ದೀಪಾವಳಿ ಆಚರಣೆಯಲ್ಲಿ ಯುವಕರ ಗುಂಪೊಂದು ಪಟಾಕಿ ಸಿಡಿಸುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋದಲ್ಲಿ ಹೆಲ್ಮೆಟ್ ಧರಿಸಿರುವ ಯುವಕನೊಬ್ಬ ಸಣ್ಣ ಪೆಟ್ಟಿಗೆಯನ್ನು ಹಿಡಿದುಕೊಂಡಿದ್ದಾನೆ. ಈ ಪೆಟ್ಟಿಗೆಯಿಂದ ಪಟಾಕಿ ರಾಕೆಟ್ಗಳನ್ನು ಉಡಾಯಿಸುತ್ತಿದ್ದಾರೆ. ಅಲ್ಲದೆ, ಸ್ಫೋಟಗಳ ನಡುವೆ “ಪಾಕಿಸ್ತಾನ, ಪಾಕಿಸ್ತಾನ” ಎಂದು ಕೂಗುವ ಧ್ವನಿಯು ಕೇಳಿಬರುತ್ತಿದೆ, ಇದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಘರ್ಷಣೆ ಎಂದು ಕೆಲವು ಬಳಕೆದಾರರು ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
“ ಓರಿಸ್ಸಾದಲ್ಲಿ ದೀಪಾವಳಿ ಆಚರಿಸುವಾಗ ಹಿಂದೂಗಳ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ, ಇದನ್ನು ನೋಡುವುದು ತಮಾಷೆಯಾಗಿದೆ! ಟರ್ಮಿನೇಟರ್ ಮೋಡ್, ಸಕ್ರಿಯ ಹಾರ್ಡ್ಕೋರ್ ಹಿಂದುತ್ವ #ZeeNews #followers #highlight #friends #highlights @followers @highlight”ಎಂಬ ಶೀರ್ಷಿಕೆಯೊಂದಿಗೆ ಫೇಸ್ಬುಕ್ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದ ಕೀ ಫ್ರೇಮ್ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, 2018ರ ನವೆಂಬರ್ 10ರಂದು YouTube ನಲ್ಲಿ ಹಂಚಿಕೊಳ್ಳಲಾದ ಅದೇ ರೀತಿಯ ವಿಡಿಯೋ ಲಭಿಸಿದೆ.
ಓರಿಸ್ಸಾದ ಸಂಬಲ್ಪುರ ಜಿಲ್ಲೆಯ ಬುರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉಲ್ಲೇಖಿಸುವ VIMSAR ಹಾಸ್ಟೆಲ್ನಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ ಎಂದು ಈ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಈ ವಿಡಿಯೋ ಆರು ವರ್ಷಗಳಷ್ಟು ಹಳೆಯದು ಮತ್ತು ಇತ್ತೀಚಿನ ಘಟನೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಖಚಿತವಾಗಿ ತಿಳಿದುಬಂದಿದೆ.
ಓರಿಸ್ಸಾ ಟಿವಿ ಮತ್ತು ಕನಕ್ ನ್ಯೂಸ್ ಸೇರಿದಂತೆ ಓರಿಸ್ಸಾ ಮೂಲದ ಮಾಧ್ಯಮಗಳ ಇತ್ತೀಚಿನ ವರದಿಗಳು ವಿಮ್ಸಾರ್ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ದೀಪಾವಳಿಯನ್ನು ಆಚರಿಸುವಾಗ ಪರಸ್ಪರ ಪಟಾಕಿ ಸಿಡಿಸಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಈ ಘಟನೆಯು ಸಂಪೂರ್ಣವಾಗಿ ಹಬ್ಬಕ್ಕೆ ಸಂಬಂಧಿಸಿದೆ ಎಂದು ಈ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋ ಓರಿಸ್ಸಾದ VIMSAR ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ದೀಪಾವಳಿ ಆಚರಿಸಿರುವುದನ್ನು ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನು ಓದಿ :
Fact Check : ಪ್ರಧಾನಿ ಮೋದಿ ʼಟ್ರಂಪ್ ಗೆಲ್ಲುತ್ತಾರೆʼ ಎಂದು ಭವಿಷ್ಯ ನುಡಿದಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.