Fact Check : ನಾಗಾಲ್ಯಾಂಡ್‌ನಲ್ಲಿ ದೀಪಾವಳಿ ಆಚರಣೆ ಎಂದು ಅರ್ಜೆಂಟೀನಾ ವಿಡಿಯೋ ಹಂಚಿಕೆ

ನಾಗಾಲ್ಯಾಂಡ್‌ನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನಾಗಾಲ್ಯಾಂಡ್‌ನಲ್ಲಿ ನಿಜವಾಗಿಯೂ ದೀಪಾವಳಿ ಆಚರಿಸಲಾಗಿದೆಯಾ? ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಕೊಳ್ಳೋಣ.

ಫ್ಯಾಕ್ಟ್‌ ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋದ ಕುರಿತು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್‌ ಚೆಕ್‌ ತಂಡ ಮುಂದಾಯಿತು. ಈ ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್  ರಿವರ್ಸ್‌ ಇಮೇಜ್‌ ಬಳಸಿಕೊಂಡು ಹುಡುಕಿದಾಗ, 2024ರ ಅಕ್ಟೋಬರ್ 30ರಂದು ಡೈಲಿ ಮೇಲ್ ಸ್ಪೋರ್ಟ್ಸ್‌ ಎಂಬ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ಪಟಾಕಿಗಳ ಅದೇ ದೃಶ್ಯಗಳು ಕಂಡುಬಂದಿವೆ.

ರಿವರ್ ಪ್ಲೇಟ್ ಮತ್ತು ಅಟ್ಲೆಟಿಕೊ ಮಿನೇರೊ ದಕ್ಷಿಣ ಅಮೇರಿಕಾದ ಸಾಕರ್ ಕ್ಲಬ್‌ಗಳಾಗಿದ್ದು, ಕೋಪಾ ಲಿಬರ್ಟಡೋರ್ಸ್ ಪಂದ್ಯಾವಳಿಯಲ್ಲಿ ಅರ್ಜೆಂಟೀನಾ ಕ್ರೀಡಾಂಗಣದಲ್ಲಿ ಸೆಮಿ-ಫೈನಲ್ ಪಂದ್ಯಕ್ಕಾಗಿ ಪರಸ್ಪರ ಮುಖಾಮುಖಿಯಾದವು.  ಸಾಕರ್ ಪಂದ್ಯದ ಸಮಯದಲ್ಲಿ ಕ್ರೀಡಾಂಗಣದಲ್ಲಿ ಪಟಾಕಿ ಪ್ರದರ್ಶನದ ಅನೇಕ ರೀತಿಯ ದೃಶ್ಯಗಳು ಕಂಡುಬಂದಿದ್ದು ವೈರಲ್‌ ದೃಶ್ಯಗಳನ್ನು ಹೋಲುತ್ತವೆ.

ಅರ್ಜೆಂಟೀನಾ ಸ್ಟೇಡಿಯಂನ ದೃಶ್ಯಗಳನ್ನು ಮತ್ತು ನಾಗಾಲ್ಯಾಂಡ್‌ನಲ್ಲಿ ದೀಪಾವಳಿ ಆಚರಿಸಲಾಗಿದೆ ಎಂದು ತೋರಿಸುವುದಾಗಿ ಹೇಳಿಕೊಳ್ಳುವ ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ಹೋಲಿಸಿದಾಗ, ಎರಡೂ ದೃಶ್ಯಗಳು ಒಂದೇ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನಾಗಾಲ್ಯಾಂಡ್‌ನಲ್ಲಿ ದೀಪಾವಳಿ ಆಚರಿಸಲಾಗಿದೆ ಎಂದು ಅರ್ಜೆಂಟೀನಾದಲ್ಲಿ ನಡೆದ ಸಾಕರ್ ಪಂದ್ಯದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ಇಂತಹ ದೃಶ್ಯಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನು ಓದಿ :

Fact Check : ವೃದ್ಧ ರೋಗಿಯನ್ನು ಪಾರಿವಾಳ ಭೇಟಿಯಾಗಿದೆ ಎಂಬುದು ಸುಳ್ಳು: ಇದು ಆಕಸ್ಮಿಕವಾಗಿ ಸೆರೆಹಿಡಿದ ಹಳೆಯ ಫೋಟೊ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *