Fact Check | ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳಿಂದ ವೃದ್ಧನಿಗೆ ಕಿರುಕುಳ ನೀಡಿದ್ದಾರೆ ಎಂಬುದು ನೈಜ ಘಟನೆಯಲ್ಲ

“ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಬೈಸಿಕಲ್‌ನಲ್ಲಿ ಮೊಟ್ಟೆಗಳನ್ನು ಸಾಗಿಸುತ್ತಿದ್ದ ವೃದ್ಧನಿಗೆ ಕಿರುಕುಳ ನೀಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಈ ಅಪರಾಧಿಗಳಿಗೆ ಶಿಕ್ಷೆ ಆಗುವವರೆಗೂ ನೀವು ಈ ವಿಡಿಯೋವನ್ನು ಎಲ್ಲೆಡೆ ಶೇರ್‌ ಮಾಡಿ. ಆ ಬಡಪಾಯಿ ವೃದ್ಧನಿಗೆ ನ್ಯಾಯ ದೊರಕುವಂತೆ ಮಾಡಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. देखिए कैसे ये आतंकवादी खुले आम आतंक कर रहा है क्या इसपर कोई कार्यवाही नहीं होगी? क्या…

Read More

Fact Check: ಇಂದು ಮಧ್ಯರಾತ್ರಿ 12:30 ರಿಂದ 3:30 ರ ನಡುವೆ ಅಪಾಯಕಾರಿ ಕಾಸ್ಮಿಕ್ ಕಿರಣಗಳು ಆಕಾಶದಲ್ಲಿ ಹಾದುಹೋಗುತ್ತವೆ ಎಂಬುದು ಹಳೆಯ ಸುಳ್ಳು

ಕೆಲವು ದಿನಗಳಿಂದ ವಾಟ್ಸಾಪ್‌ನಲ್ಲಿ ಆಡಿಯೋ ಮೆಸೇಜ್ ಒಂದು ಸಾಕಷ್ಟು ವೈರಲ್ ಆಗಿದ್ದು ಅದರಲ್ಲಿ, “ಇಂದು ಮಧ್ಯರಾತ್ರಿ 12:30 ರಿಂದ 3:30 ರ ನಡುವೆ ಅಪಾಯಕಾರಿ ಕಾಸ್ಮಿಕ್ ಕಿರಣಗಳು ಆಕಾಶದ ಮೂಲಕ ಹಾದುಹೋಗುತ್ತವೆ. ಈ ಸಮಯದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ. ನಿಮ್ಮೊಂದಿಗೆ ಫೋನ್ ಇಟ್ಟುಕೊಂಡು ಮಲಗಬೇಡಿ.” ಎಂಬ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ಆಡಿಯೋ ಸಂದೇಶದ ಜೊತೆಗೆ ಸುದ್ದಿ ವರದಿಯೊಂದರ ಸ್ಕ್ರೀನ್ಶಾಟ್‌ ಸಹ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್: ಈ ಮಾಹಿತಿ ಸಂಪೂರ್ಣ ಸುಳ್ಳು. ಇಂದು ಭೂಮಿಯ ಮೂಲಕ ಹಾದುಹೋಗುವ ಕಾಸ್ಮಿಕ್ ಕಿರಣಗಳು…

Read More

Fact Check : ಇತ್ತೀಚೆಗೆ ಟೆಲ್‌ಅವಿವ್‌ನ ಬಸ್‌ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು 2022ರ ವೀಡಿಯೊ ಹಂಚಿಕೆ

ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಕಾಮಿಕೇಜ್ ಡ್ರೋನ್‌ಗಳಿಂದ ಬಾಂಬ್ ಸ್ಫೋಟಗೊಂಡು ಬಸ್‌ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್:‌ ಈ ವೈರಲ್‌ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ,  2022ರ ಜೂನ್ 12ರಂದು BAZ ನ್ಯೂಸ್ ಏಜೆನ್ಸಿಯವರು Facebookನಲ್ಲಿ ಹಂಚಿಕೊಂಡಿರುವ ವೀಡಿಯೊ ಲಭಿಸಿದೆ. “ಟೆಲ್ ಅವಿವ್‌ನ ಸಫೇದ್‌ನ ಕೇಂದ್ರ ಬಸ್‌ ನಿಲ್ದಾಣದಲ್ಲಿ ದೊಡ್ಡದಾಗಿ ಅಪ್ಪಳಿಸಿದ ಬೆಂಕಿಯು 18 ಬಸ್ಸುಗಳನ್ನು ಸುಟ್ಟುಹಾಕಿದೆ.” ಎಂದು ಅರೇಬಿಕ್ ಭಾಷೆಯಲ್ಲಿ ಬರೆಯಲಾಗಿದೆ. 2022ರ ಜೂನ್…

Read More

Fact Check | 20 ಜನ ಹಂತಕರ ಗುಂಪು ಜನರನ್ನು ಕೊಲ್ಲಲು ರಾತ್ರಿ ದಾಳಿ ನಡೆಸುತ್ತದೆ ಎಂಬ ಸುದ್ದಿ ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಹಲವರು ಈ ವಿಡಿಯೋದೊಂದಿಗೆ ಬೇರೆ ಆಡಿಯೋವೊಂದನ್ನು ಜೊತೆಗೂಡಿಸಿ ಹಂಚಿಕೊಳ್ಳುತ್ತಿದ್ದಾರೆ. ಈ ವೈರಲ್‌ ಆಡಿಯೋದಲ್ಲಿ 20 ಜನ ಹಂತಕರ ಗುಂಪು ರಾತ್ರಿ ದಾಳಿ ನಡೆಸಿ ಕುಟುಂಬವೊಂದನ್ನು ಬರ್ಬರವಾಗಿ ಕೊಂದು ಹಾಕಿದೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಸಾರ್ವಜನಿಕರು ರಾತ್ರಿ ಹೊತ್ತು ಹೊರಗೆ ಓಡಾಡದಂತೆ ಮತ್ತು ಯಾರೇ ರಾತ್ರಿಯ ಹೊತ್ತಿನಲ್ಲಿ ಬಾಗಿಲು ತಟ್ಟಿದರೂ ತೆಗೆಯದಂತೆ ಈ ಅಡಿಯೋದಲ್ಲಿ ಸೂಚಿಸಲಾಗಿದೆ. ಈ ವೈರಲ್‌ ವಿಡಿಯೋ ಮತ್ತು ಆಡಿಯೋವನ್ನು ಒಂದು ಗೂಡಿಸಿ ಸಾಕಷ್ಟು ಮಂದಿ ತಮ್ಮ ವೈಯಕ್ತಿ…

Read More

Fact Check: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ “ಶೌಚಾಲಯ ತೆರಿಗೆ” ವಿಧಿಸಲು ಮುಂದಾಗಿದೆ ಎಂಬುದು ಸುಳ್ಳು

ಕೆಲವು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಶೌಚಾಲಯ ತೆರಿಗೆ ವಿಧಿಸಿದೆ ಎಂಬ ಸುದ್ದಿಯೊಂದು ಸಾಕಷ್ಟು ವೈರಲ್ ಆಗುತ್ತಿದೆ. ಹಿಮಾಚಲ ಪ್ರದೇಶದ ಜನರು ಈಗ ತಮ್ಮ ಮನೆಗಳಲ್ಲಿ ಹೊಂದಿರುವ ಶೌಚಾಲಯ ಆಸನಗಳ ಸಂಖ್ಯೆಯ ಮೇಲೆ ತೆರಿಗೆ ವಿಧಿಸಬೇಕಾಗುತ್ತದೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು “ನಂಬಲಸಾಧ್ಯ, ನಿಜವಾಗಿದ್ದರೆ! ಪಿಎಂ ಸಮಯದಲ್ಲಿ @ನರೇಂದ್ರ ಮೋದಿ ji, ಸ್ವಚ್ಛತಾವನ್ನು ಜನರ ಆಂದೋಲನವಾಗಿ ನಿರ್ಮಿಸುತ್ತದೆ, ಇಲ್ಲಿದೆ @INCindia ಶೌಚಾಲಯಕ್ಕಾಗಿ ಜನರ ತೆರಿಗೆ! ಅವರ ಕಾಲದಲ್ಲಿ ಉತ್ತಮ…

