Fact Check | ಇವರು ಷಹಜಹಾನ್ ಅವರ ಪತ್ನಿ ಮುಮ್ತಾಜ್ ಅಲ್ಲ, ಭೂಪಾಲ್‌ನ ಮೂರನೇ ಷಹಜಹಾನ್ ಬೇಗಂ

“ಈ ಫೋಟೋ ಷಹಜಹಾನ್‌ನ ಪತ್ನಿ ಮುಮ್ತಾಜ್ ಮಹಲ್ ಅವರದ್ದು” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಸಲಿಗೆ ಈ ಫೋಟೋ ನೋಡಿದವರು ಇದು ನಿಜವಾಗಿಯೂ ಷಹಜಹಾನ್‌ ಪತ್ನಿ ಮುಮ್ತಾಜ್‌ಳದ್ದೇ ಎಂದು ನಂಬಿಕೊಂಡಿದ್ದಾರೆ. ಆದರೆ ಈ ಫೋಟೋವಿನ ಅಸಲಿಯತ್ತೇ ಬೇರೆಯದಿದೆ. Koi BKL hi honga Jo iske liye Taj Mahal banayenga 🤬 https://t.co/bQYsn3GaVK pic.twitter.com/xhUlcGOvc8 — प्रेsident (@Desi_urbann) February 23, 2024 ಫ್ಯಾಕ್ಟ್‌ಚೆಕ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಫೋಟೋವನ್ನು ಪರಿಶೀಲಿಸಲು…

Read More

Fact Check: ಬಿಜೆಪಿ ಕೌನ್ಸಿಲರ್‌ ಪೋಲಿಸರನ್ನು ತಳಿಸಿದ ವಿಡಿಯೋವನ್ನು ಕಾಂಗ್ರೆಸ್ ಶಾಸಕ ಎಂದು ಹಂಚಿಕೆ

ಇತ್ತೀಚೆಗೆ ಹಳೆಯ ವಿಡಿಯೋಗಳನ್ನು ಉದ್ದೇಶವೂರ್ವಕವಾಗಿ ತಪ್ಪಾಗಿ ಅರ್ಥೈಸಿ ಹಂಚಿಕೊಳ್ಳಲಾಗುತ್ತಿದೆ. ಲೋಕಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆ ಕೆಲವು ರಾಜಕೀಯ ಪಕ್ಷದ ಮುಖಂಡರು ತಮ್ಮ ವಿರುದ್ದ ಪಕ್ಷದವರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈಗ “ಕಾಂಗ್ರೆಸ್ ಶಾಸಕ ಅನಿಲ್ ಉಪಾಧ್ಯಾಯ ಅವರ ಈ ಕ್ರಮದ ಬಗ್ಗೆ ನೀವು ಏನು ಹೇಳುತ್ತೀರಿ? ಈ ವೀಡಿಯೊಗಳನ್ನು ಎಷ್ಟು ವೈರಲ್ ಮಾಡಿ ಎಂದರೆ ಇಡೀ ಭಾರತವು ಅವುಗಳನ್ನು ನೋಡಬಹುದು. ಕಾಂಗ್ರೆಸ್‌ ಗೂಂಡಾಗಳೇ, ಈ ಗೂಂಡಾ ಶಾಸಕನನ್ನು ಈಗ ಏನು ಮಾಡುತ್ತೀರಿ? ಎಂದು ಪ್ರತಿಪಾದಿಸಿ ವ್ಯಕ್ತಿಯೊಬ್ಬರು ಪೋಲಿಸ್…

Read More
ಪಶ್ಚಿಮ ಬಂಗಾಳ

Fact Check: ಪಶ್ಚಿಮ ಬಂಗಾಳದ ಹಿಂದೂ ದಂಪತಿಗಳ ವಿಡಿಯೋ ಎಂದು ಬಿಹಾರದ ವಿಡಿಯೋ ಹಂಚಿಕೆ

ಬಿಹಾರದಲ್ಲಿ ಬೈಕ್‌ನಲ್ಲಿ ಬಂದ ಮಹಿಳೆಯ ಮೇಲೆ ಪುರುಷರ ಗುಂಪು ಲೈಂಗಿಕ ದೌರ್ಜನ್ಯ ನಡೆಸಿದ ಆಘಾತಕಾರಿ ವೀಡಿಯೊ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಇದು ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ಎಂದು ಸುಳ್ಳು ಹೇಳಿಕೆಯೊಂದಿಗೆ, ಹಿಂದೂ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಮುಸ್ಲಿಮರು ಎಂದು ಹೇಳಲಾಗುತ್ತಿದೆ. “ಪಶ್ಚಿಮ ಬಂಗಾಳದ ಮುಸ್ಲಿಮರು ಹಿಂದೂ ದಂಪತಿಗಳು ಹೊಲ ಗದ್ದೆ ತೋಟಗಳ ಕಡೆ ಹೋದಾಗ ಈ ರೀತಿ ವರ್ತನೆ ಮಾಡುತ್ತಿದ್ದಾರೆ, ನಿಮ್ಮ ಬಂಗಾಳದ ಮುಸ್ಲಿಂ ಯುವಕರು ಈಗಲಾದರೂ ಹಿಂದುಗಳು ನರೇಂದ್ರ ಮೋದಿ  ಈ ದೇಶಕ್ಕೆ ಯಾಕಿರಬೇಕು ಎಂಬುದನ್ನು ಅರ್ಥ…

Read More

Fact Check | ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊವನ್ನು ದೆಹಲಿ ರೈತರ ಮೆರವಣಿಗೆಯ ದೃಶ್ಯಗಳೆಂದು ಹಂಚಿಕೆ

“ಇದು ದೆಹಲಿ ಚಲೋ ಪ್ರತಿಭಟನೆಯಲ್ಲಿ ಸೆರೆಯಾದ ಬೃಹತ್ ಸಭೆಯ ದೃಶ್ಯಗಳು. ಈ ಲಕ್ಷಾಂತರ ಜನ ರೈತರು ದೆಹಲಿಯ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದರಿಂದ ದೆಹಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.” ಎಂದು ರೈತ ಹೋರಾಟಕ್ಕೆ ಸಂಬಂಧಿಸಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ರೈತ ಹೋರಾಟ ಆರಂಭವಾದಗಿನಿಂದ ಒಂದಲ್ಲ ಒಂದು ರೀತಿಯ ಸುಳ್ಳು ಸುದ್ದಿಗಳನ್ನು ರೈತರ ಹೋರಾಟದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬೋದಕ್ಕೆ ಪ್ರಾರಂಭ ಮಾಡಲಾಗಿದೆ. ಇದಿಗ ಅಂತಹದ್ದೇ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ರೈತರು ವ್ಯಾಪಕವಾಗಿ ದೆಹಲಿಯ…

Read More

Fact Check | ಭಾರತೀಯ ಪೊಲೀಸರು ಈ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಸಂದೇಶ ಹಂಚಿಕೆ

“ಸರ್ಕಾರಿ ಅಧಿಕಾರಿಗಳಂತೆ ವೇಷ ಧರಿಸಿ ಜನಗಣತಿ ಮಾಡಲು ಕಳ್ಳರ ಗುಪೊಂದು ಬರುತ್ತದೆ, ಈ ಗುಂಪು ನಿಮ್ಮ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸುತ್ತವೆ. ಈ ಬಗ್ಗೆ ಪೊಲೀಸ್‌ ಇಲಾಖೆಯೇ ಎಚ್ಚರಿಕೆಯನ್ನು ನೀಡಿದೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ ಸಾಕಷ್ಟು ಮಂದಿ ಇದೇ ನಿಜವಾದ ಸುದ್ದಿ ಎಂದು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಸುದ್ದಿ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ನನಿಜವೆಂಬಂತೆ ಹಂಚಿಕೊಳ್ಳಲಾಗುತ್ತಿದೆ. ವಾಸ್ತವದಲ್ಲಿ ಜನಗಣತಿ ಎಂಬುದು ಈಗ ನಡೆಯುತ್ತಿಲ್ಲ. ಆದರೂ ಕೂಡ ಈ ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ….

