Fact Check | ತಿರುಪತಿ ದೇಗುಲದ ಅರ್ಚಕರ ಪುತ್ರಿಯರ ಮದುವೆಗೆ ನೂರು ಕೆಜಿ ಚಿನ್ನ ಬಳಕೆ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೆ

“ಇದು ತಿರುಪತಿ ಬಾಲಾಜಿ ದೇವಸ್ಥಾನದ ಅರ್ಚಕರ ಮೂವರು ಪುತ್ರಿಯರ ಮದುವೆಯ ಫೋಟೋ, ಎಲ್ಲಾ ಮೂವರ ಚಿನ್ನದ ಆಭರಣಗಳ ತೂಕ 125 ಕೆಜಿ! ಭಾರತೀಯ ನಾಗರಿಕರು ಎಲ್ಲಿ ದಾನ ಮಾಡಬೇಕೆಂದು ಯೋಚಿಸಬೇಕು. ಏಕೆಂದರೆ ನೀವು ದಾನ ಮಾಡುವ ಚಿನ್ನದ ಆಭರಣಗಳು ದೇವಾಲಯದ ಅಭಿವೃದ್ಧಿಗೆ ಹೋಗುತ್ತಿಲ್ಲ. ಬದಲಾಗಿ ಅಲ್ಲಿನ ಅರ್ಚಕರ ಮನೆಗೆ ಸೇರುತ್ತಿದೆ. ಏಕೆ ಈ ಬಗ್ಗೆ ಅಲ್ಲಿನ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಇದು ಧರ್ಮದ್ರೋಹ ಅಲ್ಲವೆ?” ಎಂದು  ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. He’s a pandit of…

Read More

Fact Check: ವ್ಯಕ್ತಿಯೊಬ್ಬ ಚಪ್ಪಲಿಯನ್ನು ಧರಿಸಿ ಆಲೂಗಡ್ಡೆಗಳನ್ನು ತೊಳೆಯುತ್ತಿರುವ ವೀಡಿಯೋ ಉತ್ತರ ಪ್ರದೇಶದ್ದು ಎಂಬುದಕ್ಕೆ ಆಧಾರಗಳಿಲ್ಲ

ಕೆಲವು ದಿನಗಳಿಂದ ಒಬ್ಬ ವ್ಯಕ್ತಿಯು ತನ್ನ ಪಾದಗಳನ್ನು ಬಳಸಿ ಆಲೂಗಡ್ಡೆಯನ್ನು ತೊಳೆಯುತ್ತಿರುವುದನ್ನು ಚಿತ್ರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ, ಇದು ಸಹರಾನ್‌ಪುರದ ಇತ್ತೀಚಿನ ವೀಡಿಯೊ ಎಂದು ಹೇಳಿಕೊಳ್ಳಲಾಗಿದೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಚಪ್ಪಲಿಯನ್ನು ಧರಿಸಿ ಆಲೂಗೆಡ್ಡೆಗಳನ್ನು ತುಳಿಯುವ ವೀಡಿಯೋ ಎಕ್ಸ್‌(ಟ್ವಿಟರ್)ನಲ್ಲಿ ವೈರಲ್ ಆಗಿದೆ. ಅನೇಕರು ಈ ವೀಡಿಯೋ ತುಣುಕನ್ನು ಹಂಚಿಕೊಂಡು “ಅಂಗಡಿ- “ಕುಮಾರ್ ಸ್ವೀಟ್”. ಗುಣಮಟ್ಟ- ಸಮೋಸ, ಆಲೂ ಪುರಿ ಸಬ್ಜಿ. ವಿಳಾಸ- ಘಂಟಾಘರ್ ಹತ್ತಿರ, ಸಹರಾನ್ಪುರ್, ಯುಪಿ. ಈಗ “ಕುಮಾರ್ ಸ್ವೀಟ್” ಆಗಿರುವುದರಿಂದ ಯಾರ ಭಾವನೆಗಳಿಗೂ ಧಕ್ಕೆಯಾಗುವುದಿಲ್ಲ.” ಎಂಬ ಶೀರ್ಷಿಕೆಯೊಂದಿಗೆ…

Read More

Fact Check | ಫರೀದ್‌ಪುರ ದೇವಸ್ಥಾನದಲ್ಲಿ ವಿಗ್ರಹಗಳನ್ನು ದ್ವಂಸಗೊಳಿಸಿದ ವ್ಯಕ್ತಿ ಬಾಂಗ್ಲಾದೇಶದವನೇ ಹೊರತು ಭಾರತೀಯನಲ್ಲ

“ಹರಿ ಮಂದಿರ ಮತ್ತು ಕಾಳಿ ಎಂಬ ಎರಡು ಹಿಂದೂ ದೇವಾಲಯಗಳಲ್ಲಿ ವಿಗ್ರಹಗಳನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫರೀದ್‌ಪುರದ ಪೊಲೀಸರು 45 ವರ್ಷ ವಯಸ್ಸಿನ ಸಂಜಿತ್ ಬಿಸ್ವಾಸ್ ಅವರನ್ನು ಬಂಧಿಸಿದ್ದಾರೆ . ಈ ಸರಣಿ ಘಟನೆಗಳು ಇದೇ ಸೆಪ್ಟೆಂಬರ್ 14 ರ ರಾತ್ರಿ ಸಂಭವಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.” ಎಂದು ಕೆಲವರು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು “ಇತ್ತೀಚೆಗೆ, ಧರ್ಮದಿಂದ ಹಿಂದೂ ಆಗಿರುವ ಮತ್ತು ಮಾನಸಿಕ ಅಸ್ವಸ್ಥನಂತೆ ನಟಿಸುತ್ತಿರುವ ಭಾರತೀಯ ವ್ಯಕ್ತಿಯೊಬ್ಬರು ಬಾಂಗ್ಲಾದೇಶದಲ್ಲಿ ಹಿಂದೂ ವಿಗ್ರಹಗಳನ್ನು ಧ್ವಂಸ…

Read More

Fact Check : ರಾಹುಲ್‌ಗಾಂಧಿಯವರು ಭಾಗವಹಿಸಿದ್ದ ಅಮೇರಿಕದ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡಿಲ್ಲ

ಲೋಕಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಮತ್ತು ಕಾಂಗ್ರೆಸ್‌ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡಲು ವೇದಿಕೆಗೆ ಹೋದಾಗ ಪಾಕಿಸ್ತಾನದ  ರಾಷ್ಟ್ರಗೀತೆಯನ್ನು ಹಾಡಿದ್ದಾರೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಭಾರತವನ್ನು ಟೀಕಿಸುವ” ಅವರ ಭಾಷಣಗಳಿಂದಾಗಿ ಕೆಲವು ಮಾಧ್ಯಮ ಬಳಕೆದಾರರು “ಗಾಂಧಿಯವರನ್ನು ಪಾಕಿಸ್ತಾನದವರು ಎಂದು ತಿಳಿದಿದ್ದಾರೆ” ಎಂದು ಹಂಚಿಕೊಳ್ಳಲಾಗುತ್ತಿದೆ.   ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಪೋಸ್ಟರ್‌ನ್ನು ಕುರಿತು ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, ಅಮೇರಿಕದಲ್ಲಿ ಗಾಂಧಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪಾಕಿಸ್ತಾನದ…

Read More

Fact Check : ಇತ್ತೀಚೆಗೆ ಲೆಬನಾನ್‌ನಲ್ಲಿ ಸೌರ ಫಲಕಗಳು ಸ್ಪೋಟಗೊಂಡಿವೆ ಎಂಬುದು ಸುಳ್ಳು

ಇತ್ತೀಚೆಗೆ ಲೆಬನಾನ್‌ನಲ್ಲಿ  ಸೌರ ಫಲಕಗಳು ಸ್ಪೋಟಗೊಂಡಿದ್ದು, ಅಲ್ಲಿ ಅನೇಕ ಜನರು ಸತ್ತಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಲೆಬನಾನ್: ಸೌರ ಫಲಕಗಳು  ವಿದ್ಯುತ್ ಬೆಂಕಿಯಿಂದ ಸ್ಪೋಟಗೊಳ್ಳುತ್ತಿವೆ. ಇದರಿಂದಾಗಿ ಇಲ್ಲಿಯವರೆಗೆ 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಫೇಸ್‌ಬುಕ್ ಬಳಕೆದಾರರು ಹಂಚಿಕೊಂಡಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಪೋಸ್ಟರ್‌ನ್ನು Google ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2023ರ ಜುಲೈ 21ರಂದು ಮಾಧ್ಯಮಗಳಲ್ಲಿ ಹಂಚಿಕೊಂಡ “ಸೌರ…

Read More
ಡ್ರೋನ್‌ ದಾಳಿ

Fact Check: ಇಸ್ರೇಲ್‌ನ ತೈಲ ಸಂಸ್ಕರಣಾಗಾರದ ಮೇಲೆ ಹಿಜ್ಬುಲ್ಲಾ ಡ್ರೋನ್‌ ದಾಳಿ ನಡೆಸಿದೆ ಎಂದು ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ವೀಡಿಯೋ ಹಂಚಿಕೆ

ಇತ್ತೀಚೆಗೆ ಡ್ರೋನ್‌ ದಾಳಿಯಾಗುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳಲ್ಲಿ ಇಸ್ರೇಲಿ ತೈಲ ಸಂಸ್ಕರಣಾಗಾರದ ಮೇಲೆ ಹಿಜ್ಬುಲ್ಲಾ ದಾಳಿ ನಡೆಸಿದೆ ಎಂದು ಡ್ರೋನ್ ದಾಳಿಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. https://twitter.com/Rizwanmalik49/status/1838177525500895678 ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ನಾವು ವೈರಲ್ ವೀಡಿಯೋವನ್ನು ಕೀಫ್ರೆಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್‌ ಇಮೇಜ್‌ ಸರ್ಚ್‌ನಲ್ಲಿ ಹುಡುಕಿದಾಗ ವೈರಲ್‌ ವಿಡಿಯೋವನ್ನು ಹೋಲುವ ವೀಡಿಯೋಗಳು ಮತ್ತು ವರದಿಗಳು ಲಭ್ಯವಾಗಿದ್ದು, ವರದಿಗಳ ಪ್ರಕಾರ,…

Read More

Fact Check | ತಿರುಪತಿ ಲಾಡು ತಿಂದವರಿಗೆ ಮನೆ ಕೊಡುವುದಿಲ್ಲ ಎಂಬುದು ಎಡಿಟೆಡ್‌ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ” ಸಸ್ಯಹಾರಿಗಳಿಗೆ ಮಾತ್ರ ಮನೆ ನೀಡುಲಾಗುತ್ತದೆ. ತಿರುಪತಿ ಲಾಡು ಸೇವಿಸಿದವರಿಗೆ ಮನೆ ನೀಡಲಾಗುವುದಿಲ್ಲ” ಎಂಬ ಅರ್ಥದಲ್ಲಿ ಮನೆಯ ಮುಂದಿನ ಗೇಟ್‌ನಲ್ಲಿ ಪೋಸ್ಟರ್‌ವೊಂದನ್ನು ಹಾಕಿರುವ ಫೋಟೋವೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋವನ್ನು ನೋಡಿದ ಹಲವು ಮಂದಿ ಫೇಸ್‌ಬುಕ್‌ ಸೇರಿದಂತೆ ಹಲವು ಕಡೆಗಳಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಮಂದಿ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. திருப்பதி லட்டு சாப்பிடுபவர்களுக்கு வீடு இல்லயாம் 🤭🤭🤭🤭#beefladdu #thirumalathirupathi #nohouseforrent pic.twitter.com/eoADFs4yXv — Shyammsundarr_vck, Msc,B.Ed,PhD., (@Shyamsu24) September 23, 2024…

Read More
ಶ್ರೀಕೃಷ್ಣ ಕುಲಕರ್ಣಿ

Fact Check: ಗಾಂಧೀಜಿಯವರ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ರಾಹುಲ್ ಗಾಂಧಿಗೆ ಬರೆದ ಹಳೆಯ ಪತ್ರವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ

ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರಿಗೆ ಬರೆದ ಬಹಿರಂಗ ಪತ್ರ ಎಂಬ ಸಂದೇಶವೊಂದು ಹಲವಾರು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಪತ್ರದಲ್ಲಿ ಶ್ರೀಕೃಷ್ಣ ಕುಲಕರ್ಣಿಯವರು “ಮೋಹನ್ ದಾಸ್ ಕರಮಚಂದ್ ಗಾಂಧಿ ನನ್ನ ಮುತ್ತಜ್ಜ. ಅವರನ್ನು ಶ್ರೀ ನಾಥೂರಾಂ ಗೋಡ್ಸೆ ಕೊಂದರು. ಅನೇಕ ತನಿಖೆಗಳು ಮತ್ತು ಆಯೋಗಗಳು ಈ ಪ್ರಕರಣವನ್ನು ಸಂಶೋಧಿಸಿವೆ. ಗಾಂಧಿ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್‌ನ ಯಾರೂ ಸಿಲುಕಿಸಿಲ್ಲ. ಆರ್‌ಎಸ್‌ಎಸ್‌ ಮೇಲೆ ಹೊಣೆಯನ್ನೂ ಹೊರಿಸಿಲ್ಲ. ಶ್ರೀ ನಾಥೂರಾಂ ಗೋಡ್ಸೆಯನ್ನು…

Read More

Fact Check | ಕಾನ್ಪುರದಲ್ಲಿ ನಡೆದ ಸಾಹಿಲ್ ಹತ್ಯೆ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಘಟನೆ ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಇಬ್ಬರು ಯುವಕನೊಬ್ಬನಿಗೆ ಥಳಿಸುತ್ತಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವೀಡಿಯೊವನ್ನು ಯುಪಿಯ ಕಾನ್ಪುರದಲ್ಲಿ ಮುಸ್ಲಿಂ ಯುವಕ ಸಾಹಿಲ್ ಅನ್ನು ಹಿಂದೂ ಯುವಕರು ಹೊಡೆದು ಕೊಂದಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಹಲವರು ಯುಪಿಯಲ್ಲಿ ಇತ್ತೀಚೆಗೆ ಕೋಮು ಸಂಬಂಧಿತ ಗಲಭೆಗಳು ಹಾಗೂ ಹತ್ಯೆಗಳು ಜಾಸ್ತಿಯಾಗುತ್ತಿದೆ ಎಂದು ಬರೆದುಕೊಂಡು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. उत्तर प्रदेश: कानपुर में साहिल नामक मुस्लिम युवक की…

Read More

Fact Check | ಲೆಬನಾನ್‌ನಲ್ಲಿನ ಅಗ್ನಿ ದುರಂತದ ವಿಡಿಯೋವನ್ನು ಇಸ್ರೇಲ್‌ ದಾಳಿಯ ವಿಡಿಯೋ ಎಂದು ಹಂಚಿಕೆ

ಈ ವಿಡಿಯೋ ನೋಡಿ “ಇಸ್ರೇಲಿ ವಾಯುಪಡೆಯು ನೂರು ಲಾಂಚರ್‌ಗಳನ್ನು ಹೊಡೆದು ಲೆಬನಾನ್‌ನಲ್ಲಿ ಸುಮಾರು 1,00,000 ಶೆಲ್‌ಗಳನ್ನು ನಾಶಪಡಿಸಿದೆ. ಇಸ್ರೇಲ್‌ನ ಮೆಟುಲಾ ನಗರದ ಮೇಲೆ ದಾಳಿ ಮಾಡಲು ಹಿಜ್ಬುಲ್ಲಾ ಸಿದ್ಧವಾಗುತ್ತಿರುವಾಗ ಇಸ್ರೇಲ್‌ ದಾಳಿ ನಡೆಸಿ ಹಿಜ್ಬುಲ್ಲಾಗಳ ಯೋಜನೆಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಇಸ್ರೇಲ್‌ನ ಈ ದಾಳಿಯಿಂದಾಗಿ, ಕನಿಷ್ಟ ಸಾವಿರಕ್ಕೂ ಅಧಿಕ ಹಿಜ್ಬುಲ್ಲಾಗಳು ಸಾವನ್ನಪ್ಪಿರುವ ಸಾದ್ಯತೆ ಇದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕಾವಗಿ ಹಂಚಿಕೊಳ್ಳಲಾಗುತ್ತಿದೆ.  Incredible footage…Israeli Air Force attacked 100 #Hezbollah launchers & 1,000 launch…

Read More