಿಂದೆ ಕೆಲವೊಂದು ಪ್ರಮುಖ ಘಟನೆಗಳ ಕುರಿತು ಈ ಹಿಂದೆ ನಿಖರವಾಗಿ ಊಹಿಸಿತ್ತು. ಇದೇ ಕಾರಣಕ್ಕೆ ಹಲವರು ದಿ ಸಿಂಪ್ಸನ್ಸ್ ನಿಜಕ್ಕೂ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನದ ಕುರಿತು ಈ ಹಿಂದೆಯೇ ಊಹಿಸಿದೆ ಎಂದು ಸಾಕಷ್ಟು ಮಂದಿ ನಂಬಿ ಶೇರ್ ಮಾಡುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಡೊನಾಲ್ಡ್ ಟ್ರಂಪ್ ಅವರು ಶವದ ಪೆಟ್ಟಿಗೆಯಲ್ಲಿ ಮಲಗಿರುವ ರೀತಿ ಸಿಂಪ್ಸನ್ಸ್ ಕಾರ್ಟೂನ್‌ನ ಚಿತ್ರವನ್ನು ಶೇರ್ ಮಾಡಲಾಗುತ್ತಿದ್ದು, ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಕಾರ್ಟೂನ್ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
This is the first time i’ve seen a Simpsons prediction fail😭 pic.twitter.com/UFN9jT7aTf
— kira 👾 (@kirawontmiss) July 13, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್‌ನ ಕುರಿತು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಟ್ರಂಪ್ ಶವದ ಕಾರ್ಟೂನ್ 2020ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಸಮಯದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಗಸ್ಟ್ 20 ರಂದು ಸಾವನ್ನಪ್ಪಲ್ಲಿದ್ದಾರೆ ಎಂದು ಸಿಂಪ್ಸನ್ಸ್ ಕಾರ್ಟೂನ್ ಊಹಿಸಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು.
ಇನ್ನು ಇದಕ್ಕೆ ಸಂಬಂಧ ಪಟ್ಟಂತೆ ಕೆಲವು ಮಾಧ್ಯಮಗಳು ಕೂಡ 2020ರಂದು ವರದಿಯನ್ನು ಮಾಡಿದ್ದು, ” ಟ್ರಂಪ್ ಸಾವನ್ನಪ್ಪಿರುವ ಅನಿಮೇಟೆಡ್ ಫೋಟೋ ಮೂಲತಃ ದಿ ಸಿಂಪ್ಸನ್ಸ್ ನಿರ್ಮಿಸಿರುವ ಕಾರ್ಟೂನ್ ಅಲ್ಲ. ಜೊತೆಗೆ ಸಿಂಪ್ಸನ್ಸ್‌ನ ಯಾವ ಸರಣಿಯಲ್ಲೂ ಕೂಡ ಈ ರೀತಿಯಾ ಫೋಟೋ ಇರುವುದು ಕಂಡು ಬಂದಿಲ್ಲ.” ಎಂದು ಮೊದಲೇ ವರದಿಯನ್ನು ಮಾಡಿದ್ದವು.
Did 'The Simpsons' predict Donald Trump's death on August 27, 2020?
Here's the truthhttps://t.co/uqLuGtepBw
— WION (@WIONews) August 27, 2020
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಹಲವು ಘಟನೆಗಳಿಗೆ ಸಂಬಂಧ ಪಟ್ಟಂತೆ ಸಿಂಪ್ಸನ್ಸ್ ಇದನ್ನು ಊಹಿಸಿದೆ ಎಂದು ಸುಳ್ಳು ಅನಿಮೆಟೆಡ್ ಚಿತ್ರಗಳು ಆಗಾಗೆ ವೈರಲ್ ಆಗಿರುವ ಕುರಿತು ಕೂಡ ಹಲವು ವರದಿಗಳು ಕಂಡು ಬಂದಿವೆ. ಆದರೆ ಅಧಿಕೃತವಾಗಿ ಸಿಂಪ್ಸನ್ಸ್‌ನ ಸರಣಿಗಳನ್ನು ನೋಡಿದವರು ಇದನ್ನು ಸುಳ್ಳು ಹೇಳಿಕೆಗಳು ಎಂದು ಬರೆದುಕೊಂಡಿದ್ದಾರೆ. ಆದರೂ ಕೂಡ ಇದೇ ರೀತಿಯಾದ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಒಟ್ಟಾರೆಯಾಗಿ ಹೇಳುವುದಾದರೆ ದಿ ಸಿಂಪ್ಸನ್ಸ್ ಕಾರ್ಟೂನ್ ಡೊನಾಲ್ಡ್ ಟ್ರಂಪ್ ಹತ್ಯೆಯನ್ನು ಈ ಹಿಂದೆಯೇ ಊಹಿಸಿತ್ತು ಎಂದು ಹಂಚಿಕೊಳ್ಳಲಾಗುತ್ತಿರುವ ಸುದ್ದಿ ಸಂಪೂರ್ಣವಾಗಿ ಸುಳ್ಳಾಗಿದೆ. ಸಿಂಪ್ಸನ್ಸ್ ಕಾರ್ಟೂನದ್ದು ಎಂದು ಹೇಳಲಾದ ಟ್ರಂಪ್ ಅವರು ಶವದ ಪೆಟ್ಟಿಗೆಯಲ್ಲಿ ಮಲಗಿರುವ ರೀತಿಯ ಚಿತ್ರ ಮೂಲ ಕಾರ್ಟೂನ್ ನಿರ್ಮಿಸಿದವರದ್ದಲ್ಲ ಮತ್ತು ಸುಳ್ಳು ಸುದ್ದಿಯನ್ನು ಹಬ್ಬಿಸಲೇ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ : Fact Check: ಇಬ್ಬರು ಬಾಲಕಿಯರು ಶಾಲೆಯ ಗೋಡೆ ಹಾರಿ ಗೆಳೆಯನೊಟ್ಟಿಗೆ ಹೋಗಿದ್ದಾರೆ ಎಂದು ಮನರಂಜನೆಗೆ ಮಾಡಿದ ವೀಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.