ನಮಾಜ್

Fact Check: ಶುಕ್ರವಾರ ನಮಾಜ್ ಮಾಡಲೆಂದು SSLC ಪರೀಕ್ಷೆಯನ್ನು ಮಧ್ಯಾಹ್ನ ಇಡಲಾಗಿದೆ ಎಂಬುದು ಸುಳ್ಳು

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಎಲ್ಲಾ ನಡೆಗಳನ್ನು ಮುಸ್ಲಿಂ ಓಲೈಕೆಗಾಗಿ ಎಂದು ಆರೋಪಿಸಿ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಭಾಗವಾಗಿ,  “ಎಸ್ ಎಸ್ ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿಯಲ್ಲೂ ಸಹ ಮುಸ್ಲಿಂ ತುಷ್ಟೀಕರಣ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರದ ನಿರ್ದೇಶನದಂತೆ, ರಾಜ್ಯ ಶಿಕ್ಷಣ ಇಲಾಖೆ ಬೆಳಿಗ್ಗೆಯ ನಮಾಜ್ ಮಾಡಲು ಅನುಕೂಲ ಮಾಡಿಕೊಡಲು ಉಳಿದೆಲ್ಲ ದಿನದ ವೇಳಾಪಟ್ಟಿಯ ಸಮಯಕ್ಕೆ ಬದಲಾಗಿ ಶುಕ್ರವಾರದಂದು ಮಧ್ಯಾಹ್ನ ಪರೀಕ್ಷೆ ನಡೆಸಲು ನಿರ್ಧರಿಸಿದೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ…

Read More

Fact Check |ಇದು ವಿಚಿತ್ರ ಜೀವಿಯಲ್ಲ, ಇದರ ಹೆಸರು ಜೈಂಟ್ ಆಂಟ್‌ಈಟರ್‌.. ಗುಬ್ಬಿಗೆ ಬಂದಿದೆ ಎಂಬುದು ಸುಳ್ಳು!

“ಗುಬ್ಬಿ ತಾಲೂಕು ದೊಡ್ಡಗುಣಿ ಬಳಿ ಇರುವ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡ ವಿಚಿತ್ರ ಪ್ರಾಣಿ. ಈ ಸೃಷ್ಟಿಯಲ್ಲಿ ಇನ್ನೂ ಏನೇನಿದೆಯೋ ಬಲ್ಲವರಾರು? ಕನಕಪುರ ಭಾಗದ ಕಾಡುಗಳಲ್ಲಿ ಕೂಡ ಈ ಮುಳ್ಳುಹಂದಿಯ ಮತ್ತೊಂದು ಪ್ರಬೇಧ ಇದೆ ಎಂದು ತಿಳಿದುಬಂದಿದೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬಿಸಲಾಗುತ್ತಿದೆ. ಇನ್ನೂ ಕೆಲವರು ಈ ಸುದ್ದಿಯಿಂದಾಗಿ ತುಮಕೂರು ಅರಣ್ಯವಲಯದ ಸುತ್ತಮುತ್ತಲು ವಾಸಿಸುವ ಜನರಲ್ಲಿ ಆತಂಕ ಮನೆ ಮಾಡಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಪ್ರಾಣಿ ಯಾವುದು? ಇದು ನಿಜಕ್ಕೂ ವಿಚಿತ್ರ ಪ್ರಾಣಿಯೇ…

