ಕೆನಡಾದವರು ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ, ಬೆದರಿಕೆ ಹಾಕಿ, ಅವರನ್ನು ಇತ್ತೀಚೆಗೆ ಬಂಧಿಸಲಾಗಿದೆ. ಇಂಟರ್‌ಪೋಲ್ ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಕೆನಡಾದವರ ಬಂಧನಕ್ಕೆ ಕಾರಣ ಎಂದು ಆರೋಪಿಸಿ, ‘ವಾಂಟೆಡ್ ನೋಟಿಸ್’ ನೀಡಿದೆ. ಈ ನೋಟಿಸ್ ಕಾರ್ಡ್‌ನ್ನು ಪಾಕಿಸ್ತಾನ ಮೂಲದ ಖಾತೆಗಳಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಕೆನಡಾದ ಶಾ ವಿರುದ್ಧ ಆರೋಪಗಳು
ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಗಳನ್ನು ಕೊಲ್ಲುವ ಮತ್ತು ಬೆದರಿಸುವ ಇತ್ತೀಚಿನ ಸಂಚುಗಳ ಹಿಂದೆ ಭಾರತದ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ ಎಂದು ಕೆನಡಾ ಸರ್ಕಾರ ಸಾರ್ವಜನಿಕವಾಗಿ ಆರೋಪಿಸಿದೆ. ಸಂಸದೀಯ ಸಮಿತಿಯ ಮುಂದೆ ಸಾಕ್ಷ್ಯ ಆಧಾರಗಳನ್ನು ನೀಡಿದ ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಅವರು ಕಳೆದ ಕೆಲವು ವರ್ಷಗಳಿಂದ ಸಿಖ್ ವಲಸಿಗರ ವಿರುದ್ಧದ ಹಿಂಸಾಚಾರ ಮತ್ತು ಬೆದರಿಕೆಗಳ ಅಭಿಯಾನದಲ್ಲಿ ಶಾ ಅವರ ಪಾತ್ರದ ಬಗ್ಗೆ ವಾಷಿಂಗ್ಟನ್ ಪೋಸ್ಟ್‌ಗೆ ಮಾಹಿತಿಯನ್ನು ಸೋರಿಕೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ವಿವಾದದ ಉಲ್ಬಣಕ್ಕೆ ಸಂಬಂಧಿಸಿದಂತೆ ಎರಡು ವಾರಗಳ ಹಿಂದೆ ಸಮಿತಿಯಲ್ಲಿ ಕಾಣಿಸಿಕೊಂಡ ಮಾರಿಸನ್, ಕೆನಡಾದ ಅಧಿಕಾರಿಗಳು ಶಾ ಅವರನ್ನು ತನಿಖೆಗೆ ಹೇಗೆ ಸಂಪರ್ಕಿಸಿದ್ದಾರೆ ಎಂಬುದರ ಕುರಿತು ಹೆಚ್ಚಿನ ವಿವರಗಳು ದೊರೆತಿಲ್ಲ. ಕಳೆದ ಬುಧವಾರದ ಆರೋಪಗಳಿಗೆ ತಕ್ಷಣ ಪ್ರತಿಕ್ರಿಯಿಸದ ವಿದೇಶಾಂಗ ಸಚಿವಾಲಯ, ಸಿಖ್ ಕಾರ್ಯಕರ್ತರ ವಿರುದ್ಧದ ಆಪಾದಿತ ದಾಳಿಗಳಲ್ಲಿ ಭಾರತ ಸರ್ಕಾರವು ಭಾಗಿಯಾಗಿದೆ ಎಂಬ ಕೆನಡಾದ ಆರೋಪಗಳನ್ನು “ಆಧಾರ ರಹಿತ” ಎಂದು ಮೊದಲು ತಿರಸ್ಕರಿಸಿತ್ತು.
ಫ್ಯಾಕ್ಟ್ ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಸ್ಟರ್‌ನ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ “ಇಂಟರ್‌ಪೋಲ್ ಸೂಚನೆ”, “ಅಮಿತ್ ಷಾ” ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟ ನಡೆಸಿದಾಗ, ಅಂತಹ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಕಂಡುಬಂದಿಲ್ಲ.
ಈ ವೈರಲ್ ಪೋಸ್ಟರ್‌ನ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಇಂಟರ್‌ಪೋಲ್‌ನ ವೆಬ್‌ಸೈಟ್‌ನಲ್ಲಿ ರೆಡ್ ನೋಟಿಸ್‌ಗಳ ಕುರಿತು ಹುಡುಕಾಟ ನಡೆಸಿದಾಗ, ಅಂತಹ ಯಾವುದೇ ಸುತ್ತೋಲೆ ಕಂಡುಬಂದಿಲ್ಲ. “ಅಮಿತ್ ಷಾ”, “ಅಮಿತ್ ಅನಿಲಚಂದ್ರ ಶಾ” ಎಂಬ ಕೀವರ್ಡ್ ಬಳಸಿ ಹುಡುಕಿದಾಗ, ಯಾವುದೇ ಕೆಂಪು ಅಥವಾ ಹಳದಿ ನೋಟೀಸ್‌ಗಳು ಕಂಡುಬಂದಿಲ್ಲ. ಆದ್ದರಿಂದಾಗಿ ವೈರಲ್ ಗ್ರಾಫಿಕ್ ನಕಲಿಯಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸಲು ಅನುಮೋದನೆ ನೀಡಲಾಗಿದೆ ಎಂಬ ಆರೋಪದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನಕಲಿ ‘ಇಂಟರ್‌ಪೋಲ್ ನೋಟಿಸ್’ ಜಾರಿ ಮಾಡಲಾಗಿದೆ. ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check : ನಾಗಾಲ್ಯಾಂಡ್‌ನಲ್ಲಿ ದೀಪಾವಳಿ ಆಚರಣೆ ಎಂದು ಅರ್ಜೆಂಟೀನಾ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.