Fact Check : ಇತ್ತೀಚೆಗೆ ನವದೆಹಲಿಯಲ್ಲಿ ರೈಲು ಅಪಘಾತ ಸಂಭವಿಸಿದೆ ಎಂಬುದು ಸುಳ್ಳು

2024 ರ ಸೆಪ್ಟೆಂಬರ್ 15 ರಂದು ಹೊಸದಿಲ್ಲಿಯಲ್ಲಿ ರೈಲು ಅಪಘಾತ ಸಂಭವಿಸಿದೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟರ್‌ನಲ್ಲಿ  ಹಿಂದಿ ಭಾಷೆಯಲ್ಲಿ ಹೀಗೆ ಬರೆಯಲಾಗಿದೆ “नई दिल्ली: दो ट्रेनों के बीच भीषण टक्कर, 3 की मौत, 49 गंभीर घायल, चारों तरफ मची चीख-पुकार,” ಇದನ್ನು ಕನ್ನಡಕ್ಕೆ ಅನುವಾದಿಸಿದಾಗ “ನವದೆಹಲಿಯಲ್ಲಿ ಎರಡು ರೈಲುಗಳು  ಭೀಕರವಾಗಿ ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಮೂರು ಜನರು ಸತ್ತಿದ್ದಾರೆ, 49 ಜನರಿಗೆ ತೀವ್ರವಾಗಿ ಗಾಯಗಳಾಗಿ…

Read More

Fact Check : ಹಿಂದೂಗಳನ್ನು ಅಪಹಾಸ್ಯ ಮಾಡಿದ ತಮಿಳುನಾಡಿನ ವ್ಯಕ್ತಿಗೆ ತಿರುಪತಿಯಲ್ಲಿ ಥಳಿಸಲಾಗಿದೆ ಎಂಬುದು ಸುಳ್ಳು

ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಗೋಮಾಂಸ, ಮೀನಿನ ಎಣ್ಣೆ ಮತ್ತು ಹಂದಿ ಕೊಬ್ಬನ್ನು ಹಾಕಿದ್ದಾರೆ ಎಂದು ಆರೋಪಿಸಲಾದ ವಿವಾದದದ ಕುರಿತು, ಸೆಪ್ಟೆಂಬರ್ 20 ರಂದು ಸುಪ್ರೀಂ ಕೋರ್ಟ್‌ನ ವಕೀಲರು ಈ ಕಾಯ್ದೆಯು ಮೂಲಭೂತವಾಗಿ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಿರುಪತಿಯ ಸಾಲಿನಲ್ಲಿ ಹಿಂದೂಗಳಿಗೆ ಅಪಹಾಸ್ಯ ಮಾಡಿ, ಜನರು ವ್ಯಕ್ತಿಯೊಬ್ಬನನ್ನು ಥಳಿಸಿದ್ದಾರೆಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊದಲ್ಲಿ ಪಿಯೂಷ್ ಮಾನುಷ್‌ ಎಂಬುವವರನ್ನು ಥಳಿಸಲಾಗಿದೆ ಎಂದು ಗುರುತಿಸಿ ಬಳಕೆದಾರರು ತಮ್ಮ…

Read More

Fact Check | A.R.ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‌ನ ಎಲ್ಲಾ ನೌಕರರು ಮುಸಲ್ಮಾನರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ

“ತಿರುಪತಿ ದೇಗುಲಕ್ಕೆ ಪ್ರಸಾದ ತಯಾರಿಸುವ ಗುತ್ತಿಗೆ ಪಡೆದಿರುವ ಎ.ಆರ್‌. ಡೈರಿ ಫುಡ್‌ ಪ್ರೈವೆಟ್‌ ಲಿಮಿಟೆಡ್‌ನ ಉದ್ಯೋಗಿಗಳ ಹೆಸರುಗಳನ್ನು ಗಮನಿಸಿ ಇವರೆಲ್ಲ ಮುಸಲ್ಮಾನರು. ಇದು ನಾಚಿಕೆಗೇಡಿನ ಸಂಗತಿ. ಈ ಹೆಸರುಗಳನ್ನು ನೋಡಿದರೆ ಪ್ರಸಾದದಲ್ಲಿ ದನದ ಕೊಬ್ಬು ಹಾಗೂ ಮಾಂಸಾಹಾರಿ ಪದಾರ್ಥಗಳನ್ನು ಬೆರೆಸಿ ತಿರುಪತಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಈ ಪ್ರಸಾದವನ್ನು ತಿನ್ನಿಸಿದರಲ್ಲಿ ಆಶ್ಚರ್ಯವಿಲ್ಲ. ಭಾರತದಲ್ಲಿ ಒಬ್ಬ ಹಿಂದೂ ವಕ್ಫ್ ಬೋರ್ಡ್ ಅಥವಾ ಯಾವುದೇ ಮುಸ್ಲಿಂ ಸಂಘಟನೆಯನ್ನು ನಡೆಸಬಹುದೇ? ಅದು ಸಾಧ್ಯವಿಲ್ಲ ಹಾಗಿದ್ದ ಮೇಲೆ ಹಿಂದೂಗಳ ದೇವಸ್ಥಾನಕ್ಕೆ ಮುಸಲ್ಮಾನರು ಏಕೆ?”…

Read More

Fact Check: ನಾಗಮಂಗಲ ಗಲಭೆ ಕೇಸ್​: ಪೋಲಿಸರ ಭೀತಿಯಿಂದ ಯುವಕ ಸಾವು ಎಂದು ಸುಳ್ಳು ಹರಡಿದ ಕನ್ನಡದ ಮಾಧ್ಯಮಗಳು

ಇತ್ತೀಚೆಗೆ (ಸೆ.11ರಂದು) ಮಂಡ್ಯ ಜಿಲ್ಲೆಯ ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಗಲಭೆ ನಡೆದು ರಾಜ್ಯದಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಅಂದು ಬುದವಾರ ಅದ್ದೂರಿ ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತಿತ್ತು. ಈ ವೇಳೆ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿದ್ದರು. ಎರಡು ಗುಂಪುಗಳ ನಡುವಿನ ಘರ್ಷಣೆಯಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ತಡರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು. ಪ್ರಕರಣ ಸಂಬಂಧ ಇದುವರೆಗೆ 53 ಜನರನ್ನು ಬಂಧಿಸಲಾಗಿತ್ತು. ಬಳಿಕ ನ್ಯಾಯಾಧೀಶರ ಮುಂದೆ ಬಂಧಿತರನ್ನು…

Read More

Fact Check | ಚೀನಾದ ಹಳೆಯ ವೀಡಿಯೊವನ್ನು ಮಹಾರಾಷ್ಟ್ರದಲ್ಲಿ ಗುಂಡಿ ಬಿದ್ದ ರಸ್ತೆಗಳೆಂದು ಹಂಚಿಕೆ

“ಈ ವಿಡಿಯೋವನ್ನು ನೋಡಿ ಇದು ಇಂದಿನ ಮಹಾರಾಷ್ಟ್ರದ ಪರಿಸ್ಥಿತಿ. ಇಂದು ದೇಶದಲ್ಲಿ ಎಲ್ಲಯೂ ಕಂಡು ಬಾರದ ರಸ್ತೆ ಗುಂಡಿಗಳು‌ ಮಹಾರಾಷ್ಟ್ರದಲ್ಲಿ ಕಂಡು ಬರುತ್ತಿವೆ. ಗುಣಮಟ್ಟದ ರಸ್ತೆಗಳು ಮಹಾರಾಷ್ಟ್ರದಲ್ಲಿ ಮಾಯವಾಗುತ್ತಿದೆ, ಫಡ್ನವಿಸ್ ಅವರ ಅವರ ಮಾತುಗಳು ಕೇವಲ ಸುಳ್ಳುಗಳಿಂದ ಕೂಡಿದೆ. ಇನ್ನು ಮುಂದಿನ ದಿನಗಳಲ್ಲಾದರೂ ಮಹಾರಾಷ್ಟ್ರದ ಜನ ಎಚ್ಚೆತ್ತುಕೊಳ್ಳಲಿಲ್ಲವೆಂದರೆ ಅಪಾಯ ತಪ್ಪಿದ್ದಲ್ಲ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲಾತಾಣದಲ್ಲಿ‌ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ‌. *दर्जेदार रस्ते आणि फडणवीस यांचा शब्द, परिवर्तन तर होणारच..*@Dev_Fadnavis @ShivSenaUBT_ @ShivsenaUBTComm pic.twitter.com/O3uSjplG20 —…

Read More
ನ್ಯೂಡಲ್ಸ್‌

Fact Check: ನ್ಯೂಡಲ್ಸ್‌ ಮಾಡುವ ಪ್ರಕ್ರಿಯೆಯ ವೀಡಿಯೋ ಎಂದು ಸೋಪು ತಯಾರಿಸುವ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ನೂಡಲ್ ಉತ್ಪಾದನಾ ಪ್ರಕ್ರಿಯೆಯ ದೃಶ್ಯಗಳನ್ನು ತೋರಿಸುವುದಾಗಿ ಹೇಳುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವೀಡಿಯೊವನ್ನು ಫೇಸ್ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ: “దేవుడా! నిజంగా బయట నూడుల్స్ ఇలానే తయారు చేస్తారా? మీకు తెలిస్తే కాస్త msg చేయండి ఫ్రెండ్స్… ఇలా చేస్తారు అని తెలియక చాలామంది పిల్లలు బయట తింటున్నారు” ಕನ್ನಡ ಅನುವಾದ: ದೇವರೇ! ಹೊರಗಿನ ನೂಡಲ್ಸ್ ಅನ್ನು ನಿಜವಾಗಿಯೂ ಈ ರೀತಿ ತಯಾರಿಸಲಾಗುತ್ತದೆಯೇ? ನಿಮಗೆ ತಿಳಿದಿದ್ದರೆ, ನನಗೆ ಕೆಲವು ಸಂದೇಶ ಸಂದೇಶಗಳನ್ನು ಕಳುಹಿಸಿ… ಇದನ್ನು ಮಾಡಲಾಗಿದೆ…

Read More
ವೈದ್ಯ

Fact Check: ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನಾ ನಿರತ ವೈದ್ಯರೊಬ್ಬರು ‘ಕಾಳಿ’ ನೃತ್ಯ ಮಾಡಿದ್ದಾರೆ ಎಂದು ನಟಿ ಮೋಕ್ಷಾ ಸೇನ್‌ ಗುಪ್ತಾರ ವೀಡಿಯೋ ವೈರಲ್

ಕೋಲ್ಕತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸೀರೆ ಉಟ್ಟ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ಕೋಲ್ಕತ್ತಾದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವೈದ್ಯರೊಬ್ಬರು ನೃತ್ಯ ಮಾಡುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಲು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋವನ್ನು ಸುಳ್ಳು ಭಾಷಣಗಳಿಗೆ ಖ್ಯಾತರಾದ  ಚಕ್ರವರ್ತಿ ಸೂಲಿಬೆಲೆ ಸಹ ಹಂಚಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನಾ ನಿರತ ವೈದ್ಯರೊಬ್ಬರು ಮಾಡಿದ 'ಕಾಳಿ' ನೃತ್ಯ! pic.twitter.com/6T96DJeB1w…

Read More

Fact Check | ಚಂಡೀಘಡ ಟೋಲ್‌ ಪ್ಲಾಜಾದಲ್ಲಿ ಮುಸಲ್ಮಾನರು ಗಲಾಟೆ ಮಾಡಿದ್ದಾರೆ ಎಂಬುದು ಸುಳ್ಳು

“ಚಂಡೀಘಡ ಟೋಲ್‌ ಪ್ಲಾಜಾದಲ್ಲಿ ಮುಸಲ್ಮಾನರು ಗಲಾಟೆ ಮಾಡಿ, ಟೋಲ್‌ ಸಿಬ್ಬಂಧಿಯ ಮೇಲೆ ಹಲ್ಲೆ ನಡೆಸಿದ್ದಾರೆ, ಅದರಲ್ಲೂ ಹಿಂದೂ ಸಿಬ್ಬಂಧಿಗಳ ಮೇಲೆಯೇ ದೌರ್ಜನ್ಯ ನಡೆಸಲಾಗಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ವಿವಿಧ ಬರಹಗಳೊಂದಿಗೆ ಸಾರ್ವಜನಿಕರಲ್ಲಿ ಹಲವು ರೀತಿಯಾದ ಅಭಿಪ್ರಾಯಗಳನ್ನು ಮೂಡಿಸುತ್ತಿರುವುದರ ಜೊತೆಗೆ, ಮುಸಲ್ಮಾನ ಸಮುದಾಯದ ವಿರುದ್ಧ ದ್ವೇಷ ಭಾವನೆ ಮೂಡುವಂತೆ ಬರಹಗಳನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ. @nitin_gadkariIs toll tax only for hindus??At Kurali toll plaza at Chandighar😡Going for Friday prayers…

Read More

Fact Check : ಇತ್ತೀಚೆಗೆ ಇಸ್ರೇಲ್‌ ಲೆಬನಾನ್ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದೆ ಎಂಬುದು ಸುಳ್ಳು

ಇಸ್ರೇಲ್‌ನ ಫೈಟರ್ ಜೆಟ್‌ಗಳು ಲೆಬನಾನ್‌ನ ಹಿಜ್ಬುಲ್ಲಾದ ಬೃಹತ್ ರಸ್ತೆ ಬದಿಯಲ್ಲಿ ಅಪಾದಿತವಾಗಿ ಸಂವಹನ ಸಾಧನಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಲಾಗಿದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಬ್ರೇಕಿಂಗ್: ಇಸ್ರೇಲ್‌ನ ಫೈಟರ್ ಜೆಟ್‌ಗಳು ಲೆಬನಾನ್‌ನಲ್ಲಿ ಹಿಜ್ಬೊಲ್ಲಾದ ಮೇಲೆ ವೈಮಾನಿಕ ದಾಳಿಯನ್ನುನಡೆಸಿದಾಗ ಕ್ಷಿಪಣಿಗಳು ಮತ್ತು ರೇಡಿಯೋಗಳು ಸ್ಫೋಟಗೊಂಡಿವೆ. ಲೆಬನಾನ್‌ನ ರಾಜಧಾನಿ ಬೈರುತ್‌ನ ಹಲವಾರು ಪ್ರದೇಶಗಳಲ್ಲಿ ಸ್ಥಾಪಿಸಲಾದ ಸೌರ ಶಕ್ತಿ ಸ್ಥಳಗಳು ಸ್ಫೋಟಗೊಂಡಿವೆ ಎಂಬ ವೀಡಿಯೋವನ್ನು ಬಳಕೆದಾರರು ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. BREAKING : Air Strikes Now !!!…

Read More

Fact Check: ರಿವರ್ಸ್ ಆಸ್ಮೋಸಿಸ್(RO) ನೀರಿನ ಕುರಿತ ಜಾಗೃತಿ ವೀಡಿಯೋವನ್ನು ಜಿಹಾದಿಗಳು ಹಿಂದೂಗಳನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಹಂಚಿಕೆ

ಇತ್ತೀಚೆಗೆ ದೇಶದಲ್ಲಿ ಯಾವ ಕೃತ್ಯಗಳೇ ನಡೆದರೂ ಸಹ ಅದನ್ನು ಮುಸ್ಲಿಂ ಸಮುದಾಯದವರು ಮಾಡಿದ್ದಾರೆ ಎಂದು ಆರೋಪಿಸಿ ವ್ಯವಸ್ಥಿತವಾಗಿ ಜನರನ್ನು ನಂಬಿಸಲಾಗುತ್ತಿದೆ. ಇದೇ ರೀತಿ ಈಗ ವಾಟರ್ ಫ್ಯೂರಿಫೈರ್ ಮಾರಾಟಗಾರನ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, “ಹಿಂದುಗಳನ್ನು ಎಲ್ಲಾ ರಂಗದಲ್ಲೂ ಕೊಲ್ಲಲು ಜಿಹಾದಿಗಳು ಯೋಜನೆ ರೂಪಿಸಿಕೊಂಡಿದ್ದಾರೆ. ಎಲ್ಲಾ ಹಿಂದು ಬಾಂಧವರಲ್ಲಿ ನನ್ನ ವಿನಂತಿ ಮುಸ್ಲಿಮರ ಅಂಗಡಿಗಳಲ್ಲಿ ದಯವಿಟ್ಟು ಯಾವುದೇ ಕಾರಣಕ್ಕೂ ತರಕಾರಿ ಹಣ್ಣುಗಳು ಹಾಲು ಮತ್ತು ಹೋಟೆಲ್ ಗಳಲ್ಲಿ ಜ್ಯೂಸ್ ಮತ್ತು ಇತರೆ ಆಹಾರ ಯಾವುದೇ ಕಾರಣಕ್ಕೂ…

Read More