Fact Check | ದೆಹಲಿಯ ರಸ್ತೆಯಲ್ಲಿ ಯುವಕನಿಂದ ಬಾಲಕಿಗೆ ಕಿರುಕುಳ ಎಂಬುದು ನಾಟಕೀಯ ವಿಡಿಯೋ

“ಈ ವಿಡಿಯೋ ನೋಡಿ, ಬಾಲಕಿಯೊಬ್ಬಳು ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಹೋಗುತ್ತಿರುತ್ತಾಳೆ. ಆಕೆಯ ಹಿಂಬದಿಯಿಂದ ಬಂದ ಬೈಕ್‌ ಸವಾರನೊಬ್ಬ ಬಾಲಕಿಯನ್ನು ಮುಂದಕ್ಕೆ ತೆರಳದಂತೆ ತನ್ನ ಬೈಕಿನಲ್ಲೇ ಅಡ್ಡ ಹಾಕಿ ಕಿರುಕುಳ ನೀಡಿದ್ದಾನೆ. ಈತನನ್ನು ಜನ ಸಾಮಾನ್ಯರು ತಡೆದು ವಿಚಾರಿಸಿದಾಗ ನನ್ನ ತಂದೆ ಅಧ್ಯಕ್ಷರು, ನಾನು ಯಾವ ಹುಡುಗಿಯನ್ನು ಬೇಕಾದರೂ ಕೀಟಲೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಇದು ಇಂದಿನ ದೆಹಲಿಯ ದುಸ್ಥಿತಿ” ಎಂದು ವಿಡಿಯೋವೊಂದನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. चोरी और ऊपर से सीना ज़ोरी, इसे…

Read More

Fact Check : ಭವಿಶ್ ಅಗರ್ವಾಲ್- ಕುನಾಲ್ ಕಮ್ರಾ ನಡುವಿನ ವಿವಾದದ ಹಿನ್ನೆಲೆಯಲ್ಲಿ ಶೋರೂಮ್‌ಗೆ ಬೆಂಕಿ ಹಚ್ಚಲಾಗಿದೆ ಎಂಬ ವೀಡಿಯೊ ಹಳೆಯದು

ಓಲಾ ಸಿಇಒ ಭವಿಶ್ ಅಗರ್ವಾಲ್ ಮತ್ತು ಹಾಸ್ಯಗಾರ ಕುನಾಲ್ ಕಮ್ರಾ ನಡುವೆ ಟ್ವಿಟರ್‌ನಲ್ಲಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ , ಓಲಾದ ಅತೃಪ್ತ ಗ್ರಾಹಕರು ಓಲಾ ಶೋರೂಮ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಕರ್ನಾಟಕದಲ್ಲಿ ಓಲಾದ ಅತೃಪ್ತ ಗ್ರಾಹಕರು ಓಲಾ ಶೋರೂಮ್‌ಗೆ ಬೆಂಕಿ ಹಚ್ಚಿದ್ದಾರೆ, ಕಾರಣವೆಂದರೆ ಕಂಪನಿಯು ತಮ್ಮ ವಾಹನಗಳಿಗೆ ತಿಂಗಳುಗಟ್ಟಲೆ ಸೇವೆ ಸಲ್ಲಿಸುವಲ್ಲಿ ವಿಫಲವಾಗಿದೆ. ಇದರ ಮಧ್ಯೆ, ಭವಿಶ್ ಅಗರ್ವಾಲ್ ಅವರು ಸಾರ್ವಜನಿಕವಾಗಿ ಸತ್ಯವನ್ನು ಬಹಿರಂಗಪಡಿಸಿ, ಕುನಾಲ್ ಕಮ್ರಾರನ್ನು ಅಪಹಾಸ್ಯ ಮಾಡಿದ್ದಾರೆ….

Read More

Fact Check | ರಣದೀಪ್ ಸಿಂಗ್ ಸುರ್ಜೇವಾಲಾ ಬ್ರಾಹ್ಮಣರನ್ನು ಕೊಲ್ಲುವ ಬಗ್ಗೆ ಮಾತನಾಡಿದ್ದಾರೆ ಎಂಬುದು ಸುಳ್ಳು

ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬ್ರಾಹ್ಮಣ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ” ಕಾಂಗ್ರೆಸ್‌ ಸಂಸದ ರಣದೀಪ್‌ ಸಿಂಗ್‌ ಸುರ್ಜೇವಾಲಾ ಬ್ರಾಹ್ಮಣರನ್ನು ಕೊಲ್ಲಲು ಕರೆ ನೀಡಿದ್ದಾನೆ. ದೇಶದಲ್ಲಿ ಬ್ರಾಹ್ಮಣರ ನರಮೇಧ ನಡೆಸಲು ಕಾಂಗ್ರೆಸ್‌ ಬಹುದೊಡ್ಡ ಸಂಚು ರೂಪಿಸಿದೆ ಎಂಬುದು ಸ್ಪಷ್ಟವಾಗಿದೆ. ಹಿಂದೂಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. Breaking news बहुत खूब सुरजेवाला!वायरल वीडियो*कांग्रेस के राज्यसभा…

Read More
ಸಮಾಜವಾದಿ ಪಕ್ಷದ ಶಾಸಕ

Fact Check: ಬಿಜೆಪಿ ಆಡಳಿತ ಕೊನೆಗೊಳ್ಳುತ್ತದೆ ಎಂದು ಎಚ್ಚರಿಸಿದ ಸಮಾಜವಾದಿ ಪಕ್ಷದ ಶಾಸಕ ಮೆಹಬೂಬ್ ಅಲಿ ಅವರ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಮುಸ್ಲಿಂ ಜನಸಂಖ್ಯೆ ಹೆಚ್ಚಾದಂತೆ ಬಿಜೆಪಿ ಆಡಳಿತ ಕೊನೆಗೊಳ್ಳುತ್ತದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ಮೆಹಬೂಬ್ ಅಲಿ ಎಚ್ಚರಿಕೆ ನೀಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ವೈರಲ್ ಆಗುತ್ತಿದೆ. “ಈಗ ನಿಮ್ಮ ಆಡಳಿತ ಕೊನೆಗೊಳ್ಳುತ್ತದೆ” ಎಂದು ಅವರು ಹೇಳುತ್ತಾರೆ ಮತ್ತು 2027 ರ ವೇಳೆಗೆ ಸಮಾಜವಾದಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ನಿಜವಾಗಿಯೂ ಮೆಹಬೂಬ್ ಅಲಿಯವರು ಈ ಎಚ್ಚರಿಕೆ ನೀಡಿದ್ದಾರೆಯೇ ಎಂದು ಈ ಲೇಖನದ ಮೂಲಕ ಪರಿಶೀಲಿಸೋಣ. ಆರ್ಕೈವ್ ಮಾಡಿದ ಪೋಸ್ಟ್ ಅನ್ನು ಇಲ್ಲಿ ಕಾಣಬಹುದು.  ಫ್ಯಾಕ್ಟ್‌ ಚೆಕ್:…

Read More

Fact Check : ಯುಪಿ CMO ಮೇಲೆ ದಾಳಿ ಎಂದು ನೋಯ್ಡಾದ ಬಿಜೆಪಿ ನಾಯಕನನ್ನು ಥಳಿಸಲಾದ ವೀಡಿಯೊ ಹಂಚಿಕೆ

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಜನರ ಗುಂಪೊಂದು ಚೀಫ್ ಮೆಡಿಕಲ್ ಆಫೀಸರ್‌ನನ್ನು ಹಿಂಬಾಲಿಸಿ ಥಳಿಸಿದ್ದಾರೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಫ್ಯಾಕ್ಟ್‌ ಚೆಕ್‌ : ಈ ವೈರಲ್ ವೀಡಿಯೊದ ಸತ್ಯಾಂಶಗಳನ್ನು ತಿಳಿದುಕೊಳ್ಳಲು, ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, ಈ ಹಿಂದೆ ಟ್ವಿಟರ್‌ನಲ್ಲಿ  ಹಂಚಿಕೊಂಡ ವೀಡಿಯೊ ಲಭಿಸಿದೆ. ಈ ವೀಡಿಯೊ ಮಣಿಪುರದ ಸಮಸ್ಯೆಗೆ ಸಂಬಂಧಿಸಿದ ಘಟನೆಯಾಗಿದ್ದು, ವೈರಲ್‌ ವೀಡಿಯೊದ ತುಣುಕನ್ನು ಹೋಲುತ್ತದೆ. ಮಣಿಪುರದ ಸಮಸ್ಯೆಯ ಚರ್ಚೆಯ ವೇಳೆ ಗ್ರೇಟರ್ ನೋಯ್ಡಾದ ಬಿಜೆಪಿ ನಾಯಕನೊಬ್ಬನ ಮೇಲೆ ಹಲ್ಲೆ…

