ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರ ಹೆಸರಿನ ಎಕ್ಸ್ ಖಾತೆಯಿಂದ ಪ್ರಧಾನಿ ಮೋದಿಯನ್ನು ಟೀಕಿಸುವ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ಇದರಲ್ಲಿ ನಾಸಿರುದ್ದೀನ್ ಶಾ ಅವರ ಫೋಟೋ ಹಾಗೂ ಅವರ ಹೆಸರು ಕಂಡು ಬಂದಿರುವುದರಿಂದ ಈ ಖಾತೆ ಅವರದ್ದೇ ಎಂದು ಹಲವು ನೆಟಿಜನ್‌ಗಳು ಭಾವಿಸಿದ್ದಾರೆ. ಹೀಗಾಗಿ ಹಲವರು ಇದನ್ನು ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರ ಪೋಸ್ಟ್ ಎಂದು ಪರಿಗಣಿಸಿ ಶೇರ್ ಮಾಡುತ್ತಿದ್ದಾರೆ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ..
ಹಲವರು ನಾಸಿರುದ್ದೀನ್ ಶಾ ಅವರನ್ನು ಟೀಕಿಸುತ್ತಿದ್ದು, ನೀವು ಕೂಡ ಪ್ರಧಾನಿ ಮೋದಿ ಅವರನ್ನು ಇಷ್ಟು ಕೆಳ ಮಟ್ಟಕ್ಕೆ ಇಳಿದು ಟೀಕಿಸುತ್ತೀರಾ ಎಂದು ಅಂದುಕೊಂಡಿರಲಿಲ್ಲ ಎಂದು ಹಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಈ ಪೋಸ್ಟ್‌ನ ಕಮೆಂಟ್‌ನಲ್ಲಿ ನಾಸಿರುದ್ದೀನ್ ಶಾ ಅವರನ್ನು ತೀರಾ ನಿಂದನಾತ್ಮಕ ಭಾಷೆಯನ್ನು ಬಳಸಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಮತ್ತಷ್ಟು ಮಂದಿ ಇದು ನಾಸಿರುದ್ದೀನ್ ಅವರ ಖಾತೆಯಲ್ಲಿ ಇದು ನಕಲಿ ಖಾತೆ ಎಂದು ಹಲವರು ಹೇಳುತ್ತಿದ್ದಾರೆ. ಹೀಗೆ ವಿವಿಧ ಬರಹಗಳಿಂದ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ನಿಜಕ್ಕೂ ನಾಸಿರುದ್ದೀನ್ ಶಾ ಅವರಿಗೆ ಸಂಬಂಧಿಸಿದ್ದೇ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ನಾವು ನಾಸಿರುದ್ದೀನ್ ಶಾ ಅವರ ಎಕ್ಸ್ ಖಾತೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ಈ ಖಾತೆಯು ನಾಸಿರುದ್ದೀನ್ ಶಾಗೆ ಸಂಬಂಧಿಸಿಲ್ಲ ಎಂದು ಅದರ ಬಯೋದಲ್ಲಿ ಬರೆಯಲಾಗಿರುವುದು ಕಂಡು ಬಂದಿದೆ.
8 ಫೆಬ್ರವರಿ 2021 ರಂದು PTI ಅನ್ನು ಉಲ್ಲೇಖಿಸಿ NDTV ಇಂಡಿಯಾ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ , ನಾಸಿರುದ್ದೀನ್ ಶಾ ಅವರ ಪತ್ನಿ ಮತ್ತು ನಟಿ ರತ್ನಾ ಪಾಠಕ್ ಶಾ ಅವರು ಟ್ವಿಟರ್‌ನಲ್ಲಿ (ಈಗ ಎಕ್ಸ್) ಖಾತೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.ನಾಸಿರುದ್ದೀನ್ ಶಾ ಹೆಸರಿನಲ್ಲಿ ರಚಿಸಲಾದ ನಕಲಿ ಖಾತೆಯನ್ನು ಸ್ಕ್ಯಾನ್ ಮಾಡಿದ್ದೇವೆ. ಫೆಬ್ರವರಿ 2024 ರಲ್ಲಿ ರಚಿಸಲಾದ ಈ ಖಾತೆಯನ್ನು 1524 ಬಳಕೆದಾರರು ಹಿಂಬಾಲಿಸುತ್ತಿದ್ದಾರೆ. ಆದರೆ ಈ ಖಾತೆಯ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಿದಾಗ ಇದು ನಾಸಿರುದ್ದೀನ್ ಶಾ ಅವರಿಗೇ ಸೇರಿದ್ದು ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ. ಹಾಗಾಗಿ ಇದೊಂದು ನಕಲಿ ಖಾತೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಧಾನಿ ಮೋದಿಯನ್ನು ಟೀಕಿಸುವ ಪೋಸ್ಟ್ ಅನ್ನು ಬಾಲಿವುಡ್ ನಟ ನಾಸಿರುದ್ದೀನ್ ಶಾ ಹೆಸರಿನಲ್ಲಿ ರಚಿಸಲಾದ ನಕಲಿ ಎಕ್ಸ್ ಖಾತೆಯಿಂದ ಮಾಡಲಾಗಿದೆ. ಈ ಖಾತೆಗೂ ನಾಸಿರುದ್ದೀನ್ ಶಾ ಅವರಿಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ನಕಲಿ ಖಾತೆಯಲ್ಲಿ ಕೂಡ ಈ ಖಾತೆ ನಾಸಿರುದ್ದೀನ್ ಶಾಗೆ ಸಂಬಂಧಿಸಿಲ್ಲ ಎಂದು ಅದರ ಬಯೋದಲ್ಲಿ ಬರೆಯಲಾಗಿದೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.
ಇದನ್ನೂ ಓದಿ : ವಕ್ಫ್ ವಿವಾದ: ರಾಜ್ಯದ ರೈತರ ಭೂಕಬಳಿಸುತ್ತಿರುವುದು ನಿಜವೇ? ಇಲ್ಲಿದೆ ಸಂಪೂರ್ಣ ಮಾಹಿತಿ