Read More

ಬಜೆಟ್‌ ಕುರಿತ ಪ್ರಶ್ನೆಗೆ ಸಿಟ್ಟಾದ ನಿರ್ಮಲ ಸೀತಾರಾಮನ್ ಎಂದು ಹಿಂದಿನ ವರ್ಷದ ವಿಡಿಯೋ ಹಂಚಿಕೆ

ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸಂಸತ್ತಿನಲ್ಲಿ ಸತತ ಆರನೇ ಬಜೆಟ್ ಮಂಡಿಸಿದ್ದಾರೆ. ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ದಕ್ಷಿಣ ಭಾರತದ ಬಹುತೇಕ ಅನುಧಾನಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಅದರಲ್ಲೂ ಗುಜರಾತ್, ಉತ್ತರ ಪ್ರದೇಶದ ರಾಜ್ಯಗಳಿಗೆ ಹಂಚುತ್ತಿರುವ ಅನ್ಯಾಯದ ಕುರಿತು ದಕ್ಷಿಣ ಭಾರತದಾದ್ಯಂತ ಪ್ರತ್ಯೇಕ ರಾಷ್ಟ್ರದ ಕೂಗು ಸಹ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ” ಇದನ್ನು ನೋಡಿ. ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ನಡೆಸಿದ್ದರು ಮತ್ತು ಪತ್ರಕರ್ತರೊಬ್ಬರು ಬಜೆಟ್ ಕುರಿತು…

Read More

Fact Check | ಪ.ಬಂಗಾಳದ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಕೇವಲ ಮುಸ್ಲಿಂ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿಲ್ಲ

ಸಾಮಾಜಿಕ ಜಾಲತಾಣದಲ್ಲಿ  “ಪಶ್ಚಿಮ ಬಂಗಾಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ 2019 ರಲ್ಲಿ, ಯಾವುದೇ ಹಿಂದೂ ಆಯ್ಕೆಯಾಗಿಲ್ಲ, ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಮುಸ್ಲಿಮರು” ಎಂಬ ಸುದ್ದಿಯೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರಿನ ಪಟ್ಟಿಯನ್ನು ಕೂಡ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಸಾಕಷ್ಟು ಮಂದಿ ಈ ಬಗ್ಗೆ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹಲವಾರು ಮಂದಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಹಾಗೂ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಾಕಷ್ಟು ಮಂದಿ…

Read More

Fact Check | ತನ್ನ ಸಾವಿನ ಬಗ್ಗೆ ತಾನೆ ಸುಳ್ಳು ಸುದ್ದಿ ಹರಡಿದ ನಟಿ ಪೂನಂ ಪಾಂಡೆ

ಮಾಡೆಲ್ ಹಾಗೂ ಬಾಲಿವುಡ್ ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಎಂದು ಆಕೆಯ ಸೋಷಿಯಲ್ ಮೀಡಿಯಾ ತಂಡ ಶುಕ್ರವಾರ ಬೆಳಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ಹಾಕಿದ್ದ ಪೋಸ್ಟ್‌ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಅಲ್ಲದೇ, ಸಾವಿನ ಬಗ್ಗೆ ಹತ್ತಾರು ಗೊಂದಲಗಳು ಸೃಷ್ಟಿಯಾಗಿತ್ತು.   View this post on Instagram   A post shared by Poonam Pandey (@poonampandeyreal) ಪೂನಂ ಪಾಂಡೆ ಅವರ ಇನ್​ಸ್ಟಾಗ್ರಾಮ್​ನಲ್ಲಿ ಅವರ ಪೋಸ್ಟ್ ಒಂದನ್ನು ಪ್ರಕಟಿಸಿದ್ದ ಅವರ ತಂಡ, “ಇಂದು ಮುಂಜಾನೆ ಸಾಕಷ್ಟು…

Read More

Fact Check: ಹತ್ತು ದಿನಗಳಲ್ಲಿ ಭಾರತ ತೊರೆಯುವಂತೆ UNMOGIPಗೆ ಪ್ರಧಾನಿ ಮೋದಿ ತಾಕಿತು ಮಾಡಿಲ್ಲ

ಭಾರತ-ಪಾಕಿಸ್ತಾನದ ಸಂಘರ್ಷಕ್ಕೆ ಸಂಬಂಧಿಸಿದಂತೆ ಅನೇಕ ಸುಳ್ಳು ಸುದ್ದಿಗಳು ಹಲವಾರು ವರ್ಷಗಳಿಂದ ಹರಿದಾಡುತ್ತಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂದಿಸಿದಂತೆ ಅನುಚ್ಚೇದ 370 ರದ್ದು ಗೊಳಿಸಿದ ಬಳಿಕ ಜಮ್ಮ ಮತ್ತು ಕಾಶ್ಮೀರದ ಭದ್ರತೆಗೆ ಸಂಬಂದಿಸಿದಂತೆ ಮತ್ತು ಭಾರತದ ಭದ್ರತೆಗೆ ಸಂಬಂಧಿಸಿದಂತೆ ಕೂಡ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗೆ, “74 ವರ್ಷಗಳ ಕಳಂಕವನ್ನು ಕೇವಲ 30 ನಿಮಿಷಗಳಲ್ಲಿ ತೆಗೆದುಹಾಕಲಾಗಿದೆ. ಭಾರತವು ಕಳೆದ 74 ವರ್ಷಗಳಿಂದ ವಿಷಕಾರಿ ಕೀಟದಿಂದ ಬಳಲುತ್ತಿದೆ, ಇದರ ಹೆಸರು ಯುನೈಟೆಡ್ ನೇಷನ್ಸ್ ಮಿಲಿಟರಿ ಅಬ್ಸರ್ವರ್ ಗ್ರೂಪ್ ಇನ್ ಇಂಡಿಯಾ…

Read More

Fact Check | ತಮಿಳುನಾಡು ಸಿಎಂ ಸ್ಟಾಲಿನ್‌ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು

“ನಮ್ಮ ಗೆಲುವು ಕೇವಲ ಹಿಂದೂ ಮತಗಳ ಮೇಲೆ ಅವಲಂಬಿತವಾಗಿದ್ದರೆ, ನಾವು ಸೋತರೂ ಪರವಾಗಿಲ್ಲ. ಡಿಎಂಕೆ ಹಿಂದೂಗಳ ಮತ ಭಿಕ್ಷೆ ಬೇಡುವ ಮಟ್ಟಕ್ಕೆ ಇಳಿಯುವುದಿಲ್ಲ.” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹಿಂದೂ ವಿರೋಧಿ ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ನ್ಯೂಸ್‌ 7 ತಮಿಳ್ ಸುದ್ದಿ ಮಾಧ್ಯಮ ವರದಿ ಮಾಡಿದೆ. ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಪೋಸ್ಟ್‌…

Read More

Fact Check: ಟಿಕ್-ಟಾಕ್ ನ ಸ್ಥಾಪಕ ಎಂದು ಚೀನಾದ ಮೋಟಿವೇಶನಲ್ ಸ್ವೀಕರ್ ವಿಡಿಯೋ ಹಂಚಿಕೆ 

2020ರಲ್ಲಿ  ದೇಶದ ಭದ್ರತೆಯ ವಿಷಯಕ್ಕೆ ಸಂಬಂಧಿಸಿದಂತೆ ಭಾರತವು ಚೀನಾ ಮೂಲದ ಟಿಕ್-ಟಾಕ್ ಅನ್ನು ನಿಷೇದಿಸಿದೆ. ಆದರೆ ಟಿಕ್‌-ಟಾಕ್ ನಿಷೇದಕ್ಕೂ ಮುಂಚೆ ಈ App  ಭಾರತದಾದ್ಯಂತ ಹೆಚ್ಚು ಪ್ರಸಿದ್ದಿಯನ್ನು ಗಳಿಸಿತ್ತು. ಈಗ ಟಿಕ್-ಟಾಗ್ ಗೆ ಸಂಬಂದಿಸಿದಂತೆ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. “ಇವರು ಟಿಕ್ ಟಾಕ್ ನ ಸ್ಥಾಪಕ ಮತ್ತು ಅಧ್ಯಕ್ಷ. ಎರಡೂ ಕಾಲಿಲ್ಲದಿದ್ದರೂ ಸಾಧನೆ ಮಾಡಿದ್ದಾರೆ. ಯಾವುದೂ ಅಸಾಧ್ಯವಲ್ಲ.” ಎಂಬ ಶಿರ್ಷಿಕೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ವಿಶೇಷಾಂಗ ಚೇತನರೊಬ್ಬರು ಕಾಲೇಜು ಯುವಕ-ಯುವತಿಯರಿಗೆ ಭಾಷಣ ಮಾಡುವುದು,…

Read More

Fact Check | ವರಹಾ ಗೋಳಾಕಾರದ ಭೂಮಿಯನ್ನು ಎತ್ತಿದ್ದರು ಎಂಬುದಕ್ಕೆ ಸ್ಪಷ್ಟ ಆಧಾರಗಳಿಲ್ಲ

“5ನೇ ಶತಮಾನದವರೆಗು ಜಗತ್ತಿನ ಜನರು ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದ್ದರು. ಆದರೆ ಭೂಮಿ ಗೋಳಾಕಾರದಲ್ಲಿದೆ ಎಂದು ಪ್ರಾಚೀನ ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿದೆ,” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಇದು ಇತ್ತೀಚೆಗೆ ಈ ರೀತಿಯಾದ ಸುದ್ದಿ ಹೆಚ್ಚು ಹೆಚ್ಚು ಹಬ್ಬುತ್ತಿದ್ದು, ಈ ಕುರಿತು ಫ್ಯಾಕ್ಟ್‌ಲೀ ಕೂಡ ಈ ಹಿಂದೆ ವರದಿ ಮಾಡಿತ್ತು. ಇನ್ನೂ ಕೆಲವರು ತಮ್ಮ ಆರೋಪಕ್ಕೆ ಸಾಕ್ಷಿಗಳು ಇವೆ ಎಂಬಂತೆ “ವರಹಾ ಗೋಳಾಕಾರದ ಭೂಮಿಯನ್ನು ಎತ್ತಿರುವ ವಿಗ್ರಹಗಳನ್ನು, ಚಿತ್ರಗಳನ್ನು ನೀವು ದೇವಾಲಯಗಳಲ್ಲಿ ನೋಡಬಹುದು” ಎಂದು…

Read More

Fact Check: ಅಯೋಧ್ಯೆಯ ರಾಮ ಮಂದಿರವೆಂದು ಜಾರ್ಖಂಡ್‌ನ ಜೈನ ಮಂದಿರದ ವಿಡಿಯೋ ಹಂಚಿಕೆ

ಅಯೋಧ್ಯೆಯ ಬಾಲ ರಾಮನ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ ಜರುಗಿದರೂ ಇನ್ನೂ ರಾಮ ಮಂದಿರದ ಕಟ್ಟುವ ಕಾರ್ಯ ಮುಂದುವರೆಯುತ್ತಲೇ ಇದೆ. ಹೀಗಾಗಲೇ ರಾಮ ಮಂದಿರದ ದೇವಾಲಯಕ್ಕೆ ಸಂಬಂದಿಸಿದಂತೆ ಹಲವಾರು ವಿಡೀಯೋಗಳು, ಪೋಟೋಗಳು ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವುಗಳಲ್ಲಿ ಕೆಲವು ಇತರ ದೇವಾಲಯದ ವಿಡಿಯೋಗಳು ಸೇರಿವೆ. ಇದಕ್ಕೆ ನಿದರ್ಶನವೆಂಬಂತೆ. ಈಗ “ಹೊಸದಾಗಿ ನಿರ್ಮಿಸಲಾದ ಅಯೋಧ್ಯೆಯ ರಾಮ ಮಂದಿರದ ದೃಶ್ಯಗಳು” ಎಂಬ ವಿಡಿಯೋ ಒಂದು ಇನ್ಟಾಗ್ರಾಮ್ ನಲ್ಲಿ ಹರಿದಾಡುತ್ತಿದೆ. ಇದನ್ನು ಏಳುವರೆ ಸಾವಿರದಷ್ಟು ಜನ ವೀಕ್ಷಿಸಿದ್ದಾರೆ. ಫ್ಯಾಕ್ಟ್‌ಚೆಕ್: ವೈರಲ್ ವೀಡಿಯೊವನ್ನು ರೋಹನ್…

Read More