Read More

Fact Check | ಮುಸ್ಲಿಂ ದಂಪತಿಗಳು ತಮ್ಮ ಮಕ್ಕಳನ್ನೇ ಮದುವೆಯಾಗಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಕೊಲಾಜ್ ಫೋಟೋವೊಂದು ವೈರಲ್‌ ಆಗಿದೆ. ಇದರ ಒಂದು ಬದಿಯಲ್ಲಿ ವಯಸ್ಕ ವ್ಯಕ್ತಿಯೊಬ್ಬ ಬಾಲಕಿಯೊಂದಿಗೆ ಹೂವಿನ ಮಾಲೆಯನ್ನು ಧರಿಸಿ ನಿಂತಿರುವುದು ಕಂಡು ಬಂದರೆ ಮತ್ತೊಂದು ಕಡೆ ವಯಸ್ಕ ಮಹಿಳೆಯೊಬ್ಬರು ಬಾಲಕನೊಂದಿಗೆ ನಿಂತಿರುವುದು ಕಂಡು ಬಂದಿದೆ. ಈ ಫೋಟೋವನ್ನು ಹಂಚಿಕೊಂಡು ಸಾಕಷ್ಟು ಮಂದಿ ” ತಂದೆಯೊಬ್ಬ ಮಗಳನ್ನು ಮದುವೆಯಾಗಿದ್ದಾನೆ. ಇದರಿಂದ ಮುನಿಸಿಕೊಂಡು ಆತನ ಹೆಂಡತಿ ತನ್ನ ಮಗನನ್ನೇ ಮದುವೆಯಾಗಿದ್ದಾಳೆ. ಇಸ್ಲಾಂ ಧರ್ಮ ಪವಿತ್ರ ಎಂದು ಭಾವಿಸುವವರು ಇದನ್ನು ನೋಡಲೇ ಬೇಕು” ಎಂದು ಪೋಸ್ಟ್‌ ಮಾಡಲಾಗುತ್ತಿದೆ. ವೈರಲ್‌ ಪೋಸ್ಟ್‌…

Read More

Fact Check |‌ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮುಖಂಡನ ಮೇಲೆ ಹಿಂದೂಗಳ ಗುಂಪಿನಿಂದ ದಾಳಿ ಎಂಬುದು ಸುಳ್ಳು

ಇಮಾಮ್ ಅಂದ್ರೆ ಮುಸ್ಲಿಂ ಧಾರ್ಮಿಕ ಮುಖಂಡ ತನ್ನ ವಿದ್ಯಾರ್ಥಿಗಳಿಗೆ ಕುರ್‌ಆನ್‌ ಪಟ್ಟಣವನ್ನು ಕಲಿಸುತ್ತಿದ್ದಾಗ ಅಲ್ಲಿಗೆ ಬಂದಂತಹ ಹಿಂದೂಗಳ ಗುಂಪು ಈತನ ಮೇಲೆ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದೆ. ಆದರೆ ಅದೃಷ್ಟವಶತ್ ಆತ ಸಣ್ಣ ಪುಟ್ಟ ಗಾಯಗಳೊಂದಿಗೆ ಬದುಕುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ ಎಂದು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. मेरठ के थाना लिसाड़ी गेट में मिलन पैलेस के पास कासमी मस्जिद के इमाम को मस्जिद में घुसकर गोली…

Read More

Fact Check: ಮಯನ್ಮಾರ್‌ನ 2022ರ ಘಟನೆಯನ್ನು ಮಣಿಪುರದಲ್ಲಿ ಹಿಂದೂ ಹುಡುಗಿಯನ್ನು ಕೊಂದುಹಾಕಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ

ಭಾರತದ ಮಣಿಪುರದಲ್ಲಿ ಹಿಂದೂ ಹುಡುಗಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಂದುಹಾಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದೃಶ್ಯಗಳನ್ನು ಮಣಿಪುರದ ಆಂತರಿಕ ಬಿಕ್ಕಟಿಗೆ ಹೋಲಿಸಿ “‘ಸುಪ್ರೀಂ ಕೋರ್ಟ್‌ಗೆ ಮಣಿಪುರ ಸಂಘರ್ಷದ ಪುರಾವೆ ಬೇಕಾಗಿದೆ, ಆದ್ದರಿಂದ ಈ ವೀಡಿಯೊವನ್ನು 48 ಗಂಟೆಗಳ ಒಳಗೆ ವೈರಲ್ ಮಾಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ, ದಯವಿಟ್ಟು ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.” ಎಂಬ ಸಂದೇಶದೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.  ವಾಟ್ಸಾಪ್‌ನಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು. ಸತ್ಯ ತಿಳಿಯದೆ ಅನೇಕರು ಈ…

