Narendra Modi

Fact Check: ನರೇಂದ್ರ ಮೋದಿಯವರ ಅಧಿಕಾರವಾದಿಯಲ್ಲಿ ಒಂದೇ ಒಂದು ರಾಜ್ಯ ಸರ್ಕಾರವನ್ನು ಅಮಾನತ್ತು ಮಾಡಿಲ್ಲ ಎಂಬುದು ಸುಳ್ಳು

“ನೆಹರು 7 ಬಾರಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ್ದರು, ಇಂದಿರಾ ಗಾಂಧಿಯವರ ಕಾಲದಲ್ಲಿ 49 ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ್ದರು, ರಾಜೀವ್ ಗಾಂಧಿ ಕಾಲದಲ್ಲಿ 6 ಬಾರಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ್ದರು, ನರಸಿಂಹ ರಾವ್ ಕಾಲದಲ್ಲಿ 11 ಬಾರಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ್ದರು, ಮನಮೋಹನ್ ಸಿಂಗ್ ಕಾಲದಲ್ಲಿ 11 ಬಾರಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ್ದರು. ಆದರೆ 2014ರ ನಂತರ ಒಂದೇ ಒಂದು ರಾಜ್ಯ ಸರ್ಕಾರವನ್ನು ಅಮಾನತ್ತು ಮಾಡಿಲ್ಲ. ಆದರೂ ಮೋದಿ ಸರ್ವಾಧಿಕಾರಿಯೇ?” ಎಂದು ಪ್ರತಿಪಾದಿಸಿದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ….

Read More

Fact Check | ED ಇಂದ ಬಂಧಿಸಲ್ಪಟ್ಟ ನಂತರ ಅರವಿಂದ ಕೇಜ್ರಿವಾಲ್ ತಮ್ಮ ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾರೆ ಎಂಬ ಫೋಟೋ ನಕಲಿ

“ಈ ಫೋಟೋ ನೋಡಿ ಅರವಿಂದ್ ಕೇಜ್ರಿವಾಲ್ ಅವರು ED ಯಿಂದ ಬಂಧಿಸಲ್ಪಟ್ಟ ನಂತರ ತಾವು ಧರಿಸಿದ ಫ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾರೆ.”ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ಪೋಸ್ಟ್‌ ಅನ್ನು ಬಿಜೆಪಿ ಬೆಂಬಲಿಗರು ಹಾಗೂ ಬಲಪಂಥೀಯ ಸಂಘಟನೆಯ ಕೆಲ ಮುಖಂಡರುಗಳು ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಗುತ್ತಿರುವ ಪೋಸ್ಟ್‌ನಲ್ಲಿ ಆಮ್‌ ಆದ್ಮಿ ಪಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ನಿಂದಿಸಲಾಗುತ್ತಿದೆ. ಸಾಕಷ್ಟು ಮಂದಿ ಕೋರ್ಟ್‌ ತೀರ್ಪು ಬರುವ ಮುನ್ನವೇ ಅರವಿಂದ್‌ ಕೇಜ್ರಿವಾಲ್‌…

Read More

Fact Check | ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಹಾಕಿದ ಹಣ ಮುಸ್ಲಿಮರ ಪಾಲು ಎಂಬುದು ಸುಳ್ಳು

“ನಮ್ಮ ಹಿಂದೂಗಳು ಶಿರಡಿ ಸಾಯಿಬಾಬಾನಿಗೆ ಹಾಕಿದ ಹಣ ಎಲ್ಲಿಗೆ ಹೋಗುತ್ತೆ ಅಂತಾ ನೋಡಿ. ಇನ್ನಾದರೂ ಹಿಂದೂಗಳು ಎಚ್ಚೆತ್ತುಕೊಳ್ಳಿ.. ಮುಸ್ಲಿಂ ಮುಖಂಡು ಈ ಹಣವನ್ನು ಸಂಗ್ರಹಿಸಿಕೊಳ್ಳುತ್ತಿರುವ ವಿಡಿಯೋ ನೋಡಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು. ಇದನ್ನೇ ನಿಜವಾದ ಸುದ್ದಿ ಎಂದು ನಂಬಿ ಸಾಕಷ್ಟು ಮಂದಿ ಶೇರ್‌ ಕೂಡ ಮಾಡುತ್ತಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕೆಲವು ಮುಸಲ್ಮಾನ ವ್ಯಕ್ತಿಗಳು ರಾಶಿ ರಾಶಿ ಹಣವನ್ನು ಚೀಲವೊಂದಕ್ಕೆ ತುಂಬಿಸುತ್ತಿರುವುದನ್ನು ಕಾಣ ಬಹುದಾಗಿದೆ. ಆದರೇ ಈ ಹಣ ಯಾವ ದೇಶಕ್ಕೆ ಸಂಬಂಧಿಸಿದ್ದು,…

Read More

Fact Check: ಕರಾವಳಿಯಲ್ಲಿ ಮುಸ್ಲಿಮರು ಹಿಂದೂ ದೇವಾಲಯವನ್ನ ಮಸೀದಿಯನ್ನಾಗಿ ಮಾಡಿದ್ದಾರೆ ಎಂಬುದು ನಿಜವಲ್ಲ

ಇತ್ತೀಚೆಗೆ ಭಾರತದ ಅನೇಕ ಪ್ರಮುಖ ಮಸೀದಿಗಳನ್ನು, ಪ್ರವಾಸಿ ತಾಣಗಳನ್ನು ಈ ಹಿಂದೆ ಇವು ದೇವಸ್ಥಾನ ಆಗಿದ್ದವು ಎಂದು ಪ್ರತಿಪಾದಿಸಲಾಗುತ್ತಿದೆ. ಜಗತ್‌ ಪ್ರಸಿದ್ದ ತಾಜ್‌ ಮಹಲ್, ಕುತುಬ್ ಮಿನಾರ್ ಸಹ ಶಿವನ ದೇವಾಲಯಗಳಾಗಿದ್ದವು ಎಂದು ಪ್ರತಿಪಾದಿಸಲಾಗುತ್ತಿದೆ. ಅದೇ ರೀತಿ ಈಗ, “ಕರ್ನಾಟಕ ಕರಾವಳಿ ಪ್ರದೇಶದಲ್ಲಿ, ಮುಸ್ಲಿಮರು ಹಿಂದೂ ದೇವಾಲಯವನ್ನು ಆಕ್ರಮಿಸಿಕೊಂಡು ಮಸೀದಿಯನ್ನಾಗಿ ಮಾಡಿದ್ದಾರೆ. ಅಥವಾ ಯಾವುದೋ ಮಸೀದಿಯೊಳಗೆ ಒಂದು ಪುರಾತನ ದೇವಾಲಯ ಅಡಗಿಸಿಡಲಾಗಿದೆ. ಅಥವಾ ಸುಂದರ ಕೆತ್ತನೆಗಳನ್ನು ಹೊಂದಿರುವ ಈ ದೇವಾಲಯದ ಸುತ್ತ ಗೋಡೆಗಳನ್ನು ಕಟ್ಟಿ ದೇವಾಲಯ ಕಾಣದಂತೆ…

Read More

Fact Check | ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಬೆರಸಲಾಗಿದೆ ಎಂಬುದು ಸುಳ್ಳು

“ಪಡಿತರ ಧಾನ್ಯ ವಿತರಣೆ ವ್ಯವಸ್ಥೆಯ ಅಡಿಯಲ್ಲಿ ನೀಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಬೆರೆಸಲಾಗಿದೆ. ಹಾಗಾಗಿ ಈ ಅಕ್ಕಿಗಳು ಸರಿಯಾಗಿ ಬೇಯುವುದಿಲ್ಲ, ಮತ್ತು  ಈ ಪಡಿತರ ಅಕ್ಕಿಯನ್ನು ನೀರಿನಲ್ಲಿ ತೊಳೆಯುವಾಗ ಪ್ಲಾಸ್ಟಿಕ್‌ ಅಕ್ಕಿಗಳು ನೀರಿನಲ್ಲಿ ತೇಲುತ್ತದೆ. ” ಎಂದು ಸಾಕಷ್ಟು ಮಂದಿ ದೂರಿದ್ದು, ಇದು ಪ್ಲಾಸ್ಟಿಕ್‌ ಅಕ್ಕಿ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ದೂರು ಕೂಡ ನೀಡಿದ್ದಾರೆ. ವಾಸ್ತವದಲ್ಲಿ ಇದೇ ರೀತಿಯ ಅಕ್ಕಿಯ ಕುರಿತು ಹಲವು ವರ್ಷಗಳ ಹಿಂದೆ ವರದಿಯಾಗಿತ್ತು. ಕೇವಲ ಇಷ್ಟು ಮಾತ್ರವಲ್ಲದೆ ಇತ್ತೀಚೆಗಿನ…

Read More
Sonam Wangchuck

Fact Check: ಸೋನಮ್ ವಾಂಗ್ಚುಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು

ಕಳೆದ 21 ದಿನಗಳಿಂದ ಉವವಾಸ ಸತ್ಯಗ್ರಹವನ್ನು ಕೈಗೊಂಡಿರುವ ಸಾಮಾಜಿಕ ಹೋರಾಟಗಾರ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಲಡಾಖ್‌ಗೆ ಸ್ವಾಯತ್ತತೆಯನ್ನು ತರಲು ಪ್ರತಿಭಟಿಸುತ್ತಿದ್ದಾರೆ ಮತ್ತು ಕೈಗಾರಿಕೀಕರಣದಿಂದ ಹಿಮಾಲಯ ಪ್ರದೇಶದ ದುರ್ಬಲ ಪರಿಸರ ಮತ್ತು ಹಿಮನದಿಗಳಿಗೆ ಆಗುತ್ತಿರುವ ಹಾನಿಯನ್ನು ದೇಶದ ಜನರಿಗೆ ತೋರಿಸುತ್ತಿದ್ದಾರೆ. ಕೇಂದ್ರಾಡಳಿತ ಪ್ರದೇಶಕ್ಕೆ ಸಾಂವಿಧಾನಿಕ ರಕ್ಷಣೆ ಮತ್ತು ಕೈಗಾರಿಕಾ ಮತ್ತು ಗಣಿಗಾರಿಕೆ ಲಾಬಿಗಳಿಂದ ಲಡಾಖ್‌ನ ರಕ್ಷಣೆಗಾಗಿ ಅವರು ತಮ್ಮ ಬೇಡಿಕೆಯನ್ನು ಒತ್ತಾಯಿಸುತ್ತಿದ್ದಾರೆ. ಅವರು ಕೇಂದ್ರ ಬಿಜೆಪಿ ಸರ್ಕಾರ 2019ರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಹೀಡೇರಿಸಿಲ್ಲ….

Read More

Fact Check : ನನ್ನ ಪೂರ್ವಜರು ಮುಸ್ಲಿಮರು ಎಂದು ರಾಹುಲ್‌ ಗಾಂಧಿ ಹೇಳಿಲ್ಲ

“ನನ್ನ ಪೂರ್ವಜರು ಮುಸ್ಲಿಮರು,ಹಾಗಾಗಿ ನಾನೊಬ್ಬ ಅಪ್ಪಟ ಮುಸಲ್ಮಾನ, ನಾನೊಬ್ಬ ಮುಸಲ್ಮಾನ ಆಗಿರುವುದರಿಂದ ನಾನು ಪಾಕಿಸ್ತಾನಕ್ಕೆ ಸಹಾಯ  ಮಾಡುವುದು ಅಗತ್ಯವಿದೆ! ನಾನು ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ಸಹಾಯ ಪ್ರಥಮವಾಗಿ ಮಾಡೇ ಮಾಡುತ್ತೇನೆ, ನಾವು ಅಧಿಕಾರಕ್ಕೆ ಬಂದ ಕೂಡಲೇ ಪಾಕಿಸ್ತಾನಕ್ಕೆ 8 ಸಾವಿರ ಕೋಟಿಗಳನ್ನು ಬಡ್ಡಿರಹಿತ ಸಾಲವಾಗಿ 50 ವರ್ಷಗಳಿಗೆ ನೀಡಲಿದ್ದೇವೆ” ಎಂಬ ಸಂದೇಶವೊಂದು ವೈರಲ್‌ ಆಗಿದೆ. राहुल गांधी जी ने कबूल किया के मैं मुसलमान हूं। चलो देर आए दरुस्त आए 🙏…

Read More
BBMP Bangalore

Fact Check: ಏಪ್ರಿಲ್ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವುದು ಸುಳ್ಳು

” ಏಪ್ರಿಲ್ 1, 2024ರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳವಾಗಲಿದೆ. “ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ತೆರಿಗೆ ಎರಡು ಪಟ್ಟು, ವಾಣಿಜ್ಯ ಸಂಸ್ಥೆಗಳ ತೆರಿಗೆ ಮೂರು ಪಟ್ಟು ಹೆಚ್ಚಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಲೈಫ್ ಟೈಮ್ ತೆರಿಗೆ ಶೇ.10ರಷ್ಟು ಮತ್ತು ಹೊಸ ವಾಹನಗಳ ನೋಂದಣಿ ತೆರಿಗೆ ಶೇ.3ರಷ್ಟು ಹೆಚ್ಚಳ ಮಾಡಲಾಗುತ್ತದೆ. ಸರ್ಕಾರ ಈ ಹಿಂದೆ ಹಾಲು, ಪೆಟ್ರೋಲ್ ಮತ್ತು ಮದ್ಯದ ಮೇಲಿನ ತೆರಿಗೆ ಹೆಚ್ಚಿಸಿತ್ತು” ಎಂದು ಹೇಳಲಾ ವಿಡಿಯೋ ಒಂದು Index. daily…

Read More

Fact Check: ಸಾಜಿದ್ ಅಂತ್ಯಕ್ರಿಯೆಯಲ್ಲಿ 30,000 ಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಿದ್ದರು ಎಂಬುದಕ್ಕೆ ಆಧಾರವಿಲ್ಲ

ಮಾರ್ಚ್‌ 20 ರಂದು ಉತ್ತರ ಪ್ರದೇಶದ ಬದೌನ್ ಬಳಿ ಇಬ್ಬರು ಮಕ್ಕಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕೊಲೆ ನಡೆದ ಕೇವಲ ಎರಡು ಗಂಟೆ ವ್ಯಾಪ್ತಿಯಲ್ಲಿ ಆರೋಪಿ ಸಾಜಿದ್ ಮತ್ತು ಜಾವಿದ್ ಎಂಬ ಸಹೋದರರನ್ನು ಉತ್ತರ ಪ್ರದೇಶದ ಪೋಲೀಸರು ಎನ್‌ಕೌಂಟರ್‌ನ ಮೂಲಕ ಇಬ್ಬರು ಆರೋಪಿಗಳನ್ನು ಕೊಂದಿದ್ದಾರೆ. ಬಾಲಕರ ಮರಣೋತ್ತರ ಪರೀಕ್ಷೆಯ ನಂತರ ಹತ್ತಾರು ಬಾರಿ ಚಾಕುವಿನಿಂದ ದೇಹಕ್ಕೆ ಇರಿದು ಕೊಲ್ಲಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಹೀಗಾಗಲೇ ಅವರ ಅಂತ್ಯಕ್ರಿಯೆ ನಡೆದಿದ್ದು, “ನಿನ್ನೆ…

Read More
JNU

Fact Check: JNU ವಿದ್ಯಾರ್ಥಿ ಒಕ್ಕೂಟ ಚುನಾವಣೆಯಲ್ಲಿ ABVP ನಾಲ್ಕು ಸ್ಥಾನ ಗಳಿಸಿದೆ ಎಂದು ಸುದ್ದಿ ತಿರುಚಿದ ಕನ್ನಡ ಮಾಧ್ಯಮಗಳು

ಜವಹರಲಾಲ್ ನೆಹರು ವಿಶ್ವವಿದ್ಯಾಲಯವು ಭಾರತದಲ್ಲಿ ಅನೇಕ ದಶಕಗಳಿಂದ ವಿದ್ಯಾರ್ಥಿ ಚಳುವಳಿಯ ನೆಲೆವೀಡಾಗಿದೆ. ಶೈಕ್ಷಣಿಕವಾಗಿಯೂ ಸಹ ಸಾಕಷ್ಟು ಹೆಸರು ಮಾಡಿರುವ ಈ ವಿಶ್ವವಿದ್ಯಾಲಯವು ದೇಶಕ್ಕೆ ಅನೇಕ ವಿದ್ವಾಂಸರನ್ನು, ರಾಜಕಾರಣಿಗಳನ್ನು ಕೊಡುಗೆಯಾಗಿ ನೀಡಿದೆ. ಆದರೆ ಕಳೆದೊಂದು ದಶಕಗಳಿಂದ ಈ ವಿಶ್ವವಿದ್ಯಾಲಯದ ಮೇಲೆ ಸಾಕಷ್ಟು ಆರೋಪಗಳನ್ನು ಹೊರಿಸಲಾಗುತ್ತಿದ್ದು, ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ಬಲಪಂಥೀಯ ಸಂಘಟನೆಗಳು ಆರೋಪಿಸಿದ್ದಾರೆ. ಸಧ್ಯ ಎಡಪಂಥೀಯ ಮತ್ತು ಬಲಪಂಥೀಯ ಸಿದ್ದಾಂತಗಳ ಕಾದಾಟದ ಸ್ಥಳವಾಗಿ ಈ ವಿಶ್ವವಿದ್ಯಾಲಯವು ಮಾರ್ಪಟ್ಟಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಎಡಪಂಥೀಯ ವಿದ್ಯಾರ್ಥಿ ಒಕ್ಕೂಟಕ್ಕೆ…

Read More