Read More

Fact Check : ಬಾಂಗ್ಲಾದೇಶದಲ್ಲಿ ಹಿಜಾಬ್ ಧರಿಸದಿದ್ದಕ್ಕಾಗಿ ಅಮೆರಿಕದ ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂಬುದು ಸುಳ್ಳು

ಹಿಜಾಬ್ ಧರಿಸದಿದ್ದಕ್ಕಾಗಿ ಬಾಂಗ್ಲಾದೇಶದಲ್ಲಿ ಅಮೇರಿಕನ್ ಮಹಿಳೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ವೀಡಿಯೊದಲ್ಲಿ, ಮಹಿಳೆಯೊಬ್ಬರು ರಿಕ್ಷಾ ಸವಾರಿ ಮಾಡುವಾಗ ಕೆಲವು ವ್ಯಕ್ತಿಗಳು ಆಕೆಗೆ ಕಿರುಕುಳವನ್ನು ಕೊಟ್ಟಿದ್ದಾರೆ. ಫ್ಯಾಕ್ಟ್‌ ಚೆಕ್: ‌ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು, ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, ಅದೇ ಘಟನೆಯ ,ಒಂದೇ ರೀತಿಯ ದೃಶ್ಯಗಳನ್ನು ಒಳಗೊಂಡಿರುವ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಲಭಿಸಿವೆ. ಈ ಎಲ್ಲ ಪೋಸ್ಟ್‌ಗಳನ್ನು ಗಮನಿಸಿದಾಗ ಬಾಂಗ್ಲಾದೇಶದ…

Read More
ಇಸ್ರೇಲ್‌

Fact Check: ನ್ಯೂಯಾರ್ಕ್‌ನ ಹಳೆಯ ವೀಡಿಯೊವನ್ನು ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯಿಂದ ಅಡಗಿರುವ ವ್ಯಕ್ತಿಯ ದೃಶ್ಯಗಳಾಗಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳಿಂದ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಕ್ಷಿಪಣಿಗಳಿಂದ ತಪ್ಪಿಸಿಕೊಳ್ಳಲು ಇಸ್ರೇಲ್‌ನ ಟೆಲ್ ಅವೀವ್‌ನ ಸುರಂಗದಲ್ಲಿ ಅಡಗಿರುವ ವ್ಯಕ್ತಿಯ ವೀಡಿಯೊ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು “ಇಂದು ಟೆಲ್ ಅವೀವ್‌ನಿಂದ ಹೊರಬಂದ ಹೃದಯವಿದ್ರಾವಕ ಚಿತ್ರಗಳು ಯುವಕನೊಬ್ಬ ಇರಾನಿನ ಬಾಂಬ್‌ ದಾಳಿಯಿಂದ ಮರೆಯಾಗಬೇಕಾಯಿತು.” ಎಂಬ ಶಿರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ವೈರಲ್ ವೀಡಿಯೋದ ಕೆಲವು ಕೀಫ್ರೇಮ್‌ಗಳಲ್ಲಿ…

Read More

Fact Check | ಮೆಹಬೂಬಾ ಮುಫ್ತಿ ತನ್ನ ತಂದೆಯ ಕಿರಿಯ ಸಹೋದರನನ್ನು ವಿವಾಹವಾದರು ಎಂಬುದು ಸುಳ್ಳು

ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಜೆಕೆಪಿಡಿಪಿ) ನಾಯಕಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ತಮ್ಮ ತಂದೆಯ ಕಿರಿಯ ಸಹೋದರನನ್ನು  ವಿವಾಹವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಹಲವರು “ಇಸ್ಲಾಂ ಮತದಲ್ಲಿ ಈ ಪದ್ಧತಿ ಸರ್ವೇ ಸಾಮಾನ್ಯ. ಅಲ್ಲಿ ರಹಸ್ಯವಾಗಿ ಸಹೋದರ, ತಂದೆ ಹೀಗೆ ಸಂಬಂಧಗಳಿಗೆ ಬೆಲೆಯೇ ಇಲ್ಲದಂತೆ ಮದುವೆಯಾಗುತ್ತದೆ” ಎಂದು ಹಂಚಿಕೊಳ್ಳುತ್ತಿದ್ದಾರೆ. ये है महबूबा मुफ्ती के पिता के भाईमतलब महबूबा के…