Read More

Fact Check: ಪೆರಿಯಾರ್ ತನ್ನ ಅನುಯಾಯಿಯನ್ನು ಮದುವೆಯಾದರೆ ಹೊರತು ಮಗಳನ್ನಲ್ಲ

ಇತ್ತೀಚೆಗೆ ದ್ರಾವಿಡ ಚಳುವಳಿಯ ಹರಿಕಾರ ಮತ್ತು “ತಮಿಳು ಸ್ವಾಭಿಮಾನ ಚಳುವಳಿ”ಯ ನಾಯಕರಾದ ಈರೋಡ್ ವೆಂಕಟಪ್ಪ ರಾಮಸ್ವಾಮಿ ಅಥವಾ ತಂದೆ ಪೆರಿಯಾರ್ ಅವರ ಕುರಿತು ಸಾಕಷ್ಟು ಸುಳ್ಳು ಸುದ್ದಿಗಳನ್ನು ಮತ್ತು ದ್ವೇಷವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗುತ್ತಿದೆ. ಪೆರಿಯಾರ್ ಅವರು ತಮ್ಮ ಸ್ವಂತ ಮಗಳನ್ನೇ ಮದುವೆಯಾಗಿದ್ದರು ಎಂಬ ಸುದ್ದಿಯನ್ನು ಸಾಕಷ್ಟು ಜನರು ಹಂಚಿಕೊಂಡು ವ್ಯವಸ್ಥಿತವಾಗಿ ಪೆರಿಯಾರ್ ಅವರ ಹೆಸರಿಗೆ ಕಳಂಕ ತರಲು ಪ್ರಯತ್ನಿಸಲಾಗುತ್ತಿದೆ. ಈ ಅಪಪ್ರಚಾರ ದೇಶದಾದ್ಯಂತ ಸಾಕಷ್ಟು ನಡೆಯುತ್ತಿದ್ದು, ಪೆರಿಯಾರ್ ರವರನ್ನು ತಪ್ಪಾಗಿ ವ್ಯಾಖ್ಯಾನಿಸಿ ಅವರ ವಿಚಾರಧಾರೆಗಳನ್ನು ಅಪ್ರಸ್ತುತಗೊಳಿಸುವ…

Read More

Fact Check | ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರೋಹಿಂಗ್ಯಾ ಮುಸ್ಲಿಮರ ಗುಂಪನ್ನು ಬಂಧಿಸಲಾಗಿದೆ ಎಂಬುದು ಸುಳ್ಳು

“ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ರೋಹಿಂಗ್ಯಾ ಮುಸ್ಲಿಮರು ಹಾಗೂ ಮುಸ್ಲಿಂ ಬಾಲಕರನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ತಡೆ ಹಿಡಿದು ಅದರಲ್ಲಿದ್ದ ರೋಹಿಂಗ್ಯಾ ಮುಸಲ್ಮಾನರನ್ನು ಬಂಧಿಸಿ ಟ್ರಕ್‌ ವಶಪಡಿಸಿಕೊಳ್ಳುವ ಮೂಲಕ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಪೊಲೀಸರು ಪ್ರಮುಖ ಒಳನುಸುಳುವಿಕೆ ಘಟನೆಯನ್ನು ವಿಫಲಗೊಳಿಸಿದ್ದಾರೆ” ಎಂದು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವೀಡಿಯೊ ಕ್ಲಿಪ್‌ನಲ್ಲಿ, ಹಲವಾರು ಮುಸ್ಲಿಂ ಬಾಲಕರು ಪೊಲೀಸರ ಸಮ್ಮುಖದಲ್ಲಿ ಟ್ರಕ್‌ನಿಂದ ಹೊರಬರುವುದನ್ನು ಕಾಣಬಹುದಾಗಿದೆ. ಹಾಗಾಗಿ ವಿಡಿಯೋ ಕೂಡ ವೈರಲ್‌ ಆಗಿದೆ. महाराष्ट्र के कोल्हापुर में रोहिंग्या मुसलमानों को…

Read More