Fact Check : ಟ್ರಂಪ್ ವಿಜಯೋತ್ಸವ ಭಾಷಣದಲ್ಲಿ ʼಮೋದಿ ಮೋದಿʼ ಎಂದು ಜಪಿಸಿದ್ದಾರೆ ಎಂಬುದು ಸುಳ್ಳು

ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ರವರು ಅಭೂತಪೂರ್ವ ಜಯ ಗಳಿಸಿದ್ದಾರೆ.  ಈ ವಿಜಯದ ಸಂದರ್ಭದಲ್ಲಿ ಟ್ರಂಪ್‌ರವರು ಭಾಷಣ ಮಾಡುವಾಗ ʼಮೋದಿ ಮೋದಿʼ ಎಂದು ಜಪಿಸಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

@KreatelyMedia ತನ್ನ ಎಕ್ಸ್‌ ಖಾತೆಯಲ್ಲಿ  “ಟ್ರಂಪ್ ದೇಶದಲ್ಲಿ ಮೋದಿಯ ಪ್ರಾಬಲ್ಯ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದೆ. “ಡೊನಾಲ್ಡ್ ಟ್ರಂಪ್‌ರವರು ಭಾಷಣದಲ್ಲಿ  ʼಮೋದಿ ಮೋದಿʼ ಎಂದು ಜಪಿಸಿದ್ದಾರೆ” ಎಂದು ಅನೇಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಟ್ರಂಪ್‌ರವರು ʼಮೋದಿ ಮೋದಿʼ ಎಂದು ನಿಜವಾಗಿಯೂ ಜಪಿಸಿದ್ದಾರಾ? ಎಂಬುದರ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಕೊಳ್ಳೋಣ.

ಫ್ಯಾಕ್ಟ್‌ ಚೆಕ್‌:

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋದ ಕುರಿತು ಹುಡುಕಾಟ ನಡೆಸಿದಾಗ, ಟ್ರಂಪ್‌ರವರ ವಿಜಯೋತ್ಸವದ ವಿಡಿಯೋ ದೊರೆತಿದೆ. ಅದರಲ್ಲಿ ʼರಾಬರ್ಟ್ ಎಫ್. ಕೆನಡಿ ಜೂನಿಯರ್ʼರವರ ಬಗ್ಗೆ ಟ್ರಂಪ್‌ ಮಾತನಾಡಿದ್ದಾರೆ. ಕೆನಡಿ ಜೂನಿಯರ್ ‘ಬಾಬಿ ಬಾಬಿ’ ಎಂದು ಜಪಿಸಿದ್ದಾರೆ ಹೊರತು ಪ್ರಧಾನಿ ನರೇಂದ್ರ ಮೋದಿಯವರನ್ನು ಜಪಿಸಿಲ್ಲ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.

“ರಾಬರ್ಟ್ ಎಫ್. ಕೆನಡಿ ಜೂನಿಯರ್ ಈ ವಿಜಯೋತ್ಸವದ ಭಾಷಣದಲ್ಲಿ ಪಾಲ್ಗೊಂಡಿದ್ದಾರೆ. ಅವರು ಅಮೇರಿಕಾವನ್ನು ಪುನಃ ಆರೋಗ್ಯಕರವಾಗಿ ನೋಡಿಕೊಳ್ಳಲು ಸಹಾಯ ಮಾಡುತ್ತಾರೆ. ಅವರು ನಿಜವಾಗಿಯೂ ಸ್ವಯಂ ಪ್ರೇರಣೆಯಿಂದ ಕೆಲಸಗಳನ್ನು ಮಾಡಲು ಬಯಸುತ್ತಾರೆ. ಅವರ ಕೆಲಸಗಳಿಗೆ ನಾನು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ” ಎಂದು ಟ್ರಂಪ್‌ ಹೇಳಿದ್ದಾರೆ.

ಕೆನಡಿ ಜೂನಿಯರ್ ಬಗ್ಗೆ ಟ್ರಂಪ್ ಮಾತನಾಡಿರುವ ವಿಡಿಯೋದ ಭಾಗವನ್ನು ಕತ್ತರಿಸಿ, ʼಮೋದಿ ಮೋದಿʼ ಎಂಬ ಸುಳ್ಳು ಹೇಳಿಕೆಗಳನ್ನು ಸೃಷ್ಠಿ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಟ್ರಂಪ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿ, ವಿಜಯೋತ್ಸವದ ಸಂದರ್ಭದಲ್ಲಿ ಮಾತನಾಡುತ್ತಿದ್ದಾಗ ಕೆನಡಿ ಜೂನಿಯರ್‌ರವರನ್ನು “ಬಾಬಿ, ಬಾಬಿ” ಎಂದು ಕರೆದಿದ್ದಾರೆ. ಆದರೆ  ಕಿಡಿಗೇಡಿಗಳು ವಿಡಿಯೋದ ಭಾಗವನ್ನು ಕತ್ತರಿಸಿ “ಮೋದಿ,ಮೋದಿ” ಎಂದು ಸುಳ್ಳು ಧ್ವನಿಯನ್ನು ಸೃಷ್ಠಿಸಿ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವುದಕ್ಕಿಂತ ಮೊದಲು ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ : 

Fact Check : ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ವಿರುದ್ಧ ಅಮಿತ್ ಶಾ ಸಂಚು ರೂಪಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *