ಡೊನಾಲ್ಡ್‌ ಟ್ರಂಪ್

Fact Check: 2016ರ ಹಳೆಯ ವಿಡಿಯೋವನ್ನು ಡೊನಾಲ್ಡ್‌ ಟ್ರಂಪ್ ಅವರು ಇತ್ತೀಚೆಗೆ “ನಾನು ಹಿಂದೂಗಳ ದೊಡ್ಡ ಅಭಿಮಾನಿ” ಎಂದು ಹೇಳಿದ್ದಾರೆ ಎಂದು ಹಂಚಿಕೆ

2024 ರ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಗೆಲುವು ಸಾಧಿಸಿದ ನಂತರ, ಈಗ ಟ್ರಂಪ್ ಇತ್ತೀಚೆಗೆ ಚುನಾವಣೆಯ ಸಂದರ್ಭದಲ್ಲಿ ಮಾತನಾಡಿರುವ ಭಾಷಣದ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಮ್ಮ ಭಾಷಣದಲ್ಲಿ ಡೊನಾಲ್ಡ್‌ ಟ್ರಂಪ್‌ “ನಾನು ಹಿಂದೂಗಳ ದೊಡ್ಡ ಅಭಿಮಾನಿ ಮತ್ತು ಭಾರತದ ದೊಡ್ಡ ಅಭಿಮಾನಿ. ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ, ಭಾರತೀಯ ಮತ್ತು ಹಿಂದೂ ಸಮುದಾಯಕ್ಕೆ ಶ್ವೇತಭವನದಲ್ಲಿ ನಿಜವಾದ ಸ್ನೇಹಿತ ಇರುತ್ತಾನೆ ಎಂದು ಹೇಳುವ ಮೂಲಕ ನಾನು ಭಾಷಣ ಪ್ರಾರಂಭಿಸುತ್ತೇನೆ” ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ವೀಡಿಯೊದ…

Read More

Fact Check | ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿ ಅವರ ನಾಮನಿರ್ದೇಶನವಾಗಿದೆ ಎಂಬುದು ಸುಳ್ಳು

“ಒಳ್ಳೆಯ ಸುದ್ದಿ, ನೊಬೆಲ್ ಪ್ರಶಸ್ತಿಗೆ ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರನ್ನು ನಾಮನಿರ್ದೇಶನಗೊಳಿಸಲಾಗಿದೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ. ಭಾರತದ ಯಾವ ಪ್ರಧಾನಿಗೂ ಇದುವರೆಗೂ ನೊಬೆಲ್ ಪ್ರಶಸ್ತಿ ಲಭ್ಯವಾಗಿಲ್ಲ. ಆದರೆ ಉಕ್ರೇನ್‌ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ಶಾಂತಿ ಸ್ಥಾಪನೆಗಾಗಿ ಪ್ರಧಾನಿ ಮೋದಿ ಅವರ ಪರಿಶ್ರಮಕ್ಕೆ ಈಗ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರಿಗೆ ಈ ಬಾರಿ ನೊಬೆಲ್‌ ಸಿಗುವುದು ಬಹುತೇಕ ಖಚಿತವಾಗಿದೆ ” ಎಂದು ಪೋಸ್ಟ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ಪೋಸ್ಟ್ ನಲ್ಲಿ ಕೆಲವೊಂದು ಅಂಶಗಳನ್ನು ಉಲ್ಲೇಖಿಸಿ,…

Read More

Fact Check : ನ್ಯಾನ್ಸಿ ಪೆಲೋಸಿಯವರು ಟ್ರಂಪ್‌ರ ಗೆಲುವಿನ ವಿರುದ್ಧ ಪ್ರತಿಕ್ರಿಯಿಸಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

2024ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿಜಯ ಸಾಧಿಸಿದ ನಂತರ, ಅಮೇರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಮಾಜಿ ಸ್ಪೀಕರ್ ಮತ್ತು ಡೆಮೋಕ್ರಾಟ್ ನ್ಯಾನ್ಸಿ ಪೆಲೋಸಿಯವರು “ಶುಭಾಶಯಗಳನ್ನು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ, ಏಕೆಂದರೆ ಅದು ಖಂಡಿತವಾಗಿಯೂ ಗೆಲುವಲ್ಲ” ಎಂದು ಹೇಳಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. ಫ್ಯಾಕ್ಟ್‌ ಚೆಕ್‌ : ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ, ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು…

Read More

Fact Check : ಟ್ರಂಪ್ ವಿಜಯೋತ್ಸವ ಭಾಷಣದಲ್ಲಿ ʼಮೋದಿ ಮೋದಿʼ ಎಂದು ಜಪಿಸಿದ್ದಾರೆ ಎಂಬುದು ಸುಳ್ಳು

ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ರವರು ಅಭೂತಪೂರ್ವ ಜಯ ಗಳಿಸಿದ್ದಾರೆ.  ಈ ವಿಜಯದ ಸಂದರ್ಭದಲ್ಲಿ ಟ್ರಂಪ್‌ರವರು ಭಾಷಣ ಮಾಡುವಾಗ ʼಮೋದಿ ಮೋದಿʼ ಎಂದು ಜಪಿಸಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. @KreatelyMedia ತನ್ನ ಎಕ್ಸ್‌ ಖಾತೆಯಲ್ಲಿ  “ಟ್ರಂಪ್ ದೇಶದಲ್ಲಿ ಮೋದಿಯ ಪ್ರಾಬಲ್ಯ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದೆ. “ಡೊನಾಲ್ಡ್ ಟ್ರಂಪ್‌ರವರು ಭಾಷಣದಲ್ಲಿ  ʼಮೋದಿ ಮೋದಿʼ ಎಂದು ಜಪಿಸಿದ್ದಾರೆ” ಎಂದು ಅನೇಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಟ್ರಂಪ್‌ರವರು ʼಮೋದಿ ಮೋದಿʼ ಎಂದು ನಿಜವಾಗಿಯೂ ಜಪಿಸಿದ್ದಾರಾ?…

Read More
ರಾಹುಲ್ ಗಾಂಧಿ

Fact Check: ‘ರಾಹುಲ್ ಗಾಂಧಿ ರಾಜೀವ್ ಗಾಂಧಿ ಅವರ ಮಗನಲ್ಲ’ ಎಂದು ನಕಲಿ ಪತ್ರಿಕಾ ವರದಿಯನ್ನು ಹಂಚಿಕೊಳ್ಳಲಾಗುತ್ತಿದೆ

ರಾಹುಲ್ ಗಾಂಧಿ ರಾಜೀವ್ ಗಾಂಧಿ ಅವರ ಪುತ್ರನಲ್ಲ ಎಂದು ಅಮೆರಿಕದ ಡಿಎನ್ ಎ ತಜ್ಞರೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಪತ್ರಿಕಾ ವರದಿಯ ಪೋಟೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  “ಅಮೆರಿಕ ಮೂಲದ ಡಿಎನ್ಎ ತಜ್ಞ ಡಾ.ಮಾರ್ಟಿನ್ ಸಿಜೋ ಪತ್ರಿಕಾಗೋಷ್ಠಿಯಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ, ಡಾ.ಮಾರ್ಟಿನ್ ಅವರು ತಮ್ಮ ಬಳಿ ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಡಿಎನ್ಎ ಇದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ರಾಜೀವ್ ಗಾಂಧಿಯವರ ಮಗನಲ್ಲ ಎಂಬುದನ್ನು ಸಾಬೀತುಪಡಿಸುವ ಎಲ್ಲಾ ಪುರಾವೆಗಳನ್ನು ನೀಡಲು…

Read More

Fact Check | ಗುಜರಾತ್‌ನ ಪ್ರಗತಿಗೆ ಮತ ಹಾಕುವಂತೆ ಮಹಾರಾಷ್ಟ್ರದ ಬಿಜೆಪಿ ಮತದಾರರನ್ನು ಕೇಳುತ್ತಿದೆ ಎಂಬುದು ಸುಳ್ಳು

ಗುಜರಾತ್‌ನ ಪ್ರಗತಿಗಾಗಿ ಮಹಾರಾಷ್ಟ್ರದ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳು ಮತದಾರರ ಬಳಿ ತಮಗೆ ಮತ ಚಲಾಯಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ದೇಶದ ಇತಿಹಾಸದಲ್ಲೇ ಇದು ಮೊದಲು. ಮಹಾರಾಷ್ಟ್ರದ ಬಿಜೆಪಿಗರು ಪ್ರಧಾನಿ ಮೋದಿ ಅವರನ್ನು ಮೆಚ್ಚಿಸಲು, ತಮ್ಮ ರಾಜ್ಯವನ್ನೇ ಹರಾಜು ಹಾಕುತ್ತಿದ್ದಾರೆ. ಇದು ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳಲ್ಲೂ ಕೂಡ ಇದೇ ಹಣೆಬರಹ. ಹಾಗಾಗಿ ಮಹಾರಾಷ್ಟ್ರದ ಮತದಾರರೇ ಎಚ್ಚರದಿಂದ ಮತ ಚಲಾಯಿಸಿ” ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ನಿಜವೆಂದು ಭಾವಿಸಿ…

Read More
ಬ್ರಾಹ್ಮಣರು

Fact Check: ತಮಿಳುನಾಡಿನಲ್ಲಿ ಬ್ರಾಹ್ಮಣರು ಬೃಹತ್ ರ್‍ಯಾಲಿ ನಡೆಸಿದ್ದಾರೆ ಎಂದು 2012ರ ದೇವಸ್ಥಾನದ ಬ್ರಹ್ಮೋತ್ಸವದ ಪೋಟೋ ಹಂಚಿಕೆ

ನವೆಂಬರ್ 3 ರಂದು, ‘ಇಂದು ಮಕ್ಕಳ್ ಕಚ್ಚಿ’ ನಾಯಕ ಅರ್ಜುನ್ ಸಂಪತ್ ನೇತೃತ್ವದ ರ್‍ಯಾಲಿಯಲ್ಲಿ ಭಾಗವಹಿಸಲು ತಮಿಳುನಾಡಿನಾದ್ಯಂತದ ಬ್ರಾಹ್ಮಣರು ಚೆನ್ನೈನ ರಾಜರತ್ನಂ ತಿತಾಲ್‌ನಲ್ಲಿ ಜಮಾಯಿಸಿದರು. ರ್‍ಯಾಲಿಯ ಮುಖ್ಯ ಉದ್ದೇಶವೆಂದರೆ ಕೆಲವು ರಾಜಕೀಯ ಮತ್ತು ಸಾಮಾಜಿಕ ಗುಂಪುಗಳು ಬ್ರಾಹ್ಮಣ ಸಮುದಾಯದ ಬಗ್ಗೆ ನಕಾರಾತ್ಮಕ ವಿಚಾರಗಳನ್ನು ಹರಡಲು ಯೋಜಿಸುತ್ತಿವೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣ ಸಮುದಾಯದ ವಿರುದ್ಧ ದ್ವೇಷದ ಮಾತುಗಳು ಹೆಚ್ಚಾಗುತ್ತಿರುವುದನ್ನು ವಿರೋದಿಸಿ, ತಮ್ಮ ಧಾರ್ಮಿಕ ಸಮುದಾಯವನ್ನು ತಾರತಮ್ಯ ಮತ್ತು ಅಪಮಾನದಿಂದ ರಕ್ಷಿಸಲು 1955 ರ ಪ್ರೊಟೆಕ್ಷನ್ ಸಿವಿಲ್ ರೈಟ್ಸ್ ಆಕ್ಟ್ (ಪಿಸಿಆರ್) ಮೂಲಕ ರಕ್ಷಣೆ…

Read More

Fact Check | ಮಾನಸಿಕ ಅಸ್ವಸ್ಥರೊಬ್ಬರ ಮೇಲಿನ ಹಲ್ಲೆ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಮಾಧ್ಯಮದಲ್ಲಿ ಜನರ ಗುಂಪೊಂದು ವ್ಯಕ್ತಿಯನ್ನು ಥಳಿಸುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡು “ಆಂಧ್ರಪ್ರದೇಶದ ಭೀಮಾವರಂ ಪ್ರದೇಶದ ರಾಮಾಲಯದಲ್ಲಿ ಹಿಂದೂ ದೇವತೆಗಳ ವಿಗ್ರಹಗಳನ್ನು ಧ್ವಂಸ ಮಾಡಲು ಯತ್ನಿಸಿದ ಮುಸ್ಲಿಂ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ರಾಡ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ. ಅವರು ಒಂದಷ್ಟು ದೇವಾಲಯಗಳನ್ನು ಧ್ವಂಸ ಮಾಡಲು ಯೋಜನೆಯನ್ನು ಹೊಂದಿದ್ದಾರೆ. ಈಗ ಅದು ಮೊದಲ ಹಂತದಲ್ಲೇ ಗೊತ್ತಾಗಿದೆ” ಎಂದು ಬರೆದುಕೊಳ್ಳಲಾಗಿದೆ. ವಿಡಿಯೋ ನೋಡಿದ ಹಲವು ಮಂದಿ ಇದರ ಹಿನ್ನೆಲೆ ಅರಿಯದೆ, ವಿಡಿಯೋದಲ್ಲಿನ ಹಲ್ಲೆ ದೃಷ್ಯಗಳು ಮತ್ತು ವಿಡಿಯೋದೊಂದಿಗೆ ಶೇರ್‌ ಮಾಡಲಾಗುತ್ತಿರುವ ಟಿಪ್ಪಣಿಯನ್ನು…

Read More
ನಾಗಾಲ್ಯಾಂಡ್‌

Fact Check: ಅರ್ಜೆಂಟೀನಾದ ಕ್ರೀಡಾಂಗಣದಲ್ಲಿ ಪಟಾಕಿ ಸಿಡಿಸುವ ದೃಶ್ಯಗಳನ್ನು ನಾಗಾಲ್ಯಾಂಡ್‌ನಲ್ಲಿ ದೀಪಾವಳಿ ಆಚರಣೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ದೀಪಾವಳಿ ಹಬ್ಬ ಮುಗಿದು ಕೆಲವೇ ದಿನಗಳು ಕಳೆದಿವೆ, ಆದರೆ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಂಬಂಧಿಸಿದಂತೆ ಈಗ ಕ್ರೀಡಾಂಗಣವೊಂದರಲ್ಲಿ ಆಕರ್ಷಕವಾದ ಪಟಾಕಿಗಳನ್ನು ಸಿಡಿಸುವ ಮತ್ತು ಪ್ರದರ್ಶಿಸುವ ವೀಡಿಯೊ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ದೃಶ್ಯವು ನಾಗಾಲ್ಯಾಂಡ್‌ನ ದಿಮಾಪುರ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ದೀಪಾವಳಿ ಆಚರಣೆಯ ದೃಶ್ಯವಾಗಿದೆ ಎಂದು ವಿಡಿಯೋ ಹಂಚಿಕೊಂಡಿರುವ ಬಳಕೆದಾರರು ಪ್ರತಿಪಾದಿಸಿದ್ದಾರೆ. ಫ್ಯಾಕ್ಟ್‌ ಚೆಕ್: ವೈರಲ್ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ನಾವು ಅಂತರ್ಜಾಲದಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಬ್ರೂಟ್ ಎಫ್ಆರ್ ಎಂಬ…

Read More

Fact Check | ನಾಸಿರುದ್ದೀನ್ ಶಾ ಪ್ರಧಾನಿ ಮೋದಿ ಅವರನ್ನು ಟೀಕಿಸಿರುವ ಪೋಸ್ಟ್‌ ನಕಲಿ

ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರ ಹೆಸರಿನ ಎಕ್ಸ್ ಖಾತೆಯಿಂದ ಪ್ರಧಾನಿ ಮೋದಿಯನ್ನು ಟೀಕಿಸುವ ಪೋಸ್ಟ್‌ವೊಂದು ವೈರಲ್‌ ಆಗುತ್ತಿದೆ. ಇದರಲ್ಲಿ ನಾಸಿರುದ್ದೀನ್ ಶಾ ಅವರ ಫೋಟೋ ಹಾಗೂ ಅವರ ಹೆಸರು ಕಂಡು ಬಂದಿರುವುದರಿಂದ ಈ ಖಾತೆ ಅವರದ್ದೇ ಎಂದು ಹಲವು ನೆಟಿಜನ್‌ಗಳು ಭಾವಿಸಿದ್ದಾರೆ.  ಹೀಗಾಗಿ ಹಲವರು ಇದನ್ನು ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರ ಪೋಸ್ಟ್ ಎಂದು ಪರಿಗಣಿಸಿ ಶೇರ್ ಮಾಡುತ್ತಿದ್ದಾರೆ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ.. ಹಲವರು ನಾಸಿರುದ್ದೀನ್ ಶಾ ಅವರನ್ನು ಟೀಕಿಸುತ್ತಿದ್ದು, ನೀವು ಕೂಡ ಪ್ರಧಾನಿ…

Read More