Read More

Fact Check | ಎಕ್ಸ್‌ ರೇ ಎಂದರೇ ಜಾತಿ ಗಣತಿ ಎಂಬರ್ಥದಲ್ಲಿ ರಾಹುಲ್‌ ಗಾಂಧಿ ಮಾತನಾಡಿಲ್ಲ

“ಈ ವಿಡಿಯೋ ನೋಡಿ ರಾಹುಲ್‌ ಗಾಂಧಿ ಅವರಿಗೆ ಎಕ್ಸ್‌ರೇ ಮತ್ತು ಜಾತಿಗಣತಿ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ.. ಜಾತಿ ಗಣತಿ ಎಂದರೇ ಎಕ್ಸ್‌ ರೇ ಎಂದು ಹೇಳುತ್ತಿದ್ದಾರೆ, ಇಂತಹವರು ದೇಶದ ಪ್ರಧಾನಿ ಆದರೆ ದೇಶದ ಗತಿ ಏನು ಎಂಬುದನ್ನು ನೀವೇ ಊಹೆ ಮಾಡಿ ನೋಡಿ ” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. X-ray means Caste Census! 🤦@RahulGandhi consistently provides a daily dose of laughter! 😂😂 pic.twitter.com/sFTymimH8T — Ramesh Naidu…

Read More

Fact Check | ಶೇ.80ಕ್ಕಿಂತ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳಿಗೆ ಮೊಬೈಲ್‌ ಮತ್ತು ಟ್ಯಾಬ್‌ ವಿತರಿಸಲಾಗುವುದು ಎಂಬುದು ಸುಳ್ಳು

“ಮುಂಬರುವ 10 ಮತ್ತು ದ್ವಿತಿಯ ಪಿಯುಸಿ ಬೋರ್ಡ್ ಪರೀಕ್ಷೆ 2024 ರಲ್ಲಿ ಶೇಕಡಾ 80 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು 4.34 ಲಕ್ಷ ಮೊಬೈಲ್ ಫೋನ್‌ಗಳು ಮತ್ತು ಟ್ಯಾಬ್‌ಗಳನ್ನು ವಿತರಿಸುತ್ತಿದೆ.” ಎಂಬ ಸುದ್ದಿಯೊಂದು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿದೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಕುರಿತು ಪರಿಶೀಲನೆ ನಡೆಸಿದಾಗ ಅಸಲಿ ಸಂಗತಿ ಹೊರ ಬಂದಿದ್ದು, ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ…

Read More
ರೈತ

Fact Check: ಮಯನ್ಮಾರ್‌ನ ಪೋಟೋವೊಂದನ್ನು ರೈತ ಹೋರಾಟ ಸಂದರ್ಭದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದ ಕುರಿತು ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಕೇಂದ್ರ ಸರ್ಕಾರವೂ ಸಹ ಹೋರಾಟ ನಿರತ ರೈತರು ದೆಹಲಿಯನ್ನು ಪ್ರವೇಶಿಸದಂತೆ ಬ್ಯಾರಿಕೆಡ್, ಮುಳ್ಳಿನ ತಂತಿಗಳು ಮತ್ತು ಅಶ್ರುವಾಯು ದಾಳಿಗಳಿಂದ ಅವರನ್ನು ಹಿಮ್ಮೆಟ್ಟಿಸುತ್ತಿದೆ. ಹಲವು ಸುತ್ತಿನ ಮಾತುಕತೆಗಳು ಜರುಗಿದ್ದರೂ ಕೂಡ ಕೇಂದ್ರ ಮತ್ತು ರೈತರ ನಡುವಿನ ಚರ್ಚೆಗಳು ಸಫಲವಾಗುತ್ತಿಲ್ಲ. ಈಗ, “ಮೋದಿಯವರು ರೈತರನ್ನು ಹೇಗೆ ಸಾಯಿಸುತ್ತಿದ್ದಾರೆ ನೋಡಿ. ರೈತರ ಹತ್ಯೆ ಮಾಡಿದವರನ್ನು ತಿರುಗಾಡಲು ಬಿಡುತ್ತೀರಾ? ಕೇವಲ ಮಾತನಾಡಿದ್ದಕ್ಕೆ ಜನರನ್ನು…

Read More

Fact Check | ಯೋಗೇಂದ್ರ ಯಾದವ್‌, ಮಣಿವಣ್ಣನ್‌ ಮುಸ್ಲಿಂ ಧರ್ಮದವರು ಎಂಬುದು ಸುಳ್ಳು

“ಯೋಗೇಂದ್ರ ಯಾದವ್‌ ನಿಜವಾದ ಹೆಸರು ಸಲೀಮ್‌, ಈತ ಹಿಂದೂ ಮುಖವಾಡ ಹಾಕಿ ಶಾಹೀನ್‌ ಬಾಗ್‌ ಮತ್ತು ರೈತ ಮೋರ್ಚಾ ಹೋರಾಟದಲ್ಲಿ ಭಾಗಿಯಾಗಿದ್ದ. ಇನ್ನು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ಮಣಿವಣ್ಣನ್‌ ನಿಜವಾದ ಹೆಸರು ಅಬ್ದುಲ್‌ ಕಲಾಮ್‌”ಎಂಬ ಸುದ್ದಿಯೊಂದನ್ನು ಬಲ ಪಂಥೀಯ ಪ್ರೊಪಗೆಂಡ ಹೊಂದಿರುವ ಹಲವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ ವಾಸ್ತಾವವಾಗಿ ರೈತ ಹೋರಾಟದಲ್ಲಿ ಗುರುತಿಸಿಕೊಂಡವರು ಮತ್ತು ಅಧಿಕಾರಿ ವರ್ಗದಲ್ಲಿ ಪ್ರಾಮಾಣಿಕ ಕೆಲಸಗಳಿಂದ ಗುರುತಿಸಿಕೊಂಡವರನ್ನು ತುಳಿಯುವ ಪ್ರಯತ್ನವನ್ನು ಮಾಡಲಾಗುತ್ತಿರುವುದು ಜಗತ್‌ ಜಾಹೀರಾಗಿದೆ. ಫ್ಯಾಕ್ಟ್‌ಚೆಕ್‌ ಈ…

Read More

Fact Check: ಆಗಸ್ಟ್ 1, 2024ರ ನಂತರ Gmail ಕಾರ್ಯ ನಿರ್ವಹಿಸುವುದಿಲ್ಲ ಎಂಬುದು ಸುಳ್ಳು

ಇತ್ತೀಚೆಗೆ ವದಂತಿಗಳು ಹಬ್ಬುವುದು ಹೆಚ್ಚಾಗುತ್ತಿದ್ದು, Gmail ಸ್ಥಗಿತಗೊಳ್ಳುತ್ತಿದೆ. ಆಗಸ್ಟ್‌ 01, 2024ರಿಂದ ಜಿಮೇಲ್ ಕಾರ್ಯನಿರ್ವಹಿಸುವುದಿಲ್ಲ ಎಂದು ಗೂಗಲ್ ಸಂಸ್ಥೆ ಅಧಿಸೂಚನೆ ನೀಡಿದೆ. ಎಂಬ ಸುದ್ದಿಯೊಂದು ಜಗತ್ತಿನಾದ್ಯಂತ ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ಗೂಗಲ್ ಸಂಸ್ಥೆ ತಮ್ಮ ಗ್ರಾಹಕರಿಗೆ ಹೊರಡಿಸಿರುವ ಅಧಿಸೂಚನೆಯಂತೆ ಮೀಮ್ಸ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಫ್ಯಾಕ್ಟ್‌ಚೆಕ್: Gmail ಸ್ಥಗಿತಗೊಳ್ಳಲಿದೆ ಎಂಬ ವದಂತಿ ಸುಳ್ಳು. AI-ಚಾಲಿತ ವೈಶಿಷ್ಟ್ಯಗಳನ್ನು ಅಳವಡಿಸುವಲ್ಲಿ ಜೀಮೇಲ್ ನಿರತವಾಗಿದೆ. ಕಳೆದ ತಿಂಗಳು ಸಂಸ್ಥೆಯು ಇಮೇಲ್‌ಗಳನ್ನು ಬರೆಯಲು ಬಳಕೆದಾರರಿಗೆ ಸಹಾಯ ಮಾಡಲು ಡ್ಯುಯೆಟ್ AI ವೈಶಿಷ್ಟ್ಯವನ್ನು ಪ್ರಾರಂಭಿಸಿದೆ….

Read More