ಜೈ ಶ್ರೀ ರಾಮ್

Fact Check: ಪಾಕಿಸ್ತಾನ ಮೂಲದ ಶಯಾನ್ ಅಲಿ ಕೃಷ್ಣ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿರುವುದನ್ನು ಇಸ್ರೇಲಿಗರು ಭಾರತವನ್ನು ಬೆಂಬಲಿಸಿದ್ದಾರೆ ಎಂದು ಹಂಚಿಕೆ

ಇಸ್ರೇಲಿ ಧ್ವಜವನ್ನು ಧರಿಸಿ ವಿದೇಶಿಯರೊಬ್ಬರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ, ಈ ವೀಡಿಯೊ ಇಸ್ರೇಲ್‌ನದು ಎಂದು ಹೇಳಿಕೊಂಡು, ಪ್ಯಾಲೆಸ್ಟೈನ್ ಪರವಾದ ಬೆಂಬಲಿಗರು ಭಾರತದ ವಿರುದ್ಧ ಘೋಷಣೆ ಕೂಗುವಾಗ ಇಸ್ರೇಲಿಗರು ಭಾರತವನ್ನು ಬೆಂಬಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೀಡಿಯೊವನ್ನು ಫೇಸ್ಬುಕ್‌ನಲ್ಲಿ ಹಂಚಿಕೊಳ್ಳಲಾಗಿದ್ದು, “പലസ്തീൻ അനുകൂലികൾ ഇന്ത്യക്കെതിരെ മുദ്രാവാക്യം വിളിക്കുമ്പോൾ #ഇന്ത്യയെ പിന്തുണച്ച് #ജയ് ശ്രീറാം ഇസ്രായേലിൽ നിന്നുമുള്ള മനോഹരമായ വീഡിയോ”(ಕನ್ನಡ ಅನುವಾದ: ಭಾರತದ ವಿರುದ್ಧ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು…

Read More

Fact Check | 100ಕ್ಕೂ ಹೆಚ್ಚು ಜನರನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದ ದೇವೇಂದ್ರ ಶರ್ಮಾನ ಬಂಧನ ಎಂಬುದು ಸುಳ್ಳು

ಪತ್ರಿಕೆಯ ಕಟಿಂಗ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರ ಶೀರ್ಷಿಕೆಯಲ್ಲಿ, 100 ಜನರನ್ನು ಕೊಂದ ಡೆತ್‌ ಡಾಕ್ಟರ್‌ನನ್ನು ಬಂಧಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಆರೋಪಿಯ ಹೆಸರನ್ನು ದೇವೇಂದ್ರ ಶರ್ಮಾ ಎಂದು ನೀಡಲಾಗಿದೆ. ಈ ಪತ್ರಿಕೆಯ ಕಟಿಂಗ್ ಅನ್ನು ಹಂಚಿಕೊಳ್ಳುವ ಮೂಲಕ, ಕೆಲವು ಬಳಕೆದಾರರು ಇತ್ತೀಚೆಗೆ ದೇವೇಂದ್ರ ಶರ್ಮಾನನ್ನು ಬಂಧಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಮತ್ತು ಅದನ್ನು ಕೋಮು ಬಣ್ಣ ನೀಡಿ ಹಂಚಿಕೊಳ್ಳುತ್ತಿದ್ದಾರೆ. Case:- Doctor involved in illegal transplantation of 125 kidneys. Name:- Devendra SHARMA…

Read More

Fact Check : ಯೆಮೆನ್‌ನ ಗ್ಯಾಸ್ ಸ್ಫೋಟವನ್ನು ಇಸ್ರೇಲ್‌ನಲ್ಲಿ ನಡೆದ ದಾಳಿ ಎಂದು ತಪ್ಪಾಗಿ ಹಂಚಿಕೆ

ಇರಾನ್ ಕ್ಷಿಪಣಿ ದಾಳಿಯಿಂದ ಇಸ್ರೇಲ್‌ನಲ್ಲಿ ಭಾರೀ ಸ್ಫೋಟವಾಗಿದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ‘ಇಸ್ರೇಲ್‌ನ ಟೆಲಿಗ್ರಾಮ್ ಗುಂಪುಗಳಲ್ಲಿ ಪ್ರಸಾರವಾಗಿರುವ ವೀಡಿಯೊಗಳು ಇಸ್ರೇಲ್‌ನ ಮೇಲೆ ಇರಾನ್ ದಾಳಿಯ ದುರಂತಗಳನ್ನು ಮತ್ತು  ಬೆಂಕಿ ಇನ್ನೂ ಉರಿಯುತ್ತಿರುವುದನ್ನುತೋರಿಸಿವೆ.‌ ಇಂತಹ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಪ್ರಸಾರ ಮಾಡಬಾರದು, ಹಂಚಿಕೊಳ್ಳಬಾರದು ಎಂದು ಇಸ್ರೇಲ್ ಜನರಲ್ಲಿ ಕೇಳಿಕೊಂಡಿದೆ“. ಎಂದು ಸ್ಫೋಟದ ವೀಡಿಯೊವನ್ನು ಶೀರ್ಷಿಕೆಯೊಂದಿಗೆ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ,  Zee…

Read More

Fact Check | ಇರಾನ್‌ ದಾಳಿಯಿಂದ ಇಸ್ರೇಲ್‌ ವಾಯು ನೆಲೆ ನಾಶಗೊಂಡಿದೆ ಎಂದು ರಾಫಾದ ಫೋಟೋ ಹಂಚಿಕೆ

“ಇಸ್ರೇಲ್ ಮೇಲೆ ಇರಾನ್ ಇತ್ತೀಚಿಗೆ ಕ್ಷಿಪಣಿ ದಾಳಿಯನ್ನು ನಡೆಸಿದ ನಂತರ ಇಸ್ರೇಲ್‌ನ ವೈಮಾನಿಕ ನೆಲೆ ನಾಶಗೊಂಡಿದ್ದು, ಅಲ್ಲಿದ್ದ ಎಫ್ 35 ಯುದ್ಧ ವಿಮಾನಗಳು ಸಂಪೂರ್ಣವಾಗಿ ನಾಶಗೊಂಡಿವೆ. ಇರನ್‌ನ ಈ ದಾಳಿಯಿಂದಾಗಿ ಇಂದು ಇಸ್ರೇಲ್‌ ಇಂತಜಹ ಸ್ಥಿತಿಯನ್ನು ಎದುರಿಸುತ್ತದೆ ಎಂದು ಅಲ್ಲಿ ಯಹೂದಿಗಳು ಅಂದುಕೊಂಡಿರಲಿಲ್ಲ. ಈಗ ಇಸ್ರೇಲ್‌ ವೈಮಾನಿಕ ನೆಲೆ ಮತ್ತು ಯುದ್ಧ ವಿಮಾನಗಳು ಕಾರ್ಯನಿರ್ವಹಿಸದ ಸ್ಥಿತಿಗೆ ಬಂದು ತಲುಪಿವೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ 🇮🇷ईरान ने 30 इजरायली F-35 लड़ाकू विमानों…

Read More

Fact Check: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಬಾಲಕಿಗೆ ಬಲವಂತವಾಗಿ ಚುಂಬಿಸಿದ್ದಾರೆ ಎಂದು ಎಡಿಟ್‌ ಮಾಡಿದ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಸಾವಿನ ನಂತರ ಹೆಚ್ಚಿನ ಭದ್ರತಾ ಕ್ರಮಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸಂಭಾವ್ಯ ಪ್ರತೀಕಾರದ ಮೇಲಿನ ಕಳವಳ ಮತ್ತು ಪ್ರದೇಶದಲ್ಲಿ ಹೆಚ್ಚಿದ ಉದ್ವಿಗ್ನತೆಯಿಂದಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.  ಆದರೆ ಸಧ್ಯ ಅಯತೊಲ್ಲಾ ಅಲಿ ಖಮೇನಿ ಅವರ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, “ಅಸಹ್ಯಕರ ಮರುಭೂಮಿ ಸಂಸ್ಕೃತಿ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು 5 ವರ್ಷದ ಬಾಲಕಿಯನ್ನು…

Read More

Fact Check : ಇದು ರಷ್ಯಾದ ಮೇಲಾದ ದಾಳಿಯ ವಿಡಿಯೋ ಹೊರತು, ಇರಾಕ್‌ ಟೆಲ್ ಅವಿವ್‌ ಮೇಲೆ ನಡೆಸಿದ ದಾಳಿಯದ್ದಲ್ಲ

ಇತ್ತೀಚೆಗೆ ಇಸ್ರೇಲ್​ನ ಟೆಲ್ ಅವಿವ್ ಮೇಲೆ ಇರಾಕ್​ ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂಬ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಅಕ್ಟೋಬರ್ 1 ರಂದು ಇರಾನ್ ಸುಮಾರು 180 ಕ್ಷಿಪಣಿಗಳಿಂದ ಇಸ್ರೇಲ್‌ ಮೇಲೆ ದಾಳಿ ನಡೆಸಿದಾಗ, ಇಸ್ರೇಲ್‌ನ ಅಧಿಕಾರಿಗಳು ಯಾವುದೇ ಗಂಭೀರವಾದ ಗಾಯಗಳ ಕುರಿತು ವರದಿ ಬಿಡುಗಡೆ ಮಾಡಿಲ್ಲ. ಕ್ಷಿಪಣಿಗಳನ್ನು ಇಸ್ರೇಲಿನ ರಕ್ಷಣಾ ವ್ಯವಸ್ಥೆಗಳು ಹಿಮ್ಮೆಟ್ಟಿಸಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಈ ನಡುವೆ, ರಸ್ತೆಯ ಮಧ್ಯದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದೆ ಎಂಬ ವಿಡಿಯೋ ಸಾಮಾಜಿಕ…

Read More

Fact Check: ಹಿಮಾಚಲ ಪ್ರದೇಶದಲ್ಲಿ ಶಿವಲಿಂಗವನ್ನು ಧ್ವಂಸ ಮಾಡಿರುವುದು ಮಾನಸಿಕ ಅಸ್ವಸ್ತ ಮಹಿಳೆಯೇ ಹೊರತು ಮುಸ್ಲಿಮರಲ್ಲ!

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನಗ್ರೋಟಾದಲ್ಲಿ ಶುಕ್ರವಾರ, ಸೆಪ್ಟೆಂಬರ್ 27, 2024 ರಂದು ಶಿಮಾದಲ್ಲಿ ಕೋಮು ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಶಿವಲಿಂಗವನ್ನು ಧ್ವಂಸಗೊಳಿಸಲಾಗಿದೆ. ಸಿಟಿ ನ್ಯೂಸ್ ಹಿಮಾಚಲ್ ಎಂಬ ಸ್ಥಳೀಯ ಮಾಧ್ಯಮ ಸಂಸ್ಥೆ ಟ್ವೀಟ್ ಮಾಡಿದ ವೀಡಿಯೊ ತುಣುಕು ಸಧ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ ದೇವಾಲಯದ ಒಳಗೆ ಅಪವಿತ್ರಗೊಳಿಸಿದ ಶಿವಲಿಂಗವನ್ನು ತೋರಿಸಿದರೆ, ನಿರೂಪಕ ಇದನ್ನು ಕೆಲವು ದುಷ್ಕರ್ಮಿಗಳ ಕೃತ್ಯ ಎಂದು ವಿವರಿಸುತ್ತಾರೆ. ತನಿಖೆಯ ಬಗ್ಗೆ ಪೊಲೀಸರನ್ನು ಕೇಳಿದಾಗ, ತನಿಖೆ ನಡೆಯುತ್ತಿದೆ ಮತ್ತು ಪೊಲೀಸರು ನೆರೆಹೊರೆಯ ಸಿಸಿಟಿವಿ ದೃಶ್ಯಾವಳಿಗಳನ್ನು…

Read More

Fact Check | ಉತ್ತರ ಪ್ರದೇಶದಲ್ಲಿ ಧಾರ್ಮಿಕ ಕಾರಣಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ ಎಂಬುದು ಸುಳ್ಳು

ಉತ್ತರ ಪ್ರದೇಶಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಯುವಕನೊಬ್ಬನನ್ನು ಅಮಾನುಷವಾಗಿ ಥಳಿಸಲಾಗುತ್ತಿದ್ದು, ಹಿಂದುಗಳ ಗುಂಪೊಂದು ಮುಸ್ಲಿಂ ಯುವಕನಿಗೆ ಥಳಿಸಿ ಆತನನ್ನು ಹತ್ಯೆ ಮಾಡಿದ್ದಾರೆ ಎಂದು ವಿಡಿಯೋದೊಂದಿಗೆ ಲಘು ಟಿಪ್ಪಣಿಯನ್ನು ಹಂಚಿಕೊಳ್ಳಲಾಗುತ್ತಿದೆ. ಇನ್ನೂ ಹಲವರು ಈ ವಿಡಿಯೋಗೆ ರಾಜಕೀಯದ ಆಯಾಮವನ್ನು ಕೂಡ ನೀಡಿದ್ದು, ವಿಡಿಯೋ ಕುರಿತು ವಿವಿಧ ಚರ್ಚೆಗಳನ್ನು ಕೂಡ ಹುಟ್ಟುಹಾಕಿದೆ. Muslim youth "Arshad" was tied up and brutally beaten in Dataganj, Budaun. Due to the…

Read More
ಮಹಾತ್ಮ ಗಾಂಧಿ

Fact Check: ಮಹಾತ್ಮ ಗಾಂಧಿಯವರು ಮಹಿಳಾ ಶಿಕ್ಷಣ ಮತ್ತು ಮತದಾನದ ಹಕ್ಕನ್ನು ನಿರಾಕರಿಸಿದ್ದರು ಎಂಬುದು ಸುಳ್ಳು

ಇತ್ತೀಚೆಗೆ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕಾಲೇಜು ಯುವಕನೊಬ್ಬ ಗಾಂಧೀಜಿಯವರ “ನನ್ನ ಸತ್ಯನ್ವೇಷಣೆ” ಆತ್ಮ ಚರಿತ್ರೆಯನ್ನು ಉಲ್ಲೇಖಿಸಿ, “1897ರಲ್ಲಿ ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡು, ಈ ವ್ಯವಸ್ಥೆ ಇದ್ದ ಹಾಗೆಯೇ ಇರಬೇಕು ಎಂದು ಪ್ರತಿಪಾದಿಸಿದ್ದರು, ಅದಕ್ಕೆ ದಾಖಲೆಗಳು ಬಾಲಗಂಗಾಧರ್ ತಿಲಕ್ ಅವರ ಕೇಸರಿ ಪತ್ರಿಕೆಯಲ್ಲಿ ಸಿಗುತ್ತದೆ. ಗಾಂಧೀಜಿಯವರ ವಾದ ಯಥಾವತ್ತಾಗಿ ಜಾರಿಯಾಗಿದ್ದರೆ ಇಲ್ಲಿ ಯಾವ ಹೆಣ್ಣು ಮಕ್ಕಳು ಕೂರುವಂತಿರಲಿಲ್ಲ, ಶಿಕ್ಷಣ ಪಡೆಯುವಂತಿರಲಿಲ್ಲ. 1930, 31, 32ರಲ್ಲಿ ದುಂಡು ಮೇಜಿನ ಸಭೆಯಲ್ಲಿ ಗಾಂಧೀಜಿಯವರು ವಾದ ಮಾಡುತ್ತಾರೆ, ಮಹಿಳೆಯರಿಗೆ ಮತದಾನದ ಹಕ್ಕು ಬೇಡ…

Read More

Fact Check I ಫೇಲಸ್ತೀನ್ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿಯವರನ್ನು “ಯಹೂದಿಯರ ಗುಲಾಮ” ಎಂದು ಕರೆದಿಲ್ಲ

ಫೇಲಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್‌ರವರು ಪ್ರಧಾನಿ ನರೇಂದ್ರ ಮೋದಿಯವರನ್ನು “ಯಹೂದಿಯರ ಗುಲಾಮ” ಎಂದು ಬೈದಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನಿ ಮೂಲದ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಮೋದಿಯವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಸಂಭಾಷಣೆಯ ಕುರಿತು ಟ್ವೀಟ್ ಪೋಸ್ಟ್ ಮಾಡಿದ ಬಳಿಕ,  ಮೋದಿಯವರ ಬಗ್ಗೆ ಫೇಲಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್‌ರವರು ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಆರೋಪಿಸಲಾಗುತ್ತಿದೆ. ಫ್ಯಾಕ್ಟ್‌ಚೆಕ್ ಈ ಹೇಳಿಕೆ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಯಾಕೆಂದರೆ, ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ….

Read More