Read More

Fact Check: ಮೊಬೈಲ್ ನೀಡಲಿಲ್ಲ ಎಂದು ಬಾಲಕನೊಬ್ಬ ಬ್ಯಾಟಿನಿಂದ ತನ್ನ ತಾಯಿಗೆ ಹೊಡೆದಿರುವ ವೀಡಿಯೋ ಜಾಗೃತಿಗಾಗಿ ಮಾಡಲಾಗಿದೆ

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆಯು ಅತಿಯಾಗುತ್ತಿದ್ದು, ನಿಯಂತ್ರಣವಿಲ್ಲದಂತೆ ಮಕ್ಕಳು ಮೊಬೈಲ್‌ಗೆ ದಾಸರಾಗುತ್ತಿದ್ದಾರೆ. ತಂದೆ-ತಾಯಿಗಳು ಅಷ್ಟೆ, ಮಕ್ಕಳ ಈ ವರ್ತನೆಯ ಮೇಲೆ ಗಮನ ಹರಿಸದೆ ಮಕ್ಕಳಿಗೆ ಮೊಬೈಲ್ ನೀಡುತ್ತಿರುತ್ತಾರೆ. ಸಧ್ಯ ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಬಾಲಕನೊಬ್ಬ ಶಾಲೆಯಿಂದ ಮನೆಗೆ ಬಂದು ಹೋಮ್‌ವರ್ಕ್‌ ಮಾಡದೇ ಮೊಬೈಲ್‌ ನೋಡುತ್ತಾ ಕುಳಿತಿರುತ್ತಾನೆ, ಇದನ್ನು ಗಮನಿಸಿದ ತಾಯಿ ಆತನ ಕೈಯಿಂದ ಮೊಬೈಲ್‌ ಕಸಿದುಕೊಳ್ಳುತ್ತಾರೆ. ಇದರಿಂದ ಕೋಪಕೊಂಡ ಆ ಬಾಲಕ ತಾಯಿಯ ತಲೆಗೆ ಬ್ಯಾಟ್‌ನಿಂದ ಹೊಡೆದು…

Read More

Fact Check | ಇಸ್ರೇಲ್ ಸೇನೆಯಿಂದ ಪಾರಾಗಲು ಪ್ಯಾಲೆಸ್ತೀನ್ ಮಹಿಳೆಯರು ತ್ರಿವರ್ಣ ಧ್ವಜವನ್ನು ಬಳಸುತ್ತಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಬುರ್ಖಾ ಧರಿಸಿರುವ ಕೆಲವು ಮಹಿಳೆಯರು ಭಾರತದ ರಾಷ್ಟ್ರ ಧ್ವಜವನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯುವುದನ್ನು ಕಾಣಬಹುದು. ಈ ವಿಡಿಯೋ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಸಂಬಂಧಿಸಿದೆ ಎಂದು ಪೋಸ್ಟ್‌ನಲ್ಲಿ ಹೇಳಿಕೊಳ್ಳಲಾಗುತ್ತಿದೆ. ಇಸ್ರೇಲ್ ಸೇನೆಯಿಂದ ಪಾರಾಗಲು ಪ್ಯಾಲೆಸ್ತೀನ್ ಮಹಿಳೆಯರು ಭಾರತೀಯ ತ್ರಿವರ್ಣ ಧ್ವಜವನ್ನು ಬಳಸುತ್ತಿದ್ದಾರೆ, ಏಕೆಂದರೆ ಇಸ್ರೇಲ್ ಸೇನೆಯು ಭಾರತೀಯರನ್ನು ಕೊಲ್ಲುತ್ತಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. हमारे राष्ट्रीय ध्वज 🇮🇳की पावर आप यूक्रेन में देख…

Read More