ಪಾಕಿಸ್ತಾನ

Fact Check: ಪಾಕಿಸ್ತಾನದ ಪಾರ್ಲಿಮೆಂಟ್‌ನಲ್ಲಿ ಮೋದಿ ಘೋಷಣೆ ಎಂದು ಎಡಿಟೆಟ್ ವಿಡಿಯೋ ಹಂಚಿಕೆ

ಪ್ರಧಾನಿ ನರೇಂದ್ರ ಮೋದಿಯವರನ್ನು ಜಗತ್ತಿನ ಬಲಿಷ್ಠ ನಾಯಕ ಎಂಬಂತೆ ಬಿಂಬಿಸುವ ಸಲುವಾಗಿ ಅನೇಕ ಸುಳ್ಳು ಸುದ್ದಿಗಳನ್ನು, ಹೊಗಳಿಕೆಯ ಬರಹಗಳನ್ನು ಅವರ ಬೆಂಬಲಿಗರು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ದಿನನಿತ್ಯ ಹಂಚಿಕೊಳ್ಳುತ್ತಿದ್ದಾರೆ. ಇವುಗಳಲ್ಲಿ ಸುಳ್ಳೇಷ್ಟು ನಿಜವೆಷ್ಟು ಎಂದು ತಿಳಿಯದೇ ಜನ ಎಲ್ಲವನ್ನೂ ನಂಬಿಕೊಳ್ಳುತ್ತಿದ್ದಾರೆ. ಅದರಂತೆ ಈಗ, “ಭಾರತದ ಶತ್ರುರಾಷ್ಟ್ರ ಪಾಕಿಸ್ತಾನದ ಪಾರ್ಲಿಮೆಂಟ್ ನಲ್ಲಿ ಮೋದಿ.. ಮೋದಿ ಘೋಷಣೆ” ಎಂಬ ವಿಡಿಯೋ ತುಣುಕೊಂದು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.   ಫ್ಯಾಕ್ಟ್‌ಚೆಕ್: ಇದು ಎಡಿಟೆಡ್ ವಿಡಿಯೋ ಆಗಿದ್ದು. ಪಾಕಿಸ್ತಾನದ…

Read More
ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿಯವರು ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬುದು ಸುಳ್ಳು

ರಾಹುಲ್ ಗಾಂಧಿಯವರ ಮೇಲೆ ಕಳೆದ ಅನೇಕ ವರ್ಷಗಳಿಂದ ಸುಳ್ಳು ಸುದ್ದಿಗಳಿಂದ, ಆಪಾದನೆಗಳಿಂದ ಪ್ರತೀದಿನ ದಾಳಿ ಮಾಡಲಾಗುತ್ತಿದೆ. ಮೊನ್ನೆಯಷ್ಟೇ ಅವರು ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ನಾಯಿಯೊಂದಕ್ಕೆ ನೀಡಿದ ಬಿಸ್ಕತ್‌ ಅನ್ನು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ನೀಡಿದ್ದಾರೆ ಎಂದು ಸುಳ್ಳು ಹಂಚಿಕೊಳ್ಳಲಾಗುತ್ತಿತ್ತು. ಈಗ, ರಾಹುಲ್ ಗಾಂಧಿ ಅವರ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಇರುವ ಫೋಟೋ. ಎಂಬ ಪೋಟೋವೊಂದು ಕಳೆದ ಅನೇಕ ದಿನಗಳಿಂದ ವೈರಲ್ ಆಗುತ್ತಿದೆ. ಹಾಗಾದರೆ ಪೋಟೋದಲ್ಲಿರುವ ಮಕ್ಕಳು ಯಾರು? ನಿಜವಾಗಿಯೂ ರಾಹುಲ್ ಅವರಿಗೆ ಮದುವೆ ಆಗಿದೆಯೇ…

Read More

Fact Check | ಸಿಬಿಎಸ್‌ಇ 9ನೇ ತರಗತಿ ಪಠ್ಯ ಪುಸ್ತಕದಲ್ಲಿ ಡೇಟಿಂಗ್‌, ರಿಲೇಷನ್‌ಶಿಪ್‌ ಕುರಿತು ಪಠ್ಯ ಎಂದು ಸುಳ್ಳು ಮಾಹಿತಿ ಹಂಚಿಕೆ

“9ನೇ ತರಗತಿ ಪಠ್ಯ ಪುಸ್ತಕದಲ್ಲಿ ಡೇಟಿಂಗ್‌, ರಿಲೇಷನ್‌ಶಿಪ್‌ ಕುರಿತು ಪಾಠಗಳನ್ನು ಮಾಡಲಾಗುತ್ತಿದೆ. ಈ ಪೋಟೋಗಳನ್ನು ಒಮ್ಮೆ ಸರಿಯಾಗಿ ನೋಡಿ ನಿಮ್ಮ ಮಕ್ಕಳು ಸಿಬಿಎಸ್‌ಇ ಸಿಲೆಬಸ್‌ನವರಾಗಿದ್ದರೆ ಅವರು ಅದನ್ನೇ ಕಲಿಯುತ್ತಿದ್ದಾರೆ ಎಂದರ್ಥ ಎಚ್ಚರ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ಶೇರ್‌ ಕೂಡ ಮಾಡುತ್ತಿದ್ದಾರೆ. ಕೇವಲ ಸಿನಿಮಾ, ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿದ್ದ ಸುಳ್ಳು ಸುದ್ದಿಗಳು ಇದೀಗಾ ಶಿಕ್ಷಣ ಕ್ಷೇತ್ರದಲ್ಲೂ ಕಂಡುಬಂದಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರೀತಿ ಪ್ರೇಮ, ಡೇಟಿಂಗ್​​​ಗೆ ಸಂಬಂಧಿಸಿದ…

Read More

Fact Check: ಸ್ವತಃ ಡಾ. ಅಂಬೇಡ್ಕರ್ ಅವರು ಮಾತನಾಡಿರುವ ವಿಡಿಯೋ ಎಂದು ಚಲನಚಿತ್ರದ ವಿಡಿಯೋ ಹಂಚಿಕೆ

ಜಗತ್ತು ಕಂಡ ಇಪ್ಪತ್ತನೇ ಶತಮಾನದ ಮೇರು ಪ್ರತಿಭೆಗಳಲ್ಲಿ ಪ್ರಮುಖರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾಷಣ ಮತ್ತು ಬರಹಗಳನ್ನು ತಿರುಚುವ ಮತ್ತು ತಪ್ಪಾಗಿ ಅರ್ಥೈಸುವ ಕೆಲಸಗಳನ್ನು ಅನೇಕ ವರ್ಷಗಳಿಂದ ಕೆಲವು ಕೋಮುವಾದಿ ಶಕ್ತಿಗಳು ಮಾಡುತ್ತಲೇ ಬರುತ್ತಿದ್ದಾರೆ. ಈಗ “ಇದು ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾತನಾಡಿರುವ ವಿಡಿಯೋ. ಅಂಬೇಡ್ಕರ್ ಹೆಸರು ಹೇಳಿ ಜಾತ್ಯಾತೀತತೆ ಪಾಠ ಹೇಳುವ ಲದ್ದಿ ಜೀವಿಗಳೇ ಇಲ್ಲಿ ಕೇಳಿ, ಜೈ ಶ್ರೀ ರಾಮ್, ಜೈ ಭೀಮ್, ಜೈ ಹಿಂದು ರಾಷ್ಟ್ರ” ಎಂಬ…

Read More

Fact Check : ಪಕ್ಷದ ಕಾರ್ಯಕರ್ತನಿಗೆ ರಾಹುಲ್‌ ಗಾಂಧಿ ನಾಯಿ ಬಿಸ್ಕೆಟ್‌ ನೀಡಿದರೆಂದು ಅಪಪ್ರಚಾರ..!

“ನಾಯಿಯೂ ತಿನ್ನದ ಬಿಸ್ಕೆಟ್‌ ಅನ್ನೂ ಪಕ್ಷದ ಕಾರ್ಯಕರ್ತನಿಗೆ ನೀಡಿದ ರಾಹುಲ್‌ ಗಾಂಧಿ, ಇದು ಕಾಂಗ್ರೆಸ್‌ ತನ್ನ ಕಾರ್ಯಕರ್ತರಿಗ ನೀಡುವ ಮರ್ಯಾದೆ.” ಎಂದು ವಿಪಕ್ಷಗಳು ಸೇರಿದಂತೆ ಸಾಮಾಜಿಕ ಜಾಲತಾಣದ ಸಾಕಷ್ಟು ಮಂದಿ ಬಳಕೆದಾರರು ವಿಡಿಯೊವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ವಿವಾದ ತಲೆದೂರಿದೆ. How shameless First, Rahul Gandhi made @himantabiswa ji eat biscuits 🍪 from same plate as his pet dog 🐕…

Read More

ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಜಿಎಸ್‌ಟಿ ಇರಲಿಲ್ಲ ಬದಲಿಗೆ ವ್ಯಾಟ್‌ ಎಂಬ ತೆರಿಗೆ ವ್ಯವಸ್ಥೆಯಿತ್ತು

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಇದುವರೆಗೂ ಬಂದು ಹೋದ ದೇಶದ 14 ಪ್ರಧಾನ ಮಂತ್ರಿಗಳಲ್ಲೇ ಅತಿ ಶ್ರೇಷ್ಠ ಪ್ರಧಾನ ಮಂತ್ರಿಗಳು ಎಂದು ಬಿಂಬಿಸುವ ಸಲುವಾಗಿ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು(1947-1964) ಮತ್ತು ಆರ್ಥಿಕ ತಜ್ಞರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್(2004-2014) ಅವರ ಆಡಳಿತ ಕುರಿತು ಸಾಕಷ್ಟು ಸುಳ್ಳು ಪ್ರತಿಪಾದನೆಗಳನ್ನು ಹರಿಬಿಡಲಾಗುತ್ತಿದೆ. ಇದರ ಭಾಗವಾಗಿ, “ಜಿಎಸ್‌ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆಯುವವರು ಈ ವ್ಯತ್ಯಾಸವನ್ನು ಹೇಳುವುದಿಲ್ಲ.” ಎಂಬ ಹೇಳಿಕೆಯ ಪೋಸ್ಟರ್ ಒಂದು ಹಲವಾರು ದಿನಗಳಿಂದ ಸಾಮಾಜಿಕ…

Read More

Fact Check | ಸನಾತನ ಧರ್ಮದಿಂದ ಮಾತ್ರ ಪ್ರಾಣಿಗಳನ್ನು ಖುಷಿಯಾಗಿಡಲು ಸಾಧ್ಯ ಎಂದು ನಕಲಿ ಆನೆಯ ವಿಡಿಯೋ ಹಂಚಿಕೆ

“ನೋಡಿ ಈ ಆನೆ ಹೇಗೆ ಸಂಗೀತದ ಸದ್ದಿಗೆ ಕುಣಿಯುತ್ತಿದೆ ಎಂದು. ಇಂತಹ ಪವಾಡಗಳು ಕೇವಲ ಸನಾತನ ಧರ್ಮದಿಂದ ಮಾತ್ರ ಸಾಧ್ಯ ಮತ್ತು ಸನಾತನ ಧರ್ಮದಿಂದ ಮಾತ್ರ ಪ್ರಾಣಿಗಳನ್ನು ಖುಷಿಯಾಗಿ ಇಡಲು ಸಾಧ್ಯ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋವನ್ನು ನೋಡಿದಾಗ ಮೊದ ಮೊದಲು ಇದು ನಿಜವಾದ ಆನೆಯಂತೆಯೇ ಕಾಣುತ್ತದೆ. ಹೀಗಾಗಿ ಸಾಕಷ್ಟು ಮಂದಿ ವಿಡಿಯೋವನ್ನು ಸರಿಯಾಗಿ ಗಮನಿಸದೆ ಇದು ನಿಜವೆಂದು ಭಾವಿಸಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗದರೆ ಈ ವಿಡಿಯೋದ ಅಸಲಿಯತ್ತು ಏನು ಎಂಬುದನ್ನು…

Read More

Fact Check: ಬಾಂಗ್ಲಾದೇಶದ ಇಸ್ಲಾಮಿಸ್ಟ್‌ಗಳು ಹಿಂದು ಕುಟುಂಬವನ್ನು ಹತ್ಯೆ ಮಾಡಿದ್ದಾರೆ ಎಂಬುದು ಸುಳ್ಳು

ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು ಪ್ರತಿದಿನ ಹತ್ತಾರು ಸುಳ್ಳು ಸುದ್ದಿಗಳು ಹರಿಬಿಡಲಾಗುತ್ತಿದೆ. ಆಡಳಿತರೂಢ ಕೇಂದ್ರ ಸರ್ಕಾರ ಕೂಡ ಹಿಂದು-ಮುಸ್ಲಿಂ ಎಂದು ಜನರ ನಡುವೆ ಪ್ರತ್ಯೇಕತೆಯ ವಾದವನ್ನು ಬಿತ್ತಿದ್ದಾರೆ. ಇವುಗಳ ಫಲವಾಗಿ ಮುಂದೊಂದು ದಿನ ಭಾರತದಲ್ಲಿ ಕೋಮುಗಲಭೆಗಳಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಇತ್ತೀಚೆಗೆ,  ಬಾಂಗ್ಲಾದೇಶದ ಸಿರಾಜ್ಗಂಜ್ ನಲ್ಲಿ ಹಿಂದೂ ನಾಯಕ ವಿಕಾಸ್ ಸರ್ಕಾರ್ ಅವರ ಇಡೀ ಕುಟುಂಬವನ್ನು ಇಸ್ಲಾಮಿ ಜಿಹಾದಿಗಳು ಕೊಂದಿದ್ದಾರೆ. ಬಿಕಾಶ್ ಸರ್ಕಾರ್, ಅವರ ಪತ್ನಿ ಸ್ವರ್ಣ ಸರ್ಕಾರ್ ಮತ್ತು ಮಗಳು ಪರ್ಮಿತಾ ಸರ್ಕಾರ್ ತುಶಿ ಅವರನ್ನು ಸಿರಾಜ್ಗಂಜ್ ಜಿಲ್ಲೆಯ…

Read More
ಸೌದಿ

ಸೌದಿ ರಾಜ ಅಯೋಧ್ಯೆಯ ರಾಮ ಮಂದಿರಕ್ಕೆ 50 ಕೆ.ಜಿ ಚಿನ್ನವನ್ನು ದೇಣಿಗೆ ನೀಡಿದ್ದಾರೆ ಎಂಬುದು ಸುಳ್ಳು

ಅಯೋಧ್ಯೆಯ ರಾಮ ಮಂದಿರದ ಪ್ರಾಣಪ್ರತಿಷ್ಟಾಪನೆಯ ನಂತರವು ದೇಣಿಗೆಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ, ಸೌದಿಯ ರಾಜ ಅಯೋಧ್ಯೆಯ ರಾಮ ಮಂದಿರಕ್ಕೆ 50 ಕೆ.ಜಿ ಚಿನ್ನವನ್ನು ದೇಣಿಗೆ ನೀಡಿದ್ದಾರೆ, ಇದು ಬರೋಬರಿ 34 ಕೋಟಿ ಮೊತ್ತವಾಗುತ್ತದೆ ಎಂದು ಪ್ರತಿಪಾದಿಸಿ “ಕನ್ನಡ ಯೂ ಟೂಬ್” ಎಂಬ ಯೂಟೂಬ್ ಚಾನೆಲ್ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದೇ ರೀತಿ ಇನ್ನೊಂದು ಸುದ್ದಿ ಹರಿದಾಡುತ್ತಿದ್ದು “ಅಮೆರಿಕದ ಆರ್ಯವೈಶ್ಯ ವಾಸವಿ ಅಸೋಸಿಯೇಷನ್ ಅಯೋಧ್ಯೆ ರಾಮ ಮಂದಿರದಲ್ಲಿ ಭಗವಾನ್ ರಾಮನಿಗೆ ದಾನ…

Read More

Fact Check | ನೈಲ್‌ ನದಿ ಬಳಿಯ ಸರೋವರದಲ್ಲಿ ಮಾನವ ಮುಖದ ಹೋಲಿಕೆಯ ಮೀನು ಪತ್ತೆಯಾಗಿಲ್ಲ

“ನೈಲ್ ನದಿಯ ಬಳಿ ಸರೋವರವೊಂದರಲ್ಲಿ ಮಾನವ ಮುಖದ ಮೀನು ಪತ್ತೆಯಾಗಿದೆ. ಇದನ್ನು ಎಲ್ಲರಿಗೂ ಶೇರ್‌ ಮಾಡಿ” ಎಂಬ ಪೋಸ್ಟ್‌ವೊಂದನ್ನ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ ನೋಡಿದ ಸಾಕಷ್ಟು ಮಂದಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದು, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಚಿತ್ರ ಜೀವಿಯು ನೋಡಲು ದೇಹಾಕಾರದಲ್ಲಿ ಮಾನವನಂತೆ ಇದ್ದು, ಇದರ ಮುಖ ಮಾತ್ರ ಮೀನಿನಂತೆ ಇರುವುದರಿಂದ ಸಾಕಷ್ಟು ಮಂದಿ ಅಚ್ಚರಿಯನ್ನು ವ್ಯಕ್ತ ಪಡಿಸುವುದರ ಜೊತೆಗೆ ಇದು ನಿಜವಿರಬಹುದು ಎಂದು ನಂಬಿದ್ದಾರೆ.  ಇದಕ್ಕೆ ಪೂರಕ ಎಂಬಂತೆ ಹೆಡ್‌ಟ್ಯಾಪ್‌ ಎಂಬ